LAMP IMPORTANCE II. ( ದೀಪದ ಮಹತಿ 2 )
ಇದನ್ನು ಪ್ರಯತ್ನಿಸಿ ನೋಡಿರಿ....
ಮನೆಯಲ್ಲಿ ಆರೋಗ್ಯಕರವಾದ ದೀಪವನ್ನು ಬೆಳಗಿಸಿರಿ. ಉತ್ತಮ ಅನುಭವ ಕಂಡರೆ ಚೆನ್ನಾಗಿ, ಇಲ್ಲವೆಂದಾದರೆ ಮೋಸವೇನೂ ಇಲ್ಲ, ಬಹಳಷ್ಟು ಖರ್ಚು ಆಗಲಾರದು
ಮನೆಯಲ್ಲಿ ತುಳಸಿ ಗಿಡದಬಳಿ ಇರುವ ಸ್ಥಳದಲ್ಲಿ ನಾವೆಲ್ಲರೂ ದೀಪವನ್ನು ಹಚ್ಚುತ್ತೇವೆ, ಏಕೆಂದರೆ ದೀಪವನ್ನು ಹಚ್ಚುವುದರಿಂದ ದೇಹ ಮತ್ತು ಮನಸ್ಸು ಎರಡೂ ಸಂತೋಷಗೊಳ್ಳುತ್ತ, ಭಕ್ತಿಯಿಂದ ಶಕ್ತಿ ಮಾನಸಿಕ ಧೃಡತೆ ಬರುತ್ತದೆ ಮತ್ತು ಈ ಶಕ್ತಿಯು ಆ ದೀಪದಿಂದ ಬರುವ ಪರಿಮಳದಿಂದಲೂ ಇರಬಹುದು.
ದೀಪವನ್ನು ಬೆಳಗಿಸಿದರೆ ಅದು ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ ಅಥವಾ ಅನಾರೋಗ್ಯದಲ್ಲಿ ಹೇಗೆ ಪರಿಣಾಮಕಾರಿಯಾಗಿದೆ ಎಂದು ಪ್ರಾಚೀನ ಗ್ರಂಥಗಳಲ್ಲೂ ಉಲ್ಲೇಖಗಳಿವೆ ಮತ್ತು ವೈದ್ಯಕೀಯ ಶಾಸ್ತ್ರದಿಂದಲೂ ಹೇಗೆ ಅನುಭವ ಸಿದ್ಧವಾಗಿದೆ ಎಂಬುದನ್ನು ನೋಡೋಣ.
ದೀಪವು ಚಿಕ್ಕದಾಗಿ ಮಣ್ಣಿನಿಂದ ಮಾಡಿರಬೇಕು.
ಕರ್ಪೂರದ ಒಂದು ವಡೆ ಮತ್ತು ಲವಂಗವನ್ನು ಶುದ್ಧ ತುಪ್ಪದ ದೀಪದಲ್ಲಿ ಹಾಕಿದರೆ ನಿರಂತರ ಶೀತ ಮತ್ತು ತಲೆನೋವು ನಿವಾರಣೆಯಾಗುತ್ತದೆ. ದಿನಕ್ಕೆ ಒಮ್ಮೆ ಮಾತ್ರ.
ಒಂದು ಕರ್ಪೂರದ ವಡೆ ಮತ್ತು ಕರಿಮೆಣಸನ್ನು ಶುದ್ಧ ತುಪ್ಪದ ದೀಪದಲ್ಲಿ ಹಾಕಿದರೆ ಮಾನಸಿಕ ಕಾಯಿಲೆ, ಕೈಕಾಲು ಊತ ಕಡಿಮೆಯಾಗುತ್ತದೆ.
ಸಾಸಿವೆ ಎಣ್ಣೆಯ ದೀಪದಲ್ಲಿ ಇಂಗು ಮತ್ತು ಲವಂಗವನ್ನು ಸೇರಿಸುವುದರಿಂದ ದೇಹದ ಉರಿ, ಆಮ್ಲೀಯತೆ, ವಾಕರಿಕೆ, ತಲೆ ಭಾರ, ಅತಿಸಾರ ಮುಂತಾದ ಅಸ್ವಸ್ಥತೆಗಳನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
ಮಲ್ಲಿಗೆ ಎಣ್ಣೆಗೆ ಎರಡು ಹನಿ ಹಾಲನ್ನು ಸೇರಿಸುವುದರಿಂದ ನಿರಂತರ ಚಡಪಡಿಕೆ, ದೇಹದ ನೋವು, ಬೆನ್ನುಮೂಳೆ ನೋವು, ಕುತ್ತಿಗೆ ಬಿಗಿತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಸೂರ್ಯಕಾಂತಿ ಎಣ್ಣೆಯ ದೀಪದಲ್ಲಿ ಬೇವಿನ ಎಲೆಯನ್ನು ಸೇರಿಸುವುದರಿಂದ ಯಾವುದೇ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಶುದ್ಧ ತುಪ್ಪದ ದೀಪದಲ್ಲಿ ಭೀಮಸೇನ ಕರ್ಪೂರ ಮತ್ತು ಅಜವಾನಗಳನ್ನು ಸೇರಿಸುವುದರಿಂದ ಗಾಳಿಯಲ್ಲಿರುವ ಅಗೋಚರ ಸೂಕ್ಷ್ಮಾಣು ಜೀವಿಗಳನ್ನು ಕಡಿಮೆ ಮಾಡಲು ಮತ್ತು ಸಾಮಾನ್ಯವಾಗಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಶುದ್ಧ ತುಪ್ಪದ ದೀಪದಲ್ಲಿ ವೀಳ್ಯದೆಲೆ, ಇಂಗು, ಏಲಕ್ಕಿ, ಲವಂಗ ಹಾಕಿದರೆ ಮನೆಯಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ದೊಡ್ಡವರ, ಮಕ್ಕಳ ಮಾನಸಿಕ ಶಾಂತಿ, ಬುದ್ಧಿಶಕ್ತಿ ಹೆಚ್ಚುತ್ತದೆ.
ಮೇಲಿನ ದೀಪದ ಪರಿಹಾರಗಳನ್ನು ಬೆಳಿಗ್ಗೆ ಮತ್ತು ಸಂಜೆ ಮಾಡುವುದು ಉತ್ತಮ, ಈ ದೀಪವನ್ನು ಅದರ ಸುವಾಸನೆಯು ಕೋಣೆಗೆ ಪ್ರವೇಶಿಸುವ ಸ್ಥಳದಲ್ಲಿ ಇಡಬೇಕು, ದೇವಸ್ಥಾನದಲ್ಲಿಯೇ ಇಡುವುದು ಕಡ್ಡಾಯವಲ್ಲ. ನಾವು ತೆಗೆದುಕೊಳ್ಳುವ ಉಸಿರು ಮತ್ತು ಅದರಲ್ಲಿರುವ ಪರಿಮಳ ನಮ್ಮ ದೇಹಕ್ಕೆ ಪೋಷಕಾಂಶಗಳ ರೂಪದಲ್ಲಿ ಬಂದರೆ, ಅದು ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ. ಈ ಪ್ರಯೋಗವನ್ನು ನಿಯಮಿತವಾಗಿ 10 ದಿನಗಳವರೆಗೆ ಮಾಡಿದರೆ, ಮೂವತ್ತನೇ ದಿನದಿಂದ ಸಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಬಹುದು.
.....ಸಂಗ್ರಹ
No comments:
Post a Comment