Friday, July 24, 2020

The Secret of RAAMA NAAMA (ರಾಮನಾಮ ರಹಸ್ಯ)


   ರಾಮನಾಮ ರಹಸ್ಯ 
ರಾಮ ನಾಮಮಹಿಮೆ
ಪದ್ಮ ಪುರಾಣದಲ್ಲಿ ರುದ್ರದೇವರು ಜಪಿಸಿದ ರಾಮಮಂತ್ರ ,
ರುದ್ರದೇವರು ಪಾರ್ವತಿಗೆ ಹೇಳಿದ ರಾಮರಹಸ್ಯ ಎಲ್ಲವನ್ನೂ ವಿಸ್ತಾರವಾಗಿ ಹೇಳಿದ್ದಾರೆ.
ಒಮ್ಮೆಪಾರ್ವತೀದೇವಿಯುರುದ್ರನು ಸದಾಕಾಲ ಬಾಯಲ್ಲಿ ಏನೋ                ಮಂತ್ರ ಹೇಳುವುದನ್ನು ನೋಡಿ ರುದ್ರನನ್ನು ಪ್ರಶ್ನಿಸುತ್ತಾಳೆ, ಲೋಕಕ್ಕೆ
ಎಲ್ಲಾ ಸರ್ವೋತ್ತಮನು ನೀನೇ. ನಿನಗೆ ಯಾರೂ ಒಡೆಯರಿಲ್ಲ ಎಂದು
ನಾನು ತಿಳಿದಿದ್ದೇನೆ. ಆದರೆ ನೀನು ಯಾರ ಮಂತ್ರ ಜಪ ಮಾಡುತ್ತಿದ್ದೀ?
ಯಾತಕ್ಕಾಗಿ ಮಾಡುತ್ತಿದ್ದೀ? ಎಂದು ಪ್ರಶ್ನಿಸುತ್ತಾಳೆ. ಆಗ
ರುದ್ರದೇವರು ನಾನು ಕೇವಲ ತೋರಿಕೆಗಾಗಿ ಜಗತ್ತಿನ ಒಡೆಯ ಎಂದು
ತೋರಿಸಿಕೊಳ್ಳುತ್ತಿದ್ದೇನೆ. ನಾನು ಭಗವಂತನಾದ ವಿಷ್ಣುವಿನ
ಅಪ್ಪಣೆಯಂತೆ ಈ ರೀತಿಯಾದ ನಟನೆ ಮಾಡುತಿದ್ದೇನೆ, ಜಗತ್ತಿಗೆ ನಾನು
ಸರ್ವೋತ್ತಮ ಎಂದು ತೋರಿಸಿದ ಪಾಪ ಪರಿಹಾರಕಾಗಿ ನಾನು
ಸದಾಕಾಲ ಭಗವಂತನ ಆದೇಶದಂತೆ ವಾಸುದೇವ ಸಹಸ್ರನಾಮವನ್ನು
(ವಿಷ್ಣುಸಹಸ್ರನಾಮ) ಪಠಿಸುತ್ತಿದ್ದೇನೆ. ಇದರಿಂದ ನಾನು ನನ್ನ ವೈಷ್ಣವ
ವ್ರತವನ್ನು ಆಚರಿಸಿದಂತಾಗುತ್ತದೆ ಎಂದು ಹೇಳುತ್ತಾನೆ. ಆಗ ಪಾರ್ವತಿ
ದೇವಿಯು ರುದ್ರನ ಸಮೀಪ ವೈಷ್ಣವ ವ್ರತಾಚರಣೆಯ ಮಹತ್ವ, ವಿಧಿ
ವಿಧಾನಗಳನ್ನು ಕೇಳಿ ತಿಳಿದುಕೊಳ್ಳುತ್ತಾಳೆ. ನಂತರ
ಪಾರ್ವತೀದೇವಿಯು ವಿಷ್ಣುವಿನ ಪ್ರೀತಿಗಾಗಿ ತನಗೂ ವಾಸುದೇವ
ಸಹಸ್ರನಾಮವನ್ನು ಉಪದೇಶಿಸುವಂತೆ ಹೇಳುತ್ತಾಳೆ, ಆಗ
ರುದ್ರದೇವನು ಪಾರ್ವತಿಗೆ ಈ ವಿಷ್ಣುಸಹಸ್ರನಾಮವನ್ನು
ಉಪದೇಶಿಸುತ್ತಾರೆ
 ಕೊನೆಗೆ ಪಾರ್ವತಿಯು ಒಂದು ವ್ರತವನ್ನು ತೊಡುತ್ತಾಳೆ. ಇನ್ನು ಮುಂದೆ
ನಾನು ಪ್ರತಿನಿತ್ಯ ಊಟಮಾಡುವ ಮೊದಲು ವಿಷ್ಣು ಸಹಸ್ರನಾಮವನ್ನು
ಹೇಳಿಯೇ ನಂತರ ಆಹಾರ ಸ್ವೀಕರಿಸುವುದು ಎಂದು.
ಒಂದು ದಿನ ರುದ್ರದೇವರು ಏಕಾದಶೀ ಮಾಡಿ ದ್ವಾದಶೀ ದಿವಸ ಪಾರಣೆ
ಮಾಡುವಾಗ ಪಾರ್ವತೀದೇವಿಯನ್ನು ಜೊತೆಯಲ್ಲಿ ಊಟಮಾಡುವ
ಬಾ ಎಂದು ಕರೆಯುತ್ತಾರೆ,
ತತಃ ಕತಿಪಯಾಹಸ್ಸು ದ್ವಾದಶ್ಯಾಂ ವೃಷಭಧ್ವಜಃ | ಕೈಲಾಸ ಶಿಖರೇ
ಒ ವಿಷ್ಣುಮಾರಾಧ್ಯ ಶಂಕರಃ | ಉಪವಿಷ್ಟಸ್ತತೋ ಭೋಕ್ತುಂ ಪಾರ್ವತೀಂ
ಆಕರೋಜೆಬ್ರವೀತ್ | ಪಾರ್ವತ್ಯೇಹಿ ಮಯಾ ಸಾರ್ಧಂ ಬೊಳು
ಭುವನನಂದಿತೇ||’ ಎಂದು.
ಆಗ ಪಾರ್ವತಿಯು ಹೇಳುತ್ತಾಳೆ. ನಾನು ಇನ್ನು
ವಿಷ್ಣು ಸಹಸ್ರನಾಮವನ್ನು ಹೇಳಿ ಮುಗಿಸಲಿಲ್ಲ. ಅದನ್ನು ಮುಗಿಸಿಯೇ
ಊಟ ಮಾಡುವುದು ಎಂದು ನನ್ನ ವ್ರತ ಎಂದು. ಆಗ ರುದ್ರದೇವರು
ನಗುತ್ತಾ ಹೇಳುತ್ತಾರೆ. ಇಂದು ನಮ್ಮ ದಾಂಪತ್ಯ ಪಾವನವಾಯಿತು.
ನಾವಿಬ್ಬರೂ ವೈಷ್ಣವ ದಂಪತಿಗಳಾದೆವು. ಇಂತಹ ವೈಷ್ಣವ ದೀಕ್ಷೆ ಬಹಳ
ದುರ್ಲಭವಾದದ್ದು. “ದುರ್ಲಭಾ ವೈಷ್ಣವೀ ಭಕ್ತಿ:
ಭಾಗಧೇಯಂ ವಿನೇಶ್ವರಿ’ ಎಂದು. ನಂತರ ಹೇಳುತ್ತಾರೆ, ಇಂತಹ
ಸಂದರ್ಭದಲ್ಲಿ ವಿಷ್ಣು ಸಹಸ್ರನಾಮದ ಪಾರಾಯಣದ
ಸಕಲಪುಣ್ಯಗಳೂ ಬಹಳ ಸುಲಭದಲ್ಲಿ ಪ್ರಾಪ್ತಿಯಾಗುವ
ಉಪಾಯವನ್ನು ಹೇಳುತ್ತೇನೆ
ಎಂದು ಹೇಳಿ ಈ ಶ್ಲೋಕವನ್ನು ಹೇಳುತ್ತಾರೆ.
“ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ!” ಎಂದು.
ಅಂದರೆ ಎಲೆ ಪಾರ್ವತಿಯೇ, ನಾನು ರಾಮನಾಮವೆಂಬ ಎರಡಕ್ಷರದ
ಮನೋಹರವಾದ ಮಂತ್ರದಲ್ಲಿ ರಮಿಸುತ್ತಿದ್ದೇನೆ. ಈ ರಾಮ ನಾಮವು
ವಿಷ್ಣುಸಹಸ್ರನಾಮಕ್ಕೆ ಸಮಾನವಾದ ಮಂತ್ರವು. ಇಷ್ಟೇ ಅಲ್ಲ ನನಗೆ
ರಕಾರವು ಮೊದಲಾಗಿ ಉಳ್ಳ ಯಾವ ನಾಮವನ್ನು ಕೇಳಿದರೂ ಅದು
ರಾಮನಾಮದಂತೆಯೇ ಕೇಳಿಸುತ್ತದೆ. ಅದರಿಂದ ನನ್ನ ಮನಸ್ಸು
ಪ್ರಸನ್ನವಾಗುತ್ತದೆ. ಅಂತಹ ಪ್ರಸನ್ನತೆ ನೀಡುವ ಶಕ್ತಿಯು
ರಾಮನಾಮಕ್ಕಿದೆ ಎಂದು ಹೇಳುತ್ತಾರೆ. ಅಲ್ಲದೇ ಪಾರ್ವತಿ ಈ ರಾಮನಾಮವನ್ನು ಭಕ್ತಿ
ಯಿಂದ ಪಠಿಸಿ ನೀನು ಊಟಕ್ಕೆ ಕುಳಿತುಕೋ, ಅದರಿಂದ ನೀನು 
ಸಹಸ್ರನಾಮ ಪಾರಾಯಣ ಮಾಡಿದ ಪುಣ್ಯಕ್ಕೆ
ಭಾಗಿಯಾಗುತ್ತೀ ಎಂದು ಹೇಳುತ್ತಾರೆ. ಪಾರ್ವತಿಯೂ ಅದರಂತೆ ರಾಮಮಂತ್ರವನ್ನು
ಜಪಿಸಿ ರುದ್ರನೊಂದಿಗೆ ಊಟವನ್ನು ಮಾಡುತ್ತಾಳೆ.
ಊಟ ಮುಗಿದ ನಂತರ ರುದ್ರನಲ್ಲಿ ಪ್ರಶ್ನಿಸುತ್ತಾಳೆ, ನೀನು
ರಾಮನಾಮ ಸಹಸ್ರನಾಮಕ್ಕೆ 
ಸಮಾನಾದ ಮಂತ್ರ ಎಂದು ಹೇಳಿದ್ದಿ.ಈ ರಾಮನಾಮದ ಮಹಿಮೆ ಏನು? ಇಂತ ನಾಮಗಳು ಇನ್ನೂ ಅನೇಕ
ಇವೆಯೇ? ಎಂದು ಪ್ರಶ್ನೆ ಮಾಡುತ್ತಾಳೆ, ಆಗ
ರುದ್ರದೇವರು,
“ಎಷ್ಟೋರೇಕೈಕನಾಮೈವ ಸರ್ವವೇದಾಧಿಕಂ ಮತಂ |
ತಾಹಿನಾಮಸಹಸ್ರಾಣಿ ರಾಮನಾಮ ಸಮಂ ಮತಂ ||
ವಿಷ್ಣುವಿನ ಒಂದೊಂದು ನಾಮವೂ ವೇದಗಳಿಗಿಂತಲೂ ಹೆಚ್ಚಿನವು.
ಅಂತಹ ಸಾವಿರನಾಮಗಳು ರಾಮ ಎಂಬ ಒಂದು ನಾಮಕ್ಕೆ ಸಮವು.
ಎಲ್ಲಾಮಂತ್ರಗಳನ್ನೂ ಜಪಿಸಿದರೂ ಎಲ್ಲಾ ವೇದಗಳನ್ನು ಓದಿದರೂ
ಎಷ್ಟು ಪುಣ್ಯ ಬರುತ್ತದೆಯೋ, ಅದಕ್ಕಿಂತ ಕೋಟಿಯಷ್ಟು ಹೆಚ್ಚು
ಪುಣ್ಯವು ಈ ರಾಮನಾಮಮಂತ್ರದ ಜಪದಿಂದ ಬರುತ್ತದೆ. ಈ ರಾಮನ
ನಾಮಗಳೂ ಸಾವಿರಕ್ಕೆ ಹೆಚ್ಚಿನದ್ದಿವೆ.
ಲೋಕದಲ್ಲಿ ಲೌಕಿಕ, ವೈದಿಕ ರೂಪವಾದ ಎಷ್ಟು ಶಬ್ದಗಳಿವೆಯೋ ಅವುಗಳಿಗಿಂತಲು
 ಸಾವಿರಪಟ್ಟು ಅಧಿಕ ವುಳ್ಳ ಪುಣ್ಯವು ಈ
ರಾಮ ನಾಮದ ಪಠಣವು.
ಲೌಕಿಕಾ: ವೈದಿಕಾಃ ಶಬ್ದಾಃ ಯೇ ಕೇಚಿತ್ಸಂತಿ ಪಾರ್ವತಿ |
ನಾಮಾನಿ ರಾಮಚಂದ್ರಸ್ಯ ಸಹಸ್ರಂ ತೇಷು ಚಾಧಿಕಂ ||
ಜಪತಃ ಸರ್ವಮಂತ್ರಾಂಶ್ಚ ಸರ್ವ ವೇದಾಂಶ್ಚ ಪಾರ್ವತಿ |
ತಸ್ಮಾತ್ ಕೋಟಿ ಗುಣಂ ಪುಣ್ಯಂ ರಾಮನಾಮೈವ ಲಭ್ಯತೇ ||
ಎಂದು ಹೇಳುತ್ತಾರೆ.
ಕೊನೆಗೆ ಪಾರ್ವತಿಯ ಆಸೆಯಂತೆ ಶ್ರೀರಾಮಚಂದ್ರನ ಅಷ್ಟೋತ್ತರ
ನಾಮಗಳನ್ನು ಅವಳಿಗೆ ಉಪದೇಶಿಸುತ್ತಾರೆ. ಕೊನೆಗೆ ಪಾರ್ವತಿಗೆ
ರಾಮಾಯ ರಾಮಚಂದ್ರಾಯ…. ಎಂಬ ಮಂತ್ರವನ್ನು ಉಪದೇಶಿಸಿ
ಇದನ್ನು ಸದಾಕಾಲ ಜಪಿಸಲು ಹೇಳುತ್ತಾನೆ. ಹೀಗೆ ರಾಮಮಂತ್ರದ
ಬಲದಿಂದ ಗೌರೀಶಂಕರರು ಕೈಲಾಸದಲ್ಲಿ ಸುಖವಾಗಿದ್ದರು ಎಂದು
ಪದ್ಮಪುರಾಣ ಹೇಳುತ್ತಿದೆ. ರುದ್ರದೇವರು ಶ್ರೀರಾಮನನ್ನು ಎಷ್ಟು
ಮಾನಸಿಕವಾಗಿ ಸ್ಮರಿಸುತ್ತಿದ್ದರು ಎಂದು ಇದರಿಂದ ನಮಗೆ ತಿಳಿಯುತ್ತದೆ.
ಅಲ್ಲದೇ ರುದ್ರದೇವರು ಪರಮವೈಷ್ಣವ ಕ್ಷೇತ್ರವಾದ
ಕಾಶೀಕ್ಷೇತ್ರವನ್ನು ಮಹಾಸ್ಮಶಾನವನ್ನಾಗಿಸಿಕೊಂಡು ನಿರಂತರ ತಾನು
ರಾಮತಾರಕ ಮಂತ್ರವನ್ನು ಜಪಿಸುತ್ತಾ ಯಾರು ವೈಷ್ಣವರು ಕಾಶೀ
ಕ್ಷೇತ್ರದಲ್ಲಿ ಮರಣವನ್ನು ಹೊಂದುತ್ತಾರೋ ಅವರ ಕಿವಿಯಲ್ಲಿ
ರಾಮತಾರಕ ಮಂತ್ರವನ್ನು ಹೇಳುತ್ತಾ ಅವರಿಗೆ ಪರ ವಾಸುದೇವ
ರೂಪಿಯಾದ ಶ್ರೀರಾಮನ ಅನುಗ್ರಹವಾಗುವಂತೆ ಮಾಡುತ್ತಾರೆ. ಈ
ವಾಸುದೇವ ರೂಪಿಯಾದ ರಾಮನೇ ಮೋಕ್ಷದಾತೃವಾದ್ದರಿಂದ
ವೈಷ್ಣವರಿಗೆ ಮೋಕ್ಷ ಮಾರ್ಗವನ್ನು ಈ ರಾಮನಾಮ ಜಪದ ಮೂಲಕ
ರುದ್ರ ದೇವರು ತೋರಿಸುತ್ತಿದ್ದಾರೆ.

ಪಾರ್ವತಿ ಶಿವನನ್ನು ಕೇಳುತ್ತಾಳೆ “ಸ್ವಾಮಿ ,ವಿಷ್ಣು ಸಹಸ್ರ ನಾಮ
ಪವಿತ್ರವಾದುದು. ಆದರೆ ಸಾಮಾನ್ಯ ಜನರು ಇದನ್ನು ಪಠಿಸಲು
ಕಷ್ಟವಾಗ ಬಹುದು. ಜನಸಾಮಾನ್ಯರಿಗೆ ಸಾದ್ಯವಾಗಲು ಬೇರೆ ಉಪಾಯವಿದೆಯೆ? ಆಗ ಶಿವ ಹೇಳುತ್ತಾನೆ “ ಹೌದು ದೇವಿ,
ವಿಷ್ಣು ಸಹಸ್ರನಾಮದಲ್ಲಿ ಶ್ರೀ ರಾಮನ ಬಗೆಗಿನ ಒಂದು ಶ್ಲೋಕವಿದೆ.
ಶ್ರೀರಾಮ ರಾಮ ರಾಮೇತಿ
ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ
ಶ್ರೀರಾಮ ನಾಮ ವರಾನನನೇ”
ಇದನ್ನು ಭಕ್ತಿಯಿಂದ ಹೇಳಿದರೆ ವಿಷ್ಣು ಸಹಸ್ರನಾಮ ಹೇಳಿದ ಫಲವನ್ನು ನೀಡುತ್ತದೆ.
ಶ್ರೀರಾಮ ನಾಮಕ್ಕೆ ಅಷ್ಟೊಂದು ಮಹತ್ವ ಮತ್ತು ಶಕ್ತಿ ಇದೆ.

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ
ರಾಮ ನಾಮ ವರಾನನೇ ॥

No comments:

Post a Comment