ಯಜ್ಞೋಪವೀತ ಧಾರಣ ವಿಧಿ
ಆಚಮನಮ್
ಓಂ ಶ್ರೀ ಕೇಶವಾಯ ಸ್ವಾಹಾ ಓಂ ಶ್ರೀ ನಾರಾಯಣಾಯ ಸ್ವಾಹಾ ಓಂ ಶ್ರೀ ಮಾಧವಾಯ ಸ್ವಾಹಾ ಓಂ ಶ್ರೀ ಗೋವಿಂದಾಯ ನಮಃ (ನೀರು ಬಿಡುವುದು) ಓಂ ಶ್ರೀ ವಿಷ್ಣವೇ ನಮಃ ಓಂ ಶ್ರೀ ಮಧುಸೂದನಾಯ ನಮಃ ಓಂ ಶ್ರೀ ತ್ರಿವಿಕ್ರಮಾಯ ನಮಃ ಓಂ ಶ್ರೀ ವಾಮನಾಯ ನಮಃ ಓಂ ಶ್ರೀ ಶ್ರೀಧರಾಯ ನಮಃ ಓಂ ಶ್ರೀ ಹೃಷಿಕೇಶಾಯ ನಮಃ ಓಂ ಶ್ರೀ ಪದ್ಮನಾಭಾಯ ನಮಃ ಓಂ ಶ್ರೀ ದಾಮೋದರಾಯ ನಮಃ ಓಂ ಶ್ರೀ ಸಂಕರ್ಷಣಾಯ ನಮಃ ಓಂ ಶ್ರೀ ವಾಸುದೇವಾಯ ನಮಃ ಓಂ ಶ್ರೀ ಪ್ರದ್ಯುಮ್ಯಾಯ ನಮಃ ಓಂ ಶ್ರೀ ಅನಿರುದ್ಧಾಯ ನಮಃ ಓಂ ಶ್ರೀ ಪುರುಷೋತ್ತಮಾಯ ನಮಃ ಓಂ ಶ್ರೀ ಅಧೋಕ್ಷಜಾಯ ನಮಃ ಓಂ ಶ್ರೀ ನಾರಸಿಂಹಾಯ ನಮಃ ಓಂ ಶ್ರೀ ಅಚ್ಯುತಾಯ ನಮಃ ಓಂ ಶ್ರೀ ಜನಾರ್ದನಾಯ ನಮಃ ಓಂ ಶ್ರೀ ಉಪೇಂದ್ರಾಯ ನಮಃ ಓಂ ಶ್ರೀ ಹರಯೇ ನಮಃ ಓಂ ಶ್ರೀ ಕೃಷ್ಣಾಯ ನಮಃಪುನರಾಚಮನಮ್ [ ಪುನಃ ಆಚಮನ ಮಾಡುವುದು] 2 ಸಲ
ಪ್ರಾಣಾಯಾಮಃ
ಓಂ | ಪ್ರಣವಸ್ಯ | ಪರಮೇಷ್ಠಿ | ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ||
ಓಂ ಭೂಃ || ಓಂ ಭುವಃ || ಓಂ ಸ್ವಃ || ಓಂ ಮಹಃ || ಓಂ ಜನಃ ||ಓಂ ತಪಃ || ಓಂ ಸತ್ಯಮ್ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್ | (ಕಣ್ಣಿಗೆ ನೀರನ್ನು ಹಚ್ಚಿಕೊಳ್ಳುವುದು)
ಸಾಧ್ಯವಾದಲ್ಲಿ ದೇಹ ಶುದ್ಧಿ ಮಾಡಿಕೊಳ್ಳಲು ಪಂಚಗವ್ಯ ಪ್ರಾಶಿಸಬೇಕು. ( ಗೋಮಯ, ಗೋಮೂತ್ರ, ಹಾಲು, ತುಪ್ಪ, ಮೊಸರು)
ದೇಹಶುಧ್ಯರ್ಥಂ ಪಂಚಗವ್ಯಪ್ರಾಶನಂ ಕರಿಷ್ಯೇ || [ ನೀರು ಬಿಡುವುದು]
ಪ್ರಾಶನಮಂತ್ರಃ
|| ಯತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಹೇ | ಪ್ರಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||
[ ಈ ಮಂತ್ರಗಳನ್ನು ಹೇಳಿ ಪ್ರಾಶನ ಮಾಡಿ , ಆಚಮನ ಮಾಡುವುದು . ಈ ರೀತಿ ಮೂರು ಸಲ ಪಂಚಗವ್ಯವನ್ನು ಪ್ರಾಶನಮಾಡುವುದು .ಮೂರು ಸಲ ಆಚಮನ ]
ಧದಿ ಸೂಕ್ತ (ಗುಳಿಗೆಗಳು )
(ಓಂ | ದಧಿಕ್ರಾವ್ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ | ಸುರಭಿನೋ ಮುಖಾ ಕರತ್ರ್ಪಣ ಆಯೂಂಷಿತಾರಿಷತ್ || ೪ |
[ ಇತಿ ದಧಿ ಸೂಕ್ತO ])
ಈ ಮೇಲಿನ ಮಂತ್ರದಿಂದ ಗುಳಿಗೆಯನ್ನು
ತೆಗೆದುಕೊಂಡು ಪುನಹ ಆಚಮನ ಮಾಡುವುದು
ಮನೆಗೆ ತಂದಿರುವ ಯಜ್ಞೋಪವೀತವು ದೇವಳದಲ್ಲಿ ಪೂಜೆ ಆಗಿದ್ದರೆ ಪುನಹ ಅಭಿ ಮಂತ್ರಣ ಮಾಡಬೇಕಾಗಿಲ್ಲ. ಹೊಸದಾಗಿ ಅಂಗಡಿಯಿಂದ ತಂದ ಉಪವೀತಗಳು ಇದ್ದರೆ ಅದನ್ನು ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಬೇಕು.
ಶ್ರಿಮನ್ನ್ರುಪ ಶಾಲಿವಾಹನ ಶಕೆ ಬೌದ್ಧ ಅವತಾರೆ ರಾಮ ಕ್ಷೇತ್ರೇ ಅಸ್ಮಿನ್ವರ್ತಮಾನೇ ವ್ಯವಹಾರಿಕೆ .......... ನಾಮ ಸಂವತ್ಸರೇ
ದಕ್ಷಿಣಾಯಣೇ ವರ್ಷಋತು ಶ್ರಾವಣಮಾಸೇ ......... ಪಕ್ಷೇ............ ತಿಥೌ .......... ವಾಸರೇ ಪೂರ್ವೋಕ್ತ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ ಶ್ರೀಮಧ್ವಾಚಾರ್ಯಣಾಂ ಹೃತಕಮಲ ಮಧ್ಯೇ ನಿವಾಸಿ ಅನಂತ ಕಲ್ಯಾಣ ಗುಣ ಪರಿಪೂರ್ಣ ಕ್ಷೀರಾಬ್ದಿಶಾಯಿ ಶ್ರೀ ವಿಷ್ಣು ಪ್ರೇರಣೆಯಾ ಶ್ರೀ ವಿಷ್ಣು ಪ್ರೀತ್ಯರ್ಥಂ ಶ್ರೌತ ಸ್ಮಾರ್ತ ಸಕಲ ಕರ್ಮಾನುಷ್ಠಾನ ಫಲ ಸಿದ್ಧ್ಯರ್ಥಂ
ಯಜ್ಞೋಪವೀತ ಧಾರಣಂ ಅಹಂ ಕರಿಷ್ಯೇ
ಎಂದು ನೀರನ್ನು ಹರಿವಾಣದಲ್ಲಿ ಬಿಡುವುದು
ಯಜ್ಞೋಪವೀತಿ ಇತಿ ಮಂತ್ರಸ್ಯ ಪರಬ್ರಹ್ಮಋಷಿ : ಪರಮಾತ್ಮಾ ದೇವತಾ ತ್ರಿಷ್ಟುಪ್ ಛಂದಃ ಯಜ್ಯೋಪವೀತಧಾರಣೇ ವಿನಿಯೋಗ : ||
ಓಂ ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯಸ್ಸಹಜಂ ಪುರಸ್ಕಾತ್ | ಆಯುಷ್ಯಮಗ್ರ್ಯಂ ಪ್ರತಿಮುಂಚಶುಭ್ರಂ ಯಜ್ಯೋಪವೀತಂ ಬಲಮಸ್ತು ತೇಜಃ ||
ಈ ಮಂತ್ರವನ್ನು ಹೇಳಿಕೊಂಡು ತಂದೆಯಿಂದ ಅಥವಾ ಹಿರಿಯರಿಂದ ಯಜ್ಞೋಪವೀತವನ್ನು ಧಾರಣೆ ಮಾಡುವುದು. ನಂತರ ಯಥಾಶಕ್ತಿ ಗಾಯತ್ರಿ ಮಂತ್ರವನ್ನು ನೂತನ ಜನಿವಾರವನ್ನು ಹಿಡಿದುಕೊಂಡು ಹೇಳುವುದು ( ಕನಿಷ್ಠ ಹತ್ತು ಗಾಯತ್ರಿ ಮಂತ್ರವನ್ನು ಹೇಳಿಕೊಂಡು ) ಆಚಮನ ಮಾಡಿಕೊಂಡು ಹಳೆಯ ಜನಿವಾರವನ್ನು ಸೊಂಟದ ಕೆಳಗಿನಿಂದ ತೆಗೆಯುವುದು
ಉಪವೀತಂ ಭಿನ್ನತಂತುಂ ಜೀರ್ಣಂ ಕಶ್ಮಲದೂಷಿತಂ | ವಿಸೃಜಾಮಿ ಸೂತ್ರದೇವಾನ್ ದೀರ್ಘಾಯುರಸ್ತು ಮೇ | " ಸಮುದ್ರಂ ಗಚ್ಚ ಸ್ವಾಹಾ " ಇತ್ಯುಕ್ಯಾ ವಿಸೃಜೇತ್ | ಪುನರಾಚಮನಂ | ಮತ್ತೆ ಆಚಮನ ಮಾಡುವುದು
ಸಾಧ್ಯವಾದಲ್ಲಿ ದೇವ ಋಷಿ ಆಚಾರ್ಯ ಪಿತೃ ತರ್ಪಣವನ್ನು ಕೊಡುವುದು.
No comments:
Post a Comment