Tuesday, December 05, 2023

AMBA BHAVANI ನಿನಗಾರತಿಗಾನಂದಿ ತಾಯಿ ಗೀತೆ

 Shri AMBA BHAVANI Aarati

ಸುಕ್ಷೇತ್ರ ತುಳಜಾಪುರದ ಅಂಬಾಭವಾನಿ ಗೀತೆ 


ಮಹಾರಾಷ್ಟ್ರದಲ್ಲಿಯ ಸುಕ್ಷೇತ್ರ ತುಳಜಾಪುರದ ಅಂಬಾಭವಾನಿ ದೇವಿ ಆರಾಧನೆಯಲ್ಲಿ 
ಗೋಂಧಳಿಗರು ಸಂಬಾಳಿ, ದಿಮ್ಮ ಜೀ ಜೀ ವಾದನ ಜೊತೆ ಪ್ರದರ್ಶನ ಮಾಡುತ್ತ ಹಾಡುವ ಗೀತೆ

ನಿನಗಾರತಿ ಗಾನಂದಿ ತಾಯೀSS (2)

ನಾನು ಬೆಳಗೂವೆ ಮಹಾಮಾಯೀ

ನಿನಗಾರತಿ ಗಾನಂದಿ ತಾಯೀ

ನಿನಗಾರತಿ ಗಾನಂದಿ ತಾಯೀ || 1 ||


ನಿನ್ನ ಎದುರಿಗೆ ಕುಣಿ ಕುಣಿದಾಡಿ (2)

ಭಿನ್ನ ಭಿನ್ನದ ವರಗಳ ಬೇಡೀ ss

ನಿನಗಾರತಿ ಗಾನಂದಿ ತಾಯೀSS (2)

ನಾನು ಬೆಳಗೂವೆ ಮಹಾಮಾಯೀ

ನಿನಗಾರತಿ ಗಾನಂದಿ ತಾಯೀ ||2 ||


ಜ್ಞಾನ ಭಾವದಿ ಮೋಹದಿ ಕಂದಾ (2)

ನಾನು ಬೆಳಗೂವೆ ಆನಂದದಿಂದ 

ನಿನಗಾರತಿ ಗಾನಂದಿ ತಾಯೀSS (2)

ನಾನು ಬೆಳಗೂವೆ ಮಹಾಮಾಯೀ

ನಿನಗಾರತಿ ಗಾನಂದಿ ತಾಯೀ || 3||


ನಿನ್ನ ಸೆವೇಗೆ ಉಧೋ ಹಾಡೀss (2)

ಹೊನ್ನ ಪಾದಕ್ಕೆ ಶೆರಗೊಡ್ಡಿ ಬೇಡೀ

ನಿನಗಾರತಿ ಗಾನಂದಿ ತಾಯೀSS (2)

ನಾನು ಬೆಳಗೂವೆ ಮಹಾಮಾಯೀ

ನಿನಗಾರತಿ ಗಾನಂದಿ ತಾಯೀ ||4||

ಆಯೀ ಅಂಬಾಬಾಯಿ ಉಧೋ ಉಧೋ

ಸದಾನಂದೀ ಚಾ  ಉಧೋ ಉಧೋ 



No comments:

Post a Comment