ಭೀಮನ ಅಮಾವಾಸ್ಯೆ ವ್ರತ , ದಿವಸೀ ಗೌರಿ ಹಾಡು ಸಹಿತ
ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ವ್ರತವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಆಷಾಢ ಮಾಸದ ಕೊನೆಯ ದಿನವಾದ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆ ವ್ರತವನ್ನು ಕೈಗೊಳ್ಳಲಾಗುತ್ತದೆ. ಭೀಮನ ಅಮಾವಾಸ್ಯೆಯನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆಯ ದಿನವನ್ನು ಮಹಿಳೆಯರಿಗಾಗಿಯೇ ಮೀಸಲಿರಿಸಿದ ವ್ರತವಾಗಿದೆ. ಈ ದಿನದಂದು ಮಹಿಳೆಯರು ತನ್ನ ಗಂಡನ ಮತ್ತು ಸಹೋದರನ ಯೋಗಕ್ಷೇಮಕ್ಕಾಗಿ ಆಚರಿಸುವ ದಿನವಾಗಿದೆ. ವಿವಾಹಿತ ಮಹಿಳೆಯರು ಈ ದಿನದಂದು ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ವ್ರತವನ್ನು ಕೈಗೊಳ್ಳುತ್ತಾರೆ. ಅವಿವಾಹಿತ ಮಹಿಳೆಯರು ತಮಗೆ ಸದ್ಗುಣ ಸಂಪನ್ನನಾದ ವರನನ್ನು ಕರುಣಿಸುವಂತೆ ವ್ರತವನ್ನು ಆಚರಿಸುತ್ತಾರೆ.
ಭೀಮನ ಅಮಾವಾಸ್ಯೆಯಂದು ಪತ್ನಿಯು ಪರಶಿವನನ್ನು ಮತ್ತು ಪಾರ್ವತಿಯನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ ಭೀಮನ ಅಮಾವಾಸ್ಯೆ ವ್ರತದ ಕಥೆ:ವ್ರತದ ಹಿಂದೆ ಅನೇಕ ಕಥೆಗಳಿವೆ, ಅದರಲ್ಲಿ ಮುಖ್ಯವಾದ ಕಥೆ ಮರಣ ಹೊಂದಿದ ರಾಜಕುಮಾರನನ್ನು ವರಿಸಿದ್ದು. ಒಮ್ಮೆ ಬ್ರಾಹ್ಮಣ ದಂಪತಿಗಳು ಕಾಶಿ ಯಾತ್ರೆಗೆ ಹೋಗಲು ಇಚ್ಚಿಸಿದ್ದರು. ಮಗಳಿಗೆ ಮದುವೆಯನ್ನು ಮಾಡದೇ ಈ ಯಾತ್ರೆಗೆ ಹೋಗಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಹಲವು ಸಮಯ ಕಳೆದರೂ ಮಗಳಿಗೆ ಯೋಗ್ಯ ವರ ಸಿಗದ ಕಾರಣ ಮಗ ಮತ್ತು ಸೊಸೆಯೊಂದಿಗೆ ಮಗಳನ್ನು ಬಿಟ್ಟು ದಂಪತಿ ಕಾಶಿಯಾತ್ರೆಗೆ ಹೊರಡುತ್ತಾರೆ.
ತಿಂಗಳುಗಳು ಕಳೆದರೂ ದಂಪತಿ ವಾಪಾಸ್ಸಾಗದ್ದನ್ನು ಕಂಡು, ಕನ್ಯೆಯ ಸಹೋದರ ಆಕೆಯ ವಿವಾಹ ಮಾಡಲು ಅಣಿಯಾಗುತ್ತಾನೆ. ಹಣ-ಸಂಪತ್ತು, ಐಶ್ವರ್ಯದ ಆಸೆಗೆ ಸತ್ತ ರಾಜಕುಮಾರನೊಂದಿಗೆ ತಂಗಿಯ ವಿವಾಹವನ್ನು ಮಾಡಿಸುತ್ತಾನೆ. ನಂತರ ರಾಜ ಕುಮಾರನ ಮನೆಯವರು ಮತ್ತು ಸೈನಿಕರೊಂದಿಗೆ ಶವ ಸಂಸ್ಕಾರಕ್ಕೆಂದು ಕರೆದೊಯ್ಯುವಾಗ ಮಳೆ ಬಂದ ಕಾರಣ ಎಲ್ಲರೂ ಅಲ್ಲಿಂದ ತೆರಳುತ್ತಾರೆ. ಆಗ ಪತಿಯೊಂದಿಗೆ ಇದ್ದ ಈಕೆ ತಂದೆ-ತಾಯಿ ಹೇಳಿದ್ದ ಅಮಾವಾಸ್ಯೆಯ ವ್ರತದ ಬಗ್ಗೆ ನೆನಪಿಸಿಕೊಳ್ಳುತ್ತಾಳೆ.
ಮಣ್ಣಿನಿಂದ ಮೂರ್ತಿಯನ್ನು ಮಾಡಿ, ಶಿವ-ಪಾರ್ವತಿಯನ್ನು ಧ್ಯಾನಿಸುತ್ತಾಳೆ, ಆಗ ಅಲ್ಲಿಗೆ ನವ ದಂಪತಿಗಳು ಬಂದು ವ್ರತದ ಮಹಿಮೆಯನ್ನು ಕೇಳುತ್ತಾರೆ. ಅವರಿಗೆ ಸಂಪೂರ್ಣ ವ್ರತದ ಕಥೆಯನ್ನು ವಿವರಿಸಿ ಆ ದಂಪತಿಗಳ ಆಶೀರ್ವಾದ ಪಡೆಯುತ್ತಾಳೆ. ಆಗ ಅವರು ಧೀರ್ಘ ಸುಮಂಗಲಿ ಭವ ಎಂದು ಆಶೀರ್ವದಿಸುತ್ತಾರೆ ಮತ್ತು ಗಂಡನನ್ನು ಎಬ್ಬಿಸುವಂತೆ ಆಜ್ಞಾಪಿಸುತ್ತಾರೆ. ರಾಜಕುಮಾರ ಬದುಕುತ್ತಾನೆ. ಈ ಹಿನ್ನೆಲೆಯಲ್ಲಿ ಶಿವ-ಪಾರ್ವತಿಯರ ಕೃಪೆಯನ್ನು ಈ ವ್ರತದಿಂದ ಪಡೆಯಬಹುದಾಗಿದೆ. ಮದುವೆಯಾಗಿ ಒಂಭತ್ತು ವರ್ಷಗಳ ಕಾಲ ಈ ವ್ರತವನ್ನು ತಪ್ಪದೇ ಮಾಡಬೇಕೆಂಬ ಸಂಪ್ರದಾಯ ಕೆಲವು ಕಡೆ ಇದೆ.
ಈ ಕಥೆಯು ಸತ್ತ ರಾಜಕುಮಾರನನ್ನು ವಿವಾಹವಾದ ಯುವತಿಗೆ ಸಂಬಂಧಿಸಿದ ಕಥೆಯಾಗಿದೆ. ಒಮ್ಮೆ ಓರ್ವ ಯುವತಿಯು ಮರಣಹೊಂದಿದ ರಾಜಕುಮಾರನನ್ನು ವಿವಾಹವಾಗುತ್ತಾಳೆ. ಆಕೆಗೆ ತಾನು ತನ್ನ ಗಂಡನನ್ನು ಮರಳಿ ಪಡೆಯುತ್ತೇನೆನ್ನುವ ನಂಬಿಕೆಯಿತ್ತು. ಆದ್ದರಿಂದ ಅವಳು ತನ್ನ ನಂಬಿಕೆಗೆ ಆಧಾರವಾಗಿ ಮದುವೆಯಾದ ಮರುದಿನ ಆಕೆ ಮಣ್ಣಿನಿಂದ ಮತ್ತು ಹಿಟ್ಟಿನಿಂದ ದೀಪವನ್ನು ತಯಾರಿಸಿ ಅಮಾವಾಸ್ಯೆ ದಿನದಂದು ಶಿವ, ಪಾರ್ವತಿಯನ್ನು ಆರಾಧಿಸುತ್ತಾಳೆ. ಆಕೆಯ ಪೂಜೆಯಿಂದ ಪ್ರಭಾವಿತರಾದ ಶಿವ, ಪಾರ್ವತಿಯು ಅವಳ ಮುಂದೆ ಪ್ರತ್ಯಕ್ಷಳಾಗುತ್ತಾರೆ. ಆಕೆಯ ಬಳಿ ಏನು ವರಬೇಕು ಕೇಳಿಕೋ ಎನ್ನುತ್ತಾರೆ. ಆಗ ರಾಜಕುಮಾರಿಯು ತನ್ನ ಗಂಡನನ್ನು ಉಳಿಸಿಕೊಡುವಂತೆ ಬೇಡಿಕೊಳ್ಳುತ್ತಾಳೆ. ಆಗ ಶಿವ ಪಾರ್ವತಿ ಆಕೆಯ ಗಂಡನ ಜೀವವನ್ನು ಉಳಿಸಿಕೊಡುತ್ತಾರೆ.
ಈ ದಿನದಂದು ಮಹಿಳೆಯರು ಕರಿದ ಆಹಾರ ಪದಾರ್ಥವನ್ನು ಸೇವಿಸುವುದಿಲ್ಲ. ವಿವಾಹಿತ ಮಹಿಳೆಯರು ಮದುವೆಯಾದ ನಂತರ 5 ವರ್ಷಗಳವರೆಗೆ ಭೀಮನ ಅಮಾವಾಸ್ಯೆಯನ್ನು ಆಚರಿಸುತ್ತಾರೆ.ಭೀಮನ ಅಮಾವಾಸ್ಯೆಯ ಪೌರಾಣಿಕ ಹಿನ್ನೆಲೆ:
ಭಗವಾನ್ ಪರಶಿವನು ಬೀಮನ ಅಮಾವಾಸ್ಯೆಯಂದೇ ಪಾರ್ವತಿ ದೇವಿಯನ್ನು ವಿವಾಹವಾಗುತ್ತಾನೆ. ಆದ್ದರಿಂದ ಈ ದಿನವನ್ನು ಭೀಮನ ಅಮಾವಾಸ್ಯೆಯೆಂದು ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರು ಶಿವ, ಪಾರ್ವತಿಯನ್ನು ಆರಾಧಿಸಿದರೆ ಸಮೃದ್ಧಿ, ಸಂತಾನ, ಪತಿವ್ರತೆ, ಆಯಸ್ಸು, ಯಶಸ್ಸು, ಸಂತೋಷ ಸೇರಿದಂತೆ ಎಲ್ಲವನ್ನು ಶಿವ ಮತ್ತು ಪಾರ್ವತಿ ದೇವಿ ಕರುಣಿಸುತ್ತಾರೆಂಬ ನಂಬಿಕೆ ಇದೆ
ಭೀಮನ ಅಮಾವಾಸ್ಯೆ ದಿವಶೀ ಗೌರಿಯ ಹಾಡು PART II Click Here
ಭೀಮನ ಅಮಾವಾಸ್ಯೆಯ ಪೂಜಾ ವಿಧಾನ:
1) ಈ ದಿನದಂದು ಮಹಿಳೆಯರು ಬೇಗ ಎದ್ದು ಶುಚಿಯಾಗಿ ಹೊಸ ಬಟ್ಟೆಯನ್ನು ಧರಿಸಿ, ಮನೆಮುಂದೆ ರಂಗೋಲಿಯನ್ನು ಹಾಕಬೇಕು.
2) ನಂತರ ಗೃಹಿಣಿಯರು ತಮ್ಮ ಕೈಗೆ ಕಂಕಣವನ್ನು ಕಟ್ಟಿಕೊಂಡು ಜ್ಯೋತಿರ್ಭೀಮೇಶ್ವರನನ್ನು ಅಥವಾ ಶಿವ ಪಾರ್ವತಿಯನ್ನು ಧ್ಯಾನಿಸಿ, ವ್ರತವನ್ನು ಕೈಗೊಳ್ಳಬೇಕು.
3) ಈ ದಿನದಂದು ಮೇಲೆ ಸೂಚಿಸುರುವ ಶುಭ ಮುಹೂರ್ತದಲ್ಲಿ ವ್ರತವನ್ನು ಕೈಗೊಳ್ಳಬೇಕು.
4) ) ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ, ಆ ಅಕ್ಕಿಯ ಮೇಲೆ ಎರಡು ಎಣ್ಣೆಯ ದೀಪವನ್ನು ಹಚ್ಚಬೇಕು.
5) ಈ ದೀಪದ ತಟ್ಟೆಯಲ್ಲಿ ಶಿವ - ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಸಲ್ಲಿಸಬೇಕು.
6) ಪೂಜೆಗೆ ಬೇಕಾದ ಸಾಮಾಗ್ರಿಗಳೊಂದಿಗೆ 9 ಗಂಟಿನ ಗೌರಿದಾರವನ್ನಿಟ್ಟು ಪೂಜೆ ಮಾಡಿ ಬಳಿಕ ಆ ದಾರವನ್ನು ಕೈಗೆ ಕಟ್ಟಿಕೊಳ್ಳಿ.
7) ಶುಭಾರಂಭದ ಸಂಕೇತ ಗಣೇಶನಾಗಿರುವುದರಿಂದ ಮೊದಲು ಗಣೇಶನನ್ನು ಆರಾಧಿಸಿ ನಂತರ ಭೀಮೇಶ್ವರನನ್ನು ಪೂಜಿಸಿ.
8) 9 ಕರಿಕಡುಬನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸಿ.
9) ನಂತರ ಗಂಡನ ಪಾದ ಪೂಜೆಯನ್ನು ಮಾಡಿ. ಪತಿಯ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಳ್ಳುವುದು
ಭೀಮನ ಅಮಾವಾಸ್ಯೆಯನ್ನು ವಿವಾಹಿತ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಆಚರಿಸಿದರೆ, ಅವಿವಾಹಿತರು ಒಳ್ಳೆಯ ಪತಿ ಸಿಗಲೆಂದು ಆಚರಿಸುತ್ತಾರೆ. ಭೀಮನ ಅಮಾವಾಸ್ಯೆಯನ್ನು ದಕ್ಷಿಣ ಕರ್ನಾಟಕದಲ್ಲಿ ಆಟಿ ಅಮಾವಾಸ್ಯೆ, ಕರ್ಕಾಟಕ ಅಮಾವಾಸ್ಯೆಯೆಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಇದನ್ನು ಕೊಡೆ ಅಮಾವಾಸ್ಯೆಯೆಂದು ಕರೆಯುತ್ತಾರೆ. ಇನ್ನು ಹಲವೆಡೆ ಇದನ್ನು ಆಷಾಢ ಅಮಾವಾಸ್ಯೆಯೆಂತಲೂ ಕರೆಯುವುದುಂಟು.
By courtesy
No comments:
Post a Comment