Friday, October 04, 2019

TEERTHA SEVANA ತೀರ್ಥ ಸೇವನೆ

ತೀರ್ಥ ಸೇವನೆ ಮಾಡುವ ಕ್ರಮ

1.ತೀರ್ಥವನ್ನು ಬಲಗೈಯಲ್ಲಿಯೇ ಸ್ವೀಕರಿಸಬೇಕೆಂಬುದು ನಿಯಮ.

2.ಕೈಕೆಳಗೆ ವಸ್ತ್ರವೊಂದನ್ನು ಇಲ್ಲವೇ ಉತ್ತರೀಯವನ್ನು, (ಸ್ತ್ರೀಯರು ತಮ್ಮ ಸೀರೆಯ ಸೆರಗಿನ ತುದಿಯನ್ನು) ಹಿಡಿದಿರಬೇಕು. ಇದರ ಉದ್ದೇಶವೇನೆಂದರೆ, ಸ್ವೀಕರಿಸುವಾಗ ಅಥವಾ ಪ್ರಾಶನ ಮಾಡುವಾಗ ತೀರ್ಥವು ಕೆಳಗೆ ಬೀಳದಂತೆ ಎಚ್ಚರ ವಹಿಸುವುದಾಗಿದೆ. 

2.ತೀರ್ಥವನ್ನು ಸ್ವೀಕರಿಸುವಾಗ ನಮ್ಮ ತೋರುಬೆರಳನ್ನು ಹೆಬ್ಬೆರಳಿನ ಅಂತಿಮ ರೇಖೆಗೆ ಮುಟ್ಟುವಂತೆ ಮಡಿಸಿ ಅದರ ಮೇಲೆ ಹೆಬ್ಬೆರಳನ್ನು ಮಡಿಚಿಡಬೇಕು. ಉಳಿದ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಮೇಲಿರುವಂತೆ, ನಂತರ ಉಂಗುರದ ಬೆರಳು ಮತ್ತು ಕೊನೆಯಲ್ಲಿ ಕಿರುಬೆರಳಿರುವಂತೆ ನೇರವಾಗಿ ಚಾಚಿರಬೇಕು. 

4. ಪ್ರಪ್ರಥಮವಾಗಿ ತೀರ್ಥವನ್ನು ತಲೆಯಮೇಲೆ ಪ್ರೋಕ್ಷಿಸಿಕೊಳ್ಳಬೇಕು. (ಮಧ್ವಗುರು ಪೂಜೆಯಲ್ಲಾದರೂ ಸರಿ)

5. ಮುಂಜಾನೆ ಸಂಧ್ಯಾವಂದನೆ ;ದೇವರಪೊಜೆ ನಂತರ ಆಹಾರ ಸೇವನೆಗೂ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.

6.ಮಹಾಪೂಜೆಯಲ್ಲೂ ಸಹ ಊಟದ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು.

7.ತೀರ್ಥವನ್ನು ಪ್ರಾಶನ ಮಾಡಿದ ನಂತರ ಕೈಯಲ್ಲಿ ಉಳಿದಿರುವ ತೇವಾಂಶವೂ ನಷ್ಟವಾಗದಂತೆ ನೆತ್ತಿಯ ಮೇಲೆ ಸವರಿಕೊಳ್ಳಬೇಕು, ಇಲ್ಲವಾದರೆ ಕೈಗಳ ಕೆಳಗೆ ಹಿಡಿದಿದ್ದ ವಸ್ತ್ರದಿಂದ ಅದನ್ನು ಒತ್ತಿಕೊಂಡು ಒರೆಸಿಕೊಳ್ಳಬೇಕು. 

8.ತೀರ್ಥವನ್ನು ಸ್ವೀಕರಿಸುವಾಗ ದೇಹವನ್ನು ಬಗ್ಗಿಸಿರಬೇಕು. ಇದು ದೇವರ ಅಭೀಷೇಕದ ತೀರ್ಥಕ್ಕೆ ನಾವು ನೀಡುವ ಗೌರವ ಮತ್ತು ತೋರುವ ಭಕ್ತಿಯ ಸಂಕೇತವಾಗಿರುತ್ತದೆ. 

9.ಮೂರು ತೀರ್ಥಗಳ ಸಾಂಕೇತಿಕ ವಿವರಣೆ: 
ಪ್ರಥಮಂ ಕಾಯಶುದ್ಧ್ಯರ್ಥಂ
ದ್ವಿತೀಯಂ ಧರ್ಮಸಾಧನಂ 
ತೃತೀಯಂ ಮೋಕ್ಷಸಿದ್ಧ್ಯರ್ಥಂ 
ಏವಂ ತೀರ್ಥಂ ತ್ರಿಧಾ ಪಿಬೇತ್||
ಅರ್ಥ: ಮೊದಲನೆಯದು ಕಾಯ ಅಥವಾ ದೇಹ ಶುದ್ಧಿಗಾಗಿ; ಎರಡನೆಯದು ಧರ್ಮಸಾಧನೆಗಾಗಿ ಮತ್ತು ಮೂರನೆಯದು ಮೋಕ್ಷಸಿದ್ಧಿಗಾಗಿ ಈ ತೀರ್ಥವನ್ನು ಸೇವಿಸ ಬೇಕು. 
ಕೆಲವೆಡೆ ಒಂದೇ ಬಾರಿ ತೀರ್ಥವನ್ನು ನೀಡುವರಾದರೂ ಒಂದರಲ್ಲೇ ಮೂರು ತೀರ್ಥವನ್ನು ಅನುಸಂಧಾನಿಸಿ ಸೇವಿಸ ಬೇಕು. 
10.ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ* :

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸರ್ವ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇವರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll


No comments:

Post a Comment