" ಎಳ್ಳು " ಎಲ್ಲರಿಗೂ ಗೊತ್ತು. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ತಿಲ , ತಿಲ್ ಎಂದು ಕರೆಯಲ್ಪಡುವ ಈ ಎಳ್ಳಿಗೆ ಆಂಗ್ಲ ಭಾಷೆಯಲ್ಲಿ Sesame ಎಂದು ಕರೆ ಯುತ್ತಾರೆ.
ಸ್ವಲ್ಪ ಕಹಿ, ಮಧುರ, ವಗರು ರುಚಿಗಳ ಸಮ್ಮಿಳಿತ ದಿಂದ ಕೂಡಿದ ಈ ಎಳ್ಳು ಕಫ ಪಿತ್ತ ನಾಶಕವಾಗಿದೆ.
ಚರ್ಮಕ್ಕೆ ಕಾಂತಿ ಹಾಗೂ ದೇಹಕ್ಕೆ ಬಲ ನೀಡುತ್ತದೆ.
ಕಪ್ಪು , ಬಿಳಿ , ಕಂದು ಮೂರು ಬಣ್ಣದ ಎಳ್ಳು ಇದೆ.
ಆಯುರ್ವೇದ ದಲ್ಲಿ ಎಳ್ಳನ್ನು ಹೀಗೆ ವಿಂಗಡಿಸಲಾಗಿದೆ.
ಕಪ್ಪು ಎಳ್ಳು..................... ಶ್ರೇಷ್ಠ.
ಬಿಳಿ ಎಳ್ಳು .......................ಮಧ್ಯಮ.
ಕಂದು ಎಳ್ಳು....................... ತೃತೀಯ.
ಎಳ್ಳು ಅತ್ಯಧಿಕ ಕ್ಯಾಲ್ಸಿಯಂ , ಐರನ್, ಮೆಗ್ನೀಷಿಯಂ, ಪೊಟ್ಯಾಷಿಯಂ, ವಿಟಮಿನ್, ಫೈಬರ್ ಅಂಶಗಳನ್ನು ಒಳಗೊಂಡಿದೆ.
ಪ್ರತಿ ದಿನ 20 ಗ್ರಾಂ ನಷ್ಟು ಎಳ್ಳನ್ನು ಬಾಯಿಯಲ್ಲಿ ನಿಧಾನವಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸದೃಢವಾಗುತ್ತವೆ. ವಸಡುಗಳು ಗಟ್ಟಿಯಾಗಿ ಹಲ್ಲು ಗಳಿಗೆ ಹೊಳಪು ಬರುತ್ತದೆ. ದಂತ ರೋಗ ಬಾಧಿಸು ವುದಿಲ್ಲ.
ಎಳ್ಳು ಗಿಡದ ಬೇರು ಹಾಗೂ ಎಲೆಗಳನ್ನು ನೀರಿನಲ್ಲಿ ಕುದಿಸಿ ಕೂದಲು ತೊಳೆಯುವುದರಿಂದ ಕೂದಲಿಗೆ ಕಪ್ಪು ಬಣ್ಣ ಬರುತ್ತದೆ.
ಕೆಮ್ಮಿಗೆ...ಎಳ್ಳಿನ ಚೂರ್ಣದ ಕಷಾಯಕ್ಕೆ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು.
ರಕ್ತಾತಿಸಾರಕ್ಕೆ... 05 ಗ್ರಾಂ ನಷ್ಟು ಚೂರ್ಣವನ್ನು ಆಡಿನ ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು.
ಮಹಿಳೆಯರ ಮಾಸಿಕ ಧರ್ಮದಲ್ಲಿ ಏರುಪೇರಾದರೆ ಎಳ್ಳು ಬೆಲ್ಲ ಸೇರಿಸಿ ಸೇವಿಸಿದರೆ ಒಳ್ಳೆಯದು. ಅಥವಾ ಎಳ್ಳಿನ ಕಷಾಯ ಸೇವನೆ ಮಾಡಬಹುದು.
ಎಳ್ಳು ಹಾಗೂ ಅಗಸಿ ಬೀಜಗಳ ಚೂರ್ಣವನ್ನು ಬೆಳಿಗ್ಗೆ ಮತ್ತು ರಾತ್ರಿ ಊಟಕ್ಕಿಂತ ಮುಂಚೆ 05 ಗ್ರಾಂ ನಷ್ಟು ತಿನ್ನುವುದರಿಂದ ಪುರುಷತ್ವ ವೃದ್ಧಿಗೆ ಸಹಕಾರಿ.
ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ.... ದಿನಾಲು ಕರಿ ಎಳ್ಳಿನ ಜೊತೆಗೆ ಬೆಲ್ಲ ಸೇರಿಸಿ ಉಂಡೆ ಮಾಡಿ ತಿನ್ನಿಸಬೇಕು.
ಹಿರಿಯರ ಬಹು ಮೂತ್ರಕ್ಕೆ..... ಎಳ್ಳು ಅಜವಾನ ( ಓಂ ಕಾಳು) ಸೇರಿಸಿ ಸೇವಿಸಿದರೆ ಒಳ್ಳೆಯದು.
ಸಂಧಿವಾತ ಮಂಡಿ ನೋವಿಗೆ.... ಎಳ್ಳು , ಒಣ ಶುಂಠಿ
ಮೆಂತೆ ಬೀಜ ಸೇರಿಸಿ ಪುಡಿ ಮಾಡಿ 05 ಗ್ರಾಂ ನಷ್ಟು ದಿನದಲ್ಲಿ ಮೂರು ಬಾರಿ ಸೇವಿಸಬೇಕು.
ಅಭ್ಯಂಗ ಸ್ನಾನ ಕ್ಕೆ ಎಳ್ಳೆಣ್ಣೆ ಅತ್ಯುತ್ತಮ. ಪ್ರತಿ ದಿನ ಎಳ್ಳೆಣ್ಣೆಯನ್ನು ದೇಹಕ್ಕೆ ಮಾಲಿಶ್ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ, ರಕ್ತವಿಕಾರ ಕಟಿಶೂಲೆ ವಾತ ದೂರವಾಗುತ್ತದೆ.ದೇಹದ ಕಾಂತಿ ಹೆಚ್ಚುತ್ತದೆ.
ಇನ್ನೂ ಹಲವಾರು ರೋಗಗಳಿಗೆ ರೋಗ ನಿವಾರಕವಾಗಿ ಕೆಲಸ ಮಾಡುವ ಈ ಎಳ್ಳನ್ನು ಪ್ರತಿ ದಿನ ಸೇವಿಸುವುದರಿಂದ ದೇಹ ಸದೃಢ ವಾಗಿರುತ್ತದೆ.
ಇದಲ್ಲದೆ ಇನ್ನೂ ಆಡುಗೆಯಲ್ಲೂ ಉತ್ತಮ ರುಚಿಗಾಗಿ ಉಪಯೋಗಿಸುವರು ,ಎಳ್ಳು ಹಚ್ಚಿ ರೊಟ್ಟಿ ಮಾಡುತ್ತಾರೆ ,ಚಕ್ಕಲಿ ಮಾಡುವರು, ಕೇವಲ ಎಲ್ಲಿನ ಚಟ್ನಿ ಬಹಳ ರುಚಿ.
ವಿಶೇಷವಾಗಿ ಮಾನವ ಔರ್ಧ್ವದೈಹಿಕ ಕರ್ಮಗಳಲ್ಲಿ ಎಳ್ಳು ಇಲ್ಲದೆ ಒಂದೂ ಕಾರ್ಯ ಮುಂದುವರಿಯುವುದಿಲ್ಲ. ಈ ಕೆಲಸಗಳಲ್ಲಿ ಕಪ್ಪು ಎಳ್ಳನ್ನೇ ಉಪಯೋಗಿಸುತ್ತಾರೆ

No comments:
Post a Comment