Thursday, April 21, 2022

MANGALA GOURI KATHAA ಮಂಗಳ ಗೌರ್ಯಾರಾಧನ ಕಥಾ

MANGALA GOURYARADHANA  KATHAA  ಮಂಗಳ ಗೌರ್ಯಾರಾಧನ ಕಥಾ  

                        ಶ್ರಾವಣದಲ್ಲಿ ಆಚರಿಸಲಾಗುವ ಶ್ರಾವಣ ಮಂಗಳ ಗೌರಿ ವ್ರತ ಅಥವಾ ಮಂಗಳ ಗೌರಿ ಪೂಜೆಯು ಅತ್ಯಂತ ಫಲಪ್ರದವಾದ ವ್ರತಗಳಲ್ಲಿ ಅಥವಾ ಉಪವಾಸಗಳಲ್ಲಿ ಪ್ರಮುಖವಾದುದ್ದೆಂದು ಪರಿಗಣಿಸಲಾಗುತ್ತದೆ. ಈ ಹಬ್ಬವನ್ನು ಶ್ರಾವಣ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಮಂಗಳ ಗೌರಿ ವ್ರತವನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಸಮುದಾಯಗಳಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.

ಮಂಗಳ ಗೌರಿ ವ್ರತವನ್ನು ಗಂಡನ ದೀರ್ಘಾಯುಷ್ಯಕ್ಕಾಗಿ ಮತ್ತು

ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಮಹಿಳೆಯರು ಆಚರಿಸುತ್ತಾರೆ. ಈ ದಿನ ಕೈಗಳಿಗೆ ಮೆಹಂದಿ ಹಚ್ಚುವುದೇ ಮಹಿಳೆಯರಿಗೆ ಒಂದು ವಿಶೇಷ. ಈ ವ್ರತವನ್ನು ಅಂದರೆ ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಮಂಗಳವಾರದಂದು ಆಚರಿಸಲಾಗುತ್ತದೆ. ಗೌರಿ ದೇವಿಯೆಂದು ಪರಿಗಣಿಸಲಾಗುವ ಪಾರ್ವತಿ ದೇವಿಯನ್ನು ಈ ದಿನ ಪೂಜಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ, ಸಂತೋಷ ಮತ್ತು ಆರೋಗ್ಯ ನೆಲೆಯಾಗುತ್ತದೆ. ಮದುವೆಯಾದ ಮೊದಲ 5 ವರ್ಷಗಳವರೆಗೆ ಮಹಿಳೆಯರು ಈ ವ್ರತವನ್ನು ಹಮ್ಮಿಕೊಳ್ಳುತ್ತಾರೆ.

ಮಂಗಳ ಗೌರಿ ವ್ರತದ ಅಚರಣೆಯು ವಿವಿಧ ಪ್ರದೇಶಗಳಿಗೆ ಹೋದಂತೆ ಭಿನ್ನವಾಗಿರುತ್ತದೆ. ಆಯಾ ಸಮುದಾಯದ ಜನಗಳು ಈ ವ್ರತದಲ್ಲಿ ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಾರೆ. ಮಂಗಳ ಗೌರಿ ವ್ರತವನ್ನು ಆಚರಿಸಲು ಬೇಕಾದ ಪೂಜಾ ಸಾಮಾಗ್ರಿಗಳು:

1) ಪಾರ್ವತಿ ಅಥವಾ ಗೌರಿ ದೇವಿಯ ವಿಗ್ರಹ. ( ವಿಗ್ರಹವಿಲ್ಲದಿದ್ದರೆ ಅರಶಿಣ ಪುಡಿಯಿಂದ ತಯಾರಿಸಿದ 5 ಪಿರಾಮಿಡ್‌ಗಳು)

2) ಬೆಲ್ಲ

3) ಅಕ್ಕಿ

4) ಹೂವಿನ ಮಾಲೆ ಗೆಜ್ಜೆ ವಸ್ತ್ರ

5) ಕೆಂಪು ಬಣ್ಣದ.ಹೂಗಳು

6) ಐದು ತೆಂಗಿನ ಕಾಯಿಗಳು

7) ಪಿರ್ಯಾಮಿಡನಂತೆ ಮಡಿಚಿದ ರವಿಕೆ ಬಟ್ಟೆ

8) ವಿವಿಧ ಜಾತಿಯ ಒಂದಿಷ್ಟು ಫಲಗಳು

9) ಗೌರಿ ಬಳೆ, ಹಸಿರು ಬಳೆ ಮತ್ತು ಹಸಿರು ಬಣ್ಣದ ರವಿಕೆ ಬಟ್ಟೆ

10) ಅರಿಷಿಣ ಕುಂಕುಮ

11) ನೈವೇದ್ಯ, ನೆನೆದ ಕಡಲೆಯಿಂದ ಉಡಿ ತುಂಬುವುದು 

12) ಮಂಗಳ ಗೌರಿ ವ್ರತ ಪೂಜೆ ಇದ್ದರೂ ಬೆಳ್ಳಿಯ ಶಿವ ಲಿಂಗ ಮತ್ತು ಶೇಷನಾಗನ ಮೂರ್ತಿಯ ಅಧಿಷ್ಠಾನ 

      ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಬಾಗಿನ ಕೊಡಬೇಕು.ಗೌರಿಯ ಪ್ರತೀಕವಾಗಿರುವಂತಹ ಮುತೈದೆಯರಿಗೆ ಪೂಜೆಯನ್ನು ಸಲ್ಲಿಸಿ,ಅವರ ಪಾದ ತೊಳೆದು ತಲೆಗೆ ಹೂವು ಮುಡಿಸಿ, ಅರಿಶಿನ ಕುಂಕುಮ ನೀಡಿ, ಹುಡಿಯನ್ನು ತುಂಬಿಸಿ ಆರಾಧಿಸಿ, ಗೌರಿಯ ಪೂರ್ಣವಾದ ಅನುಗ್ರಹ ನಮಗೆ ಆಗಲಿ ಎಂದು ಅವರ ಕೈಯಿಂದ ಮಂತ್ರಾಕ್ಷತೆಯನ್ನು ಸೆರಗಿನ ಮೂಲಕ ಹಿಡಿದು ಭಗವಂತನನ್ನು ಪ್ರಾರ್ಥಿಸಿ ವ್ರತದ ಆಚರಣೆಯನ್ನು ಮುಕ್ತಾಯ ಮಾಡಬೇಕು

ಬದುಕಿನಲ್ಲಿ ಸಾಮರಸ್ಯ, ಆಯಸ್ಸು, ಆರೋಗ್ಯ, ವಿದ್ಯೆ ಮತ್ತು ಯಾವುದೇ ರೀತಿಯ ದೋಷಗಳನ್ನು ಪರಿಹರಿಸುವಂತಹ ಶಕ್ತಿ ಈ ವ್ರತಕ್ಕೆ ಇದೆ.

ಮಂಗಳಗೌರಿ ಪೂಜೆಯ ಹಿಂದಿರುವ ಪೌರಾಣಿಕ ಹಿನ್ನಲೆ ಏನು?

ಧರ್ಮಪಾಲ ಎಂಬ ಒಬ್ಬ ವೈಶ್ಯನಿಗೆ ಬಹಳ ಕಾಲದ ನಂತರ ಮದುವೆಯಾಗುತ್ತದೆ. ಆದರೆ, ಮದುವೆಯಾದ ನಂತರ ಮಕ್ಕಳು ಆಗಲಿಲ್ಲ ಎಂಬಕೊರಗು ಆತನನ್ನು ಕಾಡುತ್ತಾ ಇರುತ್ತದೆ. ವಿಶೇಷವಾಗಿ ಭಗವಂತನನ್ನುಪ್ರಾರ್ಥನೆ ಮಾಡಿ ಪೂಜಿಸಿದ ನಂತರವೂ ಫಲ ಸಿಗದೇ ಇದ್ದಾಗ, ಯಾತ್ರೆಗೆ ಹೊರಡುತ್ತಾನೆ, ಯಾತ್ರೆಯ ಮದ್ಯದಲ್ಲಿ ಅನೇಕ ಕ್ಷೇತ್ರಗಳಿಗೆ ತೆರಳಿ ಸಾಧುಗಳಿಗೆ ಸೇವೆ ಸಲ್ಲಿಸುತ್ತಾನೆ, ಆಗ ಅಲ್ಲಿರುವ ಸಾಧುಗಳು ಅವನನ್ನು ಅನುಗ್ರಹಿಸಿ ಹೇಳುತ್ತಾರೆ, ನಿನ್ನ ಈ ವ್ರತ ಆಚರಣೆ ಮತ್ತು ನಿಷ್ಠೆಯಿಂದ ನಾವು ಸಂತೃಷ್ಟರಾಗಿದ್ದೇವೆ.

ನಿನ್ನ ಮನಸ್ಸಿನಲ್ಲಿ ಏನಾದರೂ ಕೊರಗು ಇದ್ದರೆ ಹೇಳು ಎಂದು ಕೇಳುತ್ತಾರೆ. ಆಗ ತನಗೆ ಮಕ್ಕಳಾಗಿಲ್ಲ ಎಂಬ ಸಂಗತಿಯನ್ನು ಸಾಧುಗಳಿಗೆ ಹೇಳುತ್ತಾನೆ. ಆಗ ಸಾಧುಗಳು, ಮಕ್ಕಳು ಆಗುವಂತಹ ಪರಿಸ್ಥಿತಿ ಇಲ್ಲ, ಆದರೂ ನಮ್ಮ ತಪೋ ಬಲದಿಂದ ಹೀಗೊಂದು ಆಯ್ಕೆಯನ್ನು ನೀಡಬಹುದು.

ಒಂದು ಅಲ್ಪ ಆಯುಷ್ಯನಾದಂತಹ ಮಗ ಅಥವಾ ಕಣ್ಣಿಲ್ಲದಂತ ಮಗ ಹುಟ್ಟುತ್ತಾನೆ, ಆದರೆ ನಿನಗೆ ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಳುತ್ತಾರೆ. ಕುರುಡುನಾದಂತಹ ಮಗನನ್ನು ಕಟ್ಟಿಕೊಂಡು ತಾನು ಯಾವ ಸುಖವನ್ನು ಪಡೆಯಲು ಸಾಧ್ಯವಿಲ್ಲ ಎಂದು ಭಾವಿಸಿ ಅಲ್ಪ ಆಯುಷ್ಯ ಮಗನೇ ಸಾಕು ಎಂದು ಯೋಚಿಸಿ, ಅಲ್ಪಆಯುಷ್ಯ ಮಗನನ್ನೇ ಕೇಳುತ್ತಾನೆ.

ಸಾಧುಗಳ ಅನುಗ್ರಹದಿಂದ ಆತನಿಗೆ ಅಲ್ಪಆಯುಷ್ಯ ಮಗ ಜನಿಸುತ್ತಾನೆ. ಮಗ 16 ವರ್ಷಕ್ಕೆ ಬೆಳೆಯುವ ತನಕವೂ, ತಂದೆಯಾಗಿ ಮಗನ ಏನು ಸಂತೋಷವನ್ನು ಪಡೆಯಬೇಕೋ ಅದೆಲ್ಲವನ್ನು ಪಡೆಯುತ್ತಾನೆ. ಕಾಲ ಕಳೆಯುತ್ತಿದ್ದಂತೆ, ಮಗನ ಅಲ್ಪಆಯುಷ್ಯದ ನೆನಪಾಗಿ ದುಃಖ ಕಾಡಲು ಶುರುವಾಗುತ್ತದೆ. ಕೊನೆಗೆ, ಈ ಹೊತ್ತಿಗೆ ಇವನಿಗೆ ಮದುವೆ ಮಾಡಿದರೆಸರಿ ಎಂದು ಯೋಚಿಸಿ, 18 ವಯಸ್ಸು ದಾಟುವುದರಲ್ಲೇ ಯೋಗ್ಯವಾದಂತಹ ಹುಡುಗಿಯನ್ನ ನೋಡಿ ಮದುವೆ ಮಾಡಿಸುತ್ತಾನೆ. ಮದುವೆಯಾಗುವ ಸಂದರ್ಭದಲ್ಲಿ ಹುಡುಗಿಗೆ ಈ ವಿಚಾರವನ್ನು ಮೊದಲೇ ತಿಳಿಸಿರುತ್ತಾರೆ. ಮದುವೆಯಾದ ನಂತರ ಮಗನ ಪತ್ನಿಯು ಕುಲದೈವರಾದಂತಹ ಪಾರ್ವತಿ ಪರಮೇಶ್ವರನಲ್ಲಿ ಗಂಡನ ಆಯುಷ್ಯದ ಪ್ರಾರ್ಥಿಸುತ್ತಾ 5 ವರ್ಷಗಳ ಕಾಲ ನಿರಂತರ ಪೂಜೆ ಸಲ್ಲಿಸುತ್ತಾಳೆ. ಇನ್ನೇನು ಗಂಡನ ಪ್ರಾಣ ಹೋಗುವ ಕಾಲದಲ್ಲಿ ಆಕೆಗೆ ಭಗವಂತನ ದರ್ಶನ ಆಗುತ್ತದೆ.ನಿನ್ನ ಗಂಡನ ಆಯುಸ್ಸು ಮುಗಿದಿದೆ ಎಂದು ಭಗವಂತ ಹೇಳುವಾಗ, ನಾನು ಇಷ್ಟು ವರ್ಷ ಮಾಡಿದ ವ್ರತ, ಪೂಜೆ, ಸತ್ಯವಾಗಿದ್ದರೆ, ನನ್ನ ಗಂಡನಿಗೆ ಇನ್ನಷ್ಟು ಆಯುಸ್ಸನ್ನು ಕೊಡಬೇಕು. ನಿನ್ನನ್ನು ನಂಬಿದವರನ್ನು ಯಾವುತ್ತು ಕೈಬಿಟ್ಟಿಲ್ಲ ಎಂಬಮಾತನ್ನು ನಡೆಸಿಕೊಡಬೇಕು ಎಂದು ಕೇಳಿಕೊಂಡು, ಬೇಕಾದರೆ, ತನ್ನ ಆಯುಸ್ಸನ್ನು ತಾನು ದಾನ ಮಾಡಲಿಕ್ಕೆ ಸಿದ್ಧನಿದ್ದೇನೆ ಎಂದು ಅವಳುಹೇಳಿ ಭಂಗವಂತನಲ್ಲಿ ಅಂಗಲಾಚುತ್ತಾಳೆ. ಆಕೆಯ ಬೇಡಿಕೆಗೆ ಒಲಿದ ಭಗವಂತನು ಗಂಡನ ಆಯುಸ್ಸನ್ನು ವೃದ್ಧಿಗೊಳಿಸುತ್ತಾನೆ.


No comments:

Post a Comment