Monday, March 29, 2021

Limonia acdissima (ಬೆಳುವಲ ಕಾಯಿ)

 ಕನ್ನಡ ಭಾಷೆಯಲ್ಲಿ  ಬೇಲದ ಹಣ್ಣು , ಬ್ಯಾಲದ ಹಣ್ಣು ,  ಹಾಗೂ 

ಗ್ರಾಮೀಣ ಭಾಷೆಯಲ್ಲಿ ಬಳೂಲ ಕಾಯಿ ಎಂದು ಕರೆಯಲ್ಪಡುವ ಇದಕ್ಕೆ...

 ಸಂಸ್ಕೃತ ಭಾಷೆಯಲ್ಲಿ ಕಪಿತ್ಥ , ಕಪಿ ಪ್ರಿಯ.

ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕೈಥಾ,ಖಮೀಟ                  Botanical name : Limonia acdissima

Family  : Rutaceae (citrus family)

Name  : wood Apple.

ಎಲ್ಲರಿಗೂ ಪ್ರಿಯವಾದ ಹಾಗೂ ಪರಿಚಯವಿರುವ ಈ ಬೇಲದ ಹಣ್ಣು , ಕಾಯಿ ಇರುವಾಗ ಹಸಿರು ಮಿಶ್ರಿತ ವಾಗಿದ್ದು ಹಣ್ಣಾದ ನಂತರ ಮರದಿಂದ ತಾನೇ ಉದುರಿ ಬೀಳುತ್ತವೆ

 ಈ ಹಣ್ಣಿನ ತಿರುಳಿನಲ್ಲಿ ಬೆಲ್ಲ, ಜೀರಿಗೆ ಪುಡಿ, ಸ್ವಲ್ಪ ಉಪ್ಪು ಸೇರಿಸಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

 ಪಾನಕ ತಯಾರಿಸಿ ಕುಡಿದರೆ ದೇಹಕ್ಕೆ ತಂಪು.ಮೋರಬ್ಬ , ಹಾಗೂ ಬರ್ಫಿ ತಯಾರಿಸಬಹುದು.

 ಬೇಲದ ಹಣ್ಣಿನ ತಿರುಳಿನಿಂದ ಹೋಳಿಗೆ ಕೂಡ ಮಾಡುತ್ತಾರೆ.

                                             { ಬೇಲದ ಹಣ್ಣಿನ ಔಷಧೀಯ ಗುಣಗಳು }

ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಸಿ ಜೀವಸತ್ವ ಮತ್ತು ಪೋಷಕಾಂಶಗಳು ಹೇರಳವಾಗಿ ಇರುವ ಕಾರಣ ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇದರಲ್ಲಿ ರಂಜಕದ ಅಂಶ, ವಿಟಮಿನ್ ಸಿ ಇರುವುದರಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಮತ್ತು ಜ್ಞಾಪಕಶಕ್ತಿ ಕೂಡ ಹೆಚ್ಚುತ್ತದೆ

ಎಂದು ಸಂಶೋಧನೆಗಳ ಮಾಹಿತಿ ಸಿಗುತ್ತದೆ.

ಇದರಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆ ಗೆ ಹಾಗೂ ಮಲಬದ್ಧತೆ ನಿವಾರಣೆಗೆ ಅತ್ಯುಪಯುಕ್ತ.

ಅಸಿಡಿಟಿ, ಅಲ್ಸರ್ ಗಳಿಂದ ಕಾಪಾಡುತ್ತದೆ.

ಅತಿಸಾರ ದಲ್ಲಿ ಬೀಜಗಳನ್ನು ತೆಗೆದು ಸೇವನೆ ಮಾಡಬೇಕು.

ಮಧುಮೇಹಿಗಳಿಗೆ ಅತ್ಯುತ್ತಮ ಈ ಬೇಲದ ಹಣ್ಣು.

ಕೆಮ್ಮು ದಮ್ಮು ಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ತಿರುಳಿಗೆ ಬೆಲ್ಲ ಶುಂಠಿ ಸೇರಿಸಿ ಸೇವಿಸಬೇಕು.

 ಹಣ್ಣಿನ ಸೇವನೆಯಿಂದ ವಸಡುಗಳು ಗಟ್ಟಿಯಾಗಿ,ಬಾಯಿಯ ದುರ್ಗಂಧ ದೂರವಾಗುತ್ತದೆ.

     ಇದಲ್ಲದೆ ಈ ಗಿಡದ ಬೇರು, ಎಲೆ ,ಚಕ್ಕೆ , ಅಂಟು ಎಲ್ಲವೂ ಔಷಧೀಯ ಗುಣದಿಂದ ತುಂಬಿದ್ದು ವಿವಿಧ ಕಾಯಿಲೆ ಗಳಿಗೆ ಮನೆಮದ್ದಾಗಿ ಉಪಯೋಗಿಸುತ್ತಾರೆ.

      ರಾಸಾಯನಿಕಗಳನ್ನು ಬೆರೆಸಿ ತಯಾರಿಸಿದ ಕೃತಕ ತಂಪು ಪಾನೀಯ ಕುಡಿಯು ವದಕ್ಕಿಂಲೂ, ಈ ಬೇಲದ ಹಣ್ಣಿನ ಪಾನಕ ತಯಾರಿಸಿ ಕುಡಿದರೆ ದೇಹಕ್ಕೆ ತಂಪು ನೀಡುವುದಲ್ಲದೆ ಬಲವನ್ನೂ ನೀಡುತ್ತದೆ.


No comments:

Post a Comment