Wednesday, March 27, 2024

*SHRISHA GUNA DARPANA ಶ್ರೀಶಗುಣದರ್ಪಣ

                     ಶ್ರೀಶ ಗುಣದರ್ಪಣಂ

ಆರ್ಥಿಕ ಬಾಧೆ ಹಾಗೂ ದಾರಿದ್ರ್ಯನಿರ್ಮೂಲನಕ್ಕಾಗಿ ಶ್ರೀವಾದಿರಾಜತೀರ್ಥರಿಂದ ಮೂಡಿಬಂದ ಶ್ರೀಶ ಗುಣದರ್ಪಣವಂತೂ ಯಾವುದೇ ತೆರನಾದ ಬಡತನವಿದ್ದರೂ ತೊಡೆದುಹಾಕುವ ಬ್ರಹ್ಮಾಸ್ತ್ರ ಎಂದು ಜ್ಞಾನಿಗಳು ಈ ಕೃತಿಯನ್ನು ಹೃತ್ಪೂರ್ವಕವಾಗಿ ಸ್ಮರಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಬೊಕ್ಕಸ ಬರಿದಾಗಿದ್ದ ಸಂದರ್ಭದಲ್ಲಿ ಆಗಿನ ಅರಸನಾಗಿದ್ದ ಅಚ್ಯುತರಾಯನು ತೀವ್ರ ಚಿಂತೆಯಲ್ಲಿದ್ದ. ಆ ಸಂದರ್ಭದಲ್ಲಿ ವಿಜಯನಗರ ಸಂಸ್ಥಾನಕ್ಕೆ ಆಗಮಿಸಿದ ಶ್ರೀವಾದಿರಾಜರು ಸಾಮ್ರಾಜ್ಯದ ಪರಿಸ್ಥಿತಿ ಹಾಗೂ ಅಚ್ಯುತರಾಯ ಅರಸನ ನೋವನ್ನು ತಿಳಿದುಕೊಂಡರು. ಅರಸನ ಪ್ರಾರ್ಥನೆಯ ಮೇರೆಗೆ ಶ್ರೀಶ ಗುಣದರ್ಪಣ ಮಂತ್ರವನ್ನು ಅರಸನಿಗೆ ಉಪದೇಶಿಸಿ ಬರಿದಾಗಿದ್ದ ಬೊಕ್ಕಸವನ್ನು ಮತ್ತೆ ತುಂಬಿಸಿದ ಘಟನೆ ಶ್ರೀವಾದಿರಾಜರ ಅಪೂರ್ವ ಮಹಿಮೆಯ ಕೃತಿಗಳಲ್ಲಿ ದಾಖಲಾಗಿದೆ.

ಶ್ರೀ ಗುರುಭ್ಯೋ ನಮಃ.  ಹರಿಃ ಓಂ 

ಯಾ-ಸುಗಂಧಾಸ್ಯನಾಸಾದಿ-ನವದ್ವಾರಾಽಖಿಲೇನ ಯಾ |ದುರಾಧರ್ಷಾ ಸರ್ವ ಸಸ್ಯೋದಯಾರ್ಥಂ ಯಾ ಕರೀಷಿಣೀ || ೧ ||

ಯಾ ನಿತ್ಯಪುಷ್ಟಾ ಸರ್ವಾಂಗೈಃ ಸೌಂದರ್ಯಾದಿ ಗುಣೈರಪಿ |ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ || ೨ ||

ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ |ಯುವಾಂ ವಿಶ್ವಸ್ಯ ಪಿತರಾ ವಿತರೇತರ ಯೋಗಿನೌ || ೩ ||

ಸಮನಾ ಕಿಲ ಮಾತಸ್ತ್ವಮಮುನಾ ತಟಯೋಗಿನೀ |ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ ||

ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ |ತ್ವಂ ಮೂಲ ಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ: || ೫ ||

ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ |ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ ||

ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ |ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ ||

ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ |ಪದ್ಮದ್ವಯಧರಾ ಪದ್ಮ ಕೋಶೋದ್ಯತ್‍ ಸ್ತನಶೋಭನಾ || ೮ ||

ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ |ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ ||

ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ |ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ ||

ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತ ಶಿರೋಧರಾಮ್ |ಕುಂಡಲಪ್ರಭಯೋದ್ದಂಡ-ಗಂಡಮಂಡಲಮಂಡಿತಾಮ್ || ೧೧ ||

ಕುಚಕಂಚುಕ ಸಂಚಾರಿ-ಹಾರನಿಷ್ಕಮನೋಹರಾಮ್ |ಕಾಂಚೀ-ಕಿಂಕಿಣಿ-ಮಂಜೀರ-ಕಂಕಣಾ ದ್ಯೈರಲಂಕೃತಾಮ್ || ೧೨ ||

ಸುವರ್ಣಮಂಟಪೇ ರತ್ನಚಿತ್ರಸಿಂಹಾಸನೋತ್ತಮೇ |ನಮಾಮಿ ಹರಿಣಾ ಸಾಕಮಿಂದಿರಾಂ ಕೃತಮಂದಿರಾಮ್ || ೧೩ ||

ಬ್ರಹ್ಮಾದ್ಯಾ ವಿಬುಧಶ್ರೇಷ್ಠಾಃ ಬ್ರಹ್ಮಾಣ್ಯಾದ್ಯಾಃ ಸುರಾಂಗನಾಃ |ಯಾಂ ಪೂಜಯಂತೇ ಸೇವಂತೇ ಸಾ ಮಾಂ ಪಾತು ರಮಾ ಸದಾ || ೧೪ ||

ಸರ್ವಾಲಂಕಾರ ಭರಿತೌ ಸರ್ವಜ್ಞೌ ಸರ್ವಸದ್ಗುಣೌ |ಶರ್ವಾದಿಸರ್ವಭಕ್ತೌಘ ಸರ್ವಸರ್ವಸ್ವದಾಯಕೌ || ೧೫ ||

ಸುಮುಖೌ ಸುಂದರತನೌ ಸುನಾಸೌ ಸುಖಚಿತ್ತನೂ |ಸುರಾರಾಧಿತ ಪಾದಾಬ್ಜೌ  ರಮಾ ನಾರಾಯಣೌ ಸ್ತುಮಃ || ೧೬ ||

ಚತುಷ್ಕಪರ್ದಾ ಯಾ ದೇವೀ ಚತುರಾಸ್ಯಾದಿಭಿಃ ಸ್ತುತಾ |ಚತುರ್ವೇದೋದಿತ ಗುಣಾ ಚತುರ್ಮೂರ್ತೇರ್ಹರೇಃ ಪ್ರಿಯಾ || ೧೭ ||

ಘೃತಪ್ರತೀಕಾಂ ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ |ಯಥೇಷ್ಟವಿತ್ತ ದಾತ್ರೀಂ ಚ ನತೋಽಸ್ಮ್ಯಭಯದಾಂ ಶ್ರಿಯಮ್ || ೧೮ ||

ವಾದಿರಾಜೇನ ರಚಿತಂ ಶ್ರೀಶ್ರೀಶಗುಣದರ್ಪಣಮ್ |ಇಮಂ ಸ್ತವಂ ಪಠನ್ ಮರ್ತ್ಯಃ ಶ್ರೀಮಾನ್ ಸ್ಯಾನ್ನಾತ್ರ ಸಂಶಯಃ || ೧೯ ||

|| ಇತಿ ಶ್ರೀವಾದಿರಾಜಯತಿ ಕೃತಂ ಶ್ರೀ ಶ್ರೀಶ ಗುಣದರ್ಪಣ ಸ್ತೋತ್ರಂ ಸಂಪೂರ್ಣಮ್ ||

ಮನುಕುಲದ ಕಲ್ಯಾಣಕ್ಕಾಗಿ ಸಂಜೀವಿನಿಯಂತಹ ಅನೇಕ ಕೃತಿರತ್ನಗಳು ಶ್ರೀವಾದಿ ರಾಜತೀರ್ಥರಿಂದ ಅರ್ಪಿಸಲ್ಪಟ್ಟಿವೆ.

ಇಷ್ಟಾರ್ಥಸಿದ್ಧಿಗಾಗಿ,ಅಶಕ್ತರ ಅನುಕೂಲಕ್ಕಾಗಿ ಸುಲಭ ಸುಂದರ ಸಿದ್ದಿಸಾಧಕ ಸ್ತೋತ್ರರತ್ನಗಳನ್ನು ತಮ್ಮ ದಿವ್ಯಶಕ್ತಿಯಿಂದ ರಚಿಸಿದವರು ಶ್ರೀವಾದಿ ರಾಜತೀರ್ಥರು.  ಇಷ್ಟಪ್ರಾಪ್ತಿಯ, ಅನಿಷ್ಟನಿವೃತ್ತಿಯ ನವಮಾರ್ಗವನ್ನು ದರ್ಶಿಸಿ ಭಕ್ತರನ್ನು ಉದ್ದರಿಸುತ್ತಿರುವ ಭಾವೀಸಮೀರಶ್ರೀವಾದಿರಾಜರ ಪಾದಕಮಲಗಳಿಗೆ ಕೋಟಿ-ಕೋಟಿ ಸಾಷ್ಟಾಂಗ ಪ್ರಣಾಮಗಳು.

ಶ್ರೀವಾದಿರಾಜಯತಿ ವಿರಚಿತ ದಿವ್ಯಮಂತ್ರ ಪಠಿಸಿ ಭವರೋಗಗಳಿಂದ ಮುಕ್ತರಾಗಿ. ಶ್ರೀಭೂವರಾಹ, ಶ್ರೀಹಯಗ್ರೀವ ದೇವರ,ಶ್ರೀವಾದಿರಾಜ ಗುರು ಸಾರ್ವಭೌಮರ ಶ್ರೀಭೂತರಾಜರ ವಿಶೇಷ ಅನುಗ್ರಹವು ಸದಾ  ಸರ್ವರನ್ನು ಕರುಣಿಸುತ್ತಿರಲಿ  ಎಂದು ಶ್ರೀ ಹರಿಯಲ್ಲಿ ಬೇಡಿಕೊಳ್ಳುತ್ತೇನೆ.

ಶ್ರೀ ಕೃಷ್ಣಾರ್ಪಣಮಸ್ತು 

No comments:

Post a Comment