Monday, March 04, 2024

GOVINDA HARI. ಗೋವಿಂದ ಹರಿ

                ಗೋವಿಂದ ಹರಿ

ಗೋವಿಂದ ಹರಿ   ಗೋವಿಂದ
ಕೇಶವ ಕೃಷ್ಣ  ಜನಾರ್ಧನ   ।। ಪ ।।

ಮತ್ಸ್ಯಾವತಾರದೊಳಾಡಿದನೇ
ಮಂದರಾಚಲ  ಬೆನ್ನೊಳು ತಾಳಿದನೆ
ಅಚ್ಚಾಸುಕಾರನಾಗಿ  ಬಾಳಿದನೆ
ಮದಹೆಜ್ಜೆ  ಹಿರಣ್ಯನ  ಸೀಳಿದನೆ    ।।೧।।    

ಕುಂಬಿನಿ  ದಾನವ ಬೇಡಿದನೆ
ಕ್ಷಾತ್ರರೆಂಬುವನು  ಹತ  ಮಾಡಿದನೆ
ಅಂಬುದಿಗೆ  ಶರ  ಹೂಡಿದನೆ
ಕಮಲಾಂಬಕ  ಗೊಲ್ಲರೊಲಾಡಿದನೇ   ।।೨।। 

ವಸುದೇವನುದರದಿ  ಪುಟ್ಟಿದನೆ
ಪೊಲ್ಮೆಸೆವ  ಧನುಜರೊಡಗುಟ್ಟಿದನೆ
ಎಸವ  ಕಾಳಿಂಗನ  ಮೆಟ್ಟಿದನೆ
ಭಾದಿಸುವರ  ಯಮಪುರ  ಕಟ್ಟಿದನೆ   ।।೩।।      

ಪೂತನಿಯ  ಮೈಯ  ಸೋಕಿದನೆ
ಮಹಾ  ಘಾತದ  ಮೊಲೆಯುಂಡವನೆ
ಘಾತಕಿಯನತ್ತಾ   ನೂಕಿದನೆಗೋಪವ್ರಾತ  ಗೋಗಳನೆಲ್ಲಾ  ಸಾಕಿದನೆ    ।।೪।।     

ಸಾಧಿಸಿ  ತ್ರಿಪುರರ  ಗೆಲಿದವನೇ
ಲೇಚರ  ಭೇದಿಸಿ  ಹಯವೇರಿ  ಮೆರೆದವನೇ
ಸಾಧಿಸಿ  ಸಕಲವ   ತಿಳಿದವನೇ
ಬಾಡದಾದಿಕೇಶವ  ಭಕ್ತಿಗೊಲಿದವನೇ      ।।೫।।     

                                            ಕನಕದಾಸರು

No comments:

Post a Comment