Wednesday, March 27, 2024

MADHWA PRATAPAM. ಮಧ್ವಮುನಿ ಪ್ರತಾಪಾಷ್ಠಕಮ್

                ಮಧ್ವಮುನಿ ಪ್ರತಾಪಾಷ್ಠಕಮ್

ಈ ಕೃತಿಯ ಪಠಣದಿಂದ ಶಾಶ್ವತವಾಗಿ ಜ್ವರದ ಬಾಧೆಯಿಂದ ಮುಕ್ತಿದೊರಕುತ್ತದೆ.ನೂರಾರು ಭಕ್ತರು ಶ್ರೀವಾದಿರಾಜರ ದಿವ್ಯಮಂತ್ರಗಳನ್ನು ಪಠಿಸಿ ಜ್ವರದ ಬಾಧೆಯಿಂದ ಮುಕ್ತರಾಗುತ್ತಿರುವ ಘಟನೆಗಳು ಇಂದಿಗೂ ಜರುಗುತ್ತಿವೆ.ಒಮ್ಮೆ ಶ್ರೀವಾದಿರಾಜರು ದ್ವಾರಕಾ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಸಾಗುವ ಸಂದರ್ಭದಲ್ಲಿ ಆರುತಿಂಗಳು ಉಪಾವಾಸದಲ್ಲಿದ್ದು ಕೃಷ್ಣಧ್ಯಾನ ಮಾಡುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ರಚಿಸಿದ್ದರು. ಶ್ರೀಕೃಷ್ಣ ಯತಿಗಳು ಎಂಬವರು ತೀವ್ರಜ್ವರದಲ್ಲಿದ್ದಾಗ ಅವರಿಗೆ ಶ್ರೀವಾದಿರಾಜರ ಮಧ್ವಮುನಿಪ್ರತಾಪಾಷ್ಟಕಮ್  ಕೃತಿಯನ್ನು ಪಠಿಸುವಂತೆ ಸ್ವಪ್ನ ಸೂಚನೆಯಾಯಿತು. ಅಂತೆಯೇಈ ಮಂತ್ರ ಪಠಿಸಲು ರೋಗ ಸಂಪೂರ್ಣ ನಿವಾರಣೆಯಾಯಿತು.ಇಂದಿಗೂ ಅನೇಕರು ಶ್ರೀದೇವರ ತೀರ್ಥವನ್ನು ಹಿಡಿದುಕೊಂಡು ಈ ಮಂತ್ರ ಪಠಿಸಿ ತೀರ್ಥವನ್ನು ಸ್ವೀಕರಿಸಿ ಜ್ವರವನ್ನು ಉಪಶಮನ ಮಾಡಿಕೊಳ್ಳುತ್ತಿದ್ದಾರೆ.II 

ಶ್ರೀ ಗುರುಭ್ಯೋ ನಮಃ   ಹರಿಃ ಓಂ 

ಕ್ವಚಿತ್ಸುರಾನ್ ಶಾಸ್ತಿ ಸುರಾಂಗನಾ: ಕ್ವಚಿತ್ ಕ್ವಚಿಚ್ಚ ಗಂಧರ್ವಪತೀನೃಷೀನ್ ಕ್ವಚಿತ್ಕ್ವಚಿತ್ಪಿತೃನ್ ಕ್ವಾಪಿ ನೃಪಾನ್ನರಾನ್ ಕ್ವಚಿಚ್ಚುಭಾನಯಂ ಮಧ್ವಮುನಿ: ಪ್ರತಾಪವಾನ್I

ಕ್ವಚಿತ್ಪ್ರಭುಂ ಸ್ತೌತಿ ಸಮೀಕ್ಷತೇ ಕ್ವಚಿತ್ ಕ್ವಚಿತ್ಸ್ಮರನ್ನೃತ್ಯತಿ ಗಾಯತಿ ಕ್ವಚಿತ್ ಕ್ವಚಿತ್ತ ಮಾರಾಧಯತೀಶ್ವರಂ ಕ್ವಚಿನ್ನ ಮತ್ಯಯಂ ಮಧ್ವಮುನಿ: ಪ್ರತಾಪವಾನ್I

ಕ್ವಚಿದ್ಧರೇರ್ಜೀವಜಡಾತಿಭಿನ್ನತಾಂ ಕ್ವಚಿತ್ಪ್ರಭೋ: ಸರ್ವಗುಣೈಶ್ಚ ಪೂರ್ಣತಾಮ್ ಕ್ವಚಿಚ್ಚ ತಸ್ಯಾಖಿಲ ದೋಷಶೂನ್ಯತಾಂ ವದತ್ಯಯಂ ಮಧ್ವಮುನಿ: ಪ್ರತಾಪವಾನ್ I

ಕ್ವಚಿಚ್ಚ ವಿಷ್ಣೋರುರುಚಿತ್ರರೂಪತಾಂ ಕ್ವಚಿಚ್ಚ ಮುಕ್ತಾಖಿಲಜೀವಯಂತೃತಾಮ್ಕ್ವಚಿಚ್ಚ ತಸ್ಯಾವ್ಯ ಯಚಿನ್ಮಯಾ ಕೃತಿಂ ವ್ಯನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್ I

ಕ್ವಚಿತ್ ಸ್ಮೃತೀ: ಕ್ವಾಪಿ ಪುರಾಣಸಂಹಿತಾ: ಪ್ರವಕ್ತಿಸೂತ್ರಂ ಕ್ವಚಿದಾಗಮೋಕ್ತಿಭಿ:ಕ್ವಚಿಚ್ಚ ಧರ್ಮಂ ಚರತಿ ಕ್ವಚಿಚ್ಚ ತಂ ಬ್ರವೀತ್ಯಯಂ ಮಧ್ವಮುನಿ: ಪ್ರತಾಪವಾನ್ I

ಕ್ವಚಿಚ್ಚ ಚಾರ್ವಾಕ ಕಣಾದ ಗೌತಮ ಪ್ರಭಾಕರಾ ದ್ವೃತಿತಥಾಗತಾದಿಕೈ: ಕೃತಂ ಮತಂ ಯುಕ್ತಿ ಶತೈರ್ವಿಖಂಡಯನ್ ವಿಭಾತ್ಯಯಂ ಮಧ್ವಮುನಿ: ಪ್ರತಾಪವಾನ್ I

ಪರಾನ್ಪರಾಭಾವಯತಿ ಕ್ವಚಿತ್ಕ್ವಚಿನ್ನಿಜಾನ್ಕಥಾಯಾಂ ಕುಶಲೀಕರೋತ್ಯಯಮ್ಕ್ವಚಿದ್ಬುಧಾ ನ್ವೈಷ್ಣವ ಮಾರ್ಗ ಮಾಗತಾನ್ ಪುನಾತ್ಯಯಂ ಮಧ್ವಮುನಿ: ಪ್ರತಾಪವಾನ್I

ಕ್ವಚಿತ್ಸಮಸ್ತಾಗಮನಿರ್ಣಯೋದಿತಾ: ಕೃತೀ ವ್ಯಾಕುರುತೇ ಸಭಾಂತರೇ ಪ್ರಹೃಷ್ಟ ರೋಮಾ ನೃಹರೌ ಕ್ವಚಿನ್ಮನೋ ಯುನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್I

ಇದಂ ಪ್ರತಾಪಾಷ್ಟಕಮಚ್ಯುತಪ್ರಿಯ ಶ್ರುತಿಪ್ರತೀತಾ ಮಲಮಧ್ವಯೋಗಿನ: I ಯತಿ ಸ್ತದೀಯೋsಕೃತ ವಾದಿರಾಜ ಉದಾರಧೀಸ್ತಸ್ಯ ಕೃಪಾಫಲಪ್ತಯೇI

IIಇತಿ ಶ್ರೀ ವಾದಿರಾಜ ಪೂಜ್ಯ ಚಾರಣ ವಿರಚಿತಂ ಮಧ್ವಮುನಿ ಪ್ರತಾಪಾಷ್ಟಕಮ್ ಸಂಪೂರ್ಣಂII


No comments:

Post a Comment