Friday, October 04, 2019

PANCHAAMRUTA ಪಂಚಾಮೃತ.

ಭುವಿಯ ಅಮೃತ ಪಂಚಾಮೃತ.
                                      ಪಂಚ ಎಂದರೆ ಐದು.ಗೋವಿನ ಹಾಲು,ಮೊಸರು, ತುಪ್ಪ, ಜೇನುತುಪ್ಪ ಹಾಗೂ ಬೆಲ್ಲ(ಸಕ್ಕರೆ) ಈ ಐದು ವಸ್ತುಗಳು ಅಮೃತಕ್ಕೆ ಸರಿಸಮಾನವಾದವು. ಈ ಎಲ್ಲಾ ವಸ್ತುಗಳನ್ನುಕೂಡಿಸಿ ತಯಾರಿಸಿದ್ದೇ ಪಂಚಾಮೃತ.

ದೇವಾಸುರರು ಸಮುದ್ರಮಥನ ಮಾಡುವಾಗ ಅಮೃತ ಸಿಕ್ಕಿತು.ಆ ಅಮೃತಕ್ಕೆ ಸಮಾನವಾದುದು ಭುವಿಯಲ್ಲಿ ಪಂಚಾಮೃತವೆಂಬ ನಂಬಿಕೆ ಬೆಳೆದುಬಂದಿದೆ.ಪಂಚಾಮೃತದ ಸೇವನೆಯಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಪಂಚಾಮೃತದಲ್ಲಿರುವ ಪಂಚವಸ್ತುಗಳು ಈ ತತ್ವವನ್ನು ತಿಳಿಸುತ್ತವೆ.. ಹಾಲು ಶುದ್ಧತೆ ಹಾಗೂ ಧಾರ್ಮಿಕತೆಯ ದ್ಯೋತಕವಾಗಿದೆ.ಮೊಸರು ಸಮೃದ್ಧಿ ಹಾಗೂ ಸಂತಾನದ ಪ್ರತೀಕವಾಗಿದೆ. ಮಧು (ಜೇನುತುಪ್ಪ) ಮಧುರವಾದ ಮಾತು ಹಾಗೂ ಏಕತೆಯನ್ನು ಸಮರ್ಥಿಸುತ್ತದೆ.ಸಕ್ಕರೆ ಅಥವಾ ಬೆಲ್ಲ ಮಾಧುರ್ಯ ಹಾಗೂ ಆನಂದವನ್ನು ತಿಳಿಸುತ್ತದೆ.ತುಪ್ಪ ಜ್ಞಾನ ಹಾಗೂ ವಿಜಯವನ್ನು ಸಮರ್ಥಿಸುತ್ತದೆ.
ಧಾರ್ಮಿಕ ಪೂಜಾವಿಧಾನಗಳು ಪಂಚಾಮೃತವಿಲ್ಲದೇ ಪರಿಪೂರ್ಣತೆಯನ್ನು ಪಡೆಯುವುದಿಲ್ಲ.ದೇವರ ಪ್ರತಿಮೆಗೆ ಹಾಲು,ಮೊಸರು,ತುಪ್ಪ,ಸಕ್ಕರೆ.ಜೇನುತುಪ್ಪಗಳಿಂದ ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ.ಕೊನೆಯಲ್ಲಿ ಅದನ್ನು ಪಂಚಾಮೃತ ತೀರ್ಥವೆಂದು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ.
ಪಂಚಾಮೃತವನ್ನು ಪ್ರತಿನಿತ್ಯವೂ ಸೇವಿಸುವುದರಿಂದ ದೇಹದಲ್ಲಾಗುವ ಪರಿಣಾಮಗಳು..

ದೈಹಿಕ ಆರೋಗ್ಯದ ವೃದ್ಧಿ.ಶರೀರ ಆರೋಗ್ಯ ಹಾಗೂ ಬಲದಿಂದ ಕೂಡಿರುತ್ತದೆ.ಶೀತ ಹಾಗೂ ತಲೆನೋವಿನ ನಿವಾರಣೆಯಾಗುತ್ತದೆ.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ನೆನಪಿನ ಶಕ್ತಿಯ ವೃದ್ಧಿಯಾಗುತ್ತದೆ. ಕ್ರಿಯಾಶೀಲತೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಪಂಚಾಮೃತವನ್ನು ಸೇವಿಸಿದರೊಳಿತು. ಇನ್ನು ಗರ್ಭಿಣಿ ಸ್ತ್ರೀಯರು ಪಂಚಾಮೃತವನ್ನು ಪ್ರತಿನಿತ್ಯವೂ ಸೇವಿಸಿದರೆ ಉತ್ತಮವಾಗಿ ಮಗುವಿನ ಬೆಳವಣಿಗೆಯಾಗುತ್ತದೆ ಹಾಗೂ ತಾಯಿ,ಮಗುವಿಗೆ ಒಳ್ಳೆಯ ಶಕ್ತಿ (Energy Booster) ಸಿಗುತ್ತದೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.
 ಪಂಚಾಮೃತವನ್ನು ತಯಾರಿಸುವ ವಿಧಾನ (ಪ್ರಮಾಣ)
 - ಹಾಲು ೫ ಚಮಚ (ಕಾಯಿಸಿದ ಹಾಲನ್ನು ಬಳಸಬಾರದು) ಮೊಸರು ೪ ಚಮಚ ಸಕ್ಕರೆ ಅಥವಾ ಬೆಲ್ಲ ೩ ಚಮಚ ಗೋವಿನ ತುಪ್ಪ ೨ ಚಮಚ ಜೇನುತುಪ್ಪ ೧ ಚಮಚ ಈ ಪಂಚವಸ್ತುಗಳನ್ನೂ ಸರಿಯಾಗಿ ಮಿಶ್ರಣ ಮಾಡಿ ಕದಡಬೇಕು.ಆಗ ಮಧುರವಾದ ಪಂಚಾಮೃತ ಸಿದ್ಧವಾಗುತ್ತದೆ.
ಕ್ರಮವಾಗಿ ಒಂದಕಿಂತ ಒಂದು ಕಡಿಮೆ ಇದ್ದರೆ ಒಳ್ಳೆಯದು.
 ಇನ್ನು ಎಳನೀರುಗಳನ್ನೂ  ಇದಕ್ಕೆ ಸೇರಿಸುತ್ತಾರೆ..ಹಲವೆಡೆ ತುಳಸಿ,ಡ್ರೈಪ್ರೂಟ್ಸಗಳನ್ನೂ ಪಂಚಾಮೃತಕ್ಕೆ ಸೇರಿಸುತ್ತಾರೆ. ಪಂಚಾಮೃತ ಭುವಿಯಲ್ಲಿನ ಅಮೃತವೆಂಬುದಂತೂ ಸತ್ಯ.

ಪಂಚಾಮೃತ ಅಭಿಷೇಕದ ಮಹತ್ವ 
 ಐದು ವಸ್ತುಗಳು ಅಮೃತದಂತೆ: ಹಾಲು, ಮೊಸರು, ಜೇನು, ಬೆಲ್ಲ ಮತ್ತು ತುಪ್ಪ. ಬೆಲ್ಲವನ್ನು ಬಳಸಬೇಕಾಗಿರುವುದಾದರೂ ಸಹ, ಈ ದಿನಗಳಲ್ಲಿ ಬೆಲ್ಲದ ಬದಲು ಸಕ್ಕರೆಯನ್ನು ಬಳಸಲಾಗುತ್ತಿದೆ.
ಅವುಗಳಲ್ಲಿ ಐದು ದೇವತೆಯರು ವಾಸಿಸುತ್ತಾರೆ. ಸಕ್ಕರೆಯಲ್ಲಿ ಸವಿತ್ರು, ಜೇನಿನಲ್ಲಿ ವಿಶ್ವೇದೇವ, ತುಪ್ಪದಲ್ಲಿ ಸೂರ್ಯ, ಮೊಸರಿನಲ್ಲಿ ವಾಯು ಮತ್ತು ಹಾಲಿನಲ್ಲಿ ಸೋಮ. ಹೀಗಾಗಿ, ಅವುಗಳನ್ನು ನೀವು ಅಭಿಷೇಕವಾಗಿ ಅರ್ಪಿಸುವಾಗ, ಅದರ ಉದ್ದೇಶವೆಂದರೆ - ದೇವತೆಯರ ಗುಣಗಳು ನಮ್ಮ ಜೀವನದಲ್ಲಿ ಅರಳಲಿ ಎಂಬುದಾಗಿದೆ.
ನಾವು, ಪ್ರತಿಯೊಬ್ಬರ ಮನಸ್ಸಿನ ಶಾಂತಿಗಾಗಿಯೂ ಪ್ರಾರ್ಥಿಸುತ್ತೇವೆ.
ಎಲ್ಲರ ಮನಸ್ಸಿನಲ್ಲಿಯೂ ಆನಂದವಿರಲಿ.
ಜನರ ಜೀವನಗಳಲ್ಲಿ ಶಕ್ತಿ, ಧೈರ್ಯ ಮತ್ತು ದೀರ್ಘಾಯುಷ್ಯವಿರಲಿ.
ಜನರ ಜೀವನಗಳಲ್ಲಿ ತೃಪ್ತಿ ಮತ್ತು ಸಮೃದ್ಧಿಯಿರಲಿ.
ಜೀವನದಲ್ಲಿ ಕಾಂತಿಯಿರಲಿ.
ಮಾರುತಗಳು ಮತ್ತು ನದಿಗಳು ಸರಾಗವಾಗಿ ಪ್ರವಹಿಸುತ್ತಿರಲಿ .
ನಮ್ಮ ಹಗಲುಗಳು ಮತ್ತು ರಾತ್ರಿಗಳು ಮಧುರವಾಗಿರಲಿ.
ಮಣ್ಣಿನ ಪ್ರತಿಯೊಂದು ಕಣವೂ ನಮಗೆ ಸಿಹಿಯನ್ನು ತರಲಿ.
ಆಕಾಶದಿಂದ, ದೇವತೆಯರಿಂದ ಮತ್ತು ಪಿತೃಗಳಿಂದ ನಮಗೆ ಸಿಹಿ ಲಭಿಸಲಿ.
ನಮ್ಮ ಮಾತು ಮತ್ತು ಯೋಚನೆಗಳು ಸುಂದರವಾಗಿ ಮಧುರವಾಗಿರಲಿ.
ಸಮಾಜವು ನಮಗೆ ಮಾನ್ಯತೆಯನ್ನೂ ಸಿಹಿಯನ್ನು ತರಲಿ.
ವನಸ್ಪತಿ (ಅರಣ್ಯದ ದೇವತೆ)ಯು ನಮಗೆ ಪ್ರಸನ್ನಳಾಗಿರಲಿ ಸಿಹಿಯನ್ನು ತರಲಿ.
ಸೂರ್ಯನು ನಮ್ಮ ಜೀವನಗಳಿಗೆ ಮಾಧ್ಯರ್ಯತೆಯನ್ನು ಸಿಹಿಯನ್ನು ತರಲಿ.
ನಮ್ಮ ಸಂಪೂರ್ಣ ಜೀವನವು ಇತರ ಜನರ ಜೀವನಗಳಿಗೆ ಪೂರಕವಾಗಿ ಸಿಹಿಯನ್ನು ತರಲಿ.

No comments:

Post a Comment