Tuesday, October 17, 2023

#Mangalarati JAYA MANGAL INDIVARAKSH ಜಯ ಮಂಗಳಂ ಇಂದೀವರಾಕ್ಷ

Mangalaarati INDIVARAKSH 
ಇಂದೀವರಾಕ್ಷ
ರಾಗ ಭೈರವಿ ಛಾಪುತಾಳ 

ಜಯ ಮಂಗಳಂ ನಿತ್ಯ ಶುಭಮಂಗಳಂ ||ಪ||
ಇಂದೀವರಾಕ್ಷಗೆ ಇಭರಾಜವರದಗೆ |ಇಂದಿರಾರಮಣ ಗೋವಿಂದ ಹರಿಗೆ |ನಂದನ ಕಂದಗೆ ನವನೀತ ಚೋರಗೆ
ವೃಂದಾರ ಕೇಂದ್ರ ಉಡುಪಿಯ ಕೃಷ್ಣಗೆ || 1 ||
ಜಯಮಂಗಳಂ ನಿತ್ಯ ಶುಭಮಂಗಳಂ

ಕ್ಷೀರಾಬ್ಧಿವಾಸಗೆ ಕ್ಷಿತಿಜನಪಾಲಗೆ
ಮಾರನ್ನ ಪಡೆದ ಮಂಗಳಮೂರ್ತಿಗೆ
ಚಾರು ಚರಣಗಳ ಚೆಲುವೆ ಗಂಗೆಯ ಪಡೆದ |ಕಾರುಣ್ಯಮೂರ್ತಿ ಕೌಸ್ತುಭಧಾರ ಹರಿಗೆ || 2 ||
ಜಯಮಂಗಳಂ ನಿತ್ಯ ಶುಭಮಂಗಳಂ

ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತ ಪದ ಸಕಲೇಶಗೆ
ವಾಸುದೇವಮೂರ್ತಿ ಪುರಂದರವಿಠಲಗೆ
ದಾಸರ ಕಾಯ್ವ ರುಕ್ಮಿಣೀ ರಮಣಗೆ
ಜಯಮಂಗಳಂ ನಿತ್ಯ ಶುಭಮಂಗಳಂ ||3 ||

                               ..... ಪುರಂದರ ದಾಸರು 

No comments:

Post a Comment