Saturday, August 06, 2022

BUDHA BRUHASPATI ಬುಧ ಬೃಹಸ್ಪತಿ ಹಾಡು / ಸ್ತೋತ್ರ

    ಬುಧ ಬೃಹಸ್ಪತಿ ಹಾಡು ಮತ್ತು ಸ್ತೋತ್ರ

             ( ಹರಪನಹಳ್ಳಿ ಭೀಮವ್ವ ವಿರಚಿತ )

ಕರಿಮುಖಗಣಪತಿಯ ಚರಣಕೊವಂದನೆ ಮಾಡಿ | 

ಶಾರದೆಗೆ ಶಿರಬಾಗಿ ಬೇಡಿಕೊಂಬುವೆ ನಾನು | 

ಒಲಿದೆನಗೆ ವರವ ಕೊಡು ಎನುತ || ೧ ||          

ಅಜಭವ ನಾರದ ಸುಜನರೊಂದಿತ ದೇವ | 

ಮುದದಿ ಮುದ್ದು ಮಹಾಲಕ್ಷ್ಮೀ ನಾರಾಯಣ | 

ಭುಜಪಾದಕೆರಗಿ  ನಮೋ ಎಂಬೆ  || ೨ ||

ಇರುತಿರೆ ಬಡಬ್ರಾಹ್ಮಣನೊಂದು ಪಟ್ಟಣದಿ | 

ಮಡದಿ ಮಕ್ಕಳು ನಾಲ್ಕು ಮಂದಿ ಸುತರು

ಸಖಿಯರಡಗೊಂಡು ಸುಖದಿಂದ  || ೩ ||

ಒಬ್ಬೊಬ್ಬ ಸುತಗೆ ಇಬ್ಬಿಬ್ಬರು ಸುತರು |

ವಿದ್ಯುಕ್ತದಿಂದ  ಚಂಡಿಕುಪನಯನ |

ಶುದ್ಧಾತ್ಮರಾಗಿ ಇರುತಿಹರು     ||೪ ||

ಪ್ರಾತಃ ಕಾಲದಲೆದ್ದು ನಾಲ್ಕು ಮಂದಿ ಸುತರು |

ಗೋಪಾಲ ಜೋಳ ನಾಲ್ಕು ಸೇರು ಕಾಳು |

ತಂದ್ಹಾಕುವರು ಅರ್ಧ ಗ್ರಾಸವನು    || ೫ ||  

ಮೂರು ಪಾವು ಹಿಟ್ಟಮುಂಜಾನೆ  ಅಟ್ಟಿಟ್ಟು  | 

ಮುಂದುಳಿದ ಗ್ರಾಸದಲಿ ಬುತ್ತಿ ಅಂಬಲಿ ಕಾಸಿ | 

ಕೊಂಡು ಕಾಲವ  ಕಳೆಯುತಿಹರು || ೬ || 

ಒಂದಾನೊಂದು ದಿನದಿ ಬಂದರಿಬ್ಬರು ದ್ವಿಜರು | 

ಮಂದಿರದ ಎದುರಲ್ಲಿ  ನಿಂತು  ಕೂಗುತಿಲಿಹರು | 

ಬಂದಳೊಬ್ಬಳು ಹಿರಿಯ ಸೊಸೆ ತಾನು || ೭ || 

ಆರು ಬಂದವರು ನಾಮ ಅರುಹಿರಿ ಎಂದು | 

ಬಾಗಿ ಶಿರವನು ಚರಣಕೊಂದನೆ ಮಾಡಿ 

ಬಹು  ಭಕ್ತಿಯಲಿ ಕರೆದಳು || ೮ || 

ದಾರಾದರೇನಮ್ಮ ಬಾಯಾರಿ ಬಳಲಿದೆವು | 

ಮೂರುಪವಾಸ  ಮಾಡಿ ಬಂದೆವು ನಮಗೆ | 

ಆಹಾರವ ಕಟ್ಟಿ  ಕಳಿಸೆಂದರು || ೯ || 

ಭಿಕ್ಷೆಗೆ ಹೋದವರು ಈ ಕ್ಷಣ ಬಂದವರು | 

ಅರೆಕ್ಷಣ ನೀವು ತಡೆದರೆ ಜೀಳದ ರೊಟ್ಟಿ | 

ಭಿಕ್ಷವನು ಮಾಡಿ ಬಡಿಸುವೆನು || ೧೦ || 

ಹೊತ್ತು ಬಹಳಾಯಿತು ಹಸಿದ ನಮ್ಮ ಹೊಟ್ಟೆಗೆ | 

ತುತ್ತನ್ನ ಕೊಟ್ಟರೆ ಅದನುಂಡು ನಾವೀಗ | 

ತೃಪ್ತರಾಗಿ ಹರಸಿ  ನಡೆದೇವು || ೧೧ || 

ಮಡಿಉಟ್ಟು ಮಾಡಿದಳು ಮುಂಜಿಮಣಿಗಳಿಗಡಿಗೆ | 

ತಡೆಯದೇ ನೀವು ಸ್ನಾನನ ಮಾಡಿ ಬನ್ನಿರೆಂದು  | 

ಧೃಢ ಭಕ್ತಿಯಿಂದಲೇ  ಕರೆದು ತಾನೇ  || ೧೨ || 

ಸ್ನಾನ ಸಂಧ್ಯವ  ಮಾಡಿ ಬಂದೆವು ಎನಕ್ಕ  | 

ತಾನು ಎಡೆಮಾಡಿ ಎರಡು ಬಕ್ಕರಿಯ 

ನೀಡಿದಳು ಬಹು ಹರುಷದಿ || ೧೩ || 

ಬೆಲ್ಲ ಬೆಣ್ಣೆಯು ತುಪ್ಪ ಕರಕರುಣಿ ಕೆನೆಮಸರು | 

ನುಣ್ಣನೆ ತೊವ್ವೆಯನು ಅರೆದ ಕೊಬ್ಬರಿ ಕಾರ | 

ಉಣಿರೆಂದು  ಹಾಕುತಿಹಳು || ೧೪ || 

ಸಡಗರದಿ ತಕ್ಕೊಂಡು ಕುಡಿದು ಮೆಲ್ ಮಜ್ಜಿಗೆಯ  | 

ಒಡೆದಡಿಕೆ ವಿಳ್ಯವನೇ ಕೊಟ್ಟಳಾವಳು  ಅಮ್ಮ  | 

ನಡೆವರ  ಹೆಸರನ್ನೇ  ಹೇಳಬೇಕೆಂದೂ ||೧೫ || 

ಇಂದುಸುತ, ಸುರಗುರುವು ಎಂತು ಪೇಳುವರೆಮಗೆ |

ಬಂದಿಹೆವು ನಾವು ಬುಧ  ಬೃಹ್ಸಪತಿಗಳು | 

ಆನಂದವಾಯಿತು ನಮಗಿಂದ  || ೧೬ || 

ಅನ್ನ ಬೇಕಾದರೆ ಅಡುಗೆ ಒಲೆಗೆಡೆ ಇಡುವೇ  | 

ನಮ್ಮಚಿತ್ರವ  ಬರೆದು ಪೂಜೆ ಮಾಡಿದರೆ 

ಅನ್ನವನು  ನಾವು ಕಡುವೆವು || ೧೭ || 

ಭಾಗ್ಯ  ಬೇಕಾದರೆ ಬರೆದು  ಪೆಟ್ಟಿಗೆಯಲಿ | 

ಬಹು ಭಕ್ತಿಯಿಂದಲೇ  ಪೂಜೆ ಮಾಡಿರೆ ಭಾಗ್ಯ | 

ಕೊಡುವೆವು ಎಂಧ್ಹೇಳಿ ನಡೆದರಾಗ || ೧೮ || 

ಸುಣ್ಣ ಸಾರಣ ಮಾಡಿ ಬಣ್ಣ ಚಿತ್ರವ ಬರೆದು | 

ಚೆನ್ನಾಗಿ ಬರೆದ ಬುಧ ಬೃಹಸ್ಪತಿಗಳ | 

ಮಾನಸ ಪೂಜೆ ಮಾಡುತಿರ್ದ್ದರು || ೧೯ || 

ಎಂಟು ಬತ್ತಿ  ದೀಪ ಗಂಧ್ಯಕ್ಷತೆಯು ಫಲ ಪುಷ್ಪ  | 

ಉತ್ತರಾಣಿ ಅಕ್ಷತೇ  ಮಂತ್ರಾಕ್ಷತೆ ಮಾಡಿ | 

ಭಕ್ತಿಯಲಿ ಪೂಜೆಯನು ಮಾಡಿದರು || ೨೦ || 

ಗೋಪಾಳಕೋದಲ್ಲಿ ಗೋಧಿ ಬೇಳೆ ಅಕ್ಕಿ  | 

ಹಾಕುವರು ತಂದು ನಾಲ್ಕಾರು ಬೀದಿಯಲಿ | 

ತಾವು ಗಂಟವ ಹೊತ್ತರು ಹೆಗಲಲ್ಲಿ  || ೨೧ || 

ಹಿಡಿ ಜೋಳ ಬೇಡಿದರೆ ಪಡಿಜೋ ಹಾಕುವರು | 

ಬಡವರು ನೀವು ತಾನೆ ಬನ್ನಿರೆಂದೇ  ಕರೆದು  | 

ಹಿಡಿ ಹಿಡಿ ರೊಕ್ಕವ  ಕೊಡುವರು || ೨೨ || 

ಭರದಿಂದ ಬಂದಾಗ ಸುರುವಿದರು ಧಾನ್ಯವನು | 

ಬರೆದಂಥ ಗೊಂಬೆಯನು ಕೇಳಿದರು ವರವ  | 

ವಿವರವನು ಪೇಳಿರೆಂದು ಅರಿಹಿದರು  || ೨೩ || 

ಇವರು ಬುಧ –ಬೃಹ್ಸಪತಿ ಎಂಬ ದೇವತೆಗಳು | 

ಇವರು ಬಂದೆಮ್ಮ ಮನೆಯ ಊಟನ್ನುಂಡು | 

ಒಲಿದು ವರವನ್ನಕೊಟ್ಟು ನಡೆದರು || ೨೪ || 

ಬಹುಅನ್ನವ ಮಾಡಿ ಜೋಳದ ಭಕ್ಕರೀ ಮಾಡಿ | 

ಬೇಳೆಯ ತೊವೆ ಬೆಲ್ಲ ಜೀವದೊಲುಮೆ  ತುಪ್ಪ  | 

ಎಲ್ಲೆಲ್ಲ ನೈವೇದ್ಯಕೆ ಇಡಿರೆಂದ || ೨೫ || 

ದಿನದಿನಕೆ ಧನವದು ಘನವಾಗಿ ಬರುತಿದ್ದು  | 

ಮನೆಯಲಿ ಸುಖವು ಸೌಖ್ಯ ಮನ ಬಂದ ಕ್ಷೇತ್ರಕ್ಕೆ   | 

ನೀಡಿ ಬರುವೆವು ಎಂದರು || ೨೬ || 

ಅರೆಹೊಟ್ಟೆ ದಾರಿದ್ರ್ಯ ಹಿಂದಾಯಿತೆಂದರಿದು  | 

ಸರ್ವ  ರಾಜ್ಯವ ನೋಡಿ ಬರುವೆ ಎಂದು  | 

ಹೊರಟೊಬ್ಬ ಹಿರಿಯ ಮಗ ತಾನೇ  || ೨೭ || 

ಚಂದ್ರಾವತಿಯಲಿ ಚಂದ್ರಶೇಖರ  ರಾಜ | 

ಅಂದು ಸ್ವರ್ಗಸ್ಥನಾಗಿರಲು  ರಾಜ್ಯಕ್ಕೆ  ||  

ಮುಂದೊಬ್ಬ ಅರಸನು ಬರುವ ಎಂದ  || ೨೮ || 

ಆನೆಯ ಕರದಲಿ ವನಮಾಲೆಯ ಕೊಟ್ಟು | 

ತಾನು ಓಡುತ ಹೀಗೆ ಆ ದ್ವಿಜನ ಕೊರಳಲಿ | 

ಹಾಕಿತ್ತು  ಬಹಳ  ಕ್ಷಿಪ್ರದಲಿ || ೨೯ || 

ಬಡವ ಬಾಹ್ಮಣ ಇಂಥ ಪೊಡವಿಪಾಲಕತನವ | 

ಕೊಡಲಾಗದಕೆ  ನಡೆ ನಡೆಎಂದ  | 

ದೂಡಿದರು ಊರ ಹೊರಗಾಗ  || ೩೦ || 

ಮತ್ತೊಮ್ಮೆ ಮಾಲೆಯ ಕೊಟ್ಟುರೋಡುತ  ದ್ವಿಜನ  | 

ಕುತ್ತಿಗೆಯಲಿ ಹಾಕಿ ತನ್ನ ಸೊಂಡೆಯಿಂದ | 

ಎತ್ತಿಕೊಂಡೊಯ್ತು  ಆ ಗಜವು || ೩೧ || 

ಲಕ್ಷ್ಮೀ ಒಲಿದವರಿಗೆ ಅಲಕ್ಷ ಮಾಡುವದೇನು | 

ಸಾಕ್ಷಾತ ದೊರೆಯು ಈತನು ಹೇಳುತ | 

ಕಟ್ಟಿದರು ಪಟ್ಟವನು ಬೇಗ || ೩೨ || 

ಮತ್ತವರ ಮನೆಗೆ ಬಂದರು ಬುಧ_ಬೃಹ್ಸಪತಿಗಳು | 

ಸ್ವಸ್ಥವೆ ಕ್ಷೇಮವೇ ಎಂಬಂತೆ ವಾರ್ತೆಯನು | 

ಕೇಳಿದರು ಕರುಣಯೊಂದಿಗೆ  || ೩೩ || 

ಬಂದೀರಿ ದಯಮಾಡಿ ಉಂಡು ಹೋಗಿ ಎನುತ | 

ಮಂಡಿಗೆ ಫೇಣ ಮಾಡುದಕೆ ಮರಗೋಧಿ | 

ತಂದಳು ಸಕಲ ಸಾಹಿತ್ಯ  || ೩೪ || 

ನಮಗೇನು ಬೇಡಮ್ಮ ನೌಲಿ ಪಾಕದ ಭಕ್ಷು | 

ನವನೀತ ಶಾಕ ಶಂಕರಗಂಡನ ಅಡಿಗೆ | 

ಸವಿಯಾಗಿ ಮಾಡಿ ಬಡಿಸೆಂದರು || ೩೫ || 

ಜೋಡಿಸಿ ಮಣೆಹಾಕಿ ಜ್ಯೋತಿಗಳ ತಂದಿಟ್ಟು  | 

ಕೂಡಿಸಿದಳಾಗ ಕುಡಿ ಬಾಳೆ ಎಲೆ ಹಾಕಿ    | 

ಮಾಡಿದಡಿಗೆಯ ಬಡಿಸೆ ಭಕ್ತಿಯಲಿ || ೩೬ || 

ಉಂಡು ಕೈ ತೊಳೆದು ವೀ ಳ್ಯವ ತಕ್ಕೊಂಡು | 

ಸಂಭ್ರ ಮದಿ ಸಾಮ್ರಾಜ್ಯವನಾಳಿರೆಂದು  | 

ಒಲಿದು ವರವ ಕಟ್ಟು ನಡೆದರು || ೩೭ || 

ಒಂದು  ದಿನ ಮಕ್ಕಳು ಬಂದ ಕೋಪದಿ ಬರೆದ | 

ಗೊಂಬೆಯನು ಅಳಿಸಿ ಅಡಿಗೆಯನು | 

ಎಳೆತಂದ ಉಂಡು ನೈವೇದ್ಯ ಇಡದೆ  || ೩೮ || 

ಅೊಂದಿನೊಂದಲಿ ಬಂದಿತುದರಿದ್ರತೆ  | 

ಒಂದು ಸೆರೆ ಕಾಳು ಹುಟ್ಟದಂತಾಗಿ  | 

ಮುಂದೇನು ಎಮಗೆ ಗತಿಯೊಂದರು || ೩೯ || 

ಊರು ಬಿಟ್ಟು ಪರ ಊರಿಗೆ ಹೋದಲ್ಲಿ  | 

ಆರು ತಿಳಿಯುವರು ನಮ್ಮನ್ನು ಕಟ್ಟಿಗೆ | 

ಮಾರಿ ಕಾಲವನು ಕಳೆಯೋಣ || ೪೦ || 

ಊರೂರು ತಿರುಗುತಲಿ ಮೀರಿತಹ್ನೆರಡ್ವರುಷ | 

ಮಾರುತಲಿ ಹೋಗಿ ಮಗನು ದೊರೆಯಾದಂಥ |  

ಶಹರಕ್ಕೆ ಹೋಗಿ ಸೇರಿದರು || ೪೧ || 

ಗುಡ್ಡ ಗುಡ್ಡವ ತಿರುಗಿ ದೊಡ್ಡ ಹೊರೆಗಳ ಹೊತ್ತು  | 

ದಡ್ಡಿ ಬಿದ್ದವು ನಮ್ಮ ಉದರಕ್ಕೆ  | 

ದುಡ್ಡುಗಳು ದೊರೆಯುವವು ಎಂದೆನುತ || ೪೨ || 

ಅರಸಿನ ಮನೆಯಲಿ ಅರೆಸುತಿದ್ದರು ಗಚ್ಚ | 

ಭರಿಸಿ ಕಟ್ಟಿಗೆಯ ದಣಿಯಲಾರದೆ ಗಚ್ಚಿ | 

ಅರೆಯುವ ಕೆಲಸಕ್ಕೆ ಹೊಂದಿದರು || ೪೩ || 

ಒಂದು ದಿನ ಆ ರಾಜ ಬಂದ ಬಾಜಾರಕೆ | 

ತಾಯಿ ತಂದೆ ಅಣೆ ತಮ್ಮಂದಿರ ಹೊಂದಿ | 

ಸತಿ ಸುತರ ನೀಡಿ ಹರುಷದಲಿ || ೪೪ || 

ದೊರೆ ತಾನು ತಮ್ಮವರ ಗುರುತು ತಿಳಿದಕ್ಷಣದಿ | 

ಅರಿತುಕೋ ಇವರ ವರ್ತಮಾನಒಂದ 

ಕಳಿಸಿದನು ಮಂತ್ರಿಯನು ಬೇಗ || ೪೫ || 

ಆವ ದೇಶವು ನಾಮ ನಾಮವೆಂದೆನೆನಲು  | 

ಹೇಳಿದರು ತಮ್ಮ ಸಕಲ ವೃತ್ತಾಂತವನು | 

ಕೇಳಿ ಸಂತಾಪದಿಂದಾಗಿ || ೪೬ || 

ಹಿರಿಮಗನು ದೊರೆಯಾಗಿ ಇರುವ ಈ ಊರಲಿಲ್ಲ  | 

ಪರಮ ಪುಣ್ಯ ಭಾಗ್ಯಶಾಲಿಗಳು ಎಂದ  | 

ಅರುಹಿದನು ಅವರಿಗೆ ವಾರ್ತೆಯನು || ೪೭ || 

ಮಗನ ವಾರ್ತೆಯ ಕೇಳಿ ಮನದಲಿ ಹಿಗ್ಗಿ  | 

ಜನನ ಜನಕ ತಮ್ಮಂದಿರ ಹೊಂದಿರು ತನ್ನ  | 

ಸತಿ ಸುತರು ಕೇಳಿ ಹರುಷದಲಿ || ೪೮ || 

ಬಹಳಷ್ಟು ಮಂದಿಗೆ ಬಲ್ಲ ಸಿದ್ಧಾಂತಿಗಳ  |

ಕೇಳಿದನು ಕರೆಸಿ ಮೀರಿತು ಹನ್ನೆರಡು ವರುಷ | 

ಮಾರಿ ಭೆಟ್ಟಿಯಾಗಲು  ಹೇಗೆ || ೪೯ || 

ಕೊಪ್ಪರಿಗೆ ತೈಲವನು ತುಂಬಿತ್ತು ದೇಗುಲದಿ  | 

ಸುತನ ನೆಂತು ನಾನು  ಮುಖವ ನೀಡಿದರೆ  |

ಅದಕೆ ಮತ್ತೆನಿನ್ನ ಯಾವ ದೋಷವು ಇಲ್ಲ || ೫೦ || 

ಊರು ಶಿಂಗರಿಸಿ ಬೀದಿ ತೋರಣ ಕಟ್ಟಿ  | 

ಸ್ನಧು ಶೃಂಗಾರ  ಪರಿಮಳದ ಥಳಿಯನು ಕಟ್ಟಿ  

ಭೇರಿ ನಗಾರಿ ಹೊಡೆಯಿಸುತಲಿ || ೫೧ || 

ತೇಜಿ ಗಜಪಲ್ಲಕ್ಕಿ  ಕಾಜಿನಂದದಿ ರಥವು |

 ಬಾಜಾರದೊಳಗೆ ಬಾಜ ಭಜಂತ್ರಿಯ  | 

ಊದುವ ಕಾಳಿ ಕಡಿಮೆಯಿಲ್ಲ  || ೫೨ || 

ಎರಿಸಿ ಎಲ್ಲರಿಗೆ ವಸ್ತ್ರವ ಉಡಿಸಿ ದಿವ್ಯಾಂಬರವ | 

ಕಳಿಸಿದನು ಮುತ್ತು ಮಾಣಿಕುದ್ಧಭರಣ 

ಇಡಿಸಿ ಹೂಮಾಲೆ ಮುಡಿಸುತಲಿ || ೫೩ || 

ಹಿಡಿಮುಡಿ ಹಾಸುತಲಿ ಹಿಡಿದರು ಛತ್ತರಿಗೆ | 

ಹಿಡಿ ಹಿಡಿ ಕೊಡುತ ಹಣ್ಣು ಬ್ರಾಹ್ಮಣರಿಗೆಲ್ಲ | 

ಸಡಗರದಿ ನಡೆದ ಗುಡಿಗೆ ಆಗ || ೫೪ ||

ಎಣ್ಣೆಯಳು ಬಗ್ಗಿ ಎಲ್ಲರೂ ಮುಖ ನೋಡಿ | 

ಅಣ್ಣ ತಮ್ಮಂದಿರು ಹೆಂಡಿರು ತನ ಸುತರು | 

ಮನ್ನಿಸಿದ ತಾಯಿ ತಂದೆಗಳ || ೫೫ || 

ತುಪ್ಪದ ದೀವಿಗೆಯೂ ಕರ್ಪುರದಾರತಿಯು | 

ದ್ರಾಕ್ಷ ಖಜ್ಜುರಿ  ಕದಳಿ ನಾರಿಕೇಳದ  ಫಲವು  | 

ಸಮರ್ಪಣೆಯ  ಮಾಡಿದರು ಹರಿಗಾಗ  || ೫೬ || 

ಗಂಧ ಕುಂಕುಮ ಕುಸುಮ ಅರಿಷಿಣವು | 

ಬಂದ ಮುತೈದೆಯರ ಉಡಿಯ ತುಂಬುತಲಿ | 

ಆನಂದದಿಂದ ಅಕ್ಕ  ತಂಗಿಯರು || ೫೭ || 

ಖೀರು ಮಂಡಿಗೆ ಫೇಣ ಕ್ಷೀರ  ಘೃತ ಸಕ್ಕರೆಯು | 

ಸಾರು ಶಾಲನ್ನ ಶಾಕ ಪಾಕಗಳಿಂದ | 

ಊರ ಜನರ ಉಣಿಸಿದರು || ೫೮ || 

ದಕ್ಷಿಣೆ ತಾಂಬೂಲ ತಕ್ಕೊಂಡು ಕೊಂಡಾಡಿ  | 

ಲಕ್ಷಾಧಿಕಾರಿ ನೀನಾಗು ಎಂದು ಜನರೆಲ್ಲ  | 

ಮಂತ್ರಾಕ್ಷತೆಯ ಹಾಕಿ ಹರಸಿದರು  || ೫೯ || 

ಬಣ್ಣ ಚಾವಡಿ ಚಿತ್ತ ಚಿನ್ನದ ಚೌಕಟ್ಟ | 

ಕನ್ನಡಿ ಮಹಾಲ್ ಕನಕ ಕಂಬದ ಮನೆಯು | 

ತಮ್ಮವರ ಕೂಡಿ ಹೊಕ್ಕನರಮನೆಯ || ೬೦ || 

ತುಂಟ ಮಕ್ಕಳು ತನ್ನ ನೆಂಟರಿಷ್ಟರು ಕೂಡಿ | 

ಕಂಠಾಭರಣ ಕಟ್ಟಸಿದ ಮಾಂಗಲ್ಯಸೂತ್ರ  | 

ಸಂತೋಷದಿ ಮಾಡಿದರು ಮದುವೆಯನು || ೬೧ || 

ಮದಲ ಶ್ರಾವಣ ಮಾಸ ಬುಧವಾರ ದಿನದಲಿ | 

ಬುಧ-ಬೃಹ್ಸಪತಿಯ ಕಥೆಯ ಪೇಳುವೆ ನಾನು | 

ಮುದದಿಂದ  ಕೇಳಿ ಜನರೆಲ್ಲ  || ೬೨ || 

ನೇಮದಿಂದಲಿ ಈ ಕಥೆಯ ಹೇಳಿ ಕೇಳಿದ ಜನರ | 

ಭೀಮೇಶ ಕೃಷ್ಣನು ಉದ್ಧಾರ ಮಾಡಿ | 

ಕಾಮಿತ ಫಲವನ್ನೇ  ಕೊಡುವನು || ೬೩ ||

ಇತಿ ಹರಪನಹಳ್ಳಿ ಭೀಮವ್ವ ವಿರಚಿತ  ಬುಧ ಬೃಹಸ್ಪತಿ ಹಾಡು ಮುಕ್ತಾಯ 

ಶ್ರೀ ಬುಧ ಬೃಹಸ್ಪತಿ ಸ್ತೋತ್ರಂ

ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ

ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ |

ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ‖ 1 ‖

ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ

ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಢರಮ್ |

ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ

ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ‖ 2 ‖

ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಂ

ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್ |

ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ

ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ‖ 3 ‖

ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ

ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್ |

ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಂ

ಕಪೋಲ ದಾನವಾರಣಂ ಭಜೇ ಪುರಾಣ ವಾರಣಮ್ ‖ 4 ‖

ನಿತಾಂತ ಕಾಂತಿ ದಂತ ಕಾಂತಿ ಮಂತ ಕಾಂತಿ ಕಾತ್ಮಜಮ್

ಅಚಿಂತ್ಯ ರೂಪಮಂತ ಹೀನ ಮಂತರಾಯ ಕೃಂತನಮ್ |

ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ

ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ‖ 5 ‖

ಮಹಾಗಣೇಶ ಪಂಚರತ್ನಮಾದರೇಣ ಯೋಽನ್ವಹಂ

ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ |

ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ

ಸಮಾಹಿತಾಯು ರಷ್ಟಭೂತಿ ಮಭ್ಯುಪೈತಿ ಸೋಽಚಿರಾತ್ ‖6||

ಶ್ರೀ ಕೃಷ್ಣಾರ್ಪಣಮಸ್ತು  

श्री बुध बृहस्पति स्तोत्रं

मुदा करात्त मोदकं सदा विमुक्ति साधकं

कळाधरावतंसकं विलासिलोक रक्षकम् |

अनायकैक नायकं विनाशितेभ दैत्यकं

नताशुभाशु नाशकं नमामि तं विनायकम् ‖ 1 ‖

नतेतराति भीकरं नवोदितार्क भास्वरं

नमत्सुरारि निर्जरं नताधिकापदुद्ढरम् |

सुरेश्वरं निधीश्वरं गजेश्वरं गणेश्वरं

महेश्वरं तमाश्रये परात्परं निरंतरम् ‖ 2 ‖

समस्त लोक शंकरं निरस्त दैत्य कुंजरं

दरेतरोदरं वरं वरेभ वक्त्रमक्षरम् |

कृपाकरं क्षमाकरं मुदाकरं यशस्करं

मनस्करं नमस्कृतां नमस्करोमि भास्वरम् ‖ 3 ‖

अकिंचनार्ति मार्जनं चिरंतनोक्ति भाजनं

पुरारि पूर्व नंदनं सुरारि गर्व चर्वणम् |

प्रपंच नाश भीषणं धनंजयादि भूषणं

कपोल दानवारणं भजे पुराण वारणम् ‖ 4 ‖

नितांत कांति दंत कांति मंत कांति कात्मजम्

अचिंत्य रूपमंत हीन मंतराय कृंतनम् |

हृदंतरे निरंतरं वसंतमेव योगिनां

तमेकदंतमेव तं विचिंतयामि संततम् ‖ 5 ‖

महागणेश पंचरत्नमादरेण योऽन्वहं

प्रजल्पति प्रभातके हृदि स्मरन् गणेश्वरम् |

अरोगतामदोषतां सुसाहितीं सुपुत्रतां

समाहितायु रष्टभूति मभ्युपैति सोऽचिरात् ‖6||

|| श्री कृष्णार्पणमस्तु  ||








No comments:

Post a Comment