Saturday, November 04, 2023

DASHAHARAA SANKALPA ದಶಹರಾ ಸಂಕಲ್ಪ

              ದಶಹರಾ ಸಂಕಲ್ಪ 
ಶ್ರೀ ಗುರುಭ್ಯೋ ನಮಃ ಹರಿ: ಓಂ
      ಆಗಮಿಸಿದ ಪಾತ್ರ ಬ್ರಾಹ್ಮಣರನ್ನು ದಕ್ಷಿಣದಿಕ್ಕನ್ನೊಂದು ಬಿಟ್ಟು ಮಣೆಯ ಮೇಲೆ ಕುಳ್ಳಿರಲು ಹೇಳಿ ಮಣೆಯ ಮುಂದೆ ಬಾಳೆ ಎಲೆಯಾಗಲೀ, ಮುತ್ತಲು ಎಲೆಯಾಗಲಿ ಇಟ್ಟು ಸುತ್ತಲೂ ರಂಗೋಲಿ ಹಾಕಬೇಕು ಅಥವಾ ಕಬ್ಬಿಣದ ತಟ್ಟೆಯೊಂದನ್ನು ಬಿಟ್ಟು ಉಳಿದ ಯಾವುದೇ ಲೋಹದ ತಟ್ಟೆ ಇಟ್ಟು ರಂಗೋಲಿಯನ್ನು ಹಾಕುವುದು. ದೇವರ ಮುಂದೆ ದೀಪ ಹಚ್ಚಿರಬೇಕು.ಮಣೆಯ ಮುಂದೆ ನೀಲಾಂಜನವನ್ನು ಹಚ್ಚಿ  ಬ್ರಾಹ್ಮಣ ಪೂಜೆ ಮಾಡುವುದು..ನಮೋಸ್ತುನಂತಾಯ.........ಯುಗಧಾರಿಣೇ ನಮಃ  ಎಂದು ಹೇಳಿ ಅವರ ತಲೆಯ ಮೇಲೆ ಅಕ್ಷತೆ ಹಾಕಿಕೊಳ್ಳಲು ವಿನಂತಿಸಿಕೊಳ್ಳಬೇಕು, ಮತ್ತೆ ಅವರ ಕೈಯಲ್ಲಿ ಕೊಟ್ಟು ನಿಮ್ಮ ತಲೆಯ ಮೇಲೆ ಹಾಕಲು ಹೇಳಬೇಕು ನಂತರ ದಾನ ವಸ್ತುಗಳನ್ನು ( ಕನಿಷ್ಠ  ಹನ್ನೊಂದು ನಗಗಳು )ತಟ್ಟೆಯಲ್ಲಿ ಇಟ್ಟು  ಒಂದು ಕಲಶವನ್ನು ಇಟ್ಟು ನೀರು ಹಾಕಿ ಅರಿಶಿಣ ಕುಂಕುಮ ಹಚ್ಚಿ  ನೀರಲ್ಲೂಹಾಕಿ ದಕ್ಷಿಣೆಯನ್ನು ಹಾಕಬೇಕು ಕಲಶ ಪೂಜೆ ಮಾಡುವುದು ಗಂಗೆಯನ್ನು ಆವಾಹಿಸ ಬೇಕು...ಗಂಗೇಚ ಯಮುನೆ ಚೈವ....    ನಂತರ ಬ್ರಾಹ್ಮಣರ ಕಡೆಯಿಂದ ಸಂಕಲ್ಪ ಕೇಳಿಸಿಕೊಳ್ಳಬೇಕು, ಅಥವಾ ಯಜಮಾನ ತಾನೆ ಹೇಳಬಹುದು ಅಕ್ಷತೆ ಕೈಯಲ್ಲಿ ಹಿಡಿದು ನೀರು ಬಿಡುವುದು  ತಾವು ಕೈ ಹಚ್ಚಿ ಮುಂದೆ ಸೇರಿಸುವುದು, ಬ್ರಾಹ್ಮಣರಿಗೂ ಕೈ ಹಚ್ಚಲು ಹೇಳಬೇಕು  ದಾನ ವಸ್ತುವಿಗೆ ಮತ್ತು ಗಂಗೆಗೂ ಮಂಗಳಾರತಿ ಮಾಡುವುದು.   ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆಯುವುದು.     

 
      ದೇಶಕಾಲೌ ಸಂಕೀರ್ತ್ಯ ಸಹಕುಟುಂಬಸ್ಯ ಮಮ ಏತಜ್ಜನ್ಮ ಜನ್ಮಾಂತರ ಸಮುದ್ಭೂತ ತ್ರಿವಿಧ ಕಾಯಕ ಚತುರ್ವಿಧ ವಾಚಿಕ ತ್ರಿವಿಧ ಮಾನಸೇತಿ ಸ್ಕಾಂದೊಕ್ತಂ ದಶವಿಧ ಪಾಪ ಪರಿಹಾರ ಪೂರ್ವಕಂ ಪಿತೃ ದ್ವಾರಾ ಬ್ರಹ್ಮ ಲೋಕ ಪ್ರಾಪ್ದ್ಯಾದಿ ಫಲ ಪ್ರಾಪ್ಯರ್ಥಂ ಯಥಾಸಂಭವ  ದಶಯೋಗ ಪರ್ವಣಿ  ಶ್ರೀ  ಗಂಗಾಂಬಾ ಪೂಜನಂ ಪುಜಾಂಗತ್ವೇನ ವಿಹಿತ ಫಲ ದಾನ ಮಹಂ ಚ ಕರಿಷ್ಯೇ ||  ನಮೋ ಭಗವತೇ ದಶಪಾಪ ಹರಾಯೈ ಗಂಗಾಯೈ‌ ನಾರಾಯಣೈ ರೇವತ್ಯೈ ಶಿವಾಯೈ ದಕ್ಷಾಯೈ            ಅಮೃತಾಯೈ ವಿಶ್ವರೂಪಿಣ್ಯಿ ತೇ ನಮೋನಮಃ ನಮಃ  ಈ ಮಂತ್ರದಿಂದ ಆವಾಹನೆಮಾಡಿ ನಾರಾಯಣಾಯ  ನಮಃ ನಾರಾಯಣಂ ಆವಾಹ ಯಾಮಿ ರುದ್ರಾಯ .....ಬ್ರಹ್ಮ ಣೇ........ಸೂರ್ಯಾಯ .......ಭಗೀರಥಾಯ ......ಹಿಮಾಚಲಾಯ ಹೀಗೆ ಎಲ್ಲರನ್ನೂ ಆವಾಹಿಸಿ “ ಸಪರಿವಾರ ಶ್ರೀ ಗಂಗಾಂಬಾಯೈ ನಮಃ “ ಈ ಮಂತ್ರದಿಂದ ಪೂಜಿಸಬೇಕು.ಆ ಮೇಲೆ ದಾನೀಯ ಫಲಸ್ಥಿತ “ ಶ್ರೀ ಮಹಾವಿಷ್ಣವೆ ನಮಃ  ಉಪಚಾರಾರ್ಥೆ ಅಕ್ಷತಾನ್ ಸಮರ್ಪಯಾಮಿ “ ಎಂದು ಅಕ್ಷತೆ ಹಾಕಿ ದಾನ ಮಾಡಬೇಕು  . ಪ್ರಾರ್ಥನಾ : ಆದತ್ತನಾನ್ ಮುಪಾದಾನಂ ಹಿಂಸಾ ಚ್ಯೈ ವಾವಿಧಾನತಃ ಪರದಾರೋಪ ಸೇವಾ ಚ ಕಾಯಿಕಂ ತ್ರಿವಿಧಂ ಸೃತಂ ಪಾರುಷ್ಯ ಮನೃತಂ ಚ್ಯೈವ ಪೈಶೂನ್ಯಮ್ ಚಾಪಿ ಸರ್ವಶಃ  ಅಸಂಬಧ್ಧ ಪ್ರಾಲಾಪಶ್ಚ್ಯ ವಾಙ್ಮಯಂ ಸ್ಯಾ ಚ್ಚತುರ್ವಿಧಂ ಪರದ್ರವ್ಯೈ ಷ್ಟ್ವಭಿಧ್ಯಾನಂ ಮನಸಾನಿಷ್ಟ ಚಿಂತನಂ ವಿತಥಾಭಿನಿವೇಷಸ್ಚ್ಯ ಮಾನಸಂ  ತ್ರಿವಿಧಂ ಸೃತಂ ಏತಾನಿ ದಶಪಾಪಾನಿ ಹರತ್ವ ಮಮ ಜಾಹ್ನವಿ ದಶಪಾಪಹರಾ ಯಸ್ಮಾತ್ತಸ್ಮಾದ್ದಶಹರಾ ಸ್ಮೃತಾ : .....   

           ಶ್ರೀ ಗಂಗಾ‌ ದಶಹರ ಸ್ತೋತ್ರ ಸ್ಕಂದ ಪುರಾಣ
ಉತ್ತರ ಭಾರತದಲ್ಲಿ ಗಂಗಾ ದಶಹರ. ಜೇಷ್ಠ ಶುದ್ಧ ದಶಮಿ ವರೆಗೂ ಗಂಗೆಯನ್ನು ಪೂಜಿಸುತ್ತಾರೆ. ದಶಹರಾ ದಾನವೂ ಕೊಡುವ ರೂಢಿ ಇದೆ. ಸ್ಕಂದ ಪುರಾಣದ ಈ ಸ್ತೋತ್ರ ಹೇಳುವುದರಿಂದ ಗಂಗಾ ಸ್ನಾನದ ಫಲ ಬರುತ್ತದೆ ಎಂಬ ನಂಬಿಗೆ ಇದೆ.
ಶ್ರೀ ಗಂಗಾ‌ ದಶಹರ ಸ್ತೋತ್ರ

ಬ್ರಹ್ಮೋವಾಚ --
ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ । ನಮಸ್ತೇ ರುದ್ರರೂಪಿಣ್ಯೈ ಶಾಂಕರ್ಯೈ ತೇ ನಮೋ ನಮಃ ॥ 1॥

ನಮಸ್ತೇ ವಿಶ್ವರೂಪಿಣ್ಯೈ ಬ್ರಹ್ಮಾಮೂರ್ತ್ಯೈ ನಮೋ ನಮಃ । ಸರ್ವದೇವಸ್ವರೂಪಿಣ್ಯೈ ನಮೋ ಭೇಷಜಮೂರ್ತಯೇ ॥ 2॥

ಸರ್ವಸ್ಯ ಸರ್ವವ್ಯಾಧೀನಾಂ ಭಿಷಕ್ಷ್ರೇಷ್ಠ್ಯೈ ನಮೋಽಸ್ತು ತೇ । ಸ್ಥಾಣುಜಂಗಮಸಮ್ಭೂತವಿಷಹನ್ತ್ರ್ಯೈ ನಮೋ ನಮಃ ॥ 3॥

ಭೋಗೋಪಭೋಗದಾಯಿನ್ಯೈ ಭೋಗವತ್ಯೈ ನಮೋ ನಮಃ । ಮಂದಾಕಿನ್ಯೈ ನಮಸ್ತೇಽಸ್ತು ಸ್ವರ್ಗದಾಯೈ ನಮೋ ನಮಃ ॥ 4॥

ನಮಸ್ತ್ರೈಲೋಕ್ಯಭೂಷಾಯೈ ಜಗದ್ಧಾತ್ರ್ಯೈ ನಮೋ ನಮಃ । ನಮಸ್ತ್ರಿಶುಕ್ಲಸಂಸ್ಥಾಯೈ ತೇಜೋವತ್ಯೈ ನಮೋ ನಮಃ ॥ 5॥

ನಂದಾಯೈ ಲಿಂಗಧಾರಿಣ್ಯೈ ನಾರಾಯಣ್ಯೈ ನಮೋ ನಮಃ । ನಮಸ್ತೇ ವಿಶ್ವಮುಖ್ಯಾಯೈ ರೇವತ್ಯೈ ತೇ ನಮೋ ನಮಃ ॥ 6॥

ಬೃಹತ್ಯೈ ತೇ ನಮಸ್ತೇಽಸ್ತು ಲೋಕಧಾತ್ರ್ಯೈ ನಮೋ ನಮಃ । ನಮಸ್ತೇ ವಿಶ್ವಮಿತ್ರಾಯೈ ನಂದಿನ್ಯೈ ತೇ ನಮೋ ನಮಃ ॥ 7॥

ಪೃಥ್ವ್ಯೈ ಶಿವಾಮೃತಾಯೈ ಚ ಸುವೃಷಾಯೈ ನಮೋ ನಮಃ । ಶಾಂತಾಯೈ ಚ ವರಿಷ್ಠಾಯೈ ವರದಾಯೈ ನಮೋ ನಮಃ ॥ 8॥

ಉಸ್ರಾಯೈ ಸುಖದೋಗ್ಧ್ರ್ಯೈ ಚ ಸಂಜೀವಿನ್ಯೈ ನಮೋ ನಮಃ । ಬ್ರಹ್ಮಿಷ್ಠಾಯೈ ಬ್ರಹ್ಮದಾಯೈ ದುರಿತಘ್ನ್ಯೈ ನಮೋ ನಮಃ ॥ 9॥

ಪ್ರಣತಾರ್ತಿಪ್ರಭಂಜಿನ್ಯೈ ಜಗನ್ಮಾತ್ರೇ ನಮೋಽಸ್ತು ತೇ
ಸರ್ವಾಪತ್ಪ್ರತಿಪಕ್ಷಾಯೈ ಮಂಗಲಾಯೈ ನಮೋ ನಮಃ ॥ 10॥

ಶರಣಾಗತದೀನಾರ್ತಪರಿತ್ರಾಣಪರಾಯಣೇ ।
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತುತೇ ॥ 11॥

ಇತಿ ಶ್ರೀ ಸ್ಕಂದ ಮಹಾಪುರಾಣೇ ಏಕಾದಶೀತಿ ಸಾಹಸ್ರ್ಯಾಂ ಸಂಹಿತಾಯಾಂ  ಕಾಶೀಖಂಡೇ ತೃತೀಯ ಅಧ್ಯಾಯ ಧರ್ಮಾಬ್ಧಿಸ್ಥಾ ಗಂಗಾಸ್ತುತಿಃ ಶ್ರೀಗಂಗಾ ದಶಹರಾಸ್ತೋತ್ರಂ ಸಂಪೂರ್ಣಮ್ ।
                ಶ್ರೀ ಕೃಷ್ಣಾರ್ಪಣಮಸ್ತು 

 
                                                                                       


No comments:

Post a Comment