Friday, March 25, 2022

GOVINDARAJA YANTRAM ಗೋವಿಂದರಾಜ ಯಂತ್ರಂ

ಸರ್ವೋಪಶಮನಾರ್ಥ ಶ್ರೀ ಮದ್ ಗೋವಿಂದರಾಜ ಯಂತ್ರಂ 
 ಮಾನವನು ಮಾನವನನ್ನಾಗಿಸಲು ಬೇಕಾದ ಅವಶ್ಯ ತತ್ವಜ್ಞಾನವನ್ನು ಮಂತ್ರ  ಯಂತ್ರ  ನೀಡಿ ರಕ್ಷಣೆ ಕೊಡುತ್ತದೆ. “ ತನ್ನೋತಿ ತ್ರಾಯತೆಚೆ ಇತಿ ತಂತ್ರಂ “ ಎಂದು ತಂತ್ರದ ನಿರುಕ್ತಿ. ಯತ್ರ್ಯತೆ ಬಧ್ಯತೆ ದೇವತಾ ಅಸ್ಮಿನ್ ಇತಿ ಯಂತ್ರಃ  ಹೀಗೂ ಯತ್ರವನ್ನು ಬಿಡಿಸಿದ್ದಾರೆ, 
             


ಯಂತ್ರೇ ತಿರ್ಥೆ ತಥಾ ದೈವ್ಯೇ ದೈವಜ್ಞೆ ಭೇಷಜೆ ಗುರೌ | ಯಾದೃಶಿ ಭಾವನಾ ಯತ್ರ ಸಿದ್ಧಿರ್ಭವತಿ ತಾದೃಶಿ ||
ದೇವತೆಯು ಬಂದು ನೆಲೆಸುವ ರೇಖಾ ಚಿತ್ರವೇ ಯಂತ್ರ, ಯತ್ರವು ಪವಿತ್ರ ಹಾಗೂ ಶೀಘ್ರವಾಗಿ ಫಲನೀಡುವ ಸಾಧನವಾಗಿದೆ ಯಂತ್ರವು ದೇವತೆಯ ದೇಹವೆನಿಸಿದರೆ ಅದರಲ್ಲಿ ಪ್ರತಿಷ್ಟ್ಹಾಪಿತ ಮಂತ್ರವು  ಆ ದೇವತೆಯ ಆತ್ಮವೆನಿಸುತ್ತದೆ, ದೇಹಾತ್ಮಗಳಿಗೆ ಭೇದವಿದ್ದಂತೆ ಯತ್ರ ಹಾಗೂ ಮಂತ್ರಗಳಿಗೂ ಭೇದವಿದೆ            
                           ಶ್ರೀ ವೇ ಶಾ ಸಂ ಋಗ್ವೇದ ಸಂಹಿತಾ  ಭಾಷ್ಯಾಚಾರ್ಯರಾದ ನಮ್ಮ ಅಜ್ಜ ಶ್ರೀ ಸೀತಾರಾಮಾಚಾರ್ಯರ ಹಳೆಯ ಕಡತಗಳಲ್ಲಿ  ದೊರೆತ ಈ ಯಂತ್ರ ಪ್ರಾಣಿ ಮಾತ್ರಂಗಳ ಸರ್ವ ದುರಿತ ನಿವಾರಣೆಗಾಗಿ ಫಲಾನುಭವಿಯು ತನ್ನ ಹೆಸರನ್ನೂ ಇಷ್ಠಾರ್ಥವನ್ನೂ ಬರೆದು ಸಂಕಲ್ಪಿಸಿ ಷೋಡ ಶೋಪಚಾರ ಪೂಜೆ ನೈವೇದ್ಯ ಇತ್ಯಾದಿ ಸಾಂಗವಾಗಿ ನೆರವೇರಿಸಿ, ವೈಯಕ್ತಿಕ ವಾಗಿಯೇ ಆಗಲಿ,ಮನೆಯ ಪೂಜಾ ಪರಿಕರಗಳ ಜೊತೆಯಾಗಲಿ,ಮನೆಯ ಪೂರ್ವದ / ಪಶ್ಚಿಮ ಭಾಗದ ಗೋಡೆಗಾಗಲಿ ನೇತುಹಾಕಿ, ವ್ಯವಸಾಯದ ಸ್ಥಳಗಳಲ್ಲಿಯೇ ಆಗಲಿ ಸಂಗ್ರಹಿಸಿ ಆರಾಧಿಸುತ್ತಿದ್ದರೆ ತಮ್ಮ ತಮ್ಮ ಬೇಡಿಕೆಗಳು 21 / 25  ದಿನಗಳ ನಂತರ  ಪರಿಹಾರವಾಗುತ್ತಿರುವುದರ ಬಗ್ಗೆ ಪ್ರಚೀತಿಗೆ ಬರುತ್ತಿರುವುದು ಅನುಭವ ಸಿದ್ಧವಾಗಿದೆ ಎಂದು ಬರೆಯುತ್ತಾರೆ. 
                   ಅಜ್ಜನವರು ತಾವೇ ಬರೆದ ಈ ಲೇಖನದಲ್ಲಿ ಯಂತ್ರಕ್ಕೆ ಸಂಬಂಧ ಪಟ್ಟಂತೆ ಉಲ್ಲೇಖವಿದ್ದು ಅವರ ತಂದೆಯವರಾದ ಶ್ರೀ ವೇ ಶಾ ಸಂ  ಶ್ರೀ ದ್ವೈಪಾಯನಾಚಾರ್ಯರು ಜನಸೇವೆಗೆಂದು ಈ ಯಂತ್ರದ ಉಪಯೋಗ ವನ್ನು ಜನತೆಯಲ್ಲಿ ತಿಳಿ ಹೇಳಿ ಕುಲದೇವತೆ ಶ್ರೀಮದ ಗೋವಿಂದರಾಜ ದೇವರ ದಿನವಾದ ಪ್ರತಿ ಶನಿವಾರ ಗೋವಿಂದಪುರದ ಅಶ್ವತ್ಥ  ಕಟ್ಟೆಯ ಮೇಲೆ ಶುಚಿರ್ಭೂತರಾಗಿ ಆಸನಾರೂಢರಾಗಿ ಕುಳಿತು ಲೋಕ ಕಲ್ಯಾಣಾರ್ಥವಾಗಿ ಶ್ರಮಿ ಸುತ್ತಿದ್ದುದರ ಬಗ್ಗೆ ಬರೆದದ್ದಿದೆ.
                                ಈ ಯಂತ್ರವನ್ನು ದಪ್ಪ ಕಾಗದದ ಮೇಲಾಗಲಿ, ಹಿತ್ತಾಳೆಯ, ತಾಮ್ರದ ತಗಡಿನ ಮೇಲಾಗಲಿ ಒಂದು ಶನಿವಾರದಂದು ಬರೆದಿಡಬೇಕು ವಿಶೇಷವಾಗಿ ಭಾನುವಾರ ಪುಷ್ಯ ನಕ್ಷತ್ರವಿರುವಾಗ, ಅಥವಾ ಗುರುವಾರ ಪುಷ್ಯ ನಕ್ಷತ್ರವಿರುವಾಗ ಧ್ಯಾನಿಸಿ ಆರಾಧಿಸಿ ಯಂತ್ರ ರಚನೆ ಮಾಡಿದರೆ ಅತ್ಯಂತ ಶೀಘ್ರ ಸಿದ್ಧಿಪ್ರದ. ಫಲಾನುಭವಿಗಳು ತಮ್ಮ ತಮ್ಮ ಕುಲದೇವತೆಯನ್ನು,ಕುಲದೇವಿಯನ್ನು ಕುಲ ಗುರುಗಳನ್ನು ಸ್ಮರಿಸುತ್ತ ಶ್ರೀಮದ ಗೋವಿಂದ ರಾಜದೇವರ ಅಷ್ಟೋತ್ತರ, ಕವಚ, ಅಶ್ವತ್ಥ ಸ್ತೋತ್ರ ಪಠಿಸುತ್ತ ಯಂತ್ರ ರಚನೆ ಶುಚಿ ರ್ಭೂತತೆಯಲ್ಲಿ ನಡೆಸಬೇಕು 
                                    ಯಂತ್ರವು ಪ್ರತ್ಯಕ್ಷ ಸಿದ್ಧಿಯುತವಾಗಿದ್ದರು ಯಂತ್ರದಲ್ಲಿ ದೇವತಾ ಆವಾಹನೆ ಮಾಡಿ ಉಪಯೋಗಿಸತಕ್ಕದ್ದು. ಆಬಾಲ ವೃದ್ಧರೂ, ಹೆಣ್ಣು ಗಂಡುಗಳ ಭೇದ ವಿಲ್ಲದೆ, ಉತ್ತರೋತ್ತರ ಅಭಿವೃದ್ಧಿಬಯಸುವ ಯಾರೇ ಆದರೂ ಸರಿ, ಆರಾಧಿಸ ಬಹುದು. ಯಾರ ಸಲುವಾಗಿಯೇ ಆದರೂ ಇನ್ನೊಬ್ಬರು ಪೂಜಿಸಿ  ಇಚ್ಚಿತರಲ್ಲಿ ಅನುಭವವನ್ನು ಕಾಣ. ಬಹುದು.  ಆದರೆ ವಿಪರೀತ ಕೆಲಸಗಳಿಗೆ, ದೋಷಯುಕ್ತ, ಅಸೂಯೇಯುಕ್ತ, ಸೇಡು ತೀರಿಸಿಕೊಳ್ಳುವುದಕ್ಕೋಸ್ನರ,  ಇನ್ನೊ      ಬ್ಬರನ್ನು ಪೀಡಿಸುವುದಕ್ಕೋಸ್ಕರ ಪ್ರಯೋಗ ಮಾಡಿದ್ದೆ ಆದರೇ  ಉಗ್ರ ಪ್ರಳಯಾಂತಕನಾದ ಶ್ರೀ ಗೋವಿಂದರಾಜದೇವರು ಪರಿಸರ ರಕ್ಷಕ   ಭೂತರಾಜ ರಕ್ಷಾಟಮಲ್ಲನ ದೆಸೆಯಿಂದ ಕ್ರಿಯೆ ನಿಮ್ಮಮೇಲೆ ಹೊರಳಿ ಅವಕೃಪೆ ಮತ್ತು ಕ್ರೋಧಕ್ಕೆ ತುತ್ತಾಗುವಿರಿ ಜೋಕೆ !
                                      25 ಎಳೆಗಳ ರೇಶ್ಮೆ ದಾರದಲ್ಲಿ, ನೂಲಿನ ದಾರದಲ್ಲಿ 25 ಗಂಟು ಗಳನ್ನು ಕಟ್ಟಿಟ್ಟು ಕೊಂಡು ಈ ಯಂತ್ರ ರಚನೆಯ ಜೊತೆ ದೋರ ರಚನೆಯನ್ನು ಮಾಡಿ ಬಿದಿರಿನ ಬುಟ್ಟಿಯಲ್ಲಿಟ್ಟು ಯಥಾವತ್ತಾಗಿ ವಿಧಿ ವಿಧಾನದಂತೆ ಪೂಜಿಸಿ ಅದೇ ದೋರದಲ್ಲಿ ಯತ್ರವನ್ನು ಕಟ್ಟಿ ಅಥವಾ ಚಿಕ್ಕ ತಾಯಿತು ಗಳಲ್ಲಿ ಹಾಕಿಯೂ ಕೊರಳಲ್ಲಿ ಧರಿಸಬಹುದು. ಪ್ರತ್ಯಕ್ಷ  ಸಿದ್ಧಿಯುತ ಈ ಯಂತ್ರ ಧರಿಸು ವುದಕ್ಕಿಂತ ಮೊದಲು ಒಂದು ಚಿಕ್ಕ ಯಜ್ಞ ವನ್ನು ಮಾಡಿ ಶ್ರೀ ಅಶ್ವತ್ಥ ಸ್ತೋತ್ರದಿಂದ ಆಹುತಿ ಗಳನ್ನು ಹಾಕಿ, ಪುರ್ಣಾಹುತಿಯಲ್ಲಿ ಯಜ್ಞ ದೇವತೆಗೆ ಪ್ರದಕ್ಷಿಣೆಹಾಕಿ ಒಂದು ಯಂತ್ರವನ್ನು ದೋರವನ್ನು ಆಹುತಿ ಕೊಡಲೇ ಬೇಕು ಯಜ್ಞ ಭಸ್ಮವನ್ನು ನಿಯಮದಂತೆ ಧರಿಸಿ ಆಮೇಲೆ ದೋರವನ್ನು ಯಂತ್ರವನ್ನು ಧರಿಸುವುದು.
                        ಈ ಯಂತ್ರಕ್ಕೆ ಜಗನ್ಯೋನಿ ಯಂತ್ರವೆಂತಲೂ ಉಲ್ಲೇಖಿಸಿ  ಚಿಕ್ಕಮಕ್ಕಳ ವ್ಯಾಧಿ ನಿವಾರಣೆಗೆ ಯಂತ್ರ ಅಭಿಮಂತ್ರಿತ ಜಲ, ಭಸ್ಮ ಉಪಯೋಗಿಸಬಹುದೆಂದು  ಮತ್ತು ಮಕ್ಕಳ ಜನನ ಶಾಂತಿಯಲ್ಲಿ  ಭೂ ಪ್ರಸವ  ಶಾಂತಿಯಂತೆ  ಈ ಯಂತ್ರ ಬರೆದ ಪಟ ಮೊರದಲ್ಲಿಟ್ಟು ವಿಧಿವತ್ತಾಗಿ ಪೂಜಿಸಿ ಶಿಸು ವನ್ನು ಮೊರದಲ್ಲಿ ಮಲಗಿಸಿ ಮತ್ತೊಮ್ಮೆ ಪೂಜಿಸಿ ಅರಿಶಿಣ ಕುಂಕುಮ ಹೂ ಗಳಿಂದ  ಸಿಂಗರಿಸಿ ಕೆಂಪು ವಸ್ತ್ರವನ್ನು ಹೊದಿಸಿ ತಾಯಿಗೆ ಕೂಸನ್ನು ಒಪ್ಪಿಸುವುದು ಸರ್ವರಿಗೂ ಶ್ರೇಯ ಸ್ಕರ ಎಂತಲೂ ಬರೆದಿದ್ದಾರೆ.    
                            ಸಂತಾನ ಪ್ರಾಪ್ತಿಗಾಗಿ ಈ ಯಂತ್ರವನ್ನು ಪ್ರಯೋಗಿಸುವವರಿಗಾಗಿ  :  ಸಂತಾನ ಪ್ರಾಪ್ತಿಗಾಗಿ ಈ ಯಂತ್ರವನ್ನು ಆರಾಧಿಸುವವರಿಗಾಗಿ ಮಾಮೂಲಿಯಾಗಿ ಯಂತ್ರವನ್ನು ದೋರವನ್ನು ರಚಿಸಿ ಮೇಲ್ಕಾಣಿಸಿದ ಎಲ್ಲ ಕ್ರಿಯೆಗಳಲ್ಲದೇ ವಿಶೇಷ. ವಾಗಿ  ಕೆಳಕಂಡ ಮಾತುಗಳು ನೆನಪಿಟ್ಟು ಅನುಷ್ಟಾನಕ್ಕೆ ತರಬೇಕು ಆಗ ಮಾತ್ರ ಇಚ್ಛಿತ ಫಲ ಕಾಣಲು ಸಾಧ್ಯ         
 a ) ದಂಪತಿಗಳು ಯಾವುದೇ ಮನಸ್ತಾಪಗಳಿಗೆ ಎಡೆಗೊಡದೆ ಪ್ರಸನ್ನ ಚಿತ್ತರಾಗಿದ್ದು ಒಳ್ಳೆಯ ಚಟುವಟಿಕೆವುಳ್ಳವರಾಗಿರತಕ್ಕದ್ದು.
 b ) ನಿಯಮಿತವಾಗಿ ಮುಟ್ಟು ಆಗುತ್ತಿರುವುದರ ಬಗ್ಗೆ ಜಾಗರೂಕತೆಯಿಂದ ಇದ್ದು  ನಿಯಮಿತವಾಗಿ ವೈದ್ಯರನ್ನು ಕಂಡು  ಅವರ ಅನುಪಾನ ಪದ್ಧತಿಯನ್ನು ಅನುದಿನದಿ  ಅನುಸರಿಸತಕ್ಕದ್ದು.
c )   ಬಿರುಸಾದ ಒಣಗಿದ ಬೇವಿನ ಎಲೆಗಳ ಹುಡಿಮಾಡಿ ತಯಾರಿಸಿ ಇಟ್ಟುಕೊಂಡಿರಬೇಕು  ದಿನಾಲು ಮುಂಜಾನೆ ಒಮ್ಮೆ ಮಾತ್ರ  ಏನೂ ತಿನ್ನುವುದಕ್ಕಿಂತ ಮೊದಲು ಒಂದೆ ಒಂದು ಚಿಟಿಕೆ ಚೂರ್ಣದಲ್ಲಿ ಇಬ್ಬರೂ ಅರ್ಧ ಅರ್ಧ ಸೇವಿಸಿ ಬೆಚ್ಚಗಿನ ನೀರು ಕುಡಿಯುತ್ತಿರಬೇಕು.
d )   ಬಿರುಸಾದ ಒಣಗಿದ  ಅಶ್ವತ್ಥ ಎಲೆಗಳ  ಚೂರ್ಣತಯಾರಿಸಿ  ಅದರಲ್ಲಿ ಕಲ್ಲುಸಕ್ಕರೆ, ಖಸಖಸಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ    ಬೆರೆಸಿಟ್ಟು ಕೊಂಡಿರಬೇಕು  ದಿನಾಲು ಯಂತ್ರ ಪೂಜೆಯ ನಂತರ  ಹಾಲು ನೈವೆದ್ಯ ತೋರಿಸಿ ಆ ಹಾಲಿನಲ್ಲಿ ನಿಮ್ಮ ಈ  ಚೂರ್ಣ ಬೆರೆಸಿ ಮುಂಜಾನೆ, ಮಧ್ಯಾಹ್ನ, ರಾತ್ರಿ ಮಲಗುವುದಕ್ಕೆ ಮುಂಚೆ ಇಬ್ಬರೂ ಸೇವಿಸುತ್ತಿರಬೇಕು.  
               ಇಚ್ಛಿತ ಪರಿಣಾಮವನ್ನು ಕಾಣಲು ತಾಳ್ಮೆಯಿಂದಿರುವುದು ಸುಮಾರು 108 ದಿನಗಳ ನಂತರ ಅವರವರ ಶಾರೀರಿಕ ಸ್ಥಿತಿಗೆ ಅನು ಗುಣವಾಗಿ ಪರಿಣಾಮದ ಬಗ್ಗೆ ಲಕ್ಷಣ ಗಳು ತಲೆದೋರಿ ಸ್ಟ್ರಿಯಲ್ಲಿ ಬಲಿಷ್ಠ ಡಿಂಭ ತಯಾರಿಕೆಗೆ ಮತ್ತು ಗಂಡಿನಲ್ಲಿ ಗುರುತ್ವವುಳ್ಳ   ವೀರ್ಯದಲ್ಲಿ ಚಟುವಟಿಕೆಯುಳ್ಳ ವಿರ್ಯಾಣು ತಯಾರಿಕೆಗೆ ಅವಕಾಶ ಬೇಕಾಗಿರುವುದು ಅನಿವಾರ್ಯ ಎಂದು ತಿಳಿದ ವೈದ್ಯ ವೃಂದವು ಹೇಳುತ್ತದೆ ಎಂತಲೂ ಬರೆದದ್ದಿದೆ.       
ಕೊನೆಯದಾಗಿ : 
ಈಗ ಯಾವುದೇ ತಂತ್ರ, ಯಂತ್ರ, ಮಂತ್ರ, ಪೂಜೆ, ಮಾಡಿದ ಕೂಡಲೇ ವನೌಷಧಿ ಸೇವಿಸಿದಕೂಡಲೇ ಪರಿಣಾಮ ಬೇಗನೆ ಕಾಣಸಿಗಬೇಕು ಎನ್ನುವ ಪ್ರವೃತ್ತಿ ಬೆಳೆದು ಬಂದಿದೆ. ಸ್ವತಃ ಲಾಭಾರ್ಥಿ ತನ್ನಲ್ಲಿಯ  ಶಾರೀರಿಕ ಮಾನಸಿಕ ಪೀಡೆ ದೋಷಗಳನ್ನು ಎಷ್ಟೋ ವರ್ಷಗಳು,ತಿಂಗಳುಗಳು,ದಿನಗಳ ವರೆಗೆ ಸಾಕಿಕೊಂಡು ಬಂದಿರುತ್ತಾನೆ ಎಲ್ಲಕಡೆಯೂ ಎಲ್ಲ ಬಗೆಯಾಗಿಯೂ ತೋರಿಸಿಕೊಂಡು ಯೋಚಿಸಿ ಪರಿಹಾರವೇ ಕಾಣದೆ ಹೋಗಿ, ಕೊನೆಗೆ ಪೀಡೆ, ದೋಷ ಬಲಿತು ನಿಂತಾಗ ಏನೂ ಮಾಡಲು ತೋಚದೆ  ತಂತ್ರ, ಯಂತ್ರ, ಮಂತ್ರ, ಪೂಜೆ, ಸನಾತನ ಔಷಧಿ ಪದ್ಧತಿಯ ಮೊರೆ ಹೋಗುತ್ತಾನೆ. ಕಾಟಾಚಾರಕ್ಕೆ ಯಾರ್ಯಾರಿಗೋ ಹಣಕೊಟ್ಟು ಹೇಗೇಗೋ ತನ್ನ ಕೆಲಸನ್ನು ಪೂರೈಸಿ ಕೊಳ್ಳುತ್ತಾನೆ. ತನ್ನಲ್ಲಿಯ ನಕಾರಾತ್ಮಕ ಯೋಚನೆಗಳಿಂದ ಸಕಾರಾತ್ಮಕ ಪರಿಣಾಮ ಕಾಣದೆ ಯಾರನ್ನೋ ದೂಷಿಸುತ್ತ ಕೂಡುತ್ತಾನೆ.              
               ಫಲಾನುಭವಿ ತನಗೆ ಅವಶ್ಯವಿರುವ ಬೇಕಾಗಿರುವ ಕ್ರಿಯೆಯನ್ನು ಪರಿಹಾರ 
ಉಪಾಯಗಳನ್ನು ಇನ್ನೊಬ್ಬರಿಗೆ ಒಪ್ಪಿಸದೇ ತಾನೇ ಸ್ವತಃ ತನಗೆ ಬೇಕಾದಹಾಗೆ ತನಗೆ ಬಂದಂತೆ ಪುಸ್ತಕನೋಡಿಕೊಂಡು ತನಗೆ ಬರುವಂಥ ತಮ್ಮ ತಮ್ಮ ಕುಲದೇವರ, ದೇವಿಯ, ಕುಲಗುರುಗಳ ಮಂತ್ರ ಹೇಳುತ್ತ ತಾನೇ ಮಾಡಿಕೊಳ್ಳಬೇಕು.ಅದೇ ಉತ್ತಮ ಮತ್ತು ಶ್ರೇಯಸ್ಕರ. ಸನಾತನ ಶಾಸ್ತ್ರಗಳನ್ನು, ಇನ್ನೊಬ್ಬರನ್ನು ವಿನಾಕಾರಣ ದೂಷಿಸುವ ಪ್ರಮೇಯವೇ ಬರುವುದಿಲ್ಲ. 
                 ಪ್ರಾಚೀನ ಋಷಿಗಳು ಲೋಕ ಕಲ್ಯಾಣಾರ್ಥವಾಗಿ ತಂತ್ರ, ಯಂತ್ರ, ಮಂತ್ರ, ಪೂಜೆ, ಔಷಧಿ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಅನುಭವದಿಂದ,ಗೃಹಿತಕಗಳಿಂದ ಸಿದ್ಧಿಸಿ ಕೊಂಡ ನಂತರ ಬರೆದು ಇಟ್ಟಿದ್ದಾರೆಯೇ ಹೊರತು ಉಪಯೋಗಿಸುವ ಲಾಭಾರ್ಥಿಯನ್ನು ದೋಚಲು, ಮೋಸಗೊಳಿಸಲು ಸರ್ವಥಾ ಅಲ್ಲ ಎಂಬುದನ್ನು ತಿಳಿದು ಕೊಳ್ಳುವುದು ಅವಶ್ಯಕ. ನಾವು ಮಾಡುವ ನಿರೀಕ್ಷಿತ ಪರಿಣಾಮ ಅಪೇಕ್ಷಿಸುವ ಈ ಕ್ರಿಯೆಗಳಲ್ಲಿ ನಂಬುಗೆ, ಶ್ರದ್ಧೆ,ವಿಶ್ವಾಸ, ತಾಳ್ಮೆ  ಇರಲೇಬೇಕು, ಇಲ್ಲದೇ ಹೋದಲ್ಲಿ ಈ ಕೆಲಸಗಳಲ್ಲಿಯೇ ಏಕೆ, ನೀವು ಮಾಡುವ ಯಾವ ಕೆಲಸದಲ್ಲಿಯೇ ಆಗಲಿ ಇಚ್ಛಿತ ಪರಿಣಾಮ ಕಾಣಲಾರಿರಿ.

ಶ್ರೀಮದ್ ಲಕ್ಷ್ಮಿ ಗೋವಿಂದರಾಜಾರ್ಪಣಮಸ್ತು                                


No comments:

Post a Comment