ಮಹಾಭಾರತ ಸಾರ :
ಮಹಾ ಭಾರತವು ಪುಣ್ಯಕರವಾಗಿದ್ದು ವಿಶೃತವಾಗಿದೆ. ಅದನ್ನು ಸಂಪೂರ್ಣವಾಗಿ ಓದುವುದು ಕಷ್ಟ ಸಾಧ್ಯ್ವಾದದ್ದುಆದ್ದರಿಂದ ವ್ಯಾಸ ಮಹರ್ಷಿಗಳು ಅದರ ಸಾರವನ್ನು ಭಾರತ ಸಾವಿತ್ರಿ ಎಂದು ಬರೆದಿದ್ದು ಅದರ ಪಠಣದಿಂದ ಮಹಾಭಾರತ ಓದಿ ಕೇಳಿದಷ್ಟೇ ಫಲ ಹೊಂದಿ, ಪರಬ್ರಹ್ಮನ ಯೋಗ್ಯತೆಯನ್ನು ದೊರಕಿಸಿಕೊಳ್ಳುತ್ತಾನೆ ಎಂದು ಹೇಳಿದ್ದಾರೆ.
ಮಾತಾಪಿತೃ ಸಹಸ್ರಾಣಿ ಪುತ್ರದಾರ ಶತಾನಿಚ | ಸಂಸಾರೇಶ್ವನುಭೂತಾನಿ ಯಾಂತಿ ಯಾಸ್ಯಂತಿ ಚಾಪರೇ || ಹರ್ಷ ಸ್ಥಾನ ಸಹಸ್ರಾಣಿ ಭಯ ಸ್ಥಾನ ಶತಾನಿ ಚ | ದಿವಸೇ ದಿವಸೇ ಮೂಢಮಾ ವಿಶಂತಿ ನ ಪಂಡಿತಂ || ಊರ್ಧ್ವಬಾಹುರ್ವೀರೌಮ್ಮೇಷ ನ ಚ ಕಶ್ಚಿದ್ಶ್ರುನೋತುಮೆ | ಧರ್ಮಾಧರ್ಥಶ್ಚ ಕಾಮಶ್ಯ ಸ ಕಿಮರ್ಥನ್ ನ ಸೇವ್ಯತೆ || ನ ಜಾತು ಕಾಮಾನ್ನ ಭಯಾನ್ನ ಲೋಭಾ ದ್ಧರ್ಮಂತ್ಯಜೇ ಜೀವಿತಸ್ಯಾಪಿ ಹೇತೋ: | ಧರ್ಮೋ ನಿತ್ಯಃ ಸುಖ ದುಃಖ್ಯೆ ತ್ವ ನಿತ್ಯೇ ಜೀವೋ ನಿತ್ಯೋ ಹೇತುರಸ್ಯ ತ್ವ ನಿತ್ಯ: || ಇಮಾಂ ಭಾರತ ಸಾವಿತ್ರೀ ಪ್ರಾತರುತ್ಥಾಯ
ಯಃ ಪಠೇತ್ | ಸ ಭಾರತ ಫಲಂ ಪ್ರಾಪ್ಯ ಪರಂ ಬ್ರಹ್ಮಾಧಿಗಚ್ಚತಿ ||
.....ಮಹಾಭಾರತ - ಸ್ವರ್ಗಾರೋಹಣ ಪರ್ವ ಅ -05 ೬೦/೬೪
ಮನುಷ್ಯನು ಪೂರ್ವದ ೮೪ ಕೋಟಿ ಯೋನಿ ಗಳಲ್ಲಿ ಜಗತ್ತಿನಲ್ಲಿ ಸಾವಿರಾರು ತಂದೆ ತಾಯಿ ಗಳನ್ನು ಹಾಗು ಸ್ತ್ರೀ ಪುತ್ರಾದಿಗಳ ಪ್ರಾಪ್ತಿ ವಿಯೋಗಗಳನ್ನು ಅನುಭವಿಸಿ ಮುಂದೆಯೂ ಅನುಭವಿಸುತ್ತಲಿರುತ್ತಾನೆ. ಅಜ್ಞಾನಿಯಾದ ಪುರುಷನಿಗೆ ಪ್ರತಿ ದಿವಸ ಸಾವಿರಾರು ಹರ್ಷ ಹಾಗೂ ಭಯಗಳ ಅವಸರಗಳು ಪ್ರಾಪ್ತ ವಾಗುತ್ತಲಿರುತ್ತವೆ. ಆದರೇ ಜ್ಞಾನಿಯಾದ ಪುರುಷನ ಮನಸ್ಸಿನ ಮೇಲೆ ಇವು ಪ್ರಭಾವ ವನ್ನು ಬೀರುವುದಿಲ್ಲ. ಧರ್ಮದಿಂದಲೇ ಅರ್ಥ, ಕಾಮ, ಮೊಕ್ಷಗಳು ಸಿದ್ಧಿಯಾಗುವುದರಿಂದ ಮನುಷ್ಯ ಪ್ರಾಣಿ ಅದನ್ನು ಏಕೆ ಆಚರಿಸು ವುದಿಲ್ಲವೆಂದು ನಾನು ಎರಡು ಕೈಗಳನ್ನು ಎತ್ತಿ ಪುನಃ ಪುನಃ ಕೂಗಿ ಹೇಳಿದರೂ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಕಾಮನೆಯಿಂದ, ಭಯ, ಲೋಭಗಳಿಂದ ಅಥವಾ ಪ್ರಾಣವನ್ನು ಉಳಿಸುವುದಕ್ಕೋಸ್ಕರ ಧರ್ಮ ತ್ಯಾಗವನ್ನು ಮಾಡಬಾರದು. ಧರ್ಮವು ನಿತ್ಯವಾಗಿದ್ದು ಸುಖ ದುಃಖಗಳು ಅನಿತ್ಯವಾಗಿವೆ. ಜೀವನು ನಿತ್ಯ ನಾಗಿದ್ದು, ಬಂಧನಕ್ಕೆ ಕಾರಣವಾದ ಅವಿದ್ಯೆಯು ಅನಿತ್ಯವಾಗಿದೆ. ಇದೇ ಭಾರತ ಸಾವಿತ್ರಿ.
No comments:
Post a Comment