Tuesday, September 07, 2021

BRAHMANA Dinner Lingerie ಪಂಕ್ತಿಭೋಜನ

 ಪಂಕ್ತಿಭೋಜನದ ಕುರಿತು:

ಕೆಲವು ದಿನಗಳಿಂದ ಸಹ ಪಂಕ್ತಿ ಭೋಜನದ ಕುರಿತಾಗಿ ಚರ್ಚೆ ನಡೆಯುತ್ತಿದೆ. ಈ ವಿಷಯದ ಬಗ್ಗೆ ತಾಂತ್ರಿಕ ಹಿನ್ನೆಲೆಯನ್ನು ಕೊಡುವುದು ಈ ಲೇಖನದ ಉದ್ದೇಶ.


ಪಂಕ್ತಿ ಭೋಜನದ ಕುರಿತು ಇರುವ ಒಂದು ತಪ್ಪು ಗ್ರಹಿಕೆ ಏನೆಂದರೆ, ಇದು ಬ್ರಾಹ್ಮಣರು ತಮ್ಮ ಪ್ರತ್ಯೇಕತೆಗಾಗಿ, ತಮ್ಮ ಹಿರಿಮೆಗಾಗಿ ಮಾಡಿಕೊಂಡಿರುವ ಒಂದು ವ್ಯವಸ್ಥೆ. ಬೇರೆಯವರನ್ನು ದೂರವಿಟ್ಟರೆ ಅವರಿಗೆ ನೋವಾಗುತ್ತದೆ ಆದುದರಿಂದ ಮಾನವೀಯ ದೃಷ್ಟಿಯಿಂದ ಇದು ಒಳ್ಳೆಯ ವ್ಯವಸ್ಥೆಯಲ್ಲ ಎನ್ನುವುದು ಒಂದು ಸಾಮಾನ್ಯ ಅನಿಸಿಕೆ.

ಆದರೆ ವಾಸ್ತವವಾಗಿ ಈ ವ್ಯವಸ್ಥೆ ತಮ್ಮ ಹೆಚ್ಚುಗಾರಿಕೆಗಾಗಲೀ ಅಥವಾ ಹೆಚ್ಚಿನ ಅವಕಾಶಗಳಿ ಗಾಗಲೀ ಬಂದದ್ದಲ್ಲಾ. ಇದರ ಹಿನ್ನೆಲೆ ಹೀಗೆ ಇದೆ:

ತ್ರೈವರ್ಣಿಕರು ಭೋಜನ ಮಾಡಬೇಕಾದರೆ ಅದನ್ನು ಒಂದು ಯಙ್ಞ ರೂಪದಲ್ಲಿ ಮಾಡಬೇಕು ಎನ್ನುವುದು ನಿಯಮ. ಅಂದರೆ ಕೇವಲ ಇಂದ್ರಿಯ ತೃಪ್ತಿಗಾಗಿ ತಿನ್ನದೇ, ತಮ್ಮ ಒಳಗಿರುವ ದೇವತೆಗಳಿಗೆ ಸಮರ್ಪಿತವಾಗುವಂತೆ ಭೋಜನ ಮಾಡಬೇಕು ಎನ್ನುವುದು ನಿಯಮ. ಇಂದ್ರಿಯ ತೃಪ್ತಿಗಾಗಿ ತಿನ್ನುವುದು ತಪ್ಪು ಎಂದಲ್ಲಾ, ಆದರೆ, ತಮ್ಮೊಳಗಿನ ದೇವತೆಗಳಿಗೆ ತಲಪುವ ರೀತಿ ಭೋಜನ ಮಾಡಿದರೆ ಅದೊಂದು ಯಙ್ಞವಾಗಿರುತ್ತದೆ ಎನ್ನುವುದು ಇಲ್ಲಿನ ಆಶಯ. ಇಂದು ಈ ರೀತಿ ಭೋಜನ ಮಾಡುವ ಕ್ರಮ ವಿರಳವಾಗಿರಬಹುದು ಆದರೂ ಸಹಾ ಅಲ್ಲಲ್ಲಿ ಆಚಾರ-ನಿಷ್ಠರಾಗಿರುವವರು ಹೀಗೆ ಮಾಡುವುದು ಕಂಡು ಬರುತ್ತದೆ.

ವಿಶೇಷವಾಗಿ ಶ್ರಾದ್ಧಕ್ಕಾಗಿ ಬ್ರಾಹ್ಮಣರನ್ನು ನಿಮಂತ್ರಣ ಮಾಡಿದಾಗ, ಅಲ್ಲಿ ಮಂತ್ರಸಹಿತವಾಗಿ ಇಂತಿಂತಹಾ ದೇವತೆಗಳಿಗೇ (ಪಿತೃ ದೇವತೆಗಳಿಗೆ) ಆಹುತಿ ಎಂದು ಉಚ್ಚರಿಸಿ ನಂತರ ಭುಂಜಿಸುವ ಕ್ರಮವನ್ನು ಅಲ್ಲಲ್ಲಿ ಇಂದೂ ಸಹಾ ಕಾಣಬಹುದು.

ಈ ಹಿನ್ನೆಲೆಯಲ್ಲಿ, ಭೋಜನ ಪ್ರಾರಂಭದಲ್ಲಿ ಬ್ರಾಹ್ಮಣರು ಒಂದು ಪ್ರಾಣಾಗ್ನಿಹೋತ್ರ ಎಂದು ಮಾಡುತ್ತಾರೆ. ಈ ಪ್ರಾಣಾಗ್ನಿಹೋತ್ರದಲ್ಲಿ ಐದು ಪ್ರಾಣದೇವತೆಗಳಿಗೆ ಆಹುತಿಯನ್ನು ನೀಡಿ ನಂತರ ತಮ್ಮ ಪ್ರಕಾರ ಭೋಜನ ಮಾಡಿ ಕೊನೆಯಲ್ಲಿಯೂ ಸಹಾ ಸೇವಿಸಿದ ಆಹಾರ ಅಮೃತ ರೂಪವಾಗಲಿ ಎನ್ನುವ ಮಂತ್ರದಿಂದ ಅಪೋಷಣೆ ತೆಗೆದುಕೊಂಡು ಭೋಜನವನ್ನು ಮುಗಿಸುತ್ತಾರೆ. 

ಈ ಪ್ರಾಣಾಗ್ನಿಹೋತ್ರ ಮಾಡಬೇಕಾದರೆ, ಭೋಜನ ಮಾಡುವವರ ಮನಸ್ಸು ಹಾಗೂ ಪ್ರಾಣಗಳು ಒಂದು ಸ್ಥಿತಿಯಲ್ಲಿರಬೇಕಾಗುತ್ತದೆ. ಪಕ್ಕದಲ್ಲಿ ಕುಳಿತಿರುವವರ ಸ್ಥಿತಿಯು ಇವರ ಮನಸ್ಸು ಹಾಗೂ ಪ್ರಾಣಗಳ ಮೇಲೆ ಒಂದು ಪರಿಣಾಮವನ್ನು ಉಂಟು ಮಾಡುವುದರಿಂದ ಇವರ ಮನಸ್ಸಿನ ಹಾಗೂ ಪ್ರಾಣಗಳ ಸ್ಥಿತಿಯೂ ವೆತ್ಯಾಸವಾಗಬಹುದು. ಆದುದರಿಂದ ಪಕ್ಕದಲ್ಲಿ ಯಾರೂ ಕುಳಿತಿರಬಾರದು ಅಥವಾ ಪ್ರಾಣಾಗ್ನಿಹೋತ್ರ ಮಾಡುವವರೇ ಕುಳಿತಿರಬೇಕು ಎನ್ನುವುದು ಇಲ್ಲಿನ ಆಶಯ. ಹೀಗೆ, ಪ್ರಾಣಾಗ್ನಿಹೋತ್ರಕ್ಕಾಗಿ ಈ ಪಂಕ್ತಿ ಭೋಜನದ ಕ್ರಮ ಬಂದಿದೆಯೇ ಹೊರತು ಇಲ್ಲಿ ಬೇರೆಯವರನ್ನು ಪ್ರತ್ಯೇಕವಾಗಿ ದೂರ ಇಡುವುದಕ್ಕಲ್ಲಾ.

ಅದೇ ರೀತಿ, ಕೆಲವೊಮ್ಮೆ, ಬಫೆ ಸಿಸ್ಟಮ್ ನಂತೆ ಕೈಯಲ್ಲಿ ತೆಗೆದುಕೊಂಡು ತಮ್ಮಿಚ್ಚೆ ಇದ್ದಲ್ಲಿ ಕುಳಿತುಕೊಂಡು ಪ್ರಾಣಾಗ್ನಿಹೋತ್ರವಿಲ್ಲದೆಯೇ ಸೇವಿಸುವ ಕ್ರಮವೂ ಉಂಟು. ಹೀಗೆ ಮಾಡಬೇಕಾದರೆ ಪಂಕ್ತಿ ನಿಯಮಗಳೇನಿಲ್ಲಾ; ಯಾರು ಎಲ್ಲಿ ಬೇಕಾದರೂ ಕುಳಿತುಕೊಂಡು ಆಹಾರ ಸೇವನೆ ಮಾಡಬಹುದು.

ಈ ಪಂಕ್ತಿಭೋಜನವನ್ನು ಬೇರೆಯವರಿಗೆ ನೋವಾಗದಂತೆಯೂ ಆಚರಿಸಬಹುದಾಗಿದೆ. ನನಗೆ ಗೊತ್ತಿರುವ ಸಂಸ್ಥೆಯೊಂದರಲ್ಲಿ ಆಚಾರ ನಿಷ್ಠರಾಗಿರುವ ಬ್ರಾಹ್ಮಣರೂ ಹಾಗೆಯೇ ಪ್ರಾಣಾಗ್ನಿಹೋತ್ರಿಗಳಲ್ಲದ ಅನ್ಯರೂ ಸ್ನೇಹದಿಂದಿರುತ್ತಾರೆ. ಪ್ರಾಣಾಗ್ನಿಹೋತ್ರಿಗಳಲ್ಲದವರಿಗೆ ಈ ಹಿನ್ನೆಲೆಯನ್ನು ವಿವರಿಸಿದಾಗ ಅವರು ಸಂತೋಷದಿಂದಲೇ ಅನ್ಯ ಪಂಕ್ತಿಗೆ ಒಪ್ಪಿಕೊಳ್ಳುತ್ತಾರೆ ಮತ್ತು ಬೇಸರ ಪಟ್ಟುಕೊಳ್ಳುವುದಿಲ್ಲ. ಆದರೆ ಅವರೆಲ್ಲರೂ ಒಟ್ಟಿಗೆ ಪ್ರಯಾಣ ಮಾಡಬೇಕಾದರೆ, ಅಥವಾ ಯಾವುದಾದರೂ ಸಂದರ್ಭದಲ್ಲಿ ಅಪರಿಚಿತ, ಪ್ರಾಣಾಗ್ನಿಹೋತ್ರಿಗಳಲ್ಲದವರು ಜಾಸ್ತಿ ಜನ ಬಂದು ಅವರಿಗೆ ಹಿನ್ನೆಲೆಯನ್ನು ವಿವರಿಸುವ ಸಮಯಾವಕಾಶವಿಲ್ಲದಾಗ, ಎಲ್ಲರೂ ಪ್ರಾಣಾಗ್ನಿಹೋತ್ರವಿಲ್ಲದೆಯೇ ಕೈಯಲ್ಲಿ ತೆಗೆದುಕೊಂಡು ಯಾರು ಎಲ್ಲಿ ಬೇಕಾದರೂ ಕುಳಿತುಕೊಂಡು ಆಹಾರ ಸೇವನೆ ಮಾಡುತ್ತಾರೆ. ಹೀಗೆ ಒಂದು ಕ್ರಮವನ್ನಿಟ್ಟುಕೊಂಡಾಗ ಯಾರಿಗೂ ಬೇಸರವಿಲ್ಲದಂತೆ ಆಚಾರಗಳನ್ನು ನಿರ್ವಹಿಸಬಹುದು.

ಹಾಗಿದ್ದರೆ ಎಲ್ಲ ಸಮಯದಲ್ಲಿಯೂ ಈ ಬಫೆ ವ್ಯವಸ್ಥೆಯನ್ನೇ ಇಟ್ಟುಕೊಳ್ಳಬಹುದಲ್ಲ ಎನ್ನುವ ಪ್ರಶ್ನೆ ಇಲ್ಲಿ ಬರಬಹುದು. ಆದರೆ, ಹೀಗೆ ಮಾಡಿದರೆ, ನಿತ್ಯವೂ ಪ್ರಾಣಾಗ್ನಿಹೋತ್ರ ಮಾಡಬೇಕು ಎನ್ನುವ ನಿಯಮಕ್ಕೆ ಧಕ್ಕೆ ಬರುತ್ತದೆ. ನಿತ್ಯವೂ ಪ್ರಾಣಾಗ್ನಿಹೋತ್ರ ಮಾಡಿ ಯಾವಾಗಲಾದರೊಮ್ಮೆ ಅದು ತಪ್ಪಿಹೋದರೆ, ಅದನ್ನು ಆಪದ್ಧರ್ಮ ಎಂದು ಮಾರ್ಜಿನ್ ಕೊಡಬಹುದು, ಆದರೆ ನಿತ್ಯವೂ ಪ್ರಾಣಾಗ್ನಿಹೋತ್ರ ಬಿಟ್ಟುಹೋದರೆ ಅದು ಧರ್ಮ ಲೋಪಾವಾಗುತ್ತದೆ ಮತ್ತು ಆಚಾರಶೀಲವಾಗಿರುವವರಿಗೆ ಇದು ಹೊಂದುವುದಿಲ್ಲ. ಆದುದರಿಂದ ತೀರ ಅಗತ್ಯ ಎನ್ನಿಸುವ ಸಂದರ್ಭವಿಲ್ಲದಿರುವಾಗ ಅಂದರೆ ನಿತ್ಯಗಟ್ಟಲೆಯಲ್ಲಿ ಪ್ರಾಣಾಗ್ನಿಹೋತ್ರವಿಟ್ಟುಕೊಂಡು ಪಂಕ್ತಿ ಭೋಜನ ಮಾಡುವುದೇ ಸರಿಯಾದ ಕ್ರಮ.

ಮೇಲೆ ಹೇಳಿದ ಸಂಸ್ಥೆಯ ಉದಾಹರಣೆಯನ್ನು ಉಡುಪಿ ಮಠದಂತಹಾ ಜಾಗಗಳಲ್ಲಿ ರೂಢಿಗೆ ತರುವುದು ಕಷ್ಟ ಏಕೆಂದರೆ ದಿನಾಗಲೂ ಸಾವಿರಾರು ಜನರು ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಒಂದು ನಿಯಮವನ್ನಿಟ್ಟುಕೊಂಡು ಅದನ್ನೇ ನಿತ್ಯವೂ ಪಾಲಿಸುವುದು ಅನಿವಾರ್ಯ. ಈ ತಾಂತ್ರಿಕ ಹಿನ್ನೆಲೆಯೊಂದಿಗೆ ಪಂಕ್ತಿಭೋಜನವನ್ನು ಪರಿಗಣಿಸಿದಾಗ ಇದೊಂದು ದೊಡ್ಡ ಸಮಸ್ಯೆ ಆಗಲಾರದು ಎಂದು ನನ್ನ ಅನಿಸಿಕೆ.


No comments:

Post a Comment