Sunday, December 17, 2023

NI AARU PELENNA KANNA ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ

 ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ

ರಾಗ : ಕಾಪಿ  ತಾಳ : ತೀನ ತಾಲ 

ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ | ಕಣ್ಣ ಮುಚ್ಚಿದಿ ನೀ ಕೊಳಲೂದಿದಿss|   ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ    || ಪಲ್ಲ ||


ಗೋಕುಳದೊಳೆನನ್ನ ಗೋವಳರೇ ನೀವು | ಆಕಳ ಚರಿಸುತ ತಿರುಗುವಿರೇ |ಕುಕ್ಕು ಕಂಗಳ ಮುಚ್ಚಿ ಕುಳಿತಿರಲು  | ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ | ಕಣ್ಣ ಮುಚ್ಚಿದಿ ನೀ ಕೊಳಲೂದಿದಿss |  ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ || 1 ||

ಹಸಿವೆಯಿಂದಲೀ ಬೆಣ್ಣೆ ಬೇಡುತ ಬಂದ | ನಸು ಸಂಜೆಗೆ ಹಸುಗಳನೇ ತಂದ | ಮುಸಿಮುಸಿ ಅಳುತಲೇ ನೆನಪಿಸಿದ  | ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ | ಕಣ್ಣ ಮುಚ್ಚಿದಿ ನೀ ಕೊಳಲೂದಿದಿss |  ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ || 2 ||

ಮಲಗಿದ ಕಾಲಕೆ ಸದ್ದಿಲ್ಲದೆ ಬಂದ | ಎಳೆ ಪಿಳ್ಳೆ ಬಹು ಪ್ರೀತಿ ತೋರುತಲಿದ್ದ |ಮೇಲೇರಿ  ಯನ್ನ  ಹೆರಳು ಎಳೆಯುವ | ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ | ಕಣ್ಣ ಮುಚ್ಚಿದಿ ನೀ ಕೊಳಲೂದಿದಿss |  ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ || 3 ||

ಗೋಪಗಳೊಡೆ ನೀ ಯಮುನೆ ತೀರಕೆಪೋಗಿ | ನೀವ ಕೋಲಲಿ ನಾ ಹೋಡಿಯಲು ಹೋಗಿ |ಆವ ಗೋಪಿಗೂ ನೀ ಸಿಗದೇ ಹೋದವನೇ | ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ | ಕಣ್ಣ ಮುಚ್ಚಿದಿ ನೀ ಕೊಳಲೂದಿದಿss |  ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ || 4 ||

ಹಸುಗಳSರಸ ನಾಡುತ ಬಂದ  ತನ್ನ | ಯಶವ ಕರಗಳಿಂದ ಕಣ್ಣ ಮುಚ್ಚಿದ |  ಬೆಸಗೊಂಡಾಳು ಗೋಪಿ ನಸುನಗುತ | ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ | ಕಣ್ಣ ಮುಚ್ಚಿದಿ ನೀ ಕೊಳಲೂದಿದಿss |  ನೀ ಆರು ಪೇಳೆನ್ನ ಕಣ್ಣು ಮುಚ್ಚೀದಿ || 5 ||

                              ಜನಪದ....ಅನಭಿಜ್ಞ್ಯ 


   





No comments:

Post a Comment