Please listen video of this post on YouTube channel CLICK HERE
YAMAASHTAKA STOTRAM ಯಮಾಷ್ಟಕ ಸ್ತೋತ್ರಂ
ಹೇ ಯಮಧರ್ಮನೇ !
ಬ್ರಹ್ಮಾಂಶ ಸಂಭೂತನಾದ ನೀನು ಪಾಪಾತ್ಮರಿಗೆ ಶತ್ರು, ಪುಣ್ಯಾತ್ಮರಿಗೆ ಮಿತ್ರ, ಹಾಗು ಸರ್ವಜ್ಞನು, ಬ್ರಹ್ಮ ತೇಜಸ್ಸಿನಿಂದ ಪ್ರಕಾಶಿಸುವೆ. ಪರಬ್ರಹ್ಮನನ್ನು ನಿರಂತರವಾಗಿ ಧ್ಯಾನಿಸುತ್ತಿರುವವನು ಮತ್ತು ಪರಮೇಶನೂ ನೀನೆ, ನಿನಗೆ ಸಹಸ್ರ ನಮಸ್ಕಾರಗಳು. ಎಂದು ಸಾವಿತ್ರಿದೇವಿ ಭಕ್ತಿಯಿಂದ ಕರುಣೆಯನ್ಯನು ಬೇಡಿ ಯಮಧರ್ಮನನ್ನು ಸ್ತುತಿಸುತ್ತಾಳೆ.
ಈ ಯಮಾಷ್ಟಕವನ್ನು ಪ್ರಾತಃ ಕಾಲ ಸ್ನಾನಾದಿ ನಿತ್ಯಕರ್ಮಗಳನ್ನು
ಪೂರೈಸಿದ ನಂತರ ನಿತ್ಯವೂ ಭಕ್ತಿ ಭಾವದಿಂದ ಪಠಿಸಿದರೆ ಮೃತ್ಯು ಭಯವಿಲ್ಲ, ಸಕಲ ಪಾಪಗಳು ನಾಶವಾಗಿ ಯಮನ ಕೃಪೆಯಿಂದ ಮನೋ ವಾಂಛಿತಗಳು ಶುದ್ಧಿಶರನ್ನವರಾತ್ರಿಯ ಸಂದರ್ಭದಲ್ಲಿ ನಿಷ್ಠೆಯಿಂದ ಜಪಿಸಿದರೆ ಶ್ರೀ ಜಗನ್ಮಾತೆಯು ನಮ್ಮ ಬೇಡಿಕೆಗಳಿಗಿಂತಲೂ ನೂರ್ಮಡಿ ಹೆಚ್ಚು ಅನುಗ್ರಹಿಸುವಳು ಎಂಬ ನಂಬಿಕೆಯಿದೆ, ಗಾಯತ್ರಿ ದೇವಿಯ ಪ್ರೀತ್ಯರ್ಥವಾಗಿ ತಪ್ಪದೆ ಪಠಿಸಬೇಕು.
ಯಮಾಷ್ಟಕ ಸ್ತೋತ್ರಂ
ಓಂ ತಪಸಾಧರ್ಮಮಾರಾಧ್ಯ ಪುಷ್ಕರೇ ಭಾಸ್ಕರಃ ಪುರಾ |ಧರ್ಮಂ ಸೂರ್ಯಸ್ಸುತಂ ಪ್ರಾಪ ಧರ್ಮರಾಜಂ ನಮಾಮ್ಯಹಂ || ೧ ||
ಸಮತಾ ಸರ್ವ ಭೂತೇಷು ಯಸ್ಯ ಸರ್ವಸ್ಯ ಸಾಕ್ಷಿಣಿ: |ಅತೋಯನ್ನಾಮ ಶಮನಂ ಇತೀ ತಂ ಪ್ರಣಮಾಮ್ಯಹಂ || ೨ ||
ಯೇ ನಾಂತಶ್ಚ ಕೃತೋ ವಿಶ್ವೇ ಸರ್ವೇಷಾಂ ಜೀವಿನಾಂ ಪರಃ |ಕಾಮಾನುರೂಪಂ ಕಾಲೇನ ತಂ ಕೃತಾಂತಂ ತು ನಮಾಮ್ಯಹಂ || ೩ ||
ಬಿಭರ್ತಿ ದಂಡಂ ದಂಡಾಯ ಪಾಪಿನಾಂ ಶುದ್ಧಿ ಹೇತವೇ |ನಮಾಮಿ ತಂ ದಂಡ ಧರಂ ಯಃಶಾಷ್ತಾ ಸರ್ವ ಜೀವಿನಾಂ || ೪ ||
ವಿಶ್ವಂಚ ಕಲಯತ್ಯೇವ ಯಸ್ಸರ್ವೇಷು ಚ ಸಂತತಂ |ಅತೀವ ದುರ್ನಿವಾರ್ಯಂ ಚ ತಂಕಾಲಂ ಚ ಪ್ರಣಮಾಮ್ಯಹಂ || ೫ ||
ತಪಸ್ವಿ ಬ್ರಹ್ಮನಿಷ್ಟ್ಹೋ ಯ ಸ್ಸಂಯಮೀಶಂ ಜಿತೇಂದ್ರಿಯಃ | ಜೀವಾನಾಂ ಕರ್ಮಫಲದಸ್ತು ಯಮಂ ತ್ಪ ಪ್ರಣಮಾಮ್ಯಹಂ || ೬ ||
ಸ್ವಾತ್ಮಾ ರಾಮಸ್ಚ ಸರ್ವಜ್ನೋ ಮಿತ್ರಂ ಪುಣ್ಯ ಕೃತಾಂ ಭವೇತ್ |ಪಾಪಿನಾಂ ಕ್ಲೇಶದೋ ಯಸ್ತಂ ಪುಣ್ಯ ಮಿತ್ರಂ ನಮಾಮ್ಯಹಂ || ೭ ||
ಯಜ್ಮನ್ಮ ಬ್ರಹ್ಮಣೋ0ಶೇನಂ ಜ್ವಲತಂ ಬ್ರಹ್ಮ ತೇಜಸಾ |ಯೋ ಧ್ಯಾಯಂತಿ ಪರಬ್ರಹ್ಮ ತಮೀಶಂ ಪ್ರಣಮಾಮ್ಯಹಂ || ೮ ||
|| ಶ್ರೀ ಯಮಧರ್ಮರಾಜಾರ್ಪಣಮಸ್ತು ||
No comments:
Post a Comment