Friday, September 20, 2024

Entha Shrimanta ಎಂಥಾ ಶ್ರೀಮಂತಾನಂತನೋ

          ಎಂಥಾ ಶ್ರೀಮಂತಾನಂತನೋ


ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ 
ಕಾಂತ ಎಂಥಾ ಶ್ರೀಮಂತಾನಂತನೋ ||ಪ||

ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗ ಶಣ್ಮಶಿರಮ್ಮಪರಮ್ಮ ಅಮ್ಮರಸಮ್ಮೋಹ ನಿಮ್ಮಣು ಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ೧ ||

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ 
ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ 
ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ೨ ||

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರ 
ವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ 
ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ೩ ||

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದ ಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ 
ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ೪ ||

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ ಇಂಬಕ ದಂಬಕ 
ಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವ
ನೆಂಬ ಕುಟುಂಬಿ || ೫ ||

                                       ಪ್ರಸನ್ನ ವೆಂಕಟದಾಸರು 

No comments:

Post a Comment