Saturday, November 04, 2023

DHATRI DAMODARA PUJA ಧಾತ್ರಿ ಮೂಲೇ ದಾಮೋದರ ಪೂಜಾ

 ಧಾತ್ರಿ ಮೂಲೇ  ದಾಮೋದರ ಪೂಜಾ         
( ಕಾರ್ತೀಕ ಶುಕ್ಲ ತ್ರಯೋದಶಿ ದಿವಸ ಮಾಡುವ ನೆಲ್ಲಿ ಗಿಡದ ಪೂಜಾ ವಿಧಿ )
ಮಮ ಸರ್ವ ಪಾಪ ಕ್ಷಯ ದ್ವಾರಾ ಶ್ರೀ ದಾಮೋದರ ಪ್ರೀತ್ಯರ್ಥಂ ಧಾತ್ರೀ ಮೂಲೆ ಶ್ರೀ ದಾಮೋದರ ಪುಜಾಂ  ಕರಿಷ್ಯೇ. ಪುರುಷ ಸೂಕ್ತದಿಂದ ಷೋಡಶೋಪಚಾರ ಪೂಜೆ ಮಾಡಿ 

ಅರ್ಘ್ಯಂ ಗ್ರಹಾಣ ಭಗವಾನ ಸರ್ವ ಕಾಮಪ್ರದೋ ಭವ | 
ಅಕ್ಷಯಾ ಸಂತತಿ ರ್ಮೋಸ್ತು ದಾಮೋದರ ನಮೋಸ್ತುತೆ. || 
ಆಮೇಲೆ ಪ್ರಾರ್ಥನೆ, ಗಂಧ, ಪುಷ್ಪ, ಅಕ್ಷತೆ, ಅರಿಶಿಣ, 
ಧಾತ್ರಿ ಗಿಡವನ್ನು  ನಾಮ ಮಂತ್ರಗಳಿಂದ ಪೂಜಿಸಬೇಕು. 
ಧಾತ್ರೈ ನಮಃ,  ಶಾಂತೈ, ಮೆಧಾಯೈ, ಪ್ರಕ್ರುತೈ, ವಿಶ್ನುಪತೈ, 
ಮಹಾಲಕ್ಷ್ಮೈ, ರಮಾಯೈ, ಕಮಲಾಯೈ, ಇಂದಿರಾಯೈ, 
ಲೋಕ ಮಾತ್ರೈ, ಕಲ್ಯಾಣೈ, ಕಮನೀಯಾಯೈ, ಸಾವಿತ್ರೈ, 
ಜಗದ್ಧಾತ್ರೈ, ಗಾಯತ್ರೈ, ಸುಧೃತೈ, ಅವ್ಯಕ್ತಾಯೈ, 
ವಿಶ್ವ ರೂಪಾಯೈ, ಸುರೂಪಾಯೈ , ಅಭ್ಧಿ ಭವಾಯೈನಮಃ.  || 
ಧಾತ್ರಿ ಮೂಲದಲ್ಲಿ ಸವ್ಯದಿಂದ ತರ್ಪಣ ಕೊಡಬೇಕು. 
ಪಿತಾ ಪಿತಾಮಹಾಶ್ಚ್ಯಾನೈ ಅಪುತ್ರಾ ಯೇ ಚ ಗೊತ್ರಿಣಃ 
ತೇ ಪಿಬಂತು ಮಯಾ ದತ್ತಂ ಧಾತ್ರೀ ಮೂಲೆ ಕ್ಷಯಂ ಪಯಃ || 
ಆ ಬ್ರಹ್ಮಃ ಸ್ಥಂಬ ಪರ್ಯಂತ ..... ಆಮೇಲೆ ಗಿಡಕ್ಕೆ ದಾರವನ್ನು ಕಟ್ಟಬೇಕು. 

आब्रह्म स्थंभ पर्यंतम्  देवर्षि पितृ मानवाः । त्रुप्यम् तु  पितरः सर्वे मातृमाता महादयः ॥अतीत कुलकोटिनाम् सप्त द्वीप निवासिनां । आब्रह्म भुवनाल्लोकाद् इदमस्तु कुशोदकं ॥ ये के  चात् समत्कुलेजाता अपुत्रा गोत्रिणो मृताः । ते गृंह्णं तु मयादत्तं सूत्र निष्पीडनोदकं ॥ 

ದಾಮೋದರ ನಿವಾಸಾಯೈ ಧಾತ್ರೈ ದೇವೈ ನಮೋಸ್ತುತೆ | ಸೂತ್ರೆಣಾನೇನ ಬಧ್ನಾಮಿ ಸರ್ವ ದೇವ ನಿವಾಸಿನೀಮ್ ||

ನಾಲ್ಕು ದಿಕ್ಕಿಗೆ ನಾಲ್ಕು ಬಲಿ  ( ಇಲ್ಲಿ ಬಲಿ ಎಂದರೆ ಕುಂಕುಮ ಕೂಡಿಸಿದ ಅಕ್ಕಿಯ ಅನ್ನದ ಉಂಡೆಗಳು ) ನಾಲ್ಕು ಉಪದಿಕ್ಕುಗಳು ಕೂಡಿಸಿ ಎಂಟು ದೀಪಗಳನ್ನು ಹಚ್ಚಬೇಕು. ಎಂಟು ಸಲ ಪ್ರದಕ್ಷಿಣೆ ಹಾಕಿ ಪ್ರಾರ್ಥಿಸಬೇಕು.
ಧಾತ್ರಿ ದೇವಿ ನಮಸ್ತುಭ್ಯಂ ಸರ್ವ ಪಾಪ ಕ್ಷಯಂ ಕರಿ | ಪುತ್ರಾನ್ ದೇಹಿ ಮಹಾಪ್ರಾಜ್ಞೆ ಯಶೋದೇಹಿ ಬಲಂ ಚ ಮೇ ||
ಪ್ರಜ್ಞಾಂ ಮೆಧಾಂ ಚ ಸೌಭಾಗ್ಯಂ ವಿಷ್ಣು ಭಕ್ತೀಂ ಚ ಪಾಶ್ವತೀಮ್ | ನಿರೋಗಂ ಕುರುಮಾಂ ನಿತ್ಯಂ ನಿಷ್ಪಾಪಂ ಕುರು ಸರ್ವದಾ ||

ಶಕ್ಯವಾದಲ್ಲಿ ಕಂಚಿನ ಪಾತ್ರೆಯಲ್ಲಿ ತುಪ್ಪ ಹಾಕಿ ದಾನ ಕೊಡಬೇಕು.  

No comments:

Post a Comment