Monday, February 06, 2023

RATHA SAPTAMI ರಥ ಸಪ್ತಮಿ

 RATHA SAPTAMI  ರಥ ಸಪ್ತಮಿ

ಮನೆಯಲ್ಲಿ ಮಣೆಯ ಮೇಲೆ ಸೂರ್ಯನ ಚಿತ್ರ ಬಿಡಿಸಿ ಮನೆದೇವರ ಜೊತೆಗೆ ಸೂರ್ಯ ಪೂಜೆಯನ್ನೂ ಮಾಡುವುದು

ಯದಾ ಜನ್ಮಕೃತಂ ಪಾಪಂ 

ಮಯಾ ಜನ್ಮಸು ಜನ್ಮಸು |

ತನ್ಮೇ ರೋಗಂ ಚ ಶೋಕಂ ಚ 

ಮಾಕರೀ ಹಂತು ಸಪ್ತಮಿ ||

ಏತಜ್ಜನ್ಮ ಕೃತಂ ಪಾಪಂ 

ಯಚ್ಚ ಜನ್ಮಾಂತರಾರ್ಜಿತಮ್ |

ಮನೋ ವಾಕ್ಕಯಜಂ ಯಚ್ಚ

ಜ್ಞಾತಾಜ್ಞಾತೇ ಚ ಯೇ ಪುನ: ||

ಇತಿ ಸಪ್ತವಿಧಂ ಪಾಪಂ 

ಸ್ನಾನಾನ್ಮೇ ಸಪ್ತ ಸಪ್ತಿಕೇ |

ಸಪ್ತವ್ಯಾಧಿ ಸಮಾಯುಕ್ತಂ 

ಹರ ಮಾಕರೀ ಸಪ್ತಮಿ ||

ಸಪ್ತ ಸಪ್ತ ಮಹಾಸಪ್ತ 

ಸಪ್ತದ್ವೀಪ ವಸುಂಧರಾ |

ಶ್ವೇತಾರ್ಕ ಪರ್ಣಮಾದಾಯ 

ಸಪ್ತಮೀ ರಥ ಸಪ್ತಮಿ ||

ನಮ:ಸ್ತು ಸೂರ್ಯಾಯ ಸಹಸ್ರರಶ್ಮಯೇ |  

ಸಹಸ್ರಶಾಖಾನ್ವಿತಸಂಭವಾತ್ಮನೇ |

ಸಹಸ್ರಯೋಗೋದ್ಭವಭಾವಭಾಗಿನೇ | ಸಹಸ್ರಸಂಖ್ಯಾಯುಗಧಾರಿಣೇ ನಮ: ||

ಆದಿತ್ಯಂ ಭಾಸ್ಕರಂ ಭಾನುಂ ರವಿಂ ಸೂರ್ಯಂ ದಿವಾಕರಂ |  ಷಡೇತಾನಿ ಪಠೇನ್ನಿತ್ಯಂ ಚಕ್ಷುಸ್ತಸ್ಯ ಮಹೀಯತೇ | 

ಭಾನೋ ಭಾಸ್ಕರ ಮಾರ್ತಾಂಡಾ ಚಂಡರಶ್ಮಿನ್ದಿವಾಕರ | ಆಯುರಾರೋಗ್ಯಂ ಐಶ್ವರ್ಯಂ ವಿದ್ಯಾಂ ದೇಹಿ ನಮೋಸ್ತು ತೇ |

ಈ ದಿನ ಇನ್ನೊಂದು ಕಾರ್ಯಕ್ರಮ ಪ್ರದೇಶ ಕಾಲ ಪ್ರಾಂತಗಳ ಅನುಸಾರ ಮಾಡುವ ರೂಢಿ ಇದೆ ಮದುವಣಗಿತ್ತಿಯರು, ಅದೇ ವರ್ಷ ಮದುವೆಯಾದ ಹೆಣ್ಣು ಮಕ್ಕಳು ಕಪ್ಪಾದ ಸೀರೆಯನ್ನುಟ್ಟು  ಹಳದಿ ಕುಬುಸನ್ನು ತೊಟ್ಟು ಮೇಲೆ ತಮ್ಮ ದಿನ ನಿತ್ಯದ ಆಭರಣ ಜೊತೆ ಕುಸುರೆಳ್ಳಿನ ಆಭರಣಗಳನ್ನು ತೊಟ್ಟು ಸಭ್ರಮಿಸುತ್ತಾರೆ ಬಂದ ಮುತೈದೆಯರಿಗೆ ನಮಸ್ಕರಿಸಿ ಆದರಿಸುವರು. ಹಾಗೆ ನೋಡಿದರೆ ಸಂಭ್ರಮಿಸುವುದಕ್ಕೆ ಕಾಲ ಮತ್ತು ಪ್ರಾಂತಗಳೇನೂ ಬೇಕಾಗಿಲ್ಲ 

ತಾಯಿಯರು ಕೂಸನ್ನು ಎಣ್ಣೆ ಹಚ್ಚಿ ಚೆನ್ನಾಗಿ ಎರೆದು ತಲೆ ಮೈ ಒರೆಸಿ ಹೊಟ್ಟೆತುಂಬಾ ಹಾಲು ಕುಡಿಸಿ ನಿದ್ದೆ ಮಾಡಲು ಬಿಡಬೇಕು

ಈ ದಿನ ಸಂಜೆ ಒಳಗಾಗಿ  

ಮೆತ್ತಗಾದ ಹೊಸ ಬಟ್ಟೆಗಳನ್ನು ಉಡಿಸಿ ಕಾಡಿಗೆ ಹಾಕಿ  ಕುಂಕುಮ ಬೊಟ್ಟು ಹಚ್ಚಿ ಹಾಸಿದ ದೊಡ್ಡ ಜಮಖಾನೆಯ ಮಲಗಿಸಿ / ಯಾರತೊಡೆಯ ಮೇಲಾದರೂ ಕೂಡಿಸಬೇಕು

ಒಂದು ಬೆಳ್ಳಿಯ/ ತಾಮ್ರದ/ ಹಿತ್ತಾಳೆಯ ತಂಬಿಗೆಗೇ ಅರಿಷಿಣ ಕುಂಕುಮ ಹಚ್ಚಿ ಒಳಗೆ ಅರ್ಧದಷ್ಟು ಅಕ್ಕಿ ಹಾಕಿ ಬಂಗಾರದ ಉಂಗುರವೋ/ ಲಾಕೀಟವೋ ಹಾಕೀ ತಾಯಿಯ ಜೊತೆ ಇನ್ನೂ ನಾಲ್ವರು ಮೂತೈದೆಯರು ಕೂಡಿ ದೇವರ ನಾಮ ಹೇಳುತ್ತ ಕೂಸಿನ ತಲೆಯ ಮೇಲೆ ಎರೆಯಬೇಕು  ಆ ಮೇಲೆ ಅದೇ ಬಂಗಾರದ ವಸ್ತುವಿನಿಂದ ಕೂ‌ಸಿನಮೇಲೆ ನಿವಾಳಿಸಬೇಕು ಆ  ಬಂಗಾರದ ವಸ್ತುವನ್ನು ಸುರಕ್ಷಿತವಾಗಿ ಇಟ್ಟುಕೊಂಡು  ಚೆಲ್ಲಿದ ಅಕ್ಕಿಯನ್ನು ತೆಗೆದುಬಿಡಿ

ಮತ್ತೆ ಇನ್ನೊಂದು ತಂಬಿಗೆಯಲ್ಲಿ ಅರಿಷಿಣ ಕುಂಕುಮ ಚೀಟು ಕೊಬ್ಬರಿ ತುಕಡೀ, ಚಿಕ್ಕ ಚಾಕಲೇಟ್ ಗಳು, ಜೆಮ್ಸ್, ಕಡ್ಲೆ ಬುಡ್ಡಿ ಗಳು ಕಬ್ಬಿನ ತುಂಡುಗಳನ್ನು ಒಂದು ರೂಪಾಯಿ ಐದು ನಾಣ್ಯಗಳು ಹಾಕಿ ತಯಾರಾಗಿ ಚಿಕ್ಕ ಮಕ್ಕಳನ್ನು ಕರೆದು ಕೂಡಲು ಹೇಳಿ ಮತ್ತೆ. ಮೊದಲಿನಂತೆ  ಕೂಸಿನ ತಲೆಯ ಮೇಲೆ ‌ಸಾವಕಾಶವಾಗಿ ಎರೆಯುವುದು ಕೆಳಗೆ ಬಿದ್ದವು ಗಳನ್ನು ಮಕ್ಕಳು ಆರಿಸಿ ತಿನ್ನುತ್ತಾರೆ 

ಮತ್ತೆ ಮುತೈದೆಯರು ಕೂಡಿ ಕೂ‌ಸಿಗೆ ಆರತೀ ಮಾಡುವುದು ಮನೆಯ ದೇವರ ಮುಂದೆ ಹಾಸಿ ಕೂಸನ್ನು ಮಲಗಿ‌ಸಿ ತಾವೂ ದೇವರಿಗೆ ನಮಸ್ಕಾರ ಮಾಡಿ 

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್‌|

ತತ್ ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||

ರಥಸ್ಯೇಕಂ ಚಕ್ರಂ ಭುಜಗನಮಿತಾ ಸುಪ್ತ ತುರಗ: | ನಿರಾಲಂಬೊ ಮಾರ್ಗ: ಚರಣ ವಿಕಲ ಸಾರಥಿರಪಿ ||

ರವಿರ್ಯಾತೇ ವಾತಂ ಪ್ರತಿದಿನ ಮಪಾರಸ್ಯ ನಭಸ:  ಕ್ರಿಯಾ ಸಿದ್ಧಿ ಸತ್ವೇ ವಹತಿ ಮಹತಾಂನ್ನೊಪಕಣೇ ||

 ಹೀಗೆಂದು ಶ್ಲೊಕ ಹೇಳುತ್ತ ಕೂಸನ್ನು ತೆಗೆದುಕೊಂಡು ಎಲ್ಲರಿಗು ಸಿಹಿ ಹಂಚುವ ವ್ಯವಸ್ಥೆ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಹಚ್ಚಿ ಎಲೆ ಅಡಿಕೆ ಬಾಳೆ ಹಣ್ಣು, ರವಿಕೆ ಫೀಸು, ದಕ್ಷಿಣೇ ಕೊಟ್ಟು ಆಶಿರ್ವಾದ ಪಡೆದು ಬೀಳ್ಕೊಡುವುದು

ಶುಭಂ ಭವತು



No comments:

Post a Comment