ರಾಗ : ಭೋಳಿ ತಾಳ : ಖಂಡ ಚಾಪು
ಏಳು ಸೌಭಾಗ್ಯದಾ ಏಳು ಸರ್ವೇಶ್ವರಾ
ಏಳು ಸ್ವಾಧಾಕಾರ ಶ್ರೀ ಸ್ವರ್ಣ ಕೇಶ
ಏಳಯ್ಯ ಬೆಳಗಾಯಿತು...ಏಳಯ್ಯ ಬೆಳಗಾಯಿತು || ಪಲ್ಲ||
ಸುರ ಅಸುರರೂ ಬಂದು ಮನುಕುಲಜರೂ ಬಂದು
ಪರಮ ಜಗದೀಶನೇ ನಿನ ನಂಬಿ ಜನರು ಸ್ಫುರ ಮಂಗಲನೆ ನಿನ ನಾಮವದು ಸ್ಮರಿಸೀ
ಪುರದ ಗೋವಾಸಿ ನಿನ್ನುದಯ ಪಾಡುತಿರೆ
ಏಳಯ್ಯ ಬೆಳಗಾಯಿತು......|| ೧ ||
ಭಕ್ತರೆಲ್ಲರು ಕೂಡಿ ದೇವದರುಶನ ಪಡೆದು
ಭಕ್ತಸ್ವ ಪ್ರತಿಪಾದಿ ನಿನ ಧ್ಯಾನ ಮಾಡುತಲಿ
ಭಕ್ತವತ್ಸಲ ನಿನ್ನ ಜಾವದಲಿ ನುತಿಸುವರು
ನಕ್ತವಿಲ್ಲದ ನಾಮ ಗೋವಿಂದ ಹರಿಯೆ.
ಏಳಯ್ಯ ಬೆಳಗಾಯಿತು..... || ೨ ||
ಭೂತದೇವನೆ ರಕ್ಷ ರಕ್ಷಾಟನಿರುತಿರಲು
ವೀತ ಭಾರ್ಯರುಯುಗಲವರ ಒಡೆಯ ಸ-
ಮೇತ ಗಣಪತಿ ಲಿಂಗ ಫಾಲನೇತ್ರನೆ ಫಣಿಯ
ಪ್ರಾತಃ ಕಾಲವು ಏಳು ಪ್ರಳಯಾಂತಕ.
ಏಳಯ್ಯ ಬೆಳಗಾಯಿತು..... ||೩ ||
ಶ್ರೀ ಕಲಿಯ ಮೋದಗಳ ನೈವೇದ್ಯ ತಂದಿಟ್ಟು
ತಾಕಲಾಡುತಲಿರುವ ಅಶ್ವತ್ಥ ತರುವೇ
ಮೋಕ್ಷ ದಾಯಕ ಏಳು ಕ್ಷೇತ್ರಪಾಲನೆ ಮಾಡು
ಲೋಕ ಕೆಂಪಾಯಿತು ಏಳಯ್ಯ ಪ್ರಭುವೇ
ಏಳಯ್ಯ ಬೆಳಗಾಯಿತು.....|| ೪ ||
ಭೀಮರಥಿ ತಟವಾಸಿ ಕುಂಭೋದ್ಭವಾರ್ಚಿತನೆ
ಕಾಮಕ್ರೋಧಗಳ ಆವ ಅವಗುಣವ
ನಾಮಶೇಷವು ನನ್ನ ಮನಬರದು ಏಳೇಳು
ಯೋಮ ಇಂದಿರೆಸುತನೆ ಬೇಗ ನೀನೇಳು
ಏಳಯ್ಯ ಬೆಳಗಾಯಿತು.......|| ೫ ||
....... ಇಂದುಸುತಧೀರ
GOVINDA UDAYA RAAGA गोविंदोदय राग
राग : भोळि ताळ : खंड चापु
एळु सौभाग्यदा एळु सर्वेश्वरा
एळु स्वाधाकार श्री स्वर्णकेश
एळय्य बॆळगायितु....एळय्य बॆळगायितु ॥ पल्ल॥
सुर असुररू बंदु मनुकुलजरू बंदु
परम ईश्वरने निन नंबिद जनरु
स्फुर मंगलनॆ निन्न नामवदु स्मरिसी
पुरद गोवासि निन्नुदय पाडुतलिहरु
एळय्य बॆळगायितु......॥ १ ॥
भक्तरॆल्लरु कूडि देवदरुशन पडॆदु
भक्तस्व प्रतिपादि निन ध्यान माडुतलि
भक्तवत्सल निन्न जावदलि नुतिसुवुदु
नक्तविल्लद नाम गोविंद हरियॆ.
एळय्य बॆळगायितु..... ॥ २ ॥
भूतदेवनॆ रक्ष रक्षाटनिरुतिरलु
वीत भार्यरुयुगलवर ऒडॆय स-
मेत गणपति लिंग फालनेत्रनॆ फणिय
प्रातः कालवु एळु प्रळयांतक.
एळय्य बॆळगायितु..... ॥३ ॥
श्री कलिय मोदगळ नैवेद्य तंदिट्टु
ताकलाडुतलिरुव अश्वत्थ तरुवे
मोक्ष दायक एळु क्षेत्रपालन माडु
लोक कॆंपायितु एळय्य प्रभुवे
एळय्य बॆळगायितु.....॥ ४ ॥
भीमरथि तटवासि कुंभोद्भवार्चितनॆ
कामक्रोधगळादि षड्वर्ग अवगुणव
नामशेषवु नन्न मनबरदु एळु
योम इंदिरॆसुतनॆ बॆळगायितेळु
एळय्य बॆळगायितु.......॥ ५ ॥
.......... इंदुसुतधीर
No comments:
Post a Comment