Wednesday, July 13, 2022

PARIHAAROPAAYA MANTRAS ಪರಿಹಾರೋಪಾಯ ಮಂತ್ರಃ

 ಪರಿಹಾರೋಪಾಯ ಮಂತ್ರಃ 
1) ಯುಗಾದಿ ಧ್ವಜಾರೋಹಣ ಮಂತ್ರ 
2) ನಿಂಬ ಪತ್ರಪ್ರಾಶನ ಮಂತ್ರ 
3)  ಮೇಧಾವೃದ್ಧಿ ದಕ್ಷಿಣಾಮುರ್ತಿ ಮಂತ್ರಃ 
4) ವಿಜಯ ದಶಮಿಯ ದಿನ ಸುವರ್ಣ ಕೊಡು ಕೊಳ್ಳುವ ಮಂತ್ರ 
5) ಶ್ರೀ ಭವಾನಿ ಕವಚ 
6) ಧನ ಪ್ರಾಪ್ತಿ ಮಂತ್ರ 
7)ಚಂದ್ರಲಾಂಬಾ ಮಂತ್ರ
8)ಕಠಿಣ ಕಾರ್ಯ ಸಿದ್ಧಿ ಮಂತ್ರ  
9) ಸತ್ವರಿತ ಗಣಪತಿ ಮಂತ್ರ  
10) ಪಂಚಗವ್ಯ ಪ್ರಾಶನ ಮಂತ್ರ  
11) ನಷ್ಟ ದ್ರವ್ಯ ಪ್ರಾಪ್ತಿಗಾಗಿ ಮಂತ್ರ 
12) ಶ್ರೀ ಸುಬ್ರಹ್ಮಣ್ಯ ಮಂತ್ರ 
13) ಷಣ್ಮುಖ ಸ್ವಾಮಿಯ ಉಪಾಸನೆ ಚರಿತ್ರ      ಶ್ರವಣ ದಿಂದ ಸಂತತಿ ಪ್ರಾಪ್ತಿ   
14)  ನರಕ ಚತುರ್ದಶಿ/ಅಮಾವಾಸ್ಯಾ ದಿನ    ಕೊಳ್ಳಿಯಿಂದ ಪಿತೃಗಳಿಗೆ ದಾರಿ ತೋರಿಸಲು ಮಂತ್ರ  
15) ಯಮದೀಪ ದಾನ ಮಂತ್ರ : 
16) ನರಕಚತುರ್ದಶಿ ದಿವಸ ಯಮ ತರ್ಪಣ (ಯಮ ಪ್ರೀತ್ಯರ್ಥವಾಗಿ)     
17)  ಮನೆ ಬಿಟ್ಟುಹೋದ ಪತಿ ಮರಳಿ ಬರಲು  ಮಂತ್ರ 
18) ಮನೋಧೈರ್ಯ ಪ್ರಾಪ್ತಿಗೆ ಮಂತ್ರ 
19)  ವಿದ್ಯಾಪ್ರದ ಸರಸ್ವತಿ ಮಂತ್ರ 
20) ಶ್ರೀ ಸರಸ್ವತಿ ಸ್ತೋತ್ರ
21) ಶುಕ್ಲಾಷ್ಟಮ್ಯಾಂ ಭೀಷ್ಮ ತರ್ಪಣಂ 
22) ದೇವಿ ಮಂತ್ರ 
23)  ಅಷ್ಟ ವಿಂಶತಿನಾಮ ಚಂದ್ರ ಸ್ತೋತ್ರಂ
24)  ಇಚ್ಚಿತ ಕಾರ್ಯ ಸಿದ್ಧ್ಹಿ ಮಂತ್ರಃ     
25) ಮಲಾಪಹಾ ಮಹಾತ್ಮ್ಯ 
26) ಸಾರ್ಧ ಸಪ್ತವರ್ಶೀಯ ( ಸಾಡೆಸಾತಿ ) ಶನಿ  ಪೀಡಾ ಪರಿಹಾರ ಸ್ತೋತ್ರಂ 
27) ನರಸಿಂಹ ಜಯಂತಿ   
28)  ದಶಹರಾ ಸಂಕಲ್ಪ 
  
ಈ ಎಲ್ಲ ಮಂತ್ರಗಳು ಅನುಭವ ಸಿದ್ಧಿಯಿಂದ ಗ್ರಂಥಾದಿಗಳಿಂದ ಆಯ್ದುಕೊಂಡದ್ದು ಓದುಗರು ತಮ್ಮ ತಮ್ಮ ಪೀಡಾ ದೋಷ ಪರಿಹಾರಕ್ಕೋಸ್ಕರ ಪ್ರಯೋಗ ಮಾಡಿ ನೋಡಲು ಅಭ್ಯಂತವಿಲ್ಲ ಇದರಲ್ಲಿ ಯಾವುದೇ ರೀತಿಯ ಮೋಸಕ್ಕೆ ಅವಕಾಶವಿಲ್ಲ 

ಯುಗಾದಿ ಧ್ವಜಾರೋಹಣ ಮಂತ್ರ 
ಬ್ರಹ್ಮಧ್ವಜ ನಮಸ್ತೇಸ್ತು ಸರ್ವಾಭಿಷ್ಟ ಫಲಪ್ರದಾ || ಪ್ರಾಪ್ತೇಸ್ಮಿನ್ ವತ್ಸರೇ ನಿತ್ಯಮದ್ಗೃಹೇ ಮಂಗಲಂ ಕುರು ||
ನಿಂಬ ಪತ್ರಪ್ರಾಶನ ಮಂತ್ರ 
ಶತಾಯುರ್ವಜ್ರ ದೇಹತ್ವ  ಸರ್ವಸಂಪತ್ ಪ್ರದಂ ತಥಾ  |
ಸರ್ವಾರಿಷ್ಟಹರಂ ಕುರ್ವೇ ನಿಂಬಪತ್ರಾಶನಂ ಶುಭಂ ||
ಮೇಧಾವೃದ್ಧಿ ದಕ್ಷಿಣಾಮುರ್ತಿ ಮಂತ್ರಃ 
ಈ ಮಂತ್ರವನ್ನು ಪ್ರತಿ ದಿನ 108 /16 ಸಲ ಪಠಿಸಿದರೆ ಮೇಧಾವೃದ್ಧಿಯಾಗಿ ವಿಷಯಗಳು ಸ್ಮರಣದಲ್ಲಿ ಇರುತ್ತವೆ 
ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವ  ರೋಗಿಣಾಂ | ಗುರವೇ ಸರ್ವಲೋಕಾನಾಂ  ದಕ್ಷಿಣಾಮುರ್ತಯೇ ನಮಃ  ||
ವಿಜಯ ದಶಮಿಯ ದಿನ ಸುವರ್ಣ ಕೊಡು ಕೊಳ್ಳುವ ಮಂತ್ರ 
ಶಮೀ ಶಮೀಯತೆ ಪಾಪಂ | ಸರ್ವ ಶತ್ರುರ್ವಿನಾಶನಂ ||ಅರ್ಜುನಸ್ಯ ಧನುರ್ಧಾರಿ | ರಾಮಸ್ಯ ಪ್ರಿಯ ದರ್ಶಿನಿಂ   ||
ಧನ ಪ್ರಾಪ್ತಿ ಮಂತ್ರ 
ಪ್ರತಿದಿನ 21 ಸಲ ಜಪಿಸಬೇಕು     
ಕುಬೇರ ತ್ವಂ ಧನಾಧೀಶ ಗೃಹೇ ತೇ ಕಮಲಾ ಸ್ಥಿತಾ | ತಾಂ ದೇವಿಂ ಪ್ರೇಷಯಾಶುತ್ವಂ ಮದ್ಗೃಹೇ ತೇ ನಮೋ ನಮಃ ||
ಕುಂ ಕುಬೇರಾಯ ನಮಃ ||
ಚಂದ್ರಲಾಂಬಾ ಮಂತ್ರ
ಶ್ರೀಮ್ ಸೇತುಭೂಪಾಲ  ಸಂಹಾರ ಪ್ರವೀಣೇ ಚಂದ್ರಲಾಂಬಿಕೆ | ನಮಸ್ತುಭ್ಯಂ ಶಿವೇ ಶಾಂತೆ ತ್ವಯಿ ಭಕ್ತಿಂ ಪ್ರಯಚ್ಚನಃ ||
ಕಠಿಣ ಕಾರ್ಯ ಸಿದ್ಧಿ ಮಂತ್ರ  
ಕೈಯಲ್ಲಿ ಅರಿಶಿಣ ಬೇರನ್ನು ಹಿಡಿದುಕೊಂಡು ಪ್ರತಿದಿನ 28 ಸಲ 48 ದಿನಗಳ ವರೆಗೆ ಜಪಿಸಿ ಆ ಅರಿಷಿನ ಬೇರನ್ನು ಜೊತೆಗೆ ತೆಗೆದುಕೊಂಡು ಹೋದರೆ ಕಠಿಣ ಕಾರ್ಯಗಳು ಸಿದ್ಧಿಸುವವು 
ಸರ್ವಾನ್ ಲೋಕಾನ್ ಸುಸಂಹೃತ್ಯಸಭೂತಾನ್ ಸಚರಾಚರಾನ್ | ಪುನರೇವ ತಥಾಸ್ರಂಷ್ಟುಂ ಶಕ್ತೋ ರಾಮೋ ಮಹಾಯಶಾಃ ||
                     .....ವಾಲ್ಮೀಕಿ ರಾಮಾಯಣ 
ಸತ್ವರಿತ ಗಣಪತಿ ಮಂತ್ರ  
ಈ ಮಂತ್ರವನ್ನು ನಿತ್ಯ 21 ಸಲ ಪಠಿಸಿದರೆ  ವಿಘ್ನನಿವಾರಣವಾಗಿ ಶೀಘ್ರ ಕಾರ್ಯಸಿದ್ಧಿಯಾಗುವುದು 
ಸುಮುಖಶ್ಚೈ ಕದಂತಶ್ಚ ಕಪಿಲೋ ಗಜ ಕರ್ಣಕಃ  |  ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ || ಧೂಮ್ರಕೇತುರ್ಗಣಾ ಧ್ಯಕ್ಷ್ಹೋ  ಭಾಲ ಚಂದ್ರೋ ಗಜಾನನಃ | ವಕ್ರತುಂಡಃ ಶೂರ್ಪ ಕರ್ಣೋ ಹೇರಂಬಃ ಸ್ಕಂದಪೂರ್ವಜಃ ||    
ಪಂಚಗವ್ಯ ಪ್ರಾಶನ ಮಂತ್ರ  
ಯತ್ವಗಸ್ಥಿಗತಂ ಪಾಪಂ ದೇಹೇ ತಿಷ್ಟತಿ ಮಾಮಕೇ | ಪ್ರಾಶನಂ ಪಂಚಗವ್ಯಸ್ಯ ದಹತ್ವಗ್ನಿರವೇಂಧನಂ ||       
ನಷ್ಟ ದ್ರವ್ಯ ಪ್ರಾಪ್ತಿಗಾಗಿ ಮಂತ್ರ 
ಮೂರು 3 ದುರ್ವೇ \ ಗರಿಕೆ ಗಳನ್ನು ಅಂಗೈಯಲ್ಲಿ ಹಿಡಿದುಕೊಂಡು ಶುದ್ಧ ಜಲದಿಂದ ಶುಕ್ಲ ಪಕ್ಷ ಅಥವಾ ಕೃಷ್ಣ ಪಕ್ಷದ ಚತುರ್ಥಿಯಿಂದ 45 ದಿವಸಗಳ ವರೆಗೆ ಪ್ರತಿದಿನ 442 ಸಲ ಈ ಮಂತ್ರದಿಂದ ತರ್ಪಣ ಮಾಡಬೇಕು ನಷ್ಟದ್ರವ್ಯವಾಗಲಿ ಅಥವಾ ಬೇರೆ ಕಡೆಗಿದ್ದ ದ್ರವ್ಯವೂ ಮರಳಿಬರುತ್ತದೆ.
“ ಶಂ ಶಂಖ ನಿಧಿಂ ತರ್ಪಯಾಮಿ “
ಕಾರ್ತ್ಯವಿರ್ಯಾಜುನೋ ನಾಮ ರಾಜಾಬಾಹು ಸಹಸ್ರವಾನ | ಯಸ್ಯಸ್ಮರಣ ಮಾತ್ರೆಣ  ನಷ್ಟ ವಸ್ತುಂಚ ಲಭ್ಯತೆ ||
ಶ್ರೀ ಸುಬ್ರಹ್ಮಣ್ಯ ಮಂತ್ರ 
ಜನ್ಮ ಕುಂಡಲಿಯಲ್ಲಿ ನಾಗ ದೋಷವಿದ್ದರೆ ಈ ಮಂತ್ರವನ್ನು  ಒಂದು ವರ್ಷದ ವರೆಗೆ ಪ್ರತಿದಿನದಲ್ಲಿ ಮೂರು ಸಲ ಪಠಿಸಬೇಕು
ಗಾಂಗೇಯಃ ಕಾರ್ತಿಕೇಯಶ್ಚ ಗುಹಃ ಸ್ಕಂದ ಉಮಾಸುತಃ | ದೇವಸೇನಾ ಪತಿಹ್ ಸ್ವಾಮಿ ಸೇನಾನಿಶ್ಚ ಶಿಖಧ್ವಜಃ || ಹರ ವೀರ್ಯಶ್ಚ ಮೇಧಾವಿ ವರೆಣ್ಯೋ ವರದಃ ಸುಖೀ |
ಕುಮಾರಃ ಶಕ್ತಿಧಾರಿ ಚ ತಸ್ಯ ನಾಮಾನಿ ಷೋಡಶ   || ಯಃ ಪಠೇನ್ ಮಾನವೋ ಭಕ್ತ್ಯಾ ಬಾಧಾ ತಸ್ಯ ನ ಜಾಯತೆ . 
ಷಣ್ಮುಖ ಸ್ವಾಮಿಯ ಉಪಾಸನೆ ಚರಿತ್ರ ಶ್ರವಣ ದಿಂದ ಸಂತತಿ ಪ್ರಾಪ್ತಿ   
ರಾಮಾಯಣದ ಬಾಲಕಾಂಡದಲ್ಲಿ ವಿಶ್ವಾಮಿತ್ರ ಋಷಿಯು ಯಜ್ಞದಲ್ಲಿ ವಿಘ್ನಮಾಡುವ ರಾಕ್ಷಸರನ್ನು ಧ್ವಂಸ ಮಾಡಲು ರಾಮ ಲಕ್ಷ್ಮಣರನ್ನು ಕರೆದುಕೊಂಡು ಬರುವಾಗ ಗಂಗಾ ತಟದಲ್ಲಿ ನಿವಾಸ ಮಾಡುತ್ತಾನೆ ಗಂಗೆಯ ಉತ್ಪತ್ತಿಯನ್ನು ಹೇಳುವಾಗ ಪ್ರಾಸಂಗಿಕವಾಗಿ ಸ್ಕಂದನ ಉತ್ಪತ್ತಿಯನ್ನು ಹೇಳುತ್ತಾನೆ ಕುಂಡಲಿಯಲ್ಲಿ ಸರ್ಪದೊಷವಿದ್ದರೆ ಹಾಗು ಬೇರೆ ಕಾರಣದಿಂದ ಸಂತತಿಯಾಗದಿದ್ದರೆ ಬಾಲಕಾಂಡದಲ್ಲಿಯ ಕಾರ್ತಿಕೇಯನ ಉತ್ಪತ್ತಿ ಸರ್ಗವನ್ನು ಪಠಿಸಿದರೆ ಸಂತತಿಯಾಗುವುದೆಂದು ಹೇಳಿದ್ದಾರೆ  ರಾಮಾಯಣದ ಬಾಲಕಾಂಡದಲ್ಲಿಯ 37 ಸರ್ಗವನ್ನು  ( ತಪ್ಯಮಾನೆ ತದಾದೇವೆ .......) 
ರಾಮಭದ್ರ ಮಹೇಶ್ವಾಸ ರಘುವೀರ ನ್ರುಪೋತ್ತಮ | ಭೋ  ದಶಾಸ್ಯಾಂತಕಾಸ್ಮಾಕಂ ರಕ್ಷಾಂ ದೇಹಿ ಶ್ರಿಯಂ ಚ ತೇ ||
ಈ ಶ್ಲೋಕವನ್ನು ಮೊದಲು ಹಾಗು ಕೊನೆಗೆ ಹೇಳಿ ಪ್ರತಿದಿನ ಒಂದು ಸಲದಂತೆ 48 ದಿನಗಳ ವರೆಗೆ ಪಾರಾಯಣ ಮಾಡಿದರೆ ಸಂತತಿಯಾಗುವುದು ಪಾರಾಯಣದ ನಂತರ ಷೋಡಶನಾಮಗಳಿರುವ ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಸಬೇಕು.   
ನರಕ ಚತುರ್ದಶಿ / ಅಮಾವಾಸ್ಯಾ ದಿನ ಕೊಳ್ಳಿಯಿಂದ ಪಿತೃಗಳಿಗೆ ದಾರಿ 
ತೋರಿಸಲು ಮಂತ್ರ  
ಈ ಎರಡು ಮಂತ್ರಗಳಿಂದ ಸೂರ್ಯಾಸ್ತದ ನಂತರ ಸಣ್ಣ ಕಟ್ಟಿಗೆಗೆ ( ಕೊಳ್ಳಿ ) ಉರಿ ಹಚ್ಚಿ ಹೊರಗೆ ಅಂಗಳದಲ್ಲಿ ಅದನ್ನು ಸ್ವಲ್ಪ ಮೇಲೆಕ್ಕೆ ತೂರಬೇಕು
ಅಗ್ನಿ ದಗ್ಧಾಶ್ಚಯೇ ಜೀವಾ ಯೇಪ್ಯ ದಗ್ಧಾಃ ಕುಲೇ ಮಮ | ಉಜ್ವಲ ಜ್ಯೋತಿಷಾ ದಗ್ಧಾಸ್ತೆ ಯಾಂತು ಪರಮಾಂಗತಿಂ || ಯಮಲೋಕಂ ಪರಿತ್ಯಜ್ಯ ಆಗತಾಯೇ ಮಹಾಲಯೇ | ಉಜ್ವಲ ಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವಜ್ರಂತುತೆ ||
ಯಮದೀಪ ದಾನ ಮಂತ್ರ : 
ಮೃತ್ಯುನಾಪಾಶದಂಡಾಭ್ಯಾಮ್ ಕಾಲೇನ ಶ್ಯಾಮಯಾ ಸಹ | ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರಿಯತಾಂ ಮಮ ||     
ನರಕಚತುರ್ದಶಿ ದಿವಸ ಯಮ ತರ್ಪಣ ( ಯಮ ಪ್ರೀತ್ಯರ್ಥವಾಗಿ .)   ತಂದೆ ಇದ್ದವರು ಸವ್ಯದಿಂದ ತಂದೆ ಇಲ್ಲದವರು ಅಪಸವ್ಯದಿಂದ ತಿಲಸಹಿತ ದಕ್ಷಿಣಕ್ಕೆ ಮುಖಮಾಡಿ ತರ್ಪಣ ಕೊಡಬೇಕು 
ಸಂಕಲ್ಪಃ :  ಮಮ ಸಕಲಾರಿಷ್ಠ ಪರಿಹಾರದ್ವಾರಾ ಶುಭಫಲ ಪ್ರಾಪ್ತ್ಯರ್ಥಂ ಅಕಾಲ ಕಾಲಪಾಶ ನಿವಾರ್ನಾರ್ಥಂ ನರಕಚತುರ್ದಶಿ ನಿಮಿತ್ತಂ ಯಮ ತರ್ಪನಂ ಕರಿಷ್ಯೇ || ಯಮಾಯ ನಮಃ  ಯಮಂ ತರ್ಪಯಾಮಿ | ಧರ್ಮ ರಾಜಾಯ ನಮಃ ಧರ್ಮರಾಜಂ ತರ್ಪಯಾಮಿ || ಮೃತ್ಯುವೇ ನಮಃ ಮೃತ್ಯುಂ ತರ್ಪಯಾಮಿ | ಅಂತಕಾಯ ನಮಃ  ಅಂತಕಂ ತರ್ಪಯಾಮಿ || ವೈವಸ್ವತಾಯ ನಮಃ ವೈವಸ್ವತಂ ತರ್ಪಯಾಮಿ | ಕಾಲಾಯ ನಮಃ ಕಾಲಂ ತರ್ಪಯಾಮಿ || ಸರ್ವ ಭೂತಕ್ಷಯಾಯ ನಮಃ  ಸರ್ವ ಭೂತ ಕ್ಷಯಮ್ ತರ್ಪಯಾಮಿ | ಔದುಂಬರಾಯ ನಮಃ  ಔದುಂಬರಮ್ ತರ್ಪಯಾಮಿ ||ದಧ್ನಾಯ ನಮ: ದಧ್ನಂ ತರ್ಪಯಾಮಿ  | ನೀಲಾಯ ನಮಃ ನೀಲಂ ತರ್ಪಯಾಮಿ ||ಪರಮೇಷ್ಟಿನೆ ನಮಃ ಪರಮೇಷ್ಟಿನಂ ತರ್ಪಯಾಮಿ | ವೃಕೊದರಾಯ ನಮಃ ವೃಕೊದರಂ ತರ್ಪಯಾಮಿ ||ಚಿತ್ರಾಯ ನಮಃ ಚಿತ್ರಂ ತರ್ಪಯಾಮಿ | ಚಿತ್ರ ಗುಪ್ತಾಯ ನಮಃ ಚಿತ್ರಗುಪ್ತಂ ತರ್ಪಯಾಮಿ ||
ಮನೆ ಬಿಟ್ಟುಹೋದ ಪತಿ ಮರಳಿ ಬರಲು ಮಂತ್ರ 
ಪ್ರತಿದಿನ 16 / 32 ಸಲ ಹೇಳಬೇಕು
ಲಲಾಟಂ ಲಾವಣ್ಯದ್ಯುತಿ ವಿಮಲ ಮಾಭಾತಿ ತವ ಯದ್ ದ್ವಿತೀಯಂ ತನ್ಮನ್ಯೇ ಮುಕುಟ ಘಟಿತಂ ಚಂದ್ರ ಶಕಲಂ | ವಿಪರ್ಯಾಸನ್ಯಾ ಪಾಡು ಭಯ ಮಪಿ ಸಂಭೂಯಚ ಮಿಥಃ ಸುಧಾಲೇಪಃ ಸ್ಯೂತಿಹ್ ಪರಿಣಮತಿ ರಾಕಾಹಿಮಕರಃ |
ಮನೋಧೈರ್ಯ ಪ್ರಾಪ್ತಿಗೆ ಮಂತ್ರ 
ಈ ಮಂತ್ರವನ್ನು ಪ್ರತಿದಿನ ಮಲಗುವಾಗ 10 ಸಲ ಅಂದು ಮಲಗಿದರೆ ಸ್ವಪ್ನ ಭಯವು ದೂರಾಗಿ ಮನೋಧೈರ್ಯ ಹೆಚ್ಚುವುದು ಅಂಗಾರವನ್ನು ಈ ಮಂತ್ರದಿಂದ ಅಭಿಮಂತ್ರಿಸಿ ಮಕ್ಕಳಿಗೆ ಹಚ್ಚಿದರೆ ಮಕ್ಕಳು ಸುಖವಾಗಿ ನಿದ್ರಿಸುವರು 
ಪಾಹಿ ಪಾಹಿ ಮಹಾದೇವ ಭಕ್ತವರ್ಗ ಪ್ರಪೋಷಕ  |  ಭಯಂ ದೂರಿ ಕುರುಷ್ವಾದ್ಯ ಧೈರ್ಯಂ ವರ್ಧಯ ಮಾನಸಂ || 
ವಿದ್ಯಾಪ್ರದ ಸರಸ್ವತಿ ಮಂತ್ರ 
ಪ್ರತಿದಿನ ಈ ಶ್ಲೋಕ ಪಠಿಸುವುದರಿಂದ ಬಾಲಕರಿಗೆ ವಿದ್ಯೆಯಲ್ಲಿ ಉತ್ಕರ್ಷವಾಗುತ್ತದೆ 
ದೋರ್ಭಿರ್ಯುಕ್ತಾ ಚತುರ್ಭಿಹ್ ಸ್ಫಟಿಕಮಣಿ ಮಯಿಮಕ್ಷಮಾಲಾಂ ದಧಾನಾ | ಹಸ್ತೇ ನೈಕೇನ ಪದ್ಮಂ ಚಿತಮಪಿ ಚ ಶುಕಂ ಪುಸ್ತಕಂ ಚಾಪರೇಣ | ಭಾಶಾ ಕುಂದೆಂದು ಶಂಖ ಸ್ಫಟಿಕ ಮಣಿ ನಿಭಾ | ಭಾಸಮಾನಾ ಸಮಾನಾ ಸಾ ಮೇ ವಾಗ್ದೇವತೇಯಂ |ನಿವಸತು ವದನೆ ಸರ್ವದಾ ಸಪ್ರಸನ್ನಾ || 
ಶ್ರೀ ಸರಸ್ವತಿ ಸ್ತೋತ್ರ
ಪ್ರತಿದಿನ ಈ ಸ್ತೋತ್ರವನ್ನು ಪಠಿಸಿದರೆ ಮಕ್ಕಳಿಗೆ ಮಾತು ಬರುವುದಲ್ಲದೆ ಚಾತುರ್ಯವೂ ಬರುತ್ತದೆ 
ಪ್ರಥಮಂ ಭಾರತಿ ನಾಮ ದ್ವಿತಿಯಂ ಚ ಸರಸ್ವತೀ | ತೃತಿಯಂ ಶಾರದಾದೇವಿ ಚತುರ್ಥಂ ಹಂಸಗಾಮಿನಿ ||
ಪಂಚಮಂ ಚ ಜಗನ್ಮಾತಾ ಷಷ್ಟಂ ಚೈವತು ಪಾರ್ವತಿ | ಸಪ್ತಮಂ ಕಾಳರಾತ್ರಿ ಚ ಅಷ್ಟಮಂ ಬ್ರಹ್ಮಚಾರಿಣಿ ||
ನವಮಂ ಚ ಮೃಗಾಕ್ಷಿ ಚ ದಶಮಂ ಬ್ರಹ್ಮ ಪುತ್ರಿಕಾ | ಏಕಾದಶಂತು ವಾಗ್ವಾಣಿ ದ್ವಾದಶಂ ವರದಾಂಬಿಕಾ ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | ತಸ್ಮೈ ಸರಸ್ವತಿ ಮಾತಾ ಷಣ್ಮಾಸಾತ್ ಸಿದ್ಧಿದಾ ಭವೇತ್ ||       
ಶುಕ್ಲಾಷ್ಟಮ್ಯಾಂ ಭೀಷ್ಮ ತರ್ಪಣಂ 
ತಂದೆ ಇದ್ದವರು ಸವ್ಯದಿಂದ  ತಂದೆ ಇಲ್ಲದವರು ಅಪಸವ್ಯದಿಂದ  ಜಲ ತರ್ಪಣವನ್ನು ತಿಲ ತರ್ಪಣವನ್ನು ಕೊಡಬೇಕು 
ಸಂಕಲ್ಪ : ದೇಶಕಾಲೌ ಸ್ಮ್ರುತ್ವಾ ಮ ಮ ಸಂವತ್ಸರೋಪಾತ್ತದುರಿತ ಕ್ಷಯಾರ್ಥ ಪುತ್ರ ಪೌತ್ರಾದ್ಯ  ನವಚ್ಚಿನ್ನ ಸಂತತಿ ಪ್ರಾಪ್ತ್ಯರ್ಥಂ ಚ ಮಾಘ ಶುಕ್ಲಾಷ್ಟಮ್ಯಾಂ ವಿಹಿತಂ ಭೀಷ್ಮ ತರ್ಪಣಂ ಕರಿಷ್ಯೇ 
ಭಿಷ್ಮಃ ಶಾಂತನವೋ ವೀರಃ ಸತ್ಯವಾದಿ ಜಿತೆಂದ್ರಿಯಃ ಆಭಿರದ್ಭಿರವಾಪ್ನೋತು ಪುತ್ರ ಪೌತ್ರೋ ಚಿತಾಂ ಕ್ರಿಯಾಂ || ವೈಯಾಘ್ರ ಪದ್ಯ ಗೋತ್ರಾಯ ಸಾಂ ಕೃತ್ಯ ಪ್ರವರಾಯಚ | ಗಂಗಾ ಪುತ್ರಾಯ ಭೀಷ್ಮಾಯ ಆ ಜನ್ಮ ಬ್ರಹ್ಮಚಾರಿಣೇ | ಅಪುತ್ರಾಯ ದದಾ ಮೇತ ಜ್ವಲಂ ಭೀಷ್ಮಾಯ ವರ್ಮಿಣೆ ||     
ಮತ್ತೆ ಆಚಮನ ಮಾಡಿ ಸವ್ಯದಿಂದ ಅರ್ಘ್ಯವನ್ನು ಕೊಡಬೇಕು 
ವಸೂನಾಮವತಾರಾಯ ಶಂತನೋರಾತ್ಮಜಾಯಚ  | ಅರ್ಘ್ಯಂ ದದಾಮಿ ಭೀಷ್ಮಾಯ ಆ ಬಾಲ್ಯ ಬ್ರಹ್ಮಚಾರಿಣೆ || ಬ್ರಹ್ಮ ಪುತ್ರ ಮಹಾಭಾಗ ಶಂತನೋ ಕುಲನಂದನಃ | ಅಮೊಘಾಗರ್ಭ ಸಂಭೂತ ಗೃಹಾಣಾರ್ಘ್ಯಂ ನಮೋಸ್ತುತೆ ||
ಭೀಷ್ಮಾ ಯ ನಮಃ ಭೀಷ್ಮಂ ತರ್ಪಯಾಮಿ              ಮತ್ತೆ ಆಚಮನ ಮಾಡಿ ಕರ್ಮವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಬೇಕು    
ದೇವಿ ಮಂತ್ರ 
ಯಾ ದೇವಿ ಮಧುಕೈಟಬಪ್ರಶಮನನೀ  ಯಾ ಮಾಹಿಷೋನ್ಮೂಲಿನನೀ  | ಯಾ ಧೂಮ್ರೇಕ್ಷಣ ಚಂಡ ಮುಂಡ ದಮನೀ ಯಾ ರಕ್ತ ಬೀಜಾಶಿನಿ  ||
ಯಾ ಶುಂಭಾದಿನೀ ಶುಂಭ ದೈತ್ಯ ಶಮನೀ ಯಾ ಸಿದ್ಧ ಲಕ್ಷ್ಮೀ ಸದಾ  | ಸಾ ಚಂಡೀ ನವಕೋಟಿ ಶಕ್ತಿ ಸಹಿತಾ ಮಾಂ ಪಾತು ವಿಶ್ವೇಶ್ವರೀ   ||      
ಅಷ್ಟ ವಿಂಶತಿನಾಮ ಚಂದ್ರ ಸ್ತೋತ್ರಂ
ಎಲ್ಲ ಕಾರ್ಯಗಳಿಗೆ ಚಂದ್ರ ಬಲ ಮುಖ್ಯ ಈ ಸ್ತೋತ್ರ ಪಠನದಿಂದ ಚಂದ್ರ ಬಲ ಸಂಪೂರ್ಣ ಬಂದು ಚಂದ್ರ ಪಿಡೆಯು ದೂರಾಗಿ ಎಲ್ಲ ಗ್ರಹಗಳ ಬಲವೂ ಬರುವುದು ಮತ್ತು ಇಷ್ಟ ಕಾರ್ಯವೂ ಸಿದ್ಧಿಯಾಗುವುದು 
ಚಂದ್ರಸ್ಯ ಶೃಣು ನಾಮಾನೀ ಶುಭದಾನಿ ಮಹೀಪತೇ | ಯಾನಿ ಶ್ರುತ್ವಾ ನರೋ ದುಃಖಾನ್ಮುಚ್ಯತೆ ನತ್ರ ಸಂಶಯಃ || 1 || ಸುಧಾಕರೋ ವಿಧು: ಸೋಮೋಗ್ಲೌರಬ್ಜಃ ಕುಮುದಪ್ರಿಯಃ | ಲೋಕಪ್ರಿಯಃ ಶುಭ್ರ ಭಾನುಶ್ಚಂದ್ರಮಾ ರೋಹಿಣಿಪತಿ || 2 || ಶಶೀ ಹಿಮಕರೋ ರಾಜಾ ದ್ವಿಜ ರಾಜೋ ನಿಶಾಕರಃ | ಆತ್ರೇಯ ಇಂದುಹ್ ಶೀತಾಂ ರೋಷಧೀಶಃ ಕಲಾನಿಧಿಹ್  || 3 || ಜೈವಾತೃಕೋ ರಾಮಾಭ್ರಾತಾ ಕ್ಷೀರೋದಾರ್ನರ್ಣವ ಸಂಭವ: ನಕ್ಷತ್ರನಾಯಕಃಶಂಭೂ ಶಿರಶ್ಚುಡಾಮಣಿರ್ವಿಧುಹ್ || 4 || ತಾಪಹರ್ತಾ ನಭೋ ದೀಪೋ ನಾಮಾನೈ ತಾನಿ ಯಃ ಪಠೇತ್ | ಪ್ರತ್ಯಹಂ ಭಕ್ತಿ ಸಂಯುಕ್ತ ಸ್ತಸ್ಯ ಪೀಡಾ ವಿನಶ್ಯತಿ || 5 || ತದ್ದಿನೇ ಚ ಪಠೇದ್ಯಸ್ತು ಲಭೆತ್ ಸರ್ವಂ ಸಮೀಹಿತಂ | ಗ್ರಹಾದೀ ನಾಂ ಚ ಸರ್ವೇಷಾಂ ಭವೇಚ್ಚಂದ್ರ ಬಲ ಸದಾ || 6 ||
ಇಚ್ಚಿತ ಕಾರ್ಯ ಸಿದ್ಧ್ಹಿ ಮಂತ್ರಃ     
ಷಡ್ ದೋಷಾ: ಪುರುಶೇಣೆಹ ಹಾತವ್ಯಾ ಭೂತಿಮಿಚ್ಚತಾ | ನಿದ್ರಾತಂದ್ರಾ ಭಯಂಕ್ರೋಧಃ ಆಲಸ್ಯಂ ದೀರ್ಘಸೂತ್ರತಾ ||
ಅಭಿವೃದ್ಧಿ ಬಯಸುವವರು ಗುರಿ ಮುಟ್ಟುವ ತನಕ ನಿದ್ರೆ ದಣಿವು ಹೆದರಿಕೆ ಸಿಟ್ಟು ಆಲಸ್ಯ ಅನಾವಶ್ಯಕ ವಿಸ್ತಾರ ಈ ಆರು ದೋಷಗಳನ್ನು ತ್ಯಜಿಸಬೇಕು     
ಮಲಾಪಹಾ ಮಹಾತ್ಮ್ಯ 
ಮಲಾಪಹಾ ಮಹಾತ್ಮ್ಯವು ಸ್ಕಂದ ಪುರಾಣದ ಪಶ್ಚಿಮ ಕಾಂಡದಲ್ಲಿರುವ ರೇಣುಕಾ ಮಹಾತ್ಮೆಯಲ್ಲಿದೆ 
ಮಲಾಪಹಾ ( ಮಲಪ್ರಭಾ ) ಇದು ಯುಧಿಷ್ಠಿರ ಮತ್ತು ಮಾರ್ಕಂಡೆಯರ ಸಂವಾದ ರೂಪದಲ್ಲಿದೆ  ರಾಮಗಿರಿ ಈಗಿನ ಯಲ್ಲಮ್ಮ ಗುಡ್ಡದ ಆಗ್ನೇಯ ಭಾಗದಲ್ಲಿ ಗೋಕವಿ( ಈಗಿನ ಗೋಕಾಕ ) ಎಂಬ ಋಷಿಯ ಆಶ್ರಮವಿತ್ತು. ಅದರ ಆಗ್ನೇಯಕ್ಕೆ ಕುಲೀಕನೆಂಬ ಋಷಿಯು ವಾಸವಾಗಿದ್ದನು. ಪ್ರತಿನಿತ್ಯಈಶ್ವರನನ್ನು ಆರಾಧಿಸುತ್ತಿದ್ದನು. ಅವನ ಭಕ್ತಿಗೆ ಮೆಚ್ಚಿ ಈಶ್ವರನು ಪ್ರತ್ಯಕ್ಷನಾಗಿದ್ದರಿಂದ ಆ ಊರಿಗೆ ಕುಲಕುಂಭಿ ಎಂಬ ಹೆಸರು ಬಂದಿತು  ಅಲ್ಲಿಯ ಒಂದು ಬಾವಿಯಲ್ಲಿ  ಈ ನದಿಯು ಹುಟ್ಟಿತು  ಹಿಂದೆ ಗೌಡದೇಶದಲ್ಲಿ ಸತ್ಯಮೇಧನೆಂಬ ಬ್ರಾಹ್ಮಣನಿಗೆ ಚಂದ್ರಾವತಿ ಎಂಬ ಹೆಂಡತಿ ಇದ್ದಳು  ಅವಳು ಪತಿವ್ರತೆಯಾಗಿ ಅತ್ಯಂತ ಶ್ರದ್ಧೆಯಿಂದ ಅಗ್ನಿಹೋತ್ರ ಸೇವೆ ಪತಿ ಸೇವೆ  ಅಂಧರಾದ ಅತ್ತೆ ಮಾವಂದಿರ ಸೇವೆಯನ್ನು ನಿಷ್ಕಾಮದಿಂದ ಮಾಡುತ್ತಿದ್ದಳು  ಅವಳ ಅದ್ಭುತ ಸೇವೆಗೆ ಮೆಚ್ಚಿದ ಅತ್ತೆ ಮಾವಂದಿರು ನೀನು ಎಲ್ಲರ ಪಾಪಗಳನ್ನು ನೀಗಿಸುವ ನದಿಯಾಗು ಎಂದು ವರ ಕೊಟ್ಟರು  ಅನಂತರ ಅಥಿತಿ ಸೇವೆಯಲ್ಲಿ ವ್ಯತ್ಯಾಸವಾದದ್ದಕ್ಕೆ ಋಷಿಗಳ ಶಾಪಕ್ಕೆ ಅನುಗುಣವಾಗಿ ಕುಲಿಕ ಋಷಿಯ ಮನೆಯಲ್ಲಿ 21 ವರ್ಷ ಸೇವಕಿಯಾಗಿದ್ದು ಶಾಪ ಮುಗಿದ ಮೇಲೆ ಕುಲಕಂಭಿಯಲ್ಲಿ ನದಿಯಾಗಿ ಹರಿದಳು  ಶ್ರೀ ರೇಣುಕಾದೇವಿಯು ಪ್ರತಿದಿನ ನೀರಿಗಾಗಿ ವಿಟೂಲಾಶ್ರಮಕ್ಕೆ ಬಂದು ಅಲ್ಲಿಯ ಮಲಾಪಹಾ ನದಿಯ ನೀರನ್ನು ಪತಿ ಜಮದಗ್ನಿ ಮುನಿಯ ಪೂಜೆಗೋಸ್ಕರ ಕೊಡುತ್ತಿದ್ದಳು  ಈ ಕಥೆಯಲ್ಲಿ ರೇಣುಕಾದೇವಿಯ ಉಲ್ಲೇಖವಿರುವುದರಿಂದ ಈ ಮಹತಿಯು ರೇಣುಕಾ ಮಹಾತ್ಮೆ ಎಂಬುದಾಗಿದೆ  
ಸಾರ್ಧ ಸಪ್ತವರ್ಶೀಯ ( ಸಾಡೆಸಾತಿ ) ಶನಿ ಪೀಡಾಪರಿಹಾರ ಸ್ತೋತ್ರಂ 
ಕೋಣಸ್ಥಃ ಪಿಂಗಲೋ ಬಭ್ರುಹ್ ಕೃಷ್ನೋ ರೌದ್ರೋತಂಕೋ ಯಮಃ | ಶೌರಿಹ್ ಶನೈಶ್ವರೋ ಮಂದಃ ಪಿಪ್ಪಲಾದೆನ ಸಂಸ್ತುತಃ || ಎತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ ಶನೈಶ್ಚರ ಕೃತಾ ಪೀಡಾ ಣ ಕದಾಚಿದ್ ಭವಿಷ್ಯತಿ ||  
ಪಿಪ್ಪಲಾದೌವಾಚ 
ನಮಸ್ತೆ ಕೋಣ ಸಂಸ್ಥಾಯ ಪಿಂಗಲಾಯ ನಮೋಸ್ತುತೆ | ನಮಸ್ತೆ ಬಭ್ರು ರೂಪಾಯ ಕೃಷ್ಣಾಯಚ ನಮೋಸ್ತುತೆ ||
ನಮಸ್ತೇ ರೌದ್ರದೇಹಾಯ ನಮಸ್ತೇ ಚ ಅಂತಕಾಯಚ | ನಮಸ್ತೇ ಯಮ ಸಂಜ್ಞ್ಯಾಯ ನಮಸ್ತೇ ಶೌರಯೇ ವಿಭೋ || ನಮಸ್ತೆ ಮಂದ ಸಂಜ್ಞಾಯ ಶನೈಶ್ಚರ ನಮೋಸ್ತುತೇ  | ಪ್ರಸಾದಃ ಕುರು ದೇವೇಶ ದೀನಶ್ಚ ಪ್ರಣತಸ್ಯ ಚ ||
ನರಸಿಂಹ ಜಯಂತಿ   
ದೇಶಕಾಲೌ ಸಂಕೀರ್ತ್ಯ ಸಹಕುಟುಂಬಸ್ಯ ಮಮ ದುಷ್ಟ ಗ್ರಹ ಸೂಚಿತ  ದುಷ್ಟ ಫಲ ನಿವಾರಣ ದ್ವಾರಾ ಆಯುರಾರೋಗ್ಯಾದಿ  ಶುಭ ಫಲ ಪ್ರಾಪ್ತ್ಯರ್ಥಂ ಶ್ರೀ ಲಕ್ಷ್ಮೀ ನರಸಿಂಹ ದೇವತಾ ಪ್ರಸಾದ ಸಿಧ್ಯರ್ಥಂ ಕುಲಾಚಾರ ಪ್ರಾಪ್ತ ಶ್ರೀ ನರಸಿಂಹ ಜಯಂತಿ  ವ್ರತಾಂಗತ್ವೇನ ಯಥಾ ಶಕ್ತಿ ಶ್ರೀ ಲಕ್ಷ್ಮೀ ನರಸಿಂಹ ಪುಜಾಂಕರಿಷ್ಯೇ  ಧ್ಯಾನಂ : ಶ್ರುತ್ವೇತ್ಥಂ ನಾರಸಿಂಹಂ ಭ್ರುಕುಟಿತ ವದನಂ ರಕ್ತ ನೇತ್ರಾ ಧರೋಷ್ಥಂ ತೆಜೋಭಿಹ್ ಪ್ರಜ್ವಲಂತಂ ಹುತವಹ ಸದೃಶಂ ದುರ್ನಿರೀಕ್ಷ್ಮಂ ಸುರಾದೈ : || ಭಿನ್ನೋಯೋನೋನ್ನ ಖಾಗ್ರೈರ್ಗಜ ಮದಗಣಿತೈರ್ದಾ ನವೇಂದ್ರೋ ಹಿರಣ್ಯಃ ಸೋಯಂ ನಃ ಪಾತು ನಿತ್ಯಂ ತ್ರಿಭುವನ ವಿಜಯೀ ಸಿಂಹ ರೂಪೇಣ  ವಿಷ್ಣುಹ್ || ತಪ್ತ ಹಾಟಕ ಕೇಶಾಂತ ಜಲತ್ಪಾವಕ ಲೋಚನ ವಜ್ರಾಧಿಕ ನಖ ಸ್ಪರ್ಶ ದಿವ್ಯ ಸಿಂಹ ನಮೋಸ್ತುತೇ ||
ಇತೀ ನಮಸ್ಕಾರಃ ಪೂಜಾ ಫಲ ಸಿಧ್ಯರ್ಥಂ ಯಥಾ ಶಕ್ತಿ ಬ್ರಾಹ್ಮಣ ಪೂಜಾಂ ಕರಿಷ್ಯೇ     

                                              .....ಮುಂದುವರಿಯುವುದು 

 


No comments:

Post a Comment