Wednesday, November 02, 2022

SIDDHIPRADA KAMYAKA YAJNA ಸಿದ್ದಿಪ್ರದ ಕಾಮ್ಯಕ ಯಜ್ಞ

ಇಪ್ಸಿತಾರ್ಥ ಸಿದ್ದಿಪ್ರದ ಕಾಮ್ಯಕ ಯಜ್ಞ
ಆಗ ನಾನು ಹೃದಯ ಚಿಕಿತ್ಸೆಗಾಗಿ ಸುರತ್ ಪಟ್ಟಣದಲ್ಲಿದ್ದೆ. 
ದಿನಾಂಕ27 ಮೇ 2022 ಬೆಳಗಾದರೆ ಶುಕ್ರವಾರ 04:20ರ ಮುಂಚೆ  ಬಿದ್ದ ಕನಸು        ಎಚ್ಚರವಾದಾಗ  ನಸುಕಿನ 4:20 ರ ಸಮಯ  ನನ್ನದು ಪ್ರಸನ್ನ ಮನಸ್ಥಿತಿ. ಅದೇ ವೇಳೆಯಲ್ಲಿಯೇ ಬರೆದಿಟ್ಟದ್ದು.             
ಒಂದು ಅಡವಿಯಲ್ಲಿಯ ನದಿ ದಂಡೆಯಲ್ಲಿ  ಗಿಡದ ಕೆಳಗೆ ಮೂವರು ಜನರು ಕುಳಿತಿದ್ದು ಆ ಮೂವರಲ್ಲಿ ನಾನು ಒಬ್ಬ, ಇನ್ನೊಬ್ಬರು ಮಹಾಕಾಯ ಬಲಶಾಲಿ   ಗರಡಿಯಲ್ಲಿ ಪಳಗಿದ ಕಟ್ಟುಮಸ್ತಾದ ದೇಹ,  ದಪ್ಪ ಮೀಸೆ, ಪಿತಾಂಬರದಾರಿ, ಕಟ್ಟಿದ ಜಡೆ, ತ್ರಿಪುಂಡ್ರ ದ್ವಾದಶ ನಾಮಧಾರಿ, ಶುಭ್ರ ಯಜ್ನೋಪವೀತ, ಸಮೀಪದಲ್ಲಿ ಪ್ರಚಂಡ ಗದೆ, ಪೂರ್ವಕ್ಕೆ ತಲೆ ಮಾಡಿ ಮಲಗಿದ್ದರು,‌‌ ಮತ್ತೊಬ್ಬ ಋಷಿ ತುಲ್ಯ ವ್ಯಕ್ತಿ ಪೂರ್ವಕ್ಕೆ ಮೂಖ ಮಾಡಿ ಕುಳಿತಿದ್ದರು.  ತಾನು ಮಹಾಭಾರತದ ಒಬ್ಬ ವ್ಯಕ್ತಿ  ತನ್ನನ್ನು ತಾನು ವೃಕೋದರ ಎಂದು  ಹೇಳಿಕೊಂಡವನ ಕಾಲುಬಳಿ ಕುಳಿತಿದ್ದ, ನಾನು ದಕ್ಷಿಣಕ್ಕೆ ಮುಖ ಮಾಡಿ ಕುಳಿತ್ತಿದ್ದೆ. ಕನಸಿನಲ್ಲಿ ನಾನೊಬ್ಬ ಶ್ರೋತೃ ಮಾತ್ರ, ಏನು ಮಾತನಾಡಿಲ್ಲ, ಹೇಳಿದ್ದೆಲ್ಲ ಅವರಿಬ್ಬರೇ, ಪ್ರಾರಂಭಿಸಿದವರು ಮೊದಲು ಆ ಋಷಿ ವ್ಯಕ್ತಿ ಆಮೇಲೆ ಕೊನೆಯ ವರೆಗೂ ಮಹಾಕಾಯ ವ್ಯಕ್ತಿಯೇ ಹೇಳಿದ್ದು. 
ಋಷಿ ಉವಾಚ, 
ಇಲ್ಲಿ ಪವಡಿಸಿದವರು ಮಹಾಭಾರತ ಕಾಲದ ಮಹಾಬಲಿ, ಮಹಾಬಾಹು, ಸಹಸ್ರ ಆನೆಗಳ ಶಕ್ತಿಯುಳ್ಳ ವೃಕೋದರ ಯುವರಾಜರು. ಕುರುಕ್ಷೇತ್ರ ಯುದ್ಹ ಪ್ರಾರಂಭವಾಗುವ ಮುಂಚೆ ಮಹರ್ಷಿ ವ್ಯಾಸರು ಇವರಿಗೆ ಒಂದು ಯಜ್ಞ ಮಾಡಲು ಹೇಳಿದರು.  ಕುರುಕ್ಷೇತ್ರ ರಣಾಂಗಣದ ಈಶಾನ್ಯ ದಿಶೆಯಲ್ಲಿ ಒಂದು ಕಾಲೀ ಮಂದಿರವಿದ್ದು ಯಮುನಾ ನದಿಯ ತಟದಲ್ಲಿದೆ, ಅಲ್ಲಿಯೇ ಇವರು ಯಜ್ಞ ಮಾಡಿದರು. ಮಾನಸಿಕ ಸ್ಥಿರತೆ, ಮನೋಬಲ ವೃದ್ಧಿ, ಶರೀರ ಬಲವೃದ್ಧಿ , ಆತ್ಮ ವಿಶ್ವಾಸ ಬೆಳವಣಿಗೆ, ವೀರ್ಯವೃದ್ಧಿ, ಅತೀ ಮಾನವಿ ಕೃತ್ಯವಾದ  ರಕ್ತ ಪ್ರಾಶನ ದೋಷ ಪರಿಹಾರಕ್ಕೂ, ಕುರುಕ್ಷೇತ್ರ ಧರ್ಮಯುದ್ಧದಲ್ಲಿ ತನ್ನಿಂದ ನಡೆಯಬಹುದಾದ ಪ್ರತಿಜ್ಞೆಯನ್ನು ಪೂರೈಸುವ ಅಂಗವಾಗಿ ತೊಡೆ ಒಡೆಯುವ ಭಿಭತ್ಸ ವೃತ್ತಿಯ  ದೋಷ ನಿವಾರಣೆಗಾಗಿಯೂ  ಅಲ್ಲದೆ ಮಹಿಳೆಯರಲ್ಲಿ ಗರ್ಭಕ್ಷೇತ್ರ ಬಲ ವೃದ್ಧಿಗೆಂದು –ಪರ್ಯಾಯವಾಗಿ ಅಪತ್ಯ ಪ್ರಾಪ್ತಿಗಾಗಿಯೂ ಸಹ ಇದೇ ಯಜ್ಞ ಮಾಡಬೇಕಾಗುವುದು ಎಂದು ಹೇಳಿದ್ದರು. 
             ಗುಡಿಯ ಮುಂಭಾಗದಲ್ಲಿ ಕಟ್ಟಿಗೆಯ, ಮಣ್ಣಿನ, ಲೋಹದ, ಬ್ರಹ್ಮಾಂಡದ ಮೇಲೆ ಕುಣಿದಾಡುತ್ತಿರುವಂತೆ ಬಾಲಗಣಪನನ್ನು ತಯಾರಿಸಿ ಪೂಜಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಮೂರ್ತಿಯ ಮುಂದೆ ಇಟ್ಟಿಗೆಗಳಿಂದ ಸ್ಥಂಡಿಲ ತಯಾರಿಸಿ ಹೋಮ ಮಾಡಿದರು. ಹೋಮದ ಋತ್ವಿಕರಾಗಿ ಭೀಮಸೇನ ಮಹಾಬಲಿಯು ಆಚಮನ ಪ್ರಾಣಾಯಾಮಾದಿಗಳನ್ನು ಮುಗಿಸಿ  ಆಜ್ಯ ಆಹುತಿಗಾಗಿ ಪೀತ ವಸ್ತ್ರಧಾರಿಯಾದರು, ಶ್ರೀ ರುದ್ರ ದೇವರು ಎಕ್ಕೆ, ಮುತ್ತಲ, ಖದಿರ, ಉತ್ತರಾಣಿ, ಅಶ್ವತ್ಥ, ಔದುಂಬರ, ಶಮಿ, ಗರಿಕೆ, ದರ್ಭ  ಈ ಎಲ್ಲ ಪರಿಕರ ಸಮಿಧೆಗಳು, ಕಾಷ್ಟಗಳು ಕನಿಷ್ಠ ಐದು ಅಂಗುಲಗಳಷ್ಟು ತೆಗೆದಿಟ್ಟುಕೊಂಡರು. ಜಗದಂಬೆ ಶ್ರೀ ಪಾರ್ವತಿದೇವಿಯು ಕಪ್ಪುತಿಲಮಿಶ್ರ ಚರುವಿನ ಪಾತ್ರೆಯನ್ನಿಟ್ಟುಕೊಂಡರು. 
ಮೊದಲು ಮಾಡಲೇಬೇಕಾಗಿದ್ದ ಪುಣ್ಯಾಹ ವಾಚನ, ನಾಂದಿ ಶ್ರಾದ್ಧಗಳು ರುದ್ರ ರುದ್ರಾಣಿಗಳೇ ಮುಂದೆ ನಿಂತು ನೆರವೇರಿಸಿ ಕೊಟ್ಟರು.   ದಕ್ಷಿಣಾಯನ ಶರದ್ ಋತುವಿನಲ್ಲಿ ಬರುವ ಅಶ್ವಿನ ಶುಕ್ಲ ಅಷ್ಟಮಿ ಸೋಮವಾರದಂದು ಪೃಥ್ವಿಯಲ್ಲಿ ವಾಸಿಸುವ ರುಕ್ಮಕ ಅಗ್ನಿಯನ್ನು ಕಾಮ್ಯಕ ಯಜ್ಞಕ್ಕೆ ಆವಾಹಿಸಿದರು. ಉಮಾದೇವಿಯವರು ಅಗ್ನಿಯ ಆಚ್ಚಾದನೆಯನ್ನು ತೆಗೆದು ಸ್ಥಂಡಿಲದಲ್ಲಿ ಪ್ರತಿಷ್ಟಾಪಿಸಿದರು . ಋಷಿ ವರ್ಯರು ವೇದ ಘೋಷ ಮಾಡುತ್ತಲೇ ಯಜ್ಞ ಪ್ರಾರಂಭವಾಯಿತು. ಸೂರ್ಯ ನಕ್ಷತ್ರದಿಂದ ಗ್ರಹಮುಖದಲ್ಲಿ ಆಹುತಿಗಳು ಸಮರ್ಪಿಸುವುದಾಗಿ ನಿರ್ಣಯಿಸಿ –ಶ್ರೀ ಸಿದ್ಧಿವಿನಾಯಕನ 21 ಆಹುತಿಗಳು, ಸ್ವತಃ ಗಿರಿಜಾದೇವಿಯ 16 ಆಹುತಿಗಳು, ಶ್ರೀ ಲಕ್ಷ್ಮೀ ದೇವಿಯ 8 ಆಹುತಿಗಳು, ಶ್ರೀ ವೀಣಾಪಾಣಿ ಸರಸ್ವತಿಯ 7 ಆಹುತಿಗಳು, ಶ್ರೀ ರುದ್ರದೇವರ 11 ಆಹುತಿಗಳು, ಶ್ರೀ ವಿಷ್ಣು ದೇವರ 12 ಆಹುತಿಗಳು, ಶ್ರೀ ಬ್ರಹ್ಮ ದೇವರ 4 ಆಹುತಿಗಳು, ದಶ ದಿಕ್ಪಾಲಕರ  10 ಆಹುತಿಗಳು, ನವಗ್ರಹಗಳ 9 ಆಹುತಿಗಳು, ಯಮಧರ್ಮರಾಜರ 10 ಆಹುತಿಗಳು ಇಂದ್ರ ದೇವರ 5 ಆಹುತಿಗಳು, ಅಶ್ವಿನಿ ಕುಮಾರರ 4 ಆಹುತಿ ಗಳು, ಚಂದ್ರ ವಂಶದ ಕುಲದೇವರ 27 ಆಹುತಿಗಳು, ಭೀಮಸೇನ ದೇವರ ಗುರು/ತಂದೆ ವಾಯು ದೇವರ  32 ಆಹುತಿಗಳು ಮತ್ತು 3 ಪೂರ್ಣಾಹುತಿಗಳನ್ನು (ತೆಂಗಿನ ಕಾಯಿ, ವಸ್ತ್ರ, ಬಿಲ್ವದ ಕಾಯಿ ) ಪ್ರದಕ್ಷಿಣೆ ಪೂರ್ವಕ ಅರ್ಪಿಸಿ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿ, ಶಿರಸೇ,ಲಲಾಟೇ,ಕಂಠೌ, ದಕ್ಷಿಣ ವಾಮ ಭುಜೌ,ನಾಭೌ ಹೀಗೆ ಯಜ್ಞ  ಭಸ್ಮಧಾರಣೆ ಮಾಡಿ ಸಂಪನ್ನ ಗೊಳಿಸುತ್ತಿದ್ದಂತೆಯೇ ...... 
           ಯಜ್ಞ ಕುಂಡದಿಂದ ಸಹಸ್ರ ಕೈಗಳುಳ್ಳ, ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದ, ಟೊಂಕಕ್ಕೆ, ಕೊರಳಿಗೆ ರುಂಡ ಮಾಲೆ ಹಾಕಿಕೊಂಡ, ಕೋರ ದಾಡೆಗಳುಳ್ಳ,  ಕಪ್ಪು ಮುಖದ ಹಣೆಗೆ ಸಿಂಧೂರ ಬಳೆದ, ತಲೆ ಕೂದಲಗಳನ್ನು ನೈಸರ್ಗಿಕವಾಗಿ ಬಿಟ್ಟ ಭಯಾನಕ ಉಗ್ರ ಮಹಾಕಾಲಿಮಾತೆ ಪ್ರತ್ಯಕ್ಷಳಾದಳು. ವೃಕೋದರನೆ ! ನಿನ್ನ ಆರಾಧನೆಗೆ ಮೆಚ್ಚಿಕೊಂಡಿದ್ದೇನೆ, ನಿನಗೇನು  ಬೇಕಾದುದ್ದನ್ನು ಕೇಳುವ ಮೊದಲು ನನಗೆ ಬಲಿ ಬೇಕು, ರಕ್ತ ಬೇಕು ಎಂದು ಕೇಳಿದಳು 
ಮೂಕ ಪ್ರಾಣಿಗಳಾದ ನಿಷ್ಪಾಪಗಳಾದ ಯಾವ ಪ್ರಾಣಿಯನ್ನು ಬಲಿ ಕೊಡಲಾರೆ, ನನಗೆ ವರಪ್ರದಾನ ಆಗದೆ ಇದ್ದರೂ  ಅಭ್ಯಂತರವಿಲ್ಲ. ಆದರೇ ನನ್ನ ಶರೀರದ ರಕ್ತವನ್ನು ಮಾತ್ರ ಆಹುತಿಯಾಗಿ ಕೊಡಬಲ್ಲೆ ಎಂದು ಹೇಳಿದವನೇ ಶಸ್ತ್ರದಿಂದ ಹೆಬ್ಬೆರಿಳಿನಿಂದ ರಕ್ತ ಆಹುತಿ ನೀಡಿದನು. ನೀನೇನೂ ಬೇಡದೆ ಇದ್ದರೂ ನಿನ್ನ ಇಚ್ಹೆಯಂತೆ ಮುಂಬರುವ ಕುರುಕ್ಷೇತ್ರದಲ್ಲಿ ನಡೆಯುತ್ತದೆ ಎಂದು ಕಾಳಿ ಮಾತೆಯು ವರದಾನ ನೀಡಿದಳು. ಮುಂದೆ ನಡೆಯ ಬಹುದಾದ ಮಹಾಭಾರತದ ಯುದ್ಧದಲ್ಲಿ ಪ್ರಚಂಡ ರಕ್ತದ ಓಕುಳಿಯು ಹರಿಯುತ್ತದೆ ಭವಿಷ್ಯದಲ್ಲಿಯೂ ಇದೇ ಸ್ಥಳದಲ್ಲಿ ಯುದ್ಧಗಳಾಗಿ ನಿನ್ನ ಇಚ್ಚೆಯು ಸಹ ಪೂರ್ತತೆಯಾಗುವುದು ಖಂಡಿತ ಎಂದು ಶ್ರೀ ಭೀಮಸೇನ ಯುವರಾಜರು ಹೇಳಿದರು. 
ಕನಸಿನಲ್ಲಿ ಕಂಡ ಈ ಯಜ್ಞ ಕ್ರಿಯೆಗೆ ಯಾವುದಾದರು ಪುರಾಣ, ಗ್ರಂಥ, ಪುಸ್ತಕಗಳಲ್ಲಿ ಪುಷ್ಟಿ ದೊರೆಯುವುದೇನೋ ಎಂದು ಸುಮಾರು ಪುಸ್ತಕಗಳನ್ನು ಅಭ್ಯಶಿಸಿದೆ ಆದರೇ ಅನಿರೀಕ್ಷಿತವಾಗಿ ಯಾತ್ರೆಗೇಂತ ಶ್ರೀ ಸೋಂದಾ ವಾದಿರಾಜರ  ಮಠಕ್ಕೆ ದರ್ಶನಾಪೇಕ್ಷೆಯಿಂದ ಹೋದಾಗ ಅಲ್ಲಿ ಮಾಡಲ್ಪಡುವ ಕಾರ್ಯ ಸೂಚಿಯಲ್ಲಿ ಇಚ್ಚಿತಾರ್ಥ ಸಿದ್ದಿಪ್ರದ ಕಾಮ್ಯಕ ಯಜ್ಞ ನೆರವೇರಿಸುವ ಬಗ್ಗೆ  ಉಲ್ಲೇಖ ಕಾಣುತಿತ್ತು. ವಿಚಾರಿಸಿದಾಗ ಆ ಯಜ್ಞ ಕ್ರಿಯೆ ಯಾವುದೋ ಅನಿವಾರ್ಯ ಕಾರಣಗಳಿಂದ ನಿಲ್ಲಿಸಿದುದ್ದಾಗಿ ತಿಳಿದುಬಂತು, 
ನಮ್ಮ ಗ್ರಹಚಾರ. 
ಭೀಮಸೇನ ಯುವ ರಾಜರು ನನಗೆ ಈ ಕನಸಿನ ಮುಖಾಂತರ ಹೇಳಿದ್ದರ ಮತಿತಾರ್ಥ ಇಷ್ಟೇ .. ನಾವುಗಳಾದ ಪಾಮರರು ನಮ್ಮಗಳ ಇಚ್ಛಿತಾರ್ಥ ಪೂರೈಸಿಕೊಳ್ಳಲು ನಮ್ಮ ನಮ್ಮ ಸಾಮರ್ಥ್ಯದ ಮಟ್ಟಿಗೆ ಈ ಯಜ್ಞ ಮಾಡಬಹುದು ಎಂದೆನಿಸುತ್ತದೆ ಧನ್ಯವಾದಗಳು 
ಸರ್ವೇ ಜನಾಃ ಸುಖಿನೋ ಭವಂತು 
                                                                ಸುಧೀರಾಚಾರ್ಯ ಶ್ರೀಧರಾಚಾರ್ಯ ಕಟ್ಟಿ  ಯಲಗೂರು                                                                        


No comments:

Post a Comment