Friday, October 11, 2019

TULASI PLANT ತುಳಸಿ ಗಿಡದ ಮಹತಿ

ತುಳಸಿಗಿಡ ಮಹತಿ 
ತುಳಸೀದರ್ಶನ (ಪೂಜೆ) ಗೋದಾನಕ್ಕೆ ಸಮ

ಮುಂಜಾನೆ ಸ್ನಾನವಾದ ನಂತರ ಕಲಶದಲ್ಲಿ ಶುದ್ದ ನೀರು ತೆಗೆದುಕೊಂಡು ಕ್ರಮ ಪ್ರಕಾರ ಹೊಸ್ತಿಲು ಪೂಜೆಯನ್ನು ರಂಗೋಲಿಯನ್ನು ಮುಗಿಸಿ ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ವೃಂದಾವನವು ಒದ್ದೆಯಾಗುವಂತೆ ಹೊಸ್ತಿಲಿನ ಮೇಲಿಟ್ಟಿದ್ದ ತಂಬಿಗೆಯಿಂದ ನೀರೆರೆದು ,ತುಳಸೀ ಮೂಲದಲ್ಲಿ ಇರುವ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು,ತುಳಸೀ ಮೂಲಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿ, ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು
ತುಳಸೀ ಮಹತ್ವವನ್ನು ತಿಳಿಸುವ ಶ್ಲೋಕಗಳು
ಯನ್ಮೂಲೇ ಸರ್ವತೀರ್ಥಾನಿ ಯನ್ಮ ಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್ ||                                                 
ತುಳಸಿಯ ಬುಡದಲ್ಲಿ ಗಂಗಾದಿ ಸರ್ವತೀರ್ಥಗಳು.ಮಧ್ಯದಲ್ಲಿ   ವಿಷ್ಣುವೇ ಮೊದಲಾದ ಎಲ್ಲಾ ಸರ್ವದೇವತೆಗಳು.ತುದಿಯಲ್ಲಿ ಋಗ್ವೆದಾದಿ ಚತುರ್ವೇದಗಳು ನೆಲೆಸಿರುತ್ತವೆ. ಅಂತಹ ತುಳಸಿ 
ದೇವಿಯೇ, ನಿನಗೆ ನನ್ನ ನಮಸ್ಕಾರಗಳು.

ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||

ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ ।   ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |  ನಶ್ಯಂತಿ ತಾನಿ ತುಳಸೀವನದರ್ಶನೇನ ।  ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||

ತುಳಸೀವೃಂದಾವನವನ್ನು ದರ್ಶನ ಮಾಡುವುದರಿಂದ ಕೋಟಿ ಗೋವುಗಳನ್ನು ದಾನವಿತ್ತ ಫಲ ಲಭಿಸುತ್ತದೆ.ರವಿಸುತನಾದ  ಯಮನು ಉಲ್ಲೇಖಿಸಿರುವ ಗೋಹತ್ಯೆ,ಬ್ರಹ್ಮಹತ್ಯೆ, ಬಾಲಹತ್ಯೆ,
ಮಾತೃವಧ, ಪಿತೃವಧೆಯಂತಹ ಪಾತಕಗಳು ತುಳಸೀ
ವೃಂದಾವನ ದರ್ಶನದಿಂದ ನಾಶವಾಗುತ್ತವೆ.

ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||

ತುಳಸೀಗಿಡದ ಬುಡದಲ್ಲಿರುವ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿದವರ ಮುಖವನ್ನು ಯಮನೇ ಕತ್ತೆತ್ತಿ ನೋಡಲಾಗದು.  ಇನ್ನು ಯಮನ ದೂತರು ನೋಡಬಲ್ಲರೇ?ತುಳಸೀ ಮೃತ್ತಿಕೆಯ 
ಧಾರಣೆಯಿಂದ ಅಪಮೃತ್ಯುವಿರುವುದಿಲ್ಲ.

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|
ವಾಸುದೇವಾದಯೋ ದೇವಾ: ವಸಂತಿ ತುಳಸೀವನೇ ||

ತುಳಸೀವನದಲ್ಲಿ ಪುಷ್ಕರಾದಿ ಸರೋವರ ತೀರ್ಥಗಳು, ಗಂಗೆಯೇ ಮೊದಲಾದ ನದಿತೀರ್ಥಗಳು, ವಾಸುದೇವಾದಿ ದೇವತೆಗಳೆಲ್ಲಾ ನೆಲೆಸಿರುತ್ತಾರೆ..

ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ 
ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ ಹೋಗುತ್ತದೆ.

ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು.                                         

ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, 
ಸಂಕ್ರಾಂತಿಗಳಂದು ತೆಗೆಯಬಾರದು.. ದ್ವಾದಶಿಯಂತೂ ಸರ್ವಥಾ 
ತೆಗೆಯಬಾರದು.

ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. 
ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ 
ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು                                     
ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.

ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು. ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ 
ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು 
ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು  ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ 
ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ.

ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ 
ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.                                                                                            

ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ 
ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ.

ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ  ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ                                                                     
ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.                                                                                    
ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ
ದಾಹಕಾಲೇ ಭವೇನ್ಮುಕ್ತಿಃ
ಪಾಪಕೋಟಿಯುತಸ್ಯ ಚ

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.

ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. 
ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು          ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು. 
ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ।          ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।
ಯಾವ ಕಾರಣಕ್ಕೂ ಬಿಸಾಡಬಾರದು.


ತುಳಸಿ (ಒಸಿಮಮ್ ಬೆಸಿಲಿಕಂ )(pronounced /ˈbæzəl/ಅಥವಾ/ˈbeɪzəl/), ಲಾಮಿಯಾಸಿಯೆ(ಪುದೀನ ಸಸ್ಯಗಳು) ಸಸ್ಯ ಜಾತಿಯ, ಎಳೆಯದಾದ, 
ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯವಾಗಿದೆ. ತುಳಸಿ ನಳಪಾಕಕ್ಕೆ ಯೋಗ್ಯ ಸಸ್ಯವಾಗಿದ್ದು ಇಟಾಲಿಯನ್ ಪಾಕದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ. ಜೊತೆಗೆ ಇದು ತೈವಾನ್ ನಂತಹ ಈಶಾನ್ಯ ಏಷಿಯಾ ಹಾಗು ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯ, ಹಾಗು ಲಾವೋಸ್ ನಂತಹ ಆಗ್ನೇಯ ಏಷಿಯಾದ ಪಾಕಪದ್ದತಿಗಳಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಸಸ್ಯದ ಜಾತಿ ಹಾಗು ತಳಿಯನ್ನು ಅವಲಂಬಿಸಿ, 
ಎಲೆಗಳು ಸ್ವಲ್ಪಮಟ್ಟಿಗೆ ಆನಿಸ್(ವಾಯುಹರ ಔಷಧಿಗೆ ಉಪಯೋಗಿಸುವ ಸೋಪು ಬೀಜ) ನ ಮಾದರಿಯ ರುಚಿ ಹೊಂದಿರುತ್ತವೆ. ಜೊತೆಗೆ ಗಾಢ, ತೀಕ್ಷ್ಣವಾಗಿರುವುದರ ಜೊತೆಗೆ ಸಾಮಾನ್ಯವಾಗಿ ಮೋಹಕ ಪರಿಮಳವನ್ನು ಹೊಂದಿರುತ್ತವೆ.
ಒಸಿಮಮ್ ಬಸಿಲಿಕಂ ನ ಹಲವು ಜಾತಿಗಳಿವೆ, ಜೊತೆಗೆ ಇದಕ್ಕೆ ಸಂಬಂಧಿಸಿದ ಹಲವಾರು ಜಾತಿಗಳು ಹಾಗು ಮಿಶ್ರ ತಳಿಗಳನ್ನು ತುಳಸಿ ಎಂದು ಕರೆಯಲಾಗುತ್ತದೆ. ಇಟಾಲಿಯನ್ ಆಹಾರಗಳಲ್ಲಿ ಬಳಸಲಾಗುವ ಮಾದರಿಯನ್ನು ಸಿಹಿ ತುಳಸಿ ಎಂದು ಕರೆಯಲಾಗುತ್ತದೆ, ಇದು ಏಷಿಯಾದಲ್ಲಿ ಬಳಸಲಾಗುವ ಥಾಯ್ ತುಳಸಿ(O.ಬಸಿಲಿಕಂ ವರ್. ಥೈರ್ಸಿಫ್ಲೋರ ) ನಿಂಬೆ ತುಳಸಿ(O ×) ಸಿಟ್ರಿಯೋಡೋರಮ್ ) ಹಾಗು ಪವಿತ್ರ ತುಳಸಿ (ಒಸಿಮಮ್ ತೆನುಯಿಫ್ಲೋರಂ )ಗಿಂತ ಭಿನ್ನವಾಗಿದೆ. ಬಹಳ ಸಾಮಾನ್ಯವಾದ ತುಳಸಿ ಜಾತಿಗಳು ವರ್ಷದಲ್ಲಿ ಒಂದೇ ಬಾರಿ ಬೆಳೆದರೆ, ಕೆಲವು ಜಾತಿಗಳು ಸುಖೋಷ್ಣ,ಉಷ್ಣವಲಯದ ವಾತಾವರಣಗಳಲ್ಲಿ ವರ್ಷವಿಡೀ ಬೆಳೆಯುತ್ತವೆ, ಇದರಲ್ಲಿ ಪವಿತ್ರ ತುಳಸಿ ಹಾಗು 'ಆಫ್ರಿಕನ್ ಬ್ಲೂ' ಎಂದು ಕರೆಯಲ್ಪಡುವ ತಳಿಗಳೂ ಸೇರಿವೆ.







                                                                                                                        











No comments:

Post a Comment