Tuesday, November 01, 2022

*GOVINDA UGABHOGA ಗೋವಿಂದಪುರಾಧೀಶ ಉಗಾಭೋಗ

Please listen video of this post on YouTube channel CLICK HERE 

ಶ್ರೀ ಲಕ್ಷ್ಮೀ ಗೋವಿಂದ ಪುರಾಧೀಶ ಉಗಾಭೋಗ

ನಾಭಿಗೆ ಸರಿ ಜಪವು ಅರುಣ ಕಾಲದಳೊಳಗೆ |  ಹೃದಯಕ್ಕೆ ಸರಿ ಇಹುದು ಮಧ್ಯಾಹ್ನದಿ | ಸಂಜೆಗಾರಾಧನೆಯು ನಿತ್ಯದಲಿ ಮಾಡುತಿರೆ | ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ  ||೧||

ಕುಳಿತು ಜಪ ಮಾಡಲು ನಾಕ ಮೂರೇ ಬೆರಳು | ಮಲಗಿ ಪಾಡುತಲಿ ಶೇಷ ಶಯನನೆ ನಿನ್ನ | ನಿಂತು ಜಪ ಮಾಡುತಿರೆ ಗೋವಿಂದ ಸನ್ನದ್ದ | ಕುಣಿಕುಣಿದು ಪಾಡಿದೊಡೆ ವೈಕುಂಠ ಕರೆವನವನು  | ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ. ||೨||

ಜೀವ ಆತ್ಮಕೆ ಭೇದ ಸಜ್ಜೀವ ಜಡ ಭಿನ್ನ | ಜೀವ ಆತ್ಮವು ಜಡವು ಜಗಧಾತ್ರಿ ನಿನಗಿಲ್ಲ | ಮುಕ್ತ ಅತ್ಮರು ಎಲ್ಲ ಜೀವ ಆಜೀವ ಭವ | ಸಕಲ ಜನರಿಂಗೆ ಬಲಎಡವು ನೀನಯ್ಯ | ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ. ||೩||

ಬೆನ್ನಿಗೆ ಶರಚಾಪ ಬಲಗೈಲಿ ಚಕ್ರಧರ | ಎಡಹಸ್ತದಲಿ ಶಂಖ ಇನ್ನೊಂದು ವರ ಕುಮುದ | ಸರಸಿಜದಿ ಸನ್ನಿಧಿಯ ಮೇಲೆ ಉರುಗನ ಛತ್ರ | ಎಡ ಬಲಕೆ ಶಿರಿಚಂದ್ರ ಶೋಭಿಸುತಲಿಹರು  |  ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ. | |೪||

ರಾಮ ಶಬರಿಯ ಕಡೆಗೆ ಗುಹನ ಭಾಗ್ಯವ ನೋಡಿ | ಕೃಷ್ಣ ಪಾಂಚಾಲಿಯರ ಅಣ್ಣ ತಂಗಿಯ ಸ್ನೇಹ | ರಕ್ಷಾಟ ಭೂತನವ ಪರಿಸರವ  ರಕ್ಷಿಸಲಿ  | ಗೋವಿಂದಪುರ ರಾಜ ಅಖಿಲರನು ಪೊರೆಯೈ   |. ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ. | |೫||

ಊರ್ಧ್ವ ಪುಂಡ್ರದಿ ಹಿಡಿದು ದ್ವಾದಶನ್ನಾಮಗಳ | ಅಕ್ಷತೆ ಅಂಗಾರ ಅರಳಿದ ಮೊಗದಲ್ಲಿ | ಅಂಬುಜ ನಯನಗಳ ಗಂಭೀರ ಮುಖಮುದ್ರ | ಕಸ್ತುರಿ ತಿಲಕವನು ಹೊತ್ತ ಕೌಸ್ತುಭಧಾರ   | ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ | |೬||

ಪಕ್ಷಿವಾಹನ ನೀನು ಭೀಮರಥಿ ತಟನಿಂತು | ಅಕ್ಷಯ್ಯ ಅಭಯಗಳ ನಿನ್ನ ಮಕ್ಕಳಲಿರಲಿ | ಸಾಕ್ಷಿಯಾಗಿರು ನೀನು ಇಂದಿರೆಸುತನಲ್ಲಿ | ಅಕ್ಷಯಲಿ ಕಾರುಣ್ಯ ಸೆಲೆ ಇರಲಿ ಭಕುತರಲಿ  | ರಾತ್ರಿ ಪೂರ್ವದ ಪೂಜೆ ರಾಜಯೋಗೀಶ್ವರಗೇ.||೭||

                    ಇತಿ ಶ್ರೀ ಲಕ್ಷ್ಮೀ ಗೋವಿಂದಪುರಾಧೀಶ ಉಗಾಭೋಗ ಮುಕ್ತಾಯಃ       


No comments:

Post a Comment