Monday, October 31, 2022

*GOVINDA STUTI SULADI ಶ್ರೀ ಗೋವಿಂದರಾಜ ಸ್ತುತಿ ಸೂಳಾದಿ

Please listen video of this post on YouTube channel CLICK HERE 

ಶ್ರೀ ಗೋವಿಂದರಾಜ ಸ್ತುತಿ ಸೂಳಾದಿ

ವೀರಾಗ್ರಣಿಯು  ಬಂದು ತೇರವನೆ ನಿರ್ಮಿಸಿದ| ಉತ್ಥಮಾಶ್ವಗಳ ಕಟ್ಟಿ ರಥಿಯೋಬ್ಬರನು ಕಂಡು | ಆ ರಥದೊಳು  ಕುಳಿತು ಆಲಂಬ ಪಥವರಿತು | ವಿರಮಿಸದೇ ನಡೆಸುತ್ತ ಗುರಿಯ ಗಮ್ಯದೊಳತ್ತ | ತೇರು ತನ್ನಯ ದೇಹ ವಾಜಿ ಇಂದ್ರಿಯಗಳನು | ವರ ರಥಿಕ ಸಾತ್ವಿಕನು ಕಟ್ಟಿದೊರವ ಮನಸು | ಸಂತತ ಪ್ರೇರಕನು ಗೋವಿಂದ ನೀನೇ ||೧||

ನಿನ್ನ ಕಾರುಣ್ಯದಲಿ ಸಕಲ ಸೃಷ್ಟಿಯು ಇದ್ದು | ನಿನ್ನ ಕಾರುಣ್ಯದಲಿ ಸಚರಾಚರಗಳುಂಟು | ನಿನ್ನ ಕಾರುಣ್ಯದಲಿ ಜೀವ ಮೃತ್ಯುವಿಗಡುವು | ನಿನ್ನ ಕಾರುಣ್ಯದಲಿ ಮಾನಾಪಮಾನಗಳ | ನಿನ್ನ ಕಾರುಣ್ಯದಲಿ ಜಯಾಪಜಯಗಳನೆ| ನಿನ್ನ ಕಾರುಣ್ಯದಲಿ ನಿವೃತ್ತಿ ಬಂಧಗಳು | ಸಂತತ ಪ್ರೇರಕನೇ ಗೋವಿಂದ ನೀನೇ  ||೨||

ಪ್ರಾಕೃತದೊಳು ನೀನು ಸನ್ನದ್ಧನಾಗಿದ್ದು ಪ್ರಾಕೃತದಿ  ಬಧ್ದನು ವೃಕ್ಷರೂಪದ ಅ - | ಪ್ರಾಕೃತದೊಳಿದ್ದು ಸಕಲ ಜನರಿಂ ಭಜಿಪ | ಪ್ರಾಕೃತ ದೊಳಗಿನ್ನು ಸ್ಥೂಲ ಸೂಕ್ಷ್ಮದ ಭಾವ | ಪ್ರಾಕೃತ ರಹಿತದಿಂ ಮೂಲ ಪ್ರಣವನು ಹೊಂದಿ | ಪ್ರಾಕೃತದಿ ಅಖಿಲ ಸ್ಥೂಲ ಜಂಗಮದೊಳಲಿ |ಸಂತತ ಪ್ರೇರಕನು ಗೋವಿಂದ ನೀನೇ  ||೩||

ಆರೌದ್ರ ನಾಮಕನೆ ರುದ್ರರಿಂ ಸೇವಿಪನೆ | ಈರೇಳು  ಸಾಗರಗಳೊಡೆಯ ನೀನೇ | ಕ್ರೂರ ದಾನವರ ದಮನಗೈದವ ನೀನೇ | ಶೂರಾಗ್ರಣಿ ನೀನೆ ಕಾರುಣ್ಯ ಸಿಂಧು  | ಘೋರದುರಿತಗಳ ಬೇರು  ಸಹ ಕೀಳಿ ತವ  | ಸಾರಿ ವೃಕ್ಷದ ಮೂಲ ದೇವಾಧಿ ದೇವ | ಸಂತತ ಪ್ರೇರಕನು ಗೋವಿಂದ ನೀನೇ  ||೪||

ದೇವರ ದೇವನೇ ಪನ್ನಗ ಶಯನೇ | ತವ  ಪಾದದೊಳು ಲಕುಮಿ ಹೊಂದಿರ್ಪನೇ| ಧಾವತವು ಎಂತಲ್ಲಿ ನಿನ್ನ ಕಾಣಲು ಎನಗೆ | ಈವ ಅವಯವಗಳಲಿ  ವ್ಯಾಪ್ತ ನೀನೇ | ಪವಡಿಪನು ಪಾಲ್ಗಡದಿ ತುಂಬರರ ಸೇವಿಸುತ | ಗೋವಳದ ರಾಯನೆ ಗೋವೃಂದ ಪ್ರಿಯಕರನೆ  | ಸಂತತ ಪ್ರೇರಕನು ಗೋವಿಂದ ನೀನೇ  ||೫||

ಶುಭವೆಂದು ಕಂಡಲ್ಲಿ ಅಶುಭವದು ಅದರಲ್ಲಿ | ಶುಭವೆಂದು ತಿಳಿದರSಶುಭವೆಂ ತೋರ್ಪ | ಶುಭ ಅಶುಭಗಳೆರಡು ನಿನಗಿಲ್ಲ ಹರಿಯೇ | ಅಭವದಿಂ ಅಜಭವರ ಸೇವೆಗೊಂಬುವ  ನೀನು | ನಭದೊಳಾವೃತದಿ ಪಥಕಂತ್ಯವಿಲ್ಲದೆಯೇ | ವಿಭವ ಕರುಣಿಸೊ ವೈಭೋಗ ಯೋಗೀ | ಸಂತತ ಪ್ರೇರಕನು ಗೋವಿಂದ ನೀನೇ| ||೬||

ಶುಧ್ಧ ಭವಿಷ್ಯದಲಿ ರೂಪವಂ ಕಳೆದಿರ್ಪ ಅ -| ಶುಧ್ಧವಂ ಮಾರ್ಪಡುವ ಮಾಯೆ ನೀನೇ ಅ - | ಶುಧ್ಧವಾಗಿರಲು ತಾ ವಿಶುಧ್ಧವಾಗುತಲೇ  ವಿ - | ಶುಧ್ಧವದು ತಿರುಗಿ ನಾಶಹೊಂದದ ದೈವ | ಮಧ್ಯ ಮಾಧವನಲ್ಲಿ ಮನನಿತ್ತು ವರ್ಧಿಸುತ | ಶುಧ್ಧಿಯಲಿ ಸಂತತದಿ ಭಜಿಪ ಘನ ವ್ಯೇಧ್ಯ | ಸಂತತ ಪ್ರೇರಕನು ಗೋವಿಂದ ನೀನೇ ||೭||

ಮೂಲೋಕದಧಿಪತಿಯೇ ಜಗದ ವಲ್ಲಭ ನೀನೇ | ಮೂಲ ವಾಸುಂಧರೆಯ ಹೊತ್ತ ಕಾಯ | ಪಾಲಿಪನು ಭಕ್ತರನು ಕೇಳಿದಾಕ್ಷಣದಲ್ಲಿ |ಸಲ್ಲದದು ಎಂಬಂತೆ ಕಂಭವನು ಸೀಳಿ | ಬಾಲ ದಿಗ್ಗಜ ದ್ವಿಜನೆ ಪಿಡಿದಿರಲು ಫರಶುವನೆ | ವಾಲಿಯನೆ ಮರ್ದಿಸಿದ ನೀ ದಿವ್ಯ ಪುರುಷ | ಸಂತತ ಪ್ರೇರಕನು ಗೋವಿಂದ ನೀನೇ ||೮||

ಪಾಲ ಅಂಬುಧಿಯಲ್ಲಿ ಮಚ್ಛ ರೂಪದಿ ಇದ್ದೆ | ಪಾಲ ಮಂಥನದಲ್ಲಿ ಆಧಾರ ಕೂರ್ಮ ನಿರೆ | ಮೂಲ ಊರ್ಧ್ವದಿ ಕಂಡೆ ಕೆಳಗೆ ಶಾಖೆಗಳೊಡೆದು | ನೀಲಶ್ಯಾಮನ ಕರ್ಮ ಸೂತ್ರಗೀತೆಯ ಕೇಳಿ | ಕೇಳಿ ಕಲಿತನವನ್ನು ನಿಗ್ರಹಿಸು ದೇವ | ಕಲಿಯುಗದ ಅಂತ್ಯದಲಿ ಕರವೀರ ಕಲ್ಕೀ | ಸಂತತ ಪ್ರೇರಕನು ಗೋವಿಂದ ನೀನೇ ||೯|| 

ಶ್ರೇಯ ಅಶ್ವಥಪತ್ರ  ರಾಜ ಔಷಧಿಯಾಗಿ | ಕ್ರೀಯ ಸಂಚಿತ ದುಮ್ಮಾನ ಪರಿಹರಿಪ | ಶ್ರೀಯ ರಸದಿಂದ ಪ್ರಜೆಗಳುತ್ಪತ್ಪ್ತಿಯಾಗಿ | ತೋಯುವುದು ನಭದಿಂದ ಆರ್ದ್ರತೆಯನುಂಡು  | ಧ್ಯೇಯ ಸಕಲರ ಸಿದ್ದ ಪರಿಪಾಲನೆಯ ಮಾಳ್ಪ  | ಶ್ರೇಯಸ್ಸು ನೀಡು ನೀ ಸೌಖ್ಯ ವಾರಿಧಿಯೇ | ಸಂತತ ಪ್ರೇರಕನು ಗೋವಿಂದ ನೀನೇ ||೧೦||

 ಬುದ್ಧಿ ವೈಶಾಲ್ಯತೆಯ ಸರ್ವವನ್ನಳವಡಿಸೆ | ಶುಧ್ಧಾತ್ಮ ಗೋವಿಂದ ಸುಗುಣ ಸಾ೦ದ್ರ |  ಪದ್ಮವಲ್ಲಭ  ನಿನ್ನ ಪಾದ ಪದ್ಮವ ನುತಿಪ | ವಿದ್ಯ ಉಧ್ಧರಿಸು ನೀ ದ್ವೈತಕಾಯ | ಅದ್ವಯವನಾದಿ ಪುರುಷನು ಶ್ರೇಷ್ಟ  | ಸಿದ್ದ ಸಂತತವ ಕರುಣ ಸರ್ವರಾಧಾರಿ | ಸಂತತ ಪ್ರೇರಕನು ಗೋವಿಂದ ನೀನೇ ||೧೧||

ಮುನಿ ಕುಲೋತ್ತಮರೆಲ್ಲ ಸೇವೆ ನಿನ್ನಲಿ ಹೊಂದಿ | ಅನುದಿನವು ನಿನಧ್ಯಾನ ಮಾರ್ಗವನು ಹಿಡಿದು | ಮನುಜರಿಗೆ ಸಾಯುಜ್ಯ ಪೀಠವನು ಇತ್ತವನೇ | ಎಣೆ ಇಲ್ಲದೆಯೆ ಮಹಪದವಿ ನಿನ್ನಿ೦ದಲೇ  |  ಎಣಿಸುತ್ತಲಿರೆ ಜನರ ಪರಿಪಾಲಿಸುತ್ತಿದ್ದು | ತನು ದಂಡಿಸುತಲಿ  ನಿನ ಭಕ್ತಿ ಭಯದಿ | ಸಂತತ ಪ್ರೇರಕನು ಗೋವಿಂದ ನೀನೇ ||೧೨||

ಅದ್ಭುತ ಸುಪ್ರಬಲೇ ಸುಜ್ಜರಾ ರಮಣನೆ | ಅಬ್ದ್ಹೀ ಕ್ಷೀರ ಸುದತಿಜಾತ ನಿಗ್ರಹಳೇ  | ಸಧ್ಗತಿಯ ಕೊಡುತಿರುವ ಚಂದ್ರಕೋರವಣ| ಮುದ್ಗರವು ಶರಚಾಪ ಮಧುಕಾಂಡವನೇ ಎತ್ತಿ |  ಭದ್ರವತ್ಸಲ ಭವ್ಯ ಶ್ರೀ ಗರುಡ ಗಮನ | ರುದ್ರಾತಿಶಯನಲ್ಲಿ ತಲೆಬಾಗಿ ತವಚರಣ | ಸಂತತ ಪ್ರೇರಕನು ಗೋವಿಂದ ನೀನೇ ||೧೩||

ಉತ್ಪತ್ತಿ ಸ್ಥಿತಿಲಯದ ಶುದ್ಧ ಶೋಭನ ಮಾತ್ರ | ಪತಿತ ಪಾವನ ನೀನೆ ಸರ್ವ ಓಷಧಯ | ಪ್ರತಿಕೂಲದಾವರಣ ಅನುಕೂಲ ತೆರಕಂಡು| ಜಿತ ಕಾಮ ಸರಸಿಜನೆ ಜನ್ಮ ಮರಣವುರಹಿತ |  ಗತಿಯಗಾಣಿಸು  ಎನ್ನ ಇಹಜನ್ಮಪರದಿಂದ | ಚತುರ ಬಾಹುಗಳುಳ್ಳ  ಆಘನಾಶನವನೀತ | ಸಂತತ ಪ್ರೇರಕನು ಗೋವಿಂದ ನೀನೇ ||೧೪||

ಕೂಪದಿಂದಲಿ ಎತ್ತಿ ಹೊರಮಾಡು ಜನ್ಮಗಳ | ಆಪಾದ ಮೌಳಿ ವರ ಕಣ್ತುಂಬಿಕೊಂಡಿಹೆವು | ಶ್ರೀಪತಿಯೇ  ಪತಿಚಂದ್ರ ಅನವರತ ಜಿವ್ಹಾಗ್ರ | ತಾಪಸಿಯೇ ನಿನ ಪಾದ ಅರ್ಚನದಿ ಮೋಕ್ಷವನು | ಕಾಪಾಡು ಎನ್ನುತಲಿ ಶರ್ವಾದಿ ದೈವತರು | ಸೋಪಾನವದುವೆ ತಾ ಕೈವಲ್ಯ ಪಡೆಯುದಕೇ | ಸಂತತ ಪ್ರೇರಕನು ಗೋವಿಂದ ನೀನೇ ||೧೫||

ಅಶ್ವತ್ಥನೆದುರಲ್ಲಿ ಖದ್ಯೋತ ಮಂಡಲವು | ವಿಶ್ವ ರೂಪನೆ ರುದ್ರ ಗಜವದನ ಫಣಿಶೇಷ | ಅಶ್ವತ್ಥ ತರುಪೀಠ ಉತ್ತುಂಗ ಶಿಲೆಯಲ್ಲಿ | ಅಶ್ವಿನಿ ಕುವರುಗಳ ಭೇಷಜವು ಭೂತಳದಿ | ವಿಶ್ವೇಶನುತಿಸುತಲಿ ಕುಂಭೋಧ್ಭವಾರ್ಚಿತನೆ | ವಿಶ್ವ ಕುಟುಂಬಕನೆ ಸರ್ವರುದ್ಧಾರಿ | ಸಂತತ ಪ್ರೇರಕನು ಗೋವಿಂದ ನೀನೇ ||೧೬|| 

ಎಲ್ಲ ಕಾಲದೊಳಿರುವ ವಿಜಯರೆಯ ಕೇಡಿಗಳ  | ಎಲ್ಲ ಕಿರಾತರನು  ಕೆರೆಯ ನೀರನೆ ಮಾಡಿ | ಮಲ್ಲ ಮರ್ಧನದಿಂದ ರಕ್ಷರೂಪವನಿತ್ತೆ | ವಲ್ಲಭನೆ ನಿಂತಿರುವಿ ಪ್ರೀಯ ಜನ ಮೂರ್ತಿ | ಸಲ್ಲಲಿತ ಲೋಕವದು ಕಮಲ ಪದದೊಳು ಭಕ್ತ | ಬಲ್ಲವರು ಬಹುದೂರ ಭವ ಅಬ್ಧಿಯನ್ನೂ | ಸಂತತ ಪ್ರೇರಕನು ಗೋವಿಂದ ನೀನೇ ||೧೭||

ನಾಮ ಹರಿಯನು ಕಂಡೆ ಲಕ್ಷ್ಮಿ ಚಂದ್ರಿಕರಲ್ಲಿ | ನಾಮ ಹರಿಯನು ಸ್ಮರಿಪ ಸಗುಣ ಮಾರುತರಲ್ಲಿ | ನಾಮ ಹರಿಯಿಂ ದೂರ ಕತ್ತಲೆಯ ಅಜ್ಞಾನ | ನಾಮ ಹರಿಯೊಳು ಕಾಣು ವರುಣತೋಷವ ಕೊಡುವ | ನಾಮ ಹರಿಯಲಿ ಉಂಟು ಅಗ್ನಿ ವಡವಾನಲದಿ | ನಾಮ ಶೇಷವು ಇಂದಿ ರೇಶ ಸುತ ನೊಳಗೆ | ಸಂತತ ಪ್ರೇರಕನು ಗೋವಿಂದ ನೀನೇ ||೧೮|| 

  ಇತೀ ಶ್ರೀ ಇಂದಿರೇಶ ಸುತ ವಿರಚಿತ ಕುಲದೇವ ಶ್ರೀ           ಮದ್ ಗೋವಿಂದರಾಜ ಸ್ತುತಿ ಸುಳಾದಿ ಸಮಾಪ್ತ

  


No comments:

Post a Comment