ಸೌಜನ್ಯ ಶ್ರೋತಗಳಿಂದ
ಹನುಮಂತದೇವರ ವಿಶೇಷ ಮತ್ತು ವಿಭಿನ್ನ ಪಾತ್ರಗಳು
बुद्धिर्बलं यशो धैर्यं निर्भयत्वमरोगता।
अजाड्यं वाक्पटुत्वं च हनूमत्स्मरणाद्भवेत् ।।
ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ 'ರಾಮಾಯಣ' ಎನ್ನುವ ಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾದರೆ 'ಸೀತಾಯಾಶ್ಚರಿತಂ' ಎಂದು ಕರೆಯ ಬಹುದಂತೆ. ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು 'ಹನುಮಾಯಣ'. ಅಂದರೆ ರಾಮಾಯಣದಲ್ಲಿ ಆಂಜನೇಯನ ಪಾತ್ರ ಅಷ್ಟು ಪ್ರಾಮುಖ್ಯವಾಗಿದೆ. ಆಂಜನೇಯನ ಮಹಿಮೆಯೇ ಮುಖ್ಯ ವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ 'ಸುಂದರಕಾಂಡ'ವೆಂದು ಕರೆದಿದ್ದಾರೆ
ವಾಲಿವಧೆಯ ನಂತರ ತಾರಾದೇವಿಯೂ, ಅಂಗದನೂ, ಸುಗ್ರೀವನೂ ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವನು ಈತನೇ
ಯೋಗಶಾಸ್ತ್ರದ ಪರಮ ರಹಸ್ಯವೆಲ್ಲವನ್ನೂ ಅರಿತವನು. ಅವನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು, ಮನಸ್ಸಿನದು ಕೂಡ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಕ್ಕೋವಿದ, ಕುಶಲ ಮತಿ, ಕವಿಕುಲ ಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿ ಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಮನಸ್ಸಿನ ವೇಗದಲ್ಲಿ ಸಂಚರಿಸಲು ಸಾಮರ್ಥ್ಯ ಉಳ್ಳವರೂ, ಯೋಗ ವಿದ್ಯೆಯಲ್ಲಿ ಸೂಕ್ತ ಜೀವನದಲ್ಲಿಯೂ,ಜಂಗಮ ಆತ್ಮ ರೂಪದಲ್ಲಿಯೂ, ಇನ್ನೂ ಕಠಿಣವಾದ ಸ್ಥಾವರ ರೂಪದಲ್ಲಿ ದೇಹ ಸಹಿತವಾಗಿ ಸಂಚರಿಸಲು ಬೇಕಾದ ಸಾಧನೆ ಇರುವವರಲ್ಲಿ ಮಾರುತನೂ ಒಬ್ಬನು ಎಂದು ಪುರಾಣೈತಿಹಾಸಗಳೇ ಸಾಕ್ಷಿಯಾಗಿವೆ.
ರಾಮ ಮೊದಲ ನೋಟದಲ್ಲೇ ಆಂಜನೇಯನ ಹಿರಿಮೆ ತಿಳಿದ. ಅವನ ಶುದ್ಧವಾದ ಮಾತು, ಮಿತ ಭಾಷೆ, ಶಾಂತ ಸ್ವಭಾವ, ಬ್ರಹ್ಮಚರ್ಯದ ತೇಜಸ್ಸು ಕಂಡು ರಾಮನಿಗೆ ಅಚ್ಚರಿ. ಆಂಜನೇಯನೇ ರಾಮನಿಗೆ ಕಿಷ್ಕಿಂದೆಯನ್ನು ಪರಿಚಯಿಸಿ, ರಾಮ ಸುಗ್ರೀವರಿಗೆ ಸಖ್ಯ ಉಂಟಾಗುವಂತೆ ಮಾಡುತ್ತಾನೆ.
ಆಂಜನೇಯ ಸಮುದ್ರ ಲಂಘನ ಮಾಡುವ ಸನ್ನಿವೇಶ ಸುಂದರವಾಗಿದೆ. ತನ್ನ ಯೋಗಶಕ್ತಿಯನ್ನು ಜಾಗೃತಗೊಳಿಸಿ, ತನ್ನ ಜಡದೇಹವನ್ನು ಬಿಟ್ಟು ಚೇತನವಾಗಿ ರೂಪಾಂತರ ಹೊಂದಿದ. ಅದನ್ನು ನೋಡಿ ಕಪಿವೀರರೆಲ್ಲ ಜಯ-ಘೋಷವನ್ನು ಮಾಡಿದರು. ಅನಂತರ ಆಂಜನೇಯ ರುದ್ರರೂಪವನ್ನು ತಾಳಿ, ಮನುಷ್ಯನ ಕಲ್ಪನೆಯೇ ತತ್ತರಿಸುವಂತೆ ನೆಲಕ್ಕೂ ಬಾನಿಗೂ ಒಂದೇ ಆಗಿ ನಿಲ್ಲುತ್ತಾನೆ. ಹನುಮನ ಪಾದದ ಹೊಡೆತಕ್ಕೆ ಇಡೀ ಬೆಟ್ಟವೆ ಅಲುಗಾಡಿ ಪ್ರಾಣಿ-ಪಕ್ಷಿಗಳ ಚಿತ್ಕಾರದಿಂದ ಆ ವನಭೂಮಿ ಮಗುವಿನ ಕೈಯ್ಯ ಗಿಲಿಗಿಚ್ಚಿಯಾಯಿತಂತೆ. ಹನುಮಂತ ಆಗಸದಲ್ಲಿ ಹಾರುತ್ತಿದ್ದರೆ, ಆಕಾಶಕ್ಕೆ ಸಿಡಿದ ಪರ್ವತದಂತೆ ಕಾಣುತ್ತಿದ್ದ. ಹೀಗೆ ಸಾಹಸದಿಂದ ಲಂಕೆಯನ್ನು ತಲುಪಿ ಸೀತೆಗೆ ರಾಮನ ಮುದ್ರಿಕೆ ಕೊಟ್ಟ. ಭಗವಂತನ ಕೆಲಸವನ್ನು ಭಕ್ತಿಯಿಂದ ಮಾಡಿದ.
ಆಂಜನೇಯನ ಇಂಥಾ ಗುಣಗಳೇ ಇಂದಿಗೂ ಜನಸಾಮಾನ್ಯರಲ್ಲಿ ನೆಲೆಸಿದೆ. ಜನಪದರು, ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತಮ್ಮ ಊರುಗಳ ಮುಂದೆಯೇ ಹೋದನೆಂದು ನಂಬುತ್ತಾರೆ. ಮಕ್ಕಳು ರಕ್ಷೆಗಾಗಿ ಆಂಜನೇಯನ ತಾಯತ ಕಟ್ಟುತ್ತಾರೆ. ಊರಿನ ಗಡಿಯಲ್ಲಿ ಆಂಜನೇಯನ ಗುಡಿ ಕಟ್ಟಿಸಿ ಊರ ರಕ್ಷಕನೆಂದು ಭಾವಿಸುತ್ತಾರೆ. ಹಾಗೆಯೇ ಕನ್ನಡದ ಕವಿಗಳು ಹನುಮನುದಿಸಿದ ನಾಡು ಎಂದು ತಮ್ಮ ವಿಶೇಷ ದರ್ಶನವನ್ನು ಆಂಜನೇಯನ ಪಾತ್ರದಲ್ಲಿ ಕಾಣಿಸಿದ್ದಾರೆ.
ಆಂಜನೇಯನನ್ನು ಇಲ್ಲಿ ಮುಖ್ಯವಾಗಿ 'ಕನ್ನಡದ ಕುವರ'ನೆಂದೇ ವರ್ಣಿಸುತ್ತಾರೆ. ಕರುನಾಡ ಸಂಸ್ಕ್ರತಿಯ ಸಾರಸ್ವರೂಪ, ಕರುನಾಡು ಕಣ್ಮಣಿ, ಕರುನಾಡ ಸಂಸ್ಕ್ರತಿಯ ಸಂವರ್ಧನ- ಹೀಗೆ ಹನುಮಂತನನ್ನು ಎಷ್ಟು ಬಣ್ಣಿಸಿದರೂ ಕವಿಗೆ ತೃಪ್ತಿಯಿಲ್ಲ. ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ಅರಿಯಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಾಹರಣೆಯಾಗಿದೆ. ಆಂಜನೇಯನಿಗೆ ಸೀತೆಯ ಬಗ್ಗೆ ಪರಮಭಕ್ತಿ, ಮಾತೃಪ್ರೇಮ. ಹೆಣ್ಣನ್ನು ಭೋಗದ ದೃಷ್ಠಿಯಿಂದ ಕಾಣುವ ಸಮಾಜದಲ್ಲಿ ಆಂಜನೇಯ ಅದೆಷ್ಟು ಗೌರವದಿಂದ ಹೆಣ್ಣನ್ನು ನೋಡಿದ ಎನ್ನುವುದೇ ಅವನ ಹಿರಿಮ
ಪೂಜೆ ಮಾಡಿದ್ರೆ ಹೊಸದಾಗಿ ಮದುವೆ ಆದವರು ತುಂಬಾ ಖುಷಿಯಾಗಿ ಇರ್ತಾರೆ .ಕಲಿಯುಗದ ದೈವನಾದ ಹನುಮಂತನು ಬ್ರಹ್ಮಚಾರಿಯಲ್ಲ,ಅವನು ಸಹ ಮದುವೆಯಾಗಿದ್ದನು,ಅವನಿಗೂ ಪತ್ನಿಯಿದ್ದಾಳೆ ಎನ್ನುವುದು ತಿಳಿಯುತ್ತದೆ.ಇವರಿಗೆ ಪೂಜೆ ಸಲ್ಲಿಸಿದರೆ ಅವರು ನಮ್ಮ ವಿವಾಹಿತ ಜೀವನವನ್ನು ಸಂತೋಷದಿಂದ ಇಡುವರು. ಹನುಮಂತ ದೇವನನ್ನು ಬ್ರಹ್ಮಚಾರಿ ಎಂದು ಪರಿಗಣಿಸಲಾಗಿದೆ. ಆದರೆ ಇವರಿಗೆ ಹೆಂಡತಿ ಅಥವಾ ಮಗನ ತಂದೆಯಾಗಿರುವ ವಿಷಯ ಅಷ್ಟಾಗಿ ಯಾರಿಗೂ ತಿಳಿದಿಲ್ಲ.ಆದರೂ ಈ ವಿಷಯ ಸುದ್ದಿಯಲ್ಲಿದೆ. ( ಪತ್ನಿ ಮುಕರಿ ) ಈ ಕಥೆಯಲ್ಲಿ ಹನುಮಂತನ ಮಗ ಮಕರದ್ವಜನು ಮಗನ ಸಮಾನನಾಗಿದ್ದು .ಹನುಮಂತನ ಪತ್ನಿಯ ಬಗ್ಗೆಯೂ ಕೆಲವೇ ಕೆಲವರಿಗೆ ಮಾತ್ರ ಈ ವಿಷಯ ಗೊತ್ತು.ಮಕರದ್ವಜ ಎಂಬ ಮಗನು ಹುಟ್ಟಿದ್ದು ಹೆಣ್ಣು ಮೊಸಳೆಯಿಂದ ಆ ಮೊಸಳೆ ಊರ್ಧ್ವ ರೇತಾ ಹನುಮಂತನ ಒಂದು ಹನಿ ದೇಹದ ಬೆವರಿನ ನೀರಿನ ಹನಿಯನ್ನು ನುಂಗಿತ್ತು. ಹನುಮಂತನು ಲಂಕಾ ಸಮುದ್ರದಲ್ಲಿ ಲಂಕೆಯನ್ನು ಸಂಪೂರ್ಣವಾಗಿ ಸುಟ್ಟ ಮೇಲೆ ಆ ಜ್ವಾಲೆಯಿಂದ ಹನುಮಂತ ದೇವನಿಗೆ ಬೆವರು ಹರಿಯ ತೊಡಗಿತು ಪರಾಶರ ಸಂಹಿತೆ ಎನ್ನುವ ಒಂದು ಲಿಖಿತ ಗ್ರಂಥದಲ್ಲಿ ಈ ಹನುಮಂತನ ಪತ್ನಿಯ ಕಥೆಯು ಉಲ್ಲೇಖ ವಾಗಿದೆ
ಇನ್ನೊಂದು ಕಥೆಯ ಪ್ರಕಾರ ಹನುಮಂತ ದೇವನ ಪತ್ನಿಯ ಹೆಸರು ಸುವರ್ಚಲಾ ದೇವಿ ಮಹರ್ಷಿ ಪರಾಶರರ ಪ್ರಕಾರ ಹನುಮಂತನು ತನ್ನ ಗುರುವಾದ ಸೂರ್ಯ ದೇವನನ್ನು ಪೂಜಿಸುತ್ತಿದ್ದನು.ತನ್ನ ಗುರುಗಳಿಂದಲೇ ವೇದಗಳನ್ನು ಕಲಿತನು ಪಾಂಡಿತ್ಯ ಹೊಂದಿದನು ಆದರೂ ಸಹ ಅವನು ಒಂದು ಮುಖ್ಯವಾದ ಧರ್ಮ ಗ್ರಂಥದ ಪ್ರಕಾರ ಹನುಮಂತನಿಗೆ ಒಂದು ವಿದ್ಯೆಯನ್ನು ಕಲಿಯಲು ಅರ್ಹತೆ ಇರಲಿಲ್ಲ. ಅದು ನವ ವ್ಯಾಕರಣ ಅಥವಾ ಒಂಬತ್ತು ಕಾಗುಣಿತಗಳು ಯಾಕೆಂದರೆ ಅದನ್ನು ಕಲಿತುಕೊಳ್ಳಲು ಮದುವೆಯಾದವರಿಗೆ ಮಾತ್ರ ಅಥವಾ ಸಂಸಾರಸ್ಥರಿಗೆ ಮಾತ್ರ ಅರ್ಹತೆ ಇತ್ತು. ಸೂರ್ಯ ದೇವನು ಮತ್ತು ಹನುಮಂತ ದೇವನು ಇಬ್ಬರು ಗುರು ಶಿಷ್ಯರಾಗಿದ್ದರು ಹನುಮಂತ ದೇವನು ತನ್ನ ಶಿಕ್ಷಣ ಮತ್ತು ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸುವ ಉದ್ದೇಶದಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು,ಮಹೇಶ್ವರರು ಸೂರ್ಯನನ್ನು ಪ್ರಚೋದಿಸಿದರು.ಆಗ ಸೂರ್ಯ ದೇವನು ಒಂದು ಸುಂದರವಾದ ಹುಡುಗಿಯನ್ನು ಸೃಷ್ಟಿಸಿದರು ಅವಳ ಹೆಸರು ಸುವರ್ಚಲಾ ದೇವಿ ಸೂರ್ಯನ ಕಿರಣಗಳಿಂದ ಮತ್ತು ಬೆಳಕಿನಿಂದ ಜನಿಸಿದವಳು.
ಹನುಮ ದೇವರು ಪತ್ನಿ ಸಮೇತರಾಗಿ ಇರುವ ಸುವರ್ಚಲಾ ದೇವಿ ದೇವಸ್ಥಾನ, ಆಂಧ್ರ ಪ್ರದೇಶ ರಾಜ್ಯದ ತೆಲಂಗಾಣ ಜಿಲ್ಲೆ ಯಲ್ಲಿದೆ. ಸುವರ್ಚಲಾ ದೇವಿಯು ಆಯೋನಿಜೆ ಯಾಗಿದ್ದವಳು. ಅವಳ ಮದುವೆಯೂ ಹನುಮಂತ ದೇವನ ಜೊತೆ ನಿಶ್ಚಯ ವಾಗಿತ್ತು. ಯಾರು ಮದುವೆಯಾಗಿರುತ್ತಾರೋ ಅವರಿಗೆ ಸಂಸಾರದ ಕರ್ತವ್ಯಗಳನ್ನು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾದ ಹೊಣೆ ಅವರಿಗಿರುವುದು. ಆದರೆ ಹನುಮಂತನಿಗೆ ಮದುವೆಮಾಡಿದ್ದು ಗೃಹಸ್ಥ ನನ್ನಾಗಿ ಮಾಡಲು ಅಲ್ಲ ಬದಲಾಗಿ ಒಂದು ವಿದ್ಯಾಬ್ಯಾಸಕ್ಕಾಗಿ. ಆದರೆ ಹನುಮಂತನನ್ನು ವಿವಾಹಕ್ಕೆ ಒಪ್ಪಿಸಲು ಅಷ್ಟು ಸುಲಭ ವಾಗಿರಲಿಲ್ಲ.ಈ ಪುರಾತನ ದೇವಸ್ಥಾನ ದಕ್ಷಿಣ ಭಾರತದ ಅಂದ್ರ ಪ್ರದೇಶ ರಾಜ್ಯದಲ್ಲಿದೆ ಇಲ್ಲಿಗೆ ಯಾರು ಬಂದು ಪೂಜಿಸಿದರೂ ಸಹ ಮದುವೆಗೆ ತೊಂದರೆಗಳನ್ನು ಹೊಂದಿರುವವರು ಇಂದಿಗೂ ಸಹ ಅವರ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ.ಹನುಮಂತನು ಬ್ರಹ್ಮಚಾರಿ ಯಾಗಿಯೇ ಇರುವುದಾಗಿ ಪ್ರತಿಜ್ಞೆ ಮಾಡಿದ್ದನು:
ಈ ರೀತಿಯ ಒಂದು ಸಂಬಂಧ ಬಂದ ತಕ್ಷಣವೇ ಹನುಮಂತ ದೇವನು ಗೊಂದಲಕ್ಕೆ ಒಳಗಾದರೂ ಆ ಸಂಗತಿಯನ್ನು ಸಪ್ರಮಾಣವಾಗಿ ಅವನು ನಿರಾಕರಿಸಿದನು ನಂತರ ಸೂರ್ಯದೇವನು ಹನುಮಂತನನ್ನು ಗುರು ದಕ್ಷಿಣೆಯಾಗಿ ಸುವರ್ಚಲಾ ದೇವಿಯನ್ನು ಮದುವೆಯಾಗು ಎಂದು ಕೇಳಿಕೊಂಡನು. ಸೂರ್ಯ ದೇವನು ಹನುಮಂತ ದೇವರಿಗೆ ಈ ರೀತಿ ವಿವರಿಸಿದ್ದನು ಸುವರ್ಚಲಾ ದೇವಿ ಇನ್ನೂ ಕನ್ಯೆಯಾಗಿದ್ದು, ನಾನು ನಿನಗೆ ವರವನ್ನು ನೀಡುತ್ತಿದ್ದೇನೆ ನೀನು ಮದುವೆಯಾದರೂ ಸಹ ಬ್ರಹ್ಮಚಾರಿಯಾಗಿಯೇ ಉಳಿಯುವೆ. ನಿನ್ನ ಮದುವೆ ಈ ವಿಶ್ವದ ಒಳಿತಿಗಾಗಿ ಮಾತ್ರ ಮತ್ತು ಈ ವಿವಾಹದಿಂದ ನಿನ್ನ ಮೇಲೆ ಯಾವುದೇ ಪರಿಣಾಮವೂ ಸಹ ಬೀರುವುದಿಲ್ಲ ನೀನು ಬ್ರಹ್ಮಚರ್ಯವನ್ನೇ ಪಾಲಿಸಬಹುದು. ಸುವರ್ಚಲಾ ದೇವಿಯು ಸೂರ್ಯನ ಮಗಳು :ಹನುಮಂತನನ್ನು ಮದುವೆಯಾಗಲು ಬಂದಳು. ಹನುಮಂತನಿಗೆ ಮದುವೆಯಾದ ಮೇಲೆ ಅವಳು ತಕ್ಷಣ ತಪ್ಪಸ್ಸಿಗೆ ಕುಳಿತು ಕೊಂಡಳು ಅವಳನ್ನು ಸುವರ್ಚಲಾ ದೇವಿ ಯೆಂದೇ ದಕ್ಷಿಣ ಭಾರತದಲ್ಲಿ ಪೂಜಿಸ ಲಾಗುತ್ತದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುದಲ್ಲಿರುವ ಹನುಮಂತ ದೇವಾಲಯ ಸುಮಾರು 2 ಸಾವಿರ ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ.ತ್ರೇತಾಯುಗದಲ್ಲಿ ಹೇಮಾಡಪಂತಿ ರಾಕ್ಷಸರು ಕಟ್ಟಿದ ದೇವಸ್ಥಾನ ತ್ರೇತಾಯುಗದಲ್ಲಿ ಚಾಳಿಕಾಸುರ ಹಾಗೂ ಚಾಳಿಕಾದೇವಿ ಎನ್ನುವ ಇಬ್ಬರು ರಾಕ್ಷಸ ದಂಪತಿಗಳಿದ್ದರಂತೆ, ಆ ದಂತಿಗಳ ಪೈಕಿ ಚಾಳಿಕಾಸುರನ ಹೆಂಡತಿ ಚಾಳಿಕಾದೇವಿಯು ಅಪ್ಪಟ ರಾಮನ ಭಕ್ತೆಯಾಗಿದ್ದಳಂತೆ. ತನ್ನ ಹೆಂಡತಿಯ ಆಸೆಯಂತೆ ಚಾಳಿಕಾಸುರ ರಾಕ್ಷಸನು ಚಾಳಿಕಾದೇವಿಗೆ ಒಂದೇ ಒಂದು ರಾತ್ರಿಯಲ್ಲಿ ದೇವಾಲಯವೊಂದನ್ನು ನಿರ್ಮಾಣ ಮಾಡಿ ಚಾಳಿಕಾದೇವಿಗೆ ಉಡುಗೊರೆಯಾಗಿ ಕೊಡುತ್ತಾನಂತೆ. ಆ ದೇವಾಲಯ ನಿರ್ಮಾಣವಾದ 5 ಗಂಟೆಯಲ್ಲಿ ದೇವಾಲಯದ ಗರ್ಬಗುಡಿಯಲ್ಲಿ ಹನುಮನ ಮೂರ್ತಿ ಉದ್ಭವವಾಗಿ ಅಚ್ಚರಿಯನುಂಟು ಮಾಡಿತ್ತು ಎಂಬ ಇತಿಹಾಸ ಇದೆ. ಹೀಗಾಗಿ ಚಳಕಾಪುರ ಹನುಮಂತ ದೇವಾಲಯವನ್ನು ಉದ್ಬವ ಮೂರ್ತಿ ಎಂದು ಕರೆಯಲಾಗುತ್ತದೆ.
ಸಾಂಗಲಿ ಜಿಲ್ಲೆಯ ಕೃಷ್ಣಾ ನದಿಯ ದಂಡೆಯ ಮೇಲೆ ಬಹೆ-ಬೋರ್ಗಾಂವ ಎಂಬ ಹೆಸರಿನ ದ್ವೀಪವಿದೆ. ಕೃಷ್ಣಮಾಯಿಯ ಹರಿವಿನಿಂದ ಮಧ್ಯದಲ್ಲಿ ದ್ವೀಪವೊಂದು ರೂಪುಗೊಂಡಿದೆ. ಪ್ರವಾಸದಲ್ಲಿದ್ದಾಗ ಒಮ್ಮೆ ಸಜ್ಜನಗಡದ ಸಮರ್ಥ ರಾಮದಾಸ ಸ್ವಾಮಿಗಳು ಈ ದ್ವೀಪದಲ್ಲಿ ಧ್ಯಾನ ಮಾಡುತ್ತಿದ್ದಾಗ ಈ ಸ್ಥಳವು ಹನುಮಂತ ದೇವರಿಗೆ ಸೇರಿದೆ ಎಂದು ಅಂತಹ ಆಂತರಿಕ ಸ್ಪಂದನ ಕಂಪನಗಳನ್ನು ಅನುಭವಿಸಿದರು. ರಾವಣನನ್ನು ಕೊಂದ ನಂತರ, ರಾಮ, ಲಕ್ಷ್ಮಣ ಮತ್ತು ಸೀತೆ ಅಯೋಧ್ಯೆಗೆ ಹಿಂದಿರುಗುವಾಗ ಆ ದ್ವೀಪದಲ್ಲಿ ಉಳಿದು ಕೊಳ್ಳಬೇಕಾಯಿತು. ಶ್ರೀ ರಾಮಚಂದ್ರ ದೇವರು ದ್ವೀಪದ ಮೇಲೆ ಸಂಧ್ಯಾವಂದನೆ ಮಾಡುತ್ತಿದ್ದಾಗ ಆ ಸ್ಥಳವು ಇದ್ದಕ್ಕಿದ್ದಂತೆ ಕೃಷ್ಣಮಾಯಿಯ ರಭಸದ ಪ್ರವಾಹಕ್ಕೆ ಒಳಗಾಯಿತು. ರಾಮಚಂದ್ರದೇವರ ಉಪಾಸನೆಗೆ ಪೂಜೆಗೆ ಭಂಗ ಬರಬಹುದು ಎಂದು ಹನುಮಂತ ದೇವರು ಶಂಕಿಸಿದರು. ಆದ್ದರಿಂದ ಹನುಮಂತ ದೇವರು ಪರ್ವತದಂತಹ ದೈತ್ಯಾಕಾರದ ರೂಪವನ್ನು ಧರಿಸಿ ತನ್ನ ಎರಡೂ ತೋಳುಗಳಿಂದ ಕೃಷ್ಣಮಾಯಿಯ ಹರಿವನ್ನು ತಡೆದರು. ಕೃಷ್ಣಮಾಯಿಯು ಎರಡು ದಿಕ್ಕುಗಳಲ್ಲಿ ಹರಿಯಲು ಪ್ರಾರಂಭಿಸಿದಳು ಮತ್ತು ಈ ರಭಸ ಹರಿವಿನ ನಡುವೆ ರೂಪುಗೊಂಡ ದ್ವೀಪದಲ್ಲಿ ಶ್ರೀರಾಮಚಂದ್ರದೇವರು ಸಂಧ್ಯಾವಂದನೆ ಉಪವಾಸನೆಯನ್ನು ಮುಂದುವರೆಸಿದರು. ಅಂತಹ ಈ ಪವಿತ್ರ ದ್ವೀಪದಲ್ಲಿ ಅವರು ಏಕಾಗ್ರತೆಯಲ್ಲಿ ಧ್ಯಾನಮಾಡುತ್ತಿರುವುದರ ಅನುಭವವಾಗಿ ಸಮರ್ಥರಿಗೆ ಈ ಕಲ್ಪನೆಯಿಂದಲೇ ರೋಮಾಂಚನವಾಯಿತು. ಈ ನೀರನ್ನು ತಡೆದ ಹನುಮಂತದೇವರು ಇಲ್ಲೇ ಎಲ್ಲೋ ಇರಬೇಕು ಎಂದು ಸಮರ್ಥರಿಗೆ ಅನಿಸಿತು. ಹನುಮಂತದೇವರನ್ನು ಹುಡುಕಲು ನೀರಿಗೆ ಧುಮುಕಿದರು. ಸಮರ್ಥ ರಾಮದಾಸರು ಸಮರ್ಥ ಈಜುಗಾರರಾಗಿದ್ದರು. ಅವರ ಕುಂಭಕ ಅಧ್ಯಯನದಿಂದಾಗಿ, ಜಲಾಂತರ್ಗಾಮಿ ನೌಕೆಯಂತೆ ನೀರಿನಲ್ಲಿ ದೀರ್ಘಕಾಲ ಉಳಿಯಬಹುದಾದ ಶಕ್ತಿ ಇತ್ತು. ಸಮರ್ಥರು ಕೃಷ್ಣವೇಣಿಯ ಹರಿವ ಜಲಾಶಯದಿಂದ ಮುಖ್ಯಪ್ರಾಣದೇವರ ವಿಗ್ರಹವನ್ನು ಕಂಡುಕೊಂಡರು. ಇಂದಿಗೂ ಬಹೆ-ಬೋರ್ಗಾಂವದಲ್ವಿ ಹನುಮಂತದೇವರ ಭವ್ಯವಾದ ವಿಗ್ರಹವನ್ನು ನೋಡಬಹುದು. ಹೀಗೇ ಸಮರ್ಥ ರಾಮದಾಸರು ನೂರಾರು ಹನುಮಂತನ ದೇವಾಲಯಗಳನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಿದರು ಎಂದು ಪ್ರಚೀತಿ. ಅವುಗಳಲ್ಲಿ ಹನ್ನೊಂದು ಮಾರುತಿ ದೇವಾಲಯಗಳನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಹನ್ನೊಂದು ಮಾರುತಿದೇವಾಲಯಗಳಲ್ಲಿಯ ಬಹೆ-ಬೋರ್ಗಾಂವದಲ್ಲಿಯ ಎರಡು ದೇವಾಲಯಗಳಿವೆ ಮತ್ತು ಚಾಫಲ, ಶಿಂಗನವಾಡಿ, ಮಜಗಾಂವ, ಉಂಬರಜ, ಮಸೂರ, ಶಹಾಪುರ, ಬತ್ತೀಸ ಶಿರಾಲಾ, ಮಾನ್ಪಡ್ಲೆ ಮತ್ತು ಪರಗಾಂವಗಳಲ್ಲಿ ನೋಡ ಸಿಗುತ್ತವೆ.
ಮುಂದುವರಿಯುವುದು
मातर्मे मातरिश्वन् पितरतुल गुरों भ्रातरिष्टाप्त बंधो | स्वामिन् सर्वांतरात्मन्नजर जरयइतर्जन्ममृत्या मयानां | गोविन्दे देहि भक्तिं भवति च भगवन्नूर्जितां निर्निमित्तां | निर्व्याज्यां निश्चलां सद्गुणगणबृहतीं शाश्वती माशुदेव||
No comments:
Post a Comment