Tuesday, January 25, 2022

Ritual Sri Kartika Swamy Puja Stotram ಶ್ರೀ ಕಾರ್ತಿಕ ಸ್ವಾಮಿ ಪೂಜಾ ಸ್ತೋತ್ರ

ಶ್ರೀ ಕಾರ್ತಿಕ ಸ್ವಾಮಿ ಪೂಜಾ 

ವಿಧಿ ಮತ್ತು ಸ್ತೋತ್ರ 

ಮೊದಲು ಸ್ನಾನ ಮಾಡಿ ಕಾರ್ತಿಕ ಸ್ವಾಮಿಯ ದರ್ಶನ ಪಡೆದು, ದರ್ಭೆ ಚಂದನ  ಪುಷ್ಪ, ದಶಾಂಗ ಧೂಪ ದೀಪ, ಮತ್ತು. ಕಾರ್ತಿಕೇಯನ ವಾಹನ ಮಯೂರವನ್ನು ಪೂಜಿಸಿ, ನಂತರ ಷೋಡಶ ಉಪಚಾರಗಳೆಂದು ಈ ಕೆಳಗಿನ ಶ್ಲೋಕಗಳನ್ನು ಅರ್ಪಿಸಬೇಕು .

कमंडलूर्जलापूर्ण:  स्वर्णगर्भ सुलक्षणः । अर्पितस्ते महासेन प्रसन्नो नेन मे वच ।।

ಈ ಶ್ಲೋಕವನ್ನು  ನೀರು  ತುಂಬಿದ ಕಮಂಡಲು ಅಥವಾ ತಂಬಿಗೆ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಚಿನ್ನ ಅರಿಷಿಣ, ಕುಂಕುಮ,ಅಕ್ವತೆ ಅಡಿಕೆಯನ್ನು ಹಾಕಿ  ಸಮರ್ಪಿಸಬೇಕು.

ब्रह्म सूत्रं महा दिव्यं प्रितयेते मयार्पितम् । ब्रह्मा जन्मास्तु मे देव ब्रह्मसूत्र समर्पणात ।।

ಈ ಶ್ಲೋಕದಿಂದ  ಯಜ್ನೋಪವಿತವನ್ನು ಅರ್ಪಿಸಬೇಕು                                                         
 
गोमति तीर संभूता गोपी वापी समुद्भवा । मृदर्पीता माया तुभ्यं ब्रह्म जन्माप्तये गुह

ಈ ಶ್ಲೋಕದಿಂದ  ಗೋಪಿಚಂದನವನ್ನು  ಅರ್ಪಿಸಬೇಕು

उपवीतानी  शुभ्राणी पवित्राणी शिवात्मज । पुरतस्तेर्पयाम्यद्य प्रसादार्थ तव प्रभो   

ಈ ಶ್ಲೋಕದೊಂದಿಗೆ ಪೋವತೆಯನ್ನು ಅರ್ಪಿಸಬೇಕು  (ಪೋವತೆ  ಎಂದರೆ ಹತ್ತಿಯ ನೂಲನ್ನು ತೆಗೆದು ಅದರಿಂದ ಒಂಭತ್ತು ಸುತ್ತಿನ ಹೊಸ ನೂಲನ್ನು ಮಾಡಿ ಆ ಒಂಭತ್ತು ಸುತ್ತಿನ ಹೊಸ ನೂಲಿನ ಎಂಟು ಗ್ರಂಥಿಗಳ ಕಟ್ಟಿ ಮಾಲೆಯನ್ನು ಮಾಡುವುದು.  ಆ ಮಾಲೆಯನ್ನು ಕಾರ್ತಿಕ ಸ್ವಾಮಿಗೆ ಅರ್ಪಿಸಿ ಧರಿಸುವುದು  )

तिलाः काश्यप संभुता तिलाः पाप हराह् स्मृता । पाद योरर्पितास्तेद्य सर्व पापापनुत्तये  

ಎಲ್ಲಾ ಪಾಪಗಳನ್ನು ತೊಡೆದುಹಾಕಲು ಈ ಶ್ಲೋಕವನ್ನು ಅರ್ಪಿಸಬೇಕು

दर्भां ब्रह्म मया विष्णू स्वरूपा रुद्र रुपीणः । प्रित्यर्थ तव देवेश न्यस्ता: पादतले मया ।।

 ಈ ಶ್ಲೋಕದಿಂದ  ದರ್ಭ ಪಾದ ಕಮಲದ ಮೇಲೆ ಅರ್ಪಿಸಬೇಕು

अष्टविंशती संख्याकै रुद्राक्षैर्योजिता मया । अर्पिता तव हस्तेच गृहाण सूर सैन्यंपः  ।।

ಈ ಶ್ಲೋಕದಿಂದ ಇಪ್ಪತ್ತೆಂಟು  ಉತ್ತಮ ರುದ್ರಾಕ್ಷ ಮಾಲೆಯನ್ನು ಅರ್ಪಿಸಬೇಕು  ತದನಂತರ ಆ ಮಾಲೆಯನ್ನು ಧರಿಸಬಹುದು 

सुवर्णमुत्तमम्  लोके भुक्ति मुक्तीप्रदं तथा । अर्पितं तव देवेश दैन्या ज्ञानापनुत्तये  ।।

ದುಃಖ ಮತ್ತು ಅಜ್ಞಾನವನ್ನು ಹೋಗಲಾಡಿಸಲು ಈ ಶ್ಲೋಕದಿಂದ ಚಿನ್ನವನ್ನು ಅರ್ಪಿಸಿ  ನಮಸ್ಕರಿಸಬೇಕು 



ಶ್ರೀ ಕಾರ್ತಿಕೇಯ ಸ್ತೋತ್ರಂ 
ಆದಿತ್ಯವಿಷ್ಣುವಿಘ್ನೇಶ ರುದ್ರಬ್ರಹ್ಮಮರುದ್ಗಣಾಃ | ಲೋಕಪಾಲಾಃ ಸರ್ವದೇವಾಃ ಚರಾ ಚರಮಿದಂ ಜಗತ್  || 1 ||

ಸರ್ವಂ ತ್ವಮೇವ ಬ್ರಹ್ಮೈವ ಅಜಮಕ್ಷರ ಮದ್ವಯಮ್ | ಅಪ್ರಮೇಯಂ ಮಹಾಶಾಂತಂ ಅಚಲಂ ನಿರ್ವಿಕಾರಕಮ್  || 2 ||

ನಿರಾಲಂಬಂ ನಿರಾಭಾಸಂ ಸತ್ತಾಮಾತ್ರಮ ಗೋಚರಮ್ | ಏವಂ ತ್ವಾಂ ಮೇಧಯಾ ಬುದ್ಧ್ಯಾ ಸದಾ ಪಶ್ಯಂತಿ ಸೂರಯಃ || 3 ||

ಏವಮಜ್ಞಾನ ಗಾಢಾಂಧ ತಮೋಪಹ ತಚೇತಸಃ | ನ ಪಶ್ಯಂತಿ ತಥಾ ಮೂಢಾಃ ಸದಾ ದುರ್ಗತಿ ಹೇತವೇ   || 4 ||

ವಿಷ್ಣ್ವಾದೀನಿ ಸ್ವರೂಪಾಣಿ ಲೀಲಾಲೋಕ ವಿಡಂಬನಮ್ | ಕರ್ತುಮುದ್ಯಮ್ಯ ರೂಪಾಣಿ ವಿವಿಧಾನಿ ಭವಂತಿ ಚ  || 5 ||

ತತ್ತದುಕ್ತಾಃ ಕಥಾಃ ಸಮ್ಯಕ್ ನಿತ್ಯಸದ್ಗತಿ ಪ್ರಾಪ್ತಯೇ | ಭಕ್ತ್ಯಾ ಶ್ರುತ್ವಾ ಪಠಿತ್ವಾ ಚ ದೃಷ್ಟ್ಯಾ ಸಂಪೂಜ್ಯ ಶ್ರದ್ಧಯಾ || 6 ||

ಸರ್ವಾನ್ಕಾಮಾನವಾಪ್ನೋತಿ ಭವ ದಾರಾಧನಾತ್ಖಲು | ಮಮ ಪೂಜಾಂ ಅನುಗ್ರಾಹ್ಯ ಸುಪ್ರಸೀದ ಭವಾನಘ  || 7 ||

ಚಪಲಂ ಮನ್ಮಥವಶಮ ಮರ್ಯಾದಂ ಅಸೂಯಕಮ್ | ವಂಚಕಂ ದುಃಖಜನಕಂ ಪಾಪಿಷ್ಠಂ ಪಾಹಿ ಮಾಂ ಪ್ರಭೋ || 8 ||

ಸುಬ್ರಹ್ಮಣ್ಯಸ್ತೋತ್ರಮಿದಂ ಯೇ ಪಠಂತಿ ದ್ವಿಜೋತ್ತಮಾಃ |ತೇ ಸರ್ವೇ ಮುಕ್ತಿಮಾ ಯಾಂತಿ ಸುಬ್ರಹ್ಮಣ್ಯ ಪ್ರಸಾದತಃ || 9 ||

ಇತಿ ಶ್ರೀ ಕಾರ್ತಿಕೇಯ ಸ್ತೋತ್ರಂ ಪರಿಪೂರ್ಣ ||

No comments:

Post a Comment