Friday, October 16, 2020

Self fearlessness,Efficacy ( ಆತ್ಮ ಶಕ್ತಿ, ಸ್ಥೈರ್ಯ)

 ಕೈಯಲ್ಲಿ ಆಗದವರು ಮೈಯೆಲ್ಲಾ ಪರಚಿಕೊಂಡರು ಎನ್ನುವ ಮಾತಂತೆ ಕೆಲವರು ತಮ್ಮ ನಿರೀಕ್ಷೆಯಂತೆ ಕೆಲಸ ಆಗದಿದ್ದರೆ ಅಥವಾ ಬಯಸಿದ ವ್ಯಕ್ತಿ ಅವರ ಕೈಗೆ ಸಿಗದಿದ್ದಾಗ ಅತ್ಯಂತವಿಕೃತ ಮನೋಭಾವಕ್ಕೆ ಒಳಗಾಗುತ್ತಾರೆ. ತಾವು ಬಯಸಿದ ವಸ್ತು ಸಿಗದೆ ಇದ್ದಾಗ ಅದನ್ನು ಹಾಳುಮಾಡುವ ಬುದ್ಧಿ ಬರುತ್ತದೆ. ಇಲ್ಲವೇ ತನ್ನ ಆಸೆ ನಿರಾಸೆಗೊಳಿಸಿದ ವ್ಯಕ್ತಿಗೆ ತೊಂದರೆ ಕೊಡಬೇಕೆಂಬ ಮನಸ್ಸು ಮಾಡುತ್ತಾರೆ. ಅಂತಹಸಂದರ್ಭದಲ್ಲಿ ಇವರು ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ. ಇದರ ಪರಿಣಾಮವಾಗಿ ಒಂದಿಷ್ಟು ಸಮಸ್ಯೆಗಳನ್ನು ಇತರರು ಅನುಭವಿಸಬೇಕಾಗುವುದು.

                                                         

             ಇನ್ನೂ ಕೆಲವೊಮ್ಮೆ ಯಾರಿಗೋ ಮಾಡಿರುವ ಮಾಟ-ಮಂತ್ರ ಅಥವಾ ಬ್ಲಾಕ್ ಮ್ಯಾಜಿಕ್ ಎನ್ನುವುದು ನಮಗೆ ಅಂಟಿಕೊಳ್ಳಬಹುದು. ಇದಕ್ಕೆ ಹೊಣೆಯಾರು ಎನ್ನುವುದಕ್ಕೆ ಉತ್ತರಇರುವುದಿಲ್ಲ. ಬರೇ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಅನುಭವಿಸುತ್ತಿರ ಬೇಕಾಗುವುದು. ಯಾವುದೋ ಜನ್ಮದಲ್ಲಿ ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇವೆ ಎನ್ನುವ ಭಾವನೆಯೂ ಒಮ್ಮೊಮ್ಮೆ ಕಾಡುವುದು. ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ, ಬಿಸಿನೆಸ್-ನಲ್ಲಿ ನಷ್ಟ ಬಯಸದೆ ಬರುವ ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವುದು ಹೇಗೆ? ಸಮಸ್ಯೆಗಳನ್ನು ಎದುರಿಸುತ್ತಿರುವ ಮನಸ್ಸಿಗೆ ಯಾವ ರೀತಿಯ ಸಾಂತ್ವನ ನೀಡಬೇಕು? ಮಾಟ-ಮಂತ್ರಗಳಿಂದ ದೂರ ಇರುವುದು ಹೇಗೆ? ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? 

               ನೀವು ಮಾಟ-ಮಂತ್ರಗಳಿಗೆ ಒಳಗಾಗಿದ್ದೀರಿ ಅಥವಾ ಋಣಾತ್ಮಕ ಶಕ್ತಿಯಿಂದ ಬಳಲುತ್ತಿದ್ದೀರಿ ಎಂದು ನೀವು ಹೇಗೆ ತಿಳಿಯುವಿರಿ? ಯಾರೋ ನಿಮ್ಮನ್ನು ಪ್ರೀತಿಸುವುದಾಗಿ ಕೇಳಿಕೊಂಡಾಗ ನಿರಾಕರಣೆ ಮಾಡಿರುವುದು ಅಥವಾಯಾವುದೋ ಕುಟುಂಬದ ವೈಶಮ್ಯದಿಂದ ಹೀಗೆ ಅನೇಕ ಕಾರಣಗಳಿಂದ ಒಳಗಾಗಿರಬಹುದು ಎನ್ನುವ ಸಂಶಯ ನಿಮ್ಮನ್ನು ಕಾಡಬಹುದು. ಪದೇ ಪದೇ ಎದುರಿಸುವ ಕಷ್ಟಗಳು, ಕೆಟ್ಟ ಅದೃಷ್ಟಗಳು, ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧಸಮಸ್ಯೆಗಳು ಕಾಡುತ್ತಲೇ ಇದ್ದರೆ ನೀವು ಸಮಸ್ಯೆಗೆ ಒಳಗಾಗಿದ್ದೀರಿ ಎಂದು ಹೇಳಬಹುದು. ನಿಮ್ಮ ಅದೃಷ್ಟ ಕೆಟ್ಟದಾಗಿದೆಯೇ ನೋಡಿ…ನೀವು ಕಡು ಕಷ್ಟಕ್ಕೆ ಅಥವಾ ನತದೃಷ್ಟವನ್ನು ಹೊಂದಿದ್ದರೆ ಯಾವುದೋ ಋಣಾತ್ಮಕ ಶಕ್ತಿ ನಿಮ್ಮನ್ನು ಬಾಧಿಸುತ್ತಿದೆ ಎಂದು ತಿಳಿಯಬಹುದು. ನಿಮಗೆ ಉಂಟಾಗುತ್ತಿರುವ ಕಷ್ಟ ಹಾಗೂ ತೊಂದರೆಗಳು ನೀಲಿ ಬಣ್ಣದಿಂದಉಂಟಾಗುತ್ತಿದ್ದರೆ ನೀವು ಶಾಪದಿಂದ ಹೊರಬರುವ ಪ್ರಯತ್ನ ಮಾಡಬೇಕಾಗುತ್ತದೆ. ಅಂತಹ ಶಾಪಗಳಿಗೆ ಒಳಗಾಗಿದ್ದೀರಿ ಎಂದಾದರೆ ಈ ರೀತಿಯ ಸಮಸ್ಯೆಗಳು ಉಂಟಾಗಬಹುದು.

      ಸಾಮಾನ್ಯ ಶೀತ ಜ್ವರವಾಗಿದ್ದರೂ ಅತಿಯಾದ ಅನಾರೋಗ್ಯದಿಂದ ಬಳಲುವಿರಿ.

      ಪರೀಕ್ಷೆಗಾಗಿ ಸಾಕಷ್ಟು ಪರಿಶ್ರಮದಿಂದ ಓದಿದ್ದರೂ ಉತ್ತಮ ಅಂಕ ಗಳಿಸಲು ಕಷ್ಟವಾಗುವುದು ಅಥವಾ ವಿಫಲರಾಗುವುದು.

       ಮುಖದಲ್ಲಿ ಯಾವುದೇ ಮೊಡವೆ ಅಥವಾ ಕಲೆ ಹೊಂದಿದವರಲ್ಲದಿದ್ದರೂ ಪ್ರಾಣ ಸಂಗಾತಿಯೊಡನೆ ಏಕಾಂಗಿಯಾಗಿ ಸಮಯಕಳೆಯಲು ಹೋಗುವಾಗ ದೊಡ್ಡ ಮೊಡವೆಗಳು ಮತ್ತು ಕಲೆಗಳು ಕಾಣಿಸಿಕೊಳ್ಳುತ್ತವೆ.

       ಕ್ರೀಡಾಪಟು ಆಯ್ಕೆಗೆ ಸೂಕ್ತ ಕಸರತ್ತು ಅಥವಾ ಅಭ್ಯಾಸ ಮಾಡಿದ್ದರೂ ಆಯ್ಕೆಯ ವೇಳೆಯಲ್ಲಿ ವಿಫಲತೆ ಹೊಂದಬಹುದು.

       ಆತ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ : ನೀವು ನಿಮ್ಮ ಆತ್ಮ ಶಕ್ತಿಯನ್ನು ಅಥವಾ ಆಂತರಿಕ ಮನಸ್ಸನ್ನು ಹೆಚ್ಚು ಸ್ಪಷ್ಟ ಹಾಗೂ ಉತ್ತಮ ಚಿಂತನೆಯಿಂದ ಕೂಡಿರುವಂತೆ ಮಾಡಬೇಕು. ನಮ್ಮಲ್ಲಿ ದುರ್ಬಲತೆಇದ್ದಾಗ ಸಮಸ್ಯೆಗಳು ಹಾಗೂ ವೈಫಲ್ಯತೆಗಳು ಬೇಡವೆಂದರೂ ನಮಗೆ ಅಂಟಿಕೊಳ್ಳುವುದು. ಉತ್ತಮ ಆತ್ಮಶಕ್ತಿಯನ್ನು ಹೊಂದಿದ್ದರೆ ಯಾರು ಏನು ಮಾಡಲೂ ಸಾಧ್ಯವಿರುವುದಿಲ್ಲ. ಆತ್ಮಸ್ಥೈರ್ಯ ಚೆನ್ನಾಗಿದ್ದರೆ ಧನಾತ್ಮಕ ಶಕ್ತಿಯು ಸದಾ ನಮ್ಮ ಸುತ್ತಲು ಸುತ್ತುವರಿದಿರುವುದು. ಉತ್ತಮ ಮನಃಶಕ್ತಿಯನ್ನು ಹೊಂದಿದ್ದರೆಅದೇ ನಮ್ಮ ಜೀವನಕ್ಕೆ ಅತ್ಯುತ್ತಮ ಆಭರಣ. ಯಾವುದೋ ವಸ್ತುವಿನಿಂದ ನಿಮಗೆ ಅಲರ್ಜಿ ಉಂಟಾಗಿದ್ದರೆ ಅದು ಶಾಪ ಎಂದು ಪರಿಗಣಿಸದಿರಿ. ಅದರಿಂದ ದೂರ ಇರುವುದನ್ನು ಕಲಿಯಬೇಕು.

           ಸೇವೆಕೆಟ್ಟ ಸಮಯವು ಎಂದಿಗೂ ಶಾಪವಲ್ಲ ಎಂದು ತಿಳಿಯಿರಿ : ಕೆಟ್ಟ ಸಂಗತಿಗಳು ಅಥವಾ ಅನುಭವಗಳು ನಿಮ್ಮೊಂದಿಗೆ ಅದೆಷ್ಟೇ ನಡೆದಿರಲಿ ಅದ್ಯಾವುದೂ ಶಾಪ ಎಂದು ಪರಿಗಣಿಸದಿರಿ. ಬದಲಿಗೆ ಅದೊಂದು ಜೀವನಕ್ಕೆ ಸಿಕ್ಕ ಪಾಠ ಎಂದು ತಿಳಿಯಿರಿ. ನಿಮ್ಮ ಶತ್ರುಗಳು ನಿಮಗೆಕೆಡಕನ್ನುಂಟುಮಾಡಬಹುದು ಎಂಬುದನ್ನು ನೀವು ತಿಳಿಯಬಹುದು. ನಿಮ್ಮ ಅದೃಷ್ಟ ಒಳ್ಳೆಯದಾಗಿರುವಾಗ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಾಗೊಮ್ಮೆ ನಿಮ್ಮ ಯೋಜನೆಗಳು ಪದೇ ಪದೇ ವಿಫಲತೆಯನ್ನು ಕಾಣುತ್ತಿದ್ದರೆ ಅದಕ್ಕೆ ಸೂಕ್ತವಾದ ಪ್ರಯತ್ನ ಇನ್ನೂ ಮಾಡಬೇಕಿದೆ ಎನ್ನುವುದನ್ನು ನೀವು ಅರಿಯ ಬೇಕು. ಸಮಸ್ಯೆ ಇದೆ ಎಂದು ಚಿಂತಿಸುತ್ತಿದ್ದರೆ ನಮಗೆ ಎಲ್ಲವೂ ಸಮಸ್ಯೆಯಾಗಿಯೇಕಾಣುವುದು. ನೀವು ಧನಾತ್ಮಕ ಚಿಂತನೆಯಿಂದ ಎಲ್ಲವನ್ನು ಕಂಡರೆ ಯಾವುದೂ ಸಮಸ್ಯೆಯಾಗಿ ಕಾಣದು.ಕುಟುಂಬದಲ್ಲಿ ಎಲ್ಲರೂ ಒಳ್ಳೆಯ ಭಾವನೆಗಳನ್ನು ಹೊಂದಿದ್ದರೂ ಅತಿಯಾದ ಕಲಹ ಅಥವಾ ದೂರ ಹೋಗುವ ಪರಿಸ್ಥಿತಿ ಒದಗಿ ಬರುವುದು.ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ…

           ಕೆಟ್ಟ ಶಕ್ತಿಯ ಶಾಪಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ಭಾವ ನಿಮ್ಮದಾಗಿದ್ದರೆ ಅದರಿಂದ ಮೊದಲು ಹೊರಬರಬೇಕು. ಅದಕ್ಕಾಗಿಒಂದಿಷ್ಟು ಧಾರ್ಮಿಕ ಪುಸ್ತಕಗಳು ಹಾಗೂ ಉತ್ತಮ ಚಿಂತನೆಗಳನ್ನು ಒಳಗೊಂಡಿರುವ ಪುಸ್ತಕವನ್ನು ಓದಿ. ಸ್ನೇಹಿತರೊಂದಿಗೆ ಅಥವಾ ನಿಮ್ಮ ಆತ್ಮೀಯರೊಂದಿಗೆ ಒಂದಿಷ್ಟು ತಮಾಷೆಯ ಮಾತುಗಳು ಹಾಗೂ ನಗುವಿನಿಂದ ನಿಮ್ಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಈ ಪ್ರಯತ್ನಗಳಿಂದ ನೀವು ದುಷ್ಟ ಚಿಂತನೆಗಳು ಹಾಗೂಶಕ್ತಿಯಿಂದ ಬಹುದೂರ ಸಾಗಬಹುದು. ಅಲ್ಲದೆ ಆತ್ಮಸ್ಥೈರ್ಯವು ಹೆಚ್ಚುವುದು. ಜೀವನದಲ್ಲಿ ಸಮಸ್ಯೆಗಳು ಕರಗುವುದು.

            ಧೂಪವನ್ನು ಬೆಳಗಿ : ಉತ್ತಮ ಔಷಧೀಯ ಗಿಡಮೂಲಿಕೆಗಳಿಂದ ತಯಾರಿಸುವ ಧೂಪಗಳನ್ನು ನಿತ್ಯವೂ ಬೆಳಗಬೇಕು. ಮುಂಜಾನೆ, ಸಂಜೆಯ ಸಮಯದಲ್ಲಿ ಮನೆಯಲ್ಲಿ ಧೂಪ ಬೆಳಗುವುದರ ಮೂಲಕ ದುಷ್ಟ ಶಕ್ತಿಯನ್ನು ಓಡಿಸಬಹುದು. ಇದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆ ಹಾಗೂ ಮನಸ್ಸಿನಸುತ್ತ ಹೆಚ್ಚಾಗುವುದು. ಇವುಗಳಿಮದ ನಿಮಗೆ ಅಂಟಿರುವ ಶಾಪವನ್ನು ತೆಗೆಯಬಹುದು. ಧಾರ್ಮಿಕ ಶಕ್ತಿಯನ್ನು ಹೆಚ್ಚಿಸುವ ಗಿಡಮೂಲಿಕೆಯನ್ನು ಸಣ್ಣ ಚೀಲದಲ್ಲಿ ತುಂಬಿ ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಹೀಗೆ ಮಾಡುವುದರಿಂದಲೂ ದುಷ್ಟ ಶಕ್ತಿಯಿಂದ ನೀವು ದೂರಾಗಬಹುದು.

          ಉಪ್ಪು ಮತ್ತು ಗಿಡಮೂಲಿಕೆಯ ಸ್ನಾನ ಮಾಡಿ : ಧಾರ್ಮಿಕ ಅಥವಾ ಧನಾತ್ಮಕ ಶಕ್ತಿಯನ್ನು ನೀಡುವ ಸ್ನಾನವು ಕೆಟ್ಟ ಶಕ್ತಿಗಳನ್ನು ದೂರವಿಡುತ್ತದೆ. ಅವುಗಳಿಂದ ಯಾವುದೇ ಹಾನಿಗೆ ಒಳಗಾಗದಂತೆ ಇರಬಹುದು. ನೀವು ಯಾವದೋ ಶಾಪಕ್ಕೆ ಒಳಗಾಗಿದ್ದೀರಿ ಎಂದು ಭಾವಿಸಿದರೆ ಮೇಣದ ಬತ್ತಿಯನ್ನು ಬೆಳಗಿಸಿಅದರ ಶಾಖದಲ್ಲಿ ಸ್ನಾನ ಮಾಡಿ. ಉಪ್ಪು ಮತ್ತು ಗಿಡಮೂಲಿಕೆ ನೀರಿನಲ್ಲಿ ಸ್ವಲ್ಪ ಸಮಯ ಕಳೆಯುವುದರ ಮೂಲಕ ಸ್ನಾನ ಮಾಡಿ. ಸ್ನಾನದ ನೀರಿಗೆ ಚಿಟಿಕೆ ಉಪ್ಪು, ಹೈಸೊಪ್, ತುಳಸಿ, ಮರಗ, ದವನ, ದಪ್ಪೆಲೆ,ಗಳಂತಹ ಗಿಡಮೂಲಿಕೆಗಳ ಎಲೆಗಳನ್ನು ಅಥವಾ ರಸವನ್ನು ಸಿಂಪಡಿಸಿ ಸ್ನಾನ ಮಾಡಿ. ಉತ್ತಮ ಧನಾತ್ಮಕ ಚಿಂತನೆಗಳನ್ನು ಕೈಗೊಳ್ಳಬೇಕು.

              ಧಾರ್ಮಿಕ ಚಿಂತನೆಯನ್ನು ನಡೆಸಿ : ಧಾರ್ಮಿಕ ಚಿಂತನೆಯಲ್ಲಿ ವ್ಯಕ್ತಿಯನ್ನು ತಿದ್ದುವ ಶಕ್ತಿಯಿರುತ್ತದೆ. ಆಧ್ಯಾತ್ಮಿ ರೀತಿಯಲ್ಲಿ ನಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡರೆ ಯಾವುದೇ ತೊಂದರೆಗಳು ಉಂಟಾಗದು. ವ್ಯಕ್ತಿಯನ್ನು ಕೆಟ್ಟ ವಿಚಾರದಲ್ಲಿ ತೊಡಗಿಕೊಳ್ಳದಂತೆ ನಿಯಂತ್ರಣಕ್ಕೆ ತರುವುದು. ಉತ್ತಮ ರೀತಿನೀತಿಗಳೊಂದಿಗೆ ಜೀವನ ನಡೆಸಲು ಸಲಹೆ ನೀಡುವುದು. ಜೊತೆಗೆ ಕೂಡಿ ಬಾಳುವ ಪ್ರೀತಿ ವಿಶ್ವಾಸದ ಮನೋಭಾವವನ್ನು ಬೆಳೆಸುವುದು. ಹೆಚ್ಚೆಚ್ಚು ಧಾರ್ಮಿಕ ಚಿಂತನೆಗಳನ್ನು ನಡೆಸುವುದರಿಂದ ಕೆಟ್ಟ ಶಕ್ತಿಗಳಿಂದ ಮುಕ್ತಿ ದೊರೆಯುವುದು. ಧ್ಯಾನ, ಯೋಗ ಸೇರಿದಂತೆ ಇನ್ನಿತರ ಆಧ್ಯಾತ್ಮಿಕಚಿಂತನೆಯಲ್ಲಿ ತೊಡಗಿಕೊಂಡರೆ ಜೀವನವು ಸಂತೋಷದಿಂದ ಸಾಗುವುದು.

          ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸಿ : ಸಮಸ್ಯೆ ಹಾಗೂ ಕಷ್ಟಗಳು ಎಲ್ಲರನ್ನೂ ಕಂಗೆಡಿಸುತ್ತದೆ. ಕಷ್ಟಗಳು ಎದುರಾದಾಗ ಮನಸ್ಸು ಸಾಮಾನ್ಯವಾಗಿ ದುರ್ಬಲವಾಗುತ್ತದೆ. ಅಂತಹ ಸಮಯದಲ್ಲಿ ಅನೇಕ ತಪ್ಪುಗಳು ನಮ್ಮಿಂದ ಸಂಭವಿಸುವ ಸಾಧ್ಯತೆಗಳುಹೆಚ್ಚಿರುತ್ತವೆ. ಇದರಿಂದಾಗಿ ಇನ್ನಷ್ಟು ಕಷ್ಟ ಮತ್ತು ನೋವುಗಳು ತಲೆದೂರುತ್ತವೆ. ಹಾಗಾಗಿ ಎಂದತ ಕಷ್ಟಗಳು ಎದುರಾದರೂ ಅದನ್ನು ಸೂಕ್ತ ರೀತಿಯಲ್ಲಿ ಎದುರಿಸಿ. ಸಮಸ್ಯೆಗಳು ಎದುರಾದಾಗ ದೃತಿ ಗೆಡದೆ ಮುನ್ನಡೆದಾಗ ಸಕಾರಾತ್ಮಕ ಶಕ್ತಿಯು ನಮ್ಮ ಕೈಹಿಡಿಯುವುದು. ಸಮಸ್ಯೆಗಳು ನಿಧಾನವಾಗಿ ಜಾರಿ ನಮ್ಮ ಬದುಕಿನ ದಾರಿಯು ಸುಗಮವಾಗುವುದು. ಕತ್ತಲೆಯಿಂದ ಬೆಳಕಿನೆಡೆಗೆ ಬಂದಾಗ ಬದುಕು ಬೆಳಗುವುದುಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಕತ್ತಲೆಯಲ್ಲಿ ನಾವಿದ್ದರೂ ಬೆಳಕಿನ ಹುಡುಕಾಟ ನಿರಂತರವಾಗಿ ಆಗಬೇಕು. ಆಗ ಬೆಳಕು ದೊರೆಯುವುದು.


No comments:

Post a Comment