ಹರಿಃ ಓಂ
ಮಮ ಚಕ್ರಾಂಕಿತಂ ದೇಹಂ ಪವಿತ್ರ ಮಿತಿ ವೈ ಶೃತಿಹ್ |
ಚಕ್ರಾಂಕಿತಾಯ ದಾತವ್ಯಂ ಹವ್ಯಂ ಕವ್ಯಂ ವಿಚಕ್ಷಣೈಃ ||
ಶಂಖ ಚಕ್ರಾಂಕಿತಂ ಕುರ್ಯಾತ್ ಆತ್ಮನೋ ಬಾಹುಮುಳಯೋಹ್ |
ಕಳಗಾಪತ್ಯ ಭೃತ್ಯೇಷು ಪಶ್ವಾದಿಷು ವಿಮುಕ್ತಯೇ ||
ಎಂಬ ವಶಿಷ್ಟ ಸ್ಮೃತಿಯ ಉಕ್ತಿಯಂತೆ ದೇಹ ಶುದ್ಧಿ ಅಂತಃ ಕರಣ ಶುದ್ಧಿಗಾಗಿ ಹಾಗು ನಾವು ಮಾಡಿದ ಪಾಪನಾಶಕ್ಕಾಗಿ ಆಷಾಢ ಕಾರ್ತೀಕ ಏಕಾದಶಿಗಳಂದು ಶ್ರೇಷ್ಠ ಯತಿವರ್ಯರಿಂದ, ಇಲ್ಲವೇ ವಿದ್ಯಾ ಗುರುಗಳಿಂದ, ಆಗದೆ ಇದ್ದರೆ ತಂದೆಯಿಂದ, ಅದು ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ತಂದೆಗೆ ಸಮನಾದ ಅಣ್ಣನಿಂದ ಸುದರ್ಶನ ಹೋಮ ಮಾಡಿ ಹವಿಸ್ಸು ಪೂ ಕರ್ಣಾಹುತಿಗಳ ನಂತರ ಎದೆಯ ಮೇಲೆ, ಬಾಹು ಮೂಲಗಳಲ್ಲಿ ವೈಷ್ಣವ ಚಿಹ್ನೆಗಳಾದ ತಪ್ತವಾದ ಚಕ್ರ ಶಂಖಗಳ ಮುದ್ರಾಧಾರಣೆ ಯನ್ನು ಮಾಡಿಸಿಕೊಳ್ಳಬೇಕು.
ಶ್ರೀ ಕೃಷ್ಣಾರ್ಪಣಮಸ್ತು
No comments:
Post a Comment