Friday, August 02, 2024

V8JAYA KAWACHA. ಶ್ರೀ ವಿಜಯ ಕವಚ

                     ಶ್ರೀ ವಿಜಯ ಕವಚ 

ಸ್ಮ ಝೂರಿಸಿ ಬದುಕಿರೋ | ದಿವ್ಯ ಚರಣಕ್ಕೆರಗಿರೋ |

ದುರಿತ ಕಳೆವ ವಿಜಯ ಗುರುಗಳೆಂಬರಾ  || ಪ ||

ದಾಸರಾಯನ  ದಯವ | ಸೂಸಿ ಪಡೆದನಾ |

ದೋಷರಹಿತನಾ  ಸಂತೋಷ ಭರಿತನಾ || 1 ||

ಜ್ಞಾನವಂತನಾ ದಯ | ನಿಧಾನಿ ಶಾಂತನಾ  |

ಮಾನ್ಯವಂತನಾ ಬಲು | ವದಾನ್ಯದಾಂತನ || 2 ||

ಹರಿಯ ಭಜಿಸುವಾ | ನರಹರಿಯ ಭಜಿಸವಾ |

ಗುರಿತ ತೃಜಿಸುವ ಜನಕೆ | ಹರುಷ ಸುರಿಸುವ ||  3 ||

ಮೋದಭರಿತನಾ ಪಂಚ | ಭೇದವರಿತನಾ |

ಸಾಧುಚರಿತನಾ  ಮನ | ವಿಷಾದ  ಮರೆತನಾ || 4 ||

ಇವರ ನಂಬಿದಾ ಜನಕೆ | ಭವವಿದೆಂಬುದೂ |

ಹವಣವಾಗದೋನ | ಮ್ಮವರ ಮತವಿದೂ ||5 ||

ಪಾಪ ಕೋಟಿಯಾ ರಾಶಿ | ಲೇಪವಾಗದೋ |

ತಾಪ ಕಳೆವನೂ ಬಲು | ಯಾಪಯೋನಿಧಿ || 6 ||

ಕವನ ರೂಪದಿ ಹರಿಯ | ಸ್ತವನ ಮಾಡಿದ  |

ಭುವನ ಬೇಡಿದಾ | ಮಾಧವನ ನೋಡಿದಾ || 7 ||

ರಂಗನೆಂದನಾ ಭವವು | ಹಿಂಗಿತೆಂದನಾ |

ಮಂಗಳಾಂಗನ  ಅಂತ | ರಂಗವರಿತನಾ ||  8 ||

ಕಾಶಿನಗರದಲ್ಲಿದ್ದ  |  ವ್ಯಾಸದೇವನಾ |

ದಯವಸೂಸಿ | ಪಡೆದನ ಉಲ್ಲಾಸತನದಲಿ || 9 ||

ಚಿಂತೆ ಬ್ಯಾಡಿರೋ ನಿ| ಶ್ಚಿಂತರಾಗಿರೋ |

ಶಾಂತ ಗುರುಗಳಾ  ಪಾದ | ವಂತು ನಂಬಿರೋ || 10 ||

ಖೇದವಾಗದೋ ನಿಮಗೆ | ಮೋದವಾಹುದೋ |

ಆದಿದೇವನಾ ಸು | ಪ್ರಸಾದವಾಹದೋ || 11 ||

ತಾಪ ತಡೆವನೋ  ಬಂದ |  ಪಾಪ  ಕಡಿವನೂ |

ಶ್ರೀಪತಿಯ ಪದ ಸ | ಮೀಪವಿಡುವನು || 12 ||

ಗಂಗೇ ಮಿಂದರೇ | ಮಲವು ಹಿಂಗಿತಲ್ಲದೇ |

ರಂಗನೊಲಿಯನೋ ಭಕ್ತರ | ಸಂಗ ದೊರೆಯದೇ  ||13 ||

ವೇದವೋದಲು ಬರಿದೆ | ವಾದ ಮಾಡಲೂ |

ಹಾದಿ ದೊರಿಯದೂ  ಬುಧರ | ಪಾದ ನಂಬದೇ || 14 ||

ಲೆಕ್ಕವಿಲ್ಲದಾ  ದೇಶ | ತುಕ್ಕಿಬಂದರೂ |

ದು:ಖವಿಲ್ಲದೇ ಲೇಶ | ಭಕ್ತಿ ದೊರಕದೋ || 15 ||

ದಾನ ಮಾಡಲು ದಿವ್ಯ  | ಗಾನ ಪಾಡಲೂ |

ಜ್ಞಾನ ದೊರೆಯದು ಇವ | ರಧೀನವಾಗದೇ ||  16 ||

ಇಷ್ಟು ಯಾತಕೇ | ಕಂಡ ಕಷ್ಟವ್ಯಾತಕೇ |

ದಿಟ್ಟ ಗುರುಗಳಾ ಪಾದ | ಮುಟ್ಟಿ ಭಜಿಸಿರೋ ||17||

ಪೂಜೆ ಮಾಡಲೂ ಕಂಡ | ಗೋಜು ಬೀಳಲೂ |

ಬೀಜ ಮಾತಿದೂ ಫಲ ಸ | ಹಾಜವಾಗದೂ |  18 ||

ಸುರರು ಎಲ್ಲರೂ  ಇವರ | ಕರವ ಪಿಡಿವರೂ |

ತರಳರಂದದೀ ಹಿಂದೆ | ತಿರುಗಿತಿಪ್ಪರೂ || 19 ||

ಗ್ರಹಗಳೆಲ್ಲವೂ  ಇವರ್ಗೆ | ಸಹಾಯ ವಾಗುತಾ |

ಅಹೋರಾತ್ರಿಲೀ ಸುಖದ | ನಿವಹ  ಕೊಡುವವು  ||20 ||

ವ್ಯಾದಿ ಬಾರದೊ ದೇಹ  | ಬಾಧೆ ತಟ್ಟದೋ |

ಆದಿದೇವನಾ  ಸುಪ್ರ| ಸಾದ  ವಾವುದೊ || 21 ||

ಪತಿತ ಪಾಮರಾ ಮಂದ | ಮತಿಯು ನಾ ಬಲೂ |

ತುತಿಸಲಾಪನೇ ಇವರ | ಅತಿಶಯಂಗಳಾ  || 22 ||

ಕರುಣದಿಂದಲೇ  ಎಮ್ಮ | ಪೊರೆವನಲ್ಲದೇ |

ದುರಿತಕೋಟಿಯಾ ಬೇಗ | ತರಿವ ದಯಾದಲೀ || 23 ||

ಮಂದಮತಿಗಳೂ  ಇವರ  | ಚಂದವರಿಯದೇ  |

ನಿಂದಿಸುವರೋ ಭವದ  | ಬಂಧ  ತಪ್ಪದು || 24 ||

ಇಂದಿರಾಪತೀ ಇವರ| ಮುಂದೆ ಕುಣಿವನೋ |

ಅಂದ ವಚನವಾ ನಿಜಕೆ |  ತಂದು ಕೊಡುವನೋ ||25 ||

ಉದಯಕಾಲದೀ ಈ | ಪದವ ಪಠಿಸಲೂ |

ಮುದಡನಾದರೂ ಜ್ಞಾನ | ಉದಯವಾಹುದೋ || 26 ||

ಸಟೆಯಿದಲ್ಲವೊ ವ್ಯಾಸ | ವಿಠಲ ಬಲ್ಲನೋ |

ಪಠಿಸಬಹುದಿದೂ ಕೇಳಿ  | ಕುಟಿಲರಹಿತರೂ ||  27||

                       || ಮುಕ್ತಾಯ ||


No comments:

Post a Comment