Friday, November 20, 2020

Shriman Madhwaachaaryaru ( ಶ್ರೀಮನ್ ಮಧ್ವಾಚಾರ್ಯರು )

 ಶ್ರೀಮದಾನಂದತೀರ್ಥ ಸ್ಮರಣಂ

ಓಂ ರೂಪಿ ಗಜವದನ ದೇವನೆ |     
ಮೇರುಗಿರಿ ಆನಂದ ತೀರ್ಥರ | ಸಾರ್ವ ಭೌಮರ ಸೇವೆ ಮಾಡಲು ಬೇಡು ಪ್ರೇರಣೆಯ   || 1 ||ಶ್ರೀಶ ಸ್ಮರಣೆಗೆ ಚಿತ್ತ ಸ್ಥೈರ್ಯವು | ದೇಶ ಸೇವೆಗೆ ಶಕ್ತಿ ಬಿಸುಪಾ - | ವೇಶ ದೇಹಕೆ ರೋಗ ರಹಿತಾಗಿಸಲು ಬೇಡುವೆನು       || 2 ||ಸೃಷ್ಟಿಯೋಳು ವಾಸ್ತವವೇ ನೋಡುವ |ದೃಷ್ಟಿ ಉತ್ತಮ ಗುರುವೆ ಕರುಣಿಸು | ಪುಷ್ಟಿ ಕಾಠಿಣ್ಯತೆಯು ದೃಷ್ಟಿಗೆ ಬರದೆ ಇರಲೆಂದು      || 3 || ದೇವ ಗುರು ಹಿರಿಯರಲಿ ಅನುಭವ | ಈವ ಒಳ್ಳೆಯ ಶ್ರವಣ ಕೀರ್ತನ | ಸೇವೆ ಕೇಳ್ವಿಕೆ ದಿವ್ಯ ಅರಿವನು ಪಡೆಯಲಾಶಿಸುವೆ  || 4 ||
ಒಲವು ಸೌಜನ್ಯಗಳು ಮಾತಲಿ  | ನಿಲುವು ಮನನೋಯಿಸದೆ ಪರರಲಿ | ಬಲವು ಅಂಕಿತ ಜಿವ್ಹೆಯೋಳು ತಾ ಗ್ರಹಿಸಲೊಂದಿಪೆನು || 5 ||
ಸಿದ್ಧಿಯಿಂ ಸತ್ಸಂಗ ಮಾಳ್ಪಲು | ಶುದ್ಧ ವಿಶ್ವಾಸವನೆ ಆತ್ಮದಿ | ಬುದ್ಧಿಗೆ ಸಂಸ್ಕಾರ ಶ್ರದ್ಧೆಯು ನಿನ್ನ ಸನ್ನಿಧಿಗೆ        || 6 ||ಯೋಗಿ ಪುಂಗವ ನಿನ್ನ ಭಜಿಸಲು | ಭೋಗಿ ಯನ್ನಯ ಮನವ ರೂಪಿಸಿ | ಸಾಗಿ ಸಾಷ್ಟಾಂಗದಲಿ ಪೂರ್ಣ ಪ್ರಜ್ನರೊಳು ನಮಿಪೆ   || 7 || ಮೇಷ ಮೀನವ ಎಣಿಸದೆಯೇ ಭವಿ | ರಾಶಿ ಜನ್ಮವ ನೀಗಿ ಮೋಕ್ಷವ | ಈಶ ಜೀವರ ಭೇದ ದ್ವೈತದಿ ಇಂದುಸುತ ನುತಿಪ     || 8 ||
    ಮಧ್ವೇಶಾರ್ಪಣಮಸ್ತು 






shrIman.h madhva-mate

In Sriman Madhva's doctrine

hariH parataraH

Hari is Supreme

satyaM jagat.h

The world is true (real)

tattvataH bhedaH

The differences are real

jIvagaNAH hareH anucharAH

The classes of souls are cohorts of Hari

nIchochcha bhAvaN^gatAH

And reach different ultimate states

muktiH naija-sukha-anubhUtiH

mukti (liberation) is the  experience of the joy of one's own nature

amalA-bhaktiH-cha tat.h sAdhanaM

That is achieved by flawless devotion and correct understanding

 

axAditritayaM hi pramANaM

pratyaksha (observation), etc.,are indeed the sources of knowledge

akhila-AmnAya-eka-vedyo hariH

 

Hari alone is praised in all the Vedas.

 



No comments:

Post a Comment