Click - ಸ್ವರ್ಣಗೌರಿ ವ್ರತ, ಪೂಜಾ ವಿಧಾನ
ಸ್ಕಂದ ಪುರಾಣದಲ್ಲಿ ಶಿವ ಮತ್ತು ಸ್ಕಂದ ಇವರ ಸಂವಾದ ರೂಪದಿಂದ ಉಕ್ತವಾಗಿದೆ. ಚಂದ್ರ ಪ್ರಭು ಎಂಬ ರಾಜನಿಗೆ ಮಹಾದೇವಿ ವಿಶಾಲಾಕ್ಷಿ ಎಂಬ ಇಬ್ಬರು ಪತ್ನಿಯರಿದ್ದರು. ಒಂದು ದಿನ ಅವನು ಬೇಟೆಗೆ ಹೋದಾಗ ಅಪ್ಸರೆಯರು ಮಾಡುತ್ತಿರುವ ಸ್ವರ್ಣ ಗೌರಿ ವ್ರತವನ್ನು ನೋಡಿ ತಾನು ಮಾಡಿ ದಾರವನ್ನು ಕಟ್ಟಿಕೊಂಡು ಮನೆಗೆ ಬಂದನು ಗರ್ವಿತಳಾದ ಹಿರಿಯ ಹೆಂಡತಿಯು ಬೇಡ ವೆಂದರು ಅವನು ಕಟ್ಟಿಕೊಂಡ ದಾರವನ್ನು ಕಿತ್ತಿ ಒಂದು ಮರದ ಮೇಲೆ ಚೆಲ್ಲಿದಳು. ಆಗ ಆ ಮರ ಚಿಗುರೆಲೆಯಿಂದ ಶೋಭಿಸತೊಡಗಿತು. ಎರಡನೆಯ ಹೆಂಡತಿಯು ಇದನ್ನು ನೋಡಿ ತಾನು ಅದನ್ನು ಕಟ್ಟಿಕೊಂಡು ರಾಜನಿಗೆ ಅತ್ಯಂತ ಪ್ರೀಯಳಾ ದಳು. ಮೊದಲನೆಯಳಾದ ವಿಶಾಲಾಕ್ಷಿ ರಾಜನಿಂದ ತ್ಯಕ್ತಳಾಗಿ ಅನೇಕ ಜನರಿಂದ ತಿರಸ್ಕ್ರತಳಾಗಿ ಅಲೆದಾಡುತ್ತ ಪಶ್ಚಾತ್ತಾಪಗೊಂಡು ಸ್ವರ್ಣ ಗೌರಿ ವ್ರತವನ್ನು ನೋಡಬೇಕು ಮಾಡಬೇಕು ಎಂಬ ಉತ್ಕಟ ಇಚ್ಛೆಯಿಂದ ಇರುತ್ತಿರಲಾಗಿ ದೇವಿಯು ಪ್ರತ್ಯಕ್ಷಳಾಗಿ ಅಭಿಷ್ಟ ವರವನ್ನು ಕೊಟ್ಟಳು ವ್ರತ ಪ್ರಭಾವದಿಂದ ದಿವ್ಯ ಭೋಗ ಭಾಗ್ಯವನ್ನು ಹೊಂದಿದಳು
ಸಂಕಲ್ಪ : ಮಾಮ ಇಹ ಜನ್ಮನಿ ಜನ್ಮಾಂತರೇಚ ಅಕ್ಷಯ ಸೌಭಾಗ್ಯ ಪ್ರಾಪ್ತಿ ಕಾಮನೆಯಾ ಪುತ್ರ ಪೌತ್ರಾದಿ ಧನ ಧಾನ್ಯ ಐಶ್ವರ್ರ್ಯ ಪ್ರಾಪ್ತ್ಯರ್ಥಂ ಕುಲಾಚಾರ ಪ್ರಾಪ್ತ ಸ್ವರ್ಣ ಗೌರಿ ವ್ರತಾಂಗತ್ವೇನ ಯಥಾ ಶಕ್ತಿ ಷೋಡಶೋಪಚಾರ ಪುಜಾಂ ಕರಿಷ್ಯೇ.
ಹೀಗೆ ಸಂಕಲ್ಪ ಮಾಡಿ ಪೂಜೆಯ ನಂತರ ಹದಿನಾರು ಎಳೆಯ ದಾರವನ್ನು ಕಟ್ಟಿಕೊಳ್ಳಬೇಕು
No comments:
Post a Comment