ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ನಾರಾಯಣ.
ಗೋವರ್ಧನ ಗಿರಿಯನೆತ್ತಿದ
ಗೋವಿಂದಾ ನಮ್ಮ ರಕ್ಷಿಸೈ ||
ಗೋವಿಂದಾ ನಮ್ಮ ರಕ್ಷಿಸೈ ||
ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವೆ ||
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವೆ ||
ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತು ಯಮನವರೆಳೆದು ಒಯ್ವಾಗ
ಅರ್ಥ ಪುತ್ರರು ಕಾಯ್ವರೆ ||
ತಂದು ಬಂದರೆ ತನ್ನ ಪುರುಷನ
ಹಸಿದು ಬಳಲಿದಿರೆಂಬಳು
ಒಂದು ದಿವಸವು ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು ||
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗಲು ಮುಟ್ಟಲಂಜುವಳು
ಜಾಣೆ ಕರೆದರು ಬಾರಳು ||
ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿ ಕಾಯ್ವರು
ಕಂಟಕೆಮನೋರು ಬಂದು ಎಳೆವಾಗ
ನೆಂಟರಿಷ್ಟರು ಬಾರರು ||
ಒಡೆವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡೆದೆಳೆದು ಯಮನವರು ಒಯ್ವಾಗ
ಎಡವಿ ಬಿದ್ದಿತು ನಾಲಿಗೆ ||
ದಿಟ್ಟತನದಿ ಪಟ್ಟನಾಳಿದ
ವೃಷ್ಟಿನಂದನ ಚರಣವ
ಮುಟ್ಟಿ ಭಜಿಸಿರೊ ಸಿರಿಪುರಂದರ
ವಿಠ್ಠಲೇಶನ ಪಾದವ ||
ಮಿತ್ರ ಬಾಂಧವರ್ಯಾರಿಗೆ
ಕರ್ತು ಯಮನವರೆಳೆದು ಒಯ್ವಾಗ
ಅರ್ಥ ಪುತ್ರರು ಕಾಯ್ವರೆ ||
ತಂದು ಬಂದರೆ ತನ್ನ ಪುರುಷನ
ಹಸಿದು ಬಳಲಿದಿರೆಂಬಳು
ಒಂದು ದಿವಸವು ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು ||
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗಲು ಮುಟ್ಟಲಂಜುವಳು
ಜಾಣೆ ಕರೆದರು ಬಾರಳು ||
ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿ ಕಾಯ್ವರು
ಕಂಟಕೆಮನೋರು ಬಂದು ಎಳೆವಾಗ
ನೆಂಟರಿಷ್ಟರು ಬಾರರು ||
ಒಡೆವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡೆದೆಳೆದು ಯಮನವರು ಒಯ್ವಾಗ
ಎಡವಿ ಬಿದ್ದಿತು ನಾಲಿಗೆ ||
ದಿಟ್ಟತನದಿ ಪಟ್ಟನಾಳಿದ
ವೃಷ್ಟಿನಂದನ ಚರಣವ
ಮುಟ್ಟಿ ಭಜಿಸಿರೊ ಸಿರಿಪುರಂದರ
ವಿಠ್ಠಲೇಶನ ಪಾದವ ||
ಪುರಂದರದಾಸರು
No comments:
Post a Comment