Wednesday, March 27, 2024

SHRI KRUSHNA STUTI. ಶ್ರೀ ಕೃಷ್ಣ ಸ್ತುತಿ:

                       ಶ್ರೀ ಕೃಷ್ಣ ಸ್ತುತಿ:

ದೃಷ್ಟಿದೋಷ ನಿವಾರಣೆಗಾಗಿ ಬರೆಯಲ್ಪಟ್ಟ ಕೃಷ್ಣಸ್ತುತಿಯು ಅಂಧತ್ವವನ್ನು ನಿವಾರಿಸಿ ಆನಂದವನ್ನು ಕರುಣಿಸುವ ಅಪೂರ್ವ ಸ್ತೋತ್ರರತ್ನ.

ಶ್ರೀವಾದಿರಾಜರ ಕಾಲದಲ್ಲಿ ಭಕ್ತನೋರ್ವನು ಎಷ್ಟೇ ಔಷಧಿ ನಡೆಸಿದರೂ ಕಣ್ಣುನೋವು ಹಾಗೂ ಅಂಧತ್ವ ಉಪಶಮನವಾಗಲ್ಲಿಲ್ಲ. ಕೊನೆಗೆ ಶ್ರೀವಾದಿರಾಜರ ಬಳಿ ಬರಲು ಶ್ರೀರಾಜರು ಕೃಷ್ಣಸ್ತುತಿಯಿಂದ ನಿತ್ಯ ಪುರಶ್ಚರಣೆ ನಡೆಸುವಂತೆ ತಿಳಿಸಿದರು. ಭಕ್ತನು ಈ ಪುರಶ್ಚರಣೆಯನ್ನು ಸಲ್ಲಿಸಿ ಎರಡೂ ಕಣ್ಣುಗಳನ್ನು ಪಡೆದನು.ತದನಂತರ ಶ್ರೀವಾದಿರಾಜರ ಪರಂಪರೆಯ ಯತಿಗಳಾದ ವೃಂದಾವನಾ ಚಾರ್ಯರ  ಕಾಲದಲ್ಲಿ ಹಿರಿಯ ರೊಬ್ಬರಿಗೆ  ಶ್ರೀಕೃಷ್ಣನ ಪ್ರತಿಮೆ ಕಾಣುತ್ತಿರಲಿಲ್ಲ. ಅವರು ವೃಂದಾವನಾಚಾರ್ಯರ ಬಳಿಬಂದು ತಮ್ಮ ನೋವನ್ನು ಹೇಳಿಕೊಂಡರು. ವೃಂದಾವನಾಚಾರ್ಯರು ನಿತ್ಯ ಸಹಸ್ರಭಾರೀ ಕೃಷ್ಣಸ್ತುತಿಯ ಪುರಶ್ಚರಣೆ ನಡೆಸುವಂತೆ ತಿಳಿಸಿದರು. ೪೮ ದಿನಗಳಲ್ಲಿ ಕೃಷ್ಣ ಸ್ತುತಿಯ ನಿರಂತರ ಪಠಣದಿಂದ ದೃಷ್ಟಿದ್ವಯಗಳನ್ನು ಮತ್ತೆ ಪಡೆದ ರೋಚಕ ಘಟನೆ ಇತಿಹಾಸದ ಪುಟ ಗಳಲ್ಲಿ ದಾಖಲಾಗಿದೆ.

ಅಥ ಶ್ರೀ ಕೃಷ್ಣ ಸ್ತುತಿ:

ಶ್ರೀ ಗುರುಭ್ಯೋ ನಮಃ  ಹರಿಃ ಓಂ 

ಯದಿ ದಿಶಸಿ ನಯನಪಟುತಾಂ ತರ್ಹಿ ಭವಚ್ಚರಣಕಮಲಸೇವಾಯೈ | ಆಯಾಸ್ಯಾಮಿ ದಯಾಲೋ ಕೃಷ್ಣ ನ ಚೇತ್ಪೂಜಯಾಮಿ ಕಥಮಂಧಃ || ೧ ||

ಸಂಭಾವಿತಸ್ಯ ಪುಂಸೋ ಮರಣಾದತಿರಿಚ್ಯತೇ ಕಿಲಾಕೀರ್ತಿಃ | ಇತಿ ಗೀತಾಸು ಹಿ ಗೀತಂ ಭವತಾ ಭವತಾಪತಿಮಿರರವೇ || ೨ ||

ನಾನಾಪರಾಧಶತಕಂ ಹೀನೇ ಯದ್ಯಸ್ತಿ ಕೃಷ್ಣ ಮಯಿ ಮತ್ತೇ | ದೀನಾನಾಮುದ್ಧರ್ತ್ರಾ ಕ್ಷಂತವ್ಯಂ ತತ್ ಕ್ಷಮಾವತಾ ಭವತಾ || ೩ ||

ಕುಂತಲಸಂತತಿಲಸಿತಂ ಚೂಡಾತ್ರಯಶೋಭಿಮೌಲಿಭಾಗಮಹಮ್ |ಶತ ಪತ್ರ ಪತ್ರ ನೇತ್ರಂ ಶಶಿವದನಂ ಪ್ರತಿದಿನಂ ದಿದೃಕ್ಷಾಮಿ || ೪ ||

ಕುಂಡಲಮಂಡಿತಗಂಡಂ ಕಂಬುಗ್ರೀವಂ ಮನೋರಮೋರಸ್ಕಮ್ |ದಂಡಂ ದಾಮ ಚ ದಧತಂ ಪಾಂಡವ ಸಖಮರ್ಚ್ಯ ಮರ್ಚಯಾಮಿ ಕದಾ || ೫ ||

ರಮ್ಯತಮೋದರಜಘನಂ ಕಮ್ರೋರುಂ ವೃತ್ತಜಾನುಯುಗಜಂಘಮ್ |ರಕ್ತಾಬ್ಜ ಸದೃಶ ಪಾದಂ ಹಸ್ತಾಭ್ಯಾಂ ತ್ವಾಽರ್ಚಯಾಮಿ ಸದಯ ಕದಾ || ೬ ||

ದೋಷಾತಿದೂರಂ ಶುಭಗುಣರಾಶಿಂ ದಾಸೀಕೃತಾ ಖಿಲಾನಿಮಿಷಮ್ | ಭೂಷಣಭೂಷಿತಗಾತ್ರಂ ನೇತ್ರಾಭ್ಯಾಂ ಚಿತ್ರಚರಿತ ವೀಕ್ಷೇ ತ್ವಾಮ್ || ೭ ||

ಮಧ್ವಪ್ರತಿಷ್ಠಿತಂ ತ್ವಾಂ ವಿಧ್ವಸ್ತಾಶೇಷಕುಜನಕುಲಮ್ | ಮೂರ್ಧ್ನಾ ಪ್ರಣಮ್ಯ ಯಾಚೇ ತದ್ವಿರಚಯ ಯದ್ಧಿತಂ ಮಮಾದ್ಯ ಹರೇ || ೮ ||

ಸ್ತುತಿಮಿತಿ ಪುಣ್ಯಕಥನ ತೇ ಪ್ರಥಿತಕೃತೇ ವಾದಿರಾಜಯತಿರಕೃತ | ಸತತಂ ಪಠತಾಂ ಹಿ ಸತಾಮತಿವಿಶದಾಂ ದೇಹಿ ಕೃಷ್ಣ ವಿತತಮತಿಮ್ || ೯ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಾ ಕೃಷ್ಣಸ್ತುತಿಃ ಸಮಾಪ್ತಾ ||

No comments:

Post a Comment