Wednesday, March 27, 2024

*RUNA MOCHAN. ಋಣಮೋಚನ ಸ್ತೋತ್ರ

                ಋಣಮೋಚನ ಸ್ತೋತ್ರ


ದೇವಋಣ,ಋಷಿಋಣ ಪಿತೃಋಣ ಮತ್ತು ವಿವಿಧ ಋಣಗಳಿಂದ ಮುಕ್ತರಾಗಲು ರಚಿಸಿರುವ ಋಣಮೋಚನಸ್ತೋತ್ರದ ನಿತ್ಯ ಪಠಣವು ಎಲ್ಲಾ ಋಣಗಳಿಂದ ಮನುಷ್ಯನನ್ನು ಬಂಧಮುಕ್ತಗೊಳಿಸಿ ಸಾರ್ಥಕ ಬದುಕಿನತ್ತ ಕರೆದೊಯ್ಯುತ್ತದೆ. ಮುಖ್ಯವಾಗಿ ಭಗವಂತನ ಆರಾಧನೆ,ಬ್ರಹ್ಮಯಜ್ಞ ಹಾಗೂ ಪಿತೃಗಳ ಆರಾಧನೆಯಲ್ಲಿ ತಿಳಿದೋ ತಿಳಿಯದೆಯೋ ಸಂಭವಿಸುವ ಅಚಾತುರ್ಯಗಳಿಗೆ ನರಸಿಂಹದೇವರ ಮೂಲಕ ಪ್ರಾರ್ಥಿಸಿ ಋಣಪರಿಹಾರ ಮಾಡಿಕೊಳ್ಳಲು ರೂಪಿತವಾಗಿರುವ ಅಪರೂಪದ ಈ ಸ್ತೋತ್ರ.

ಶ್ರೀ ಗುರುಭ್ಯೋ ನಮಃ   ಹರಿಃ ಓಂ 

ದೇವತಾಕಾರ್ಯಸಿಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೧ ||

ಲಕ್ಷ್ಮ್ಯಾಲಿಂಗಿತವಾಮಾಂಗಂ ಭಕ್ತಾನಾಂ ವರದಾಯಕಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೨ ||

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧ ಧಾರಿಣಮ್ |ಶ್ರೀನೃಸಿಂಹಂ  ಮಹಾವೀರಂ ನಮಾಮಿ ಋಣಮುಕ್ತಯೇ || ೩ ||

ಸ್ಮರಣಾತ್ಸರ್ವಪಾಪಘ್ನಂ ಕದ್ರೂಜವಿಷನಾಶನಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೪ ||

ಸಿಂಹನಾದೇನ ಮಹತಾ ದಿಗ್ದಂತಿಭಯನಾಶನಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೫ ||

ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಣಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೬ ||

ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಭಯಪ್ರದಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೭ ||

ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿ ವಂದಿತಮ್ |ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ || ೮ ||

ಯ ಇದಂ ಪಠತೇ ನಿತ್ಯಮೃಣಮೋಚನಸಂಜ್ಞಿತಮ್ |ಅನೃಣೀ ಜಾಯತೇ ಸದ್ಯೋ ಧನಂ ಶೀಘ್ರಮವಾಪ್ನುಯಾತ್ || ೯ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ನೃಸಿಂಹಪುರಾಣೋಕ್ತ ಋಣಮೋಚನಸ್ತೋತ್ರಂ ಸಂಪೂರ್ಣಮ್ ||

ಆತ್ಮೀಯರೇ ಮನುಕುಲದ ಕಲ್ಯಾಣಕ್ಕಾಗಿ ಸಂಜೀವಿನಿಯಂತಹ ಅನೇಕ ಕೃತಿರತ್ನಗಳು ಶ್ರೀವಾದಿ ರಾಜರಿಂದ ಅರ್ಪಿಸಲ್ಪಟ್ಟಿವೆ.

ಇಷ್ಟಾರ್ಥಸಿದ್ಧಿಗಾಗಿ,ಅಶಕ್ತರ ಅನುಕೂಲಕ್ಕಾಗಿ ಸುಲಭ ಸುಂದರ ಸಿದ್ದಿಸಾಧಕ ಸ್ತೋತ್ರರತ್ನಗಳನ್ನು ತಮ್ಮ ದಿವ್ಯಶಕ್ತಿಯಿಂದ ರಚಿಸಿದವರು ಶ್ರೀವಾದಿ ರಾಜತೀರ್ಥರು. ಇಷ್ಟಪ್ರಾಪ್ತಿಯ ಅನಿಷ್ಟನಿವೃತ್ತಿಯ ನವಮಾರ್ಗವನ್ನು ದರ್ಶಿಸಿ ಭಕ್ತರನ್ನು ಉದ್ದರಿಸುತ್ತಿರುವ ಭಾವೀಸಮೀರಶ್ರೀವಾದಿರಾಜರ ಪಾದಕಮಲಗಳಿಗೆ ಕೋಟಿ-ಕೋಟಿ ಸಾಷ್ಟಾಂಗ ಪ್ರಣಾಮಗಳು.

ಶ್ರೀವಾದಿರಾಜಯತಿ ವಿರಚಿತ ದಿವ್ಯಮಂತ್ರ ಪಠಿಸಿ ಭವರೋಗಗಳಿಂದ ಮುಕ್ತರಾಗಿ. ಶ್ರೀಭೂವರಾಹ, ಶ್ರೀಹಯಗ್ರೀವ ದೇವರ,ಶ್ರೀವಾದಿರಾಜಗುರುಸಾರ್ವಭೌಮರ ಶ್ರೀಭೂತರಾಜರ ವಿಶೇಷ ಅನುಗ್ರಹವು ಸದಾ ಎಲ್ಲರಿಗೂ ಕರುಣಿಸುತ್ತಿರಲಿ  

ಶ್ರೀ ಕೃಷ್ಣಾರ್ಪಣಮಸ್ತು 

No comments:

Post a Comment