ಜಗದೋದ್ಧಾರನ ಆಡಿಸಿದಳೆ ಯಶೋದೆ
ಜಗದೋದ್ಧಾರನ ಆಡಿಸಿದಳೆ ಯಶೋದೆ
(ಜಗದೋದ್ಧಾರನ)
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಾಳೆ ಯಶೋದೆ
(ಜಗದೋದ್ಧಾರನ)
ನಿಗಮಕೆ ಸಿಲುಕದ ಆಗಣಿತ ಮಹಿಮನ
ಮಗುಗಳೇ ಮಾಣಿಕ್ಯನ ಆಡಿಸಿದಾಳೆ ಯಶೋದೆ
(ಜಗದೋದ್ಧಾರನ)
ಅಣೋರಣಿಯನ ಮಹತೋ ಮಹಿಮಾನ
ಅಪ್ರಮೇಯನ ತಾ ಆಡಿಸಿದಾಳೆ ಯಶೋದೆ
(ಜಗದೋದ್ಧಾರನ)
ಪರಮ ಪುರುಷನ ಪರವಸುದೇವನ
ಪುರಂದರ ವಿಠಲನ ಆಡಿಸಿದಾಳೆ ಯಶೋದೆ
(ಜಗದೋದ್ಧಾರನ )
.....ಪುರಂದರ ವಿಠಲ
No comments:
Post a Comment