NINNA PAADAVA KANDE ಗೋವಿಂದ ನಿನ್ನ ಪಾದವ ಕಂಡೆ
ಗೋವಿಂದ ನಿನ್ನ ಪಾದವ ಕಂಡೆ
ಆವ ಜನುಮದ ಪುಣ್ಯ ಫಲಿಸೀತೋ
ಪಾವನ ಮೂರ್ತಿಯ ರೂಪವ ಕಂಡೆ || ಧೃ ||
ಬಲಿಗೆ ದಾನವ ಬೇಡಿ ಶಿಲೆಯನುದ್ಧರಿಸೀದ
ತಲೆಯಲಿ ಶಶಿಯನು ಪೊತ್ತವ ಗೊಲಿದಾ || ೧ ||
ಗಂಗೆಯ ಪಡೆದ ಜಗಂಗಳ ಪಾಪವ
ಹಿಂಗಿಸುತಿರ್ಪ ಶ್ರೀ ರಂಗ ಮೂರ್ತಿಯ || ೨ ||
ದರುಶನ ಮಾತ್ರದಿ ದುರಿತಗಳೋಡಿಸಿ
ಹರುಷ ಸುರಿಸುವ ಗುರು ಶ್ರೀಶ ವಿಠಲನ್ನ ||೩ ||
ಗೋವಿಂದ ನಿನ್ನ ಪಾದವ ಕಂಡೆ
ಆವ ಜನುಮದ ಪುಣ್ಯ ಫಲಿಸೀತೋ
ಪಾವನ ಮೂರ್ತಿಯ ರೂಪವ ಕಂಡೆ
.......ಶ್ರೀಶ ವಿಠಲದಾಸರು
No comments:
Post a Comment