ಜ್ಞಾನಪೂರ್ಣ ಜಗಂ ಜ್ಯೋತಿ - ಕರ್ಪೂರದಾರುತಿ ಹಾಡು
ಶ್ಲೋಕ. ಓಂ
ಆರಾಧಯಾಮಿ ಮಣಿಸನ್ನಿಭವಾತ್ಮಲಿಂಗಂ
ಮಾಯಾಪುರಿ ಹೃದಯ ಪಂಕಜ ಸನ್ನಿವಿಷ್ಟಂ
ಶ್ರದ್ಧಾನಜೀವಿಮಲಚಿತ್ತಜಲಾಭಿಷೇಕೈ
ನಿತ್ಯಂ ಸಮಾಧಿ ಕುಸುಮೈರ್ನ ಪುನರ್ಭವಾಯ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ
ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ
ಜನನ ಮರಣ ರಹಿತ ಜಂಗಮಗೆ ಬೆಳಗಿರಿ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ. ||೧||
ನಾನಿನೆಂಬುದ ಬಿಡಿರಿ ಸದ್ಗುರು ಪ್ರಾಪ್ತಿ
ಜ್ಞಾನಿಗಳೊಡನಾಡಿರಿ
ಸ್ವಾನುಭವದ ಸುಖ ತಾನೇ ಕೈ ಸೇರುವುದು
ಅನುಭವಿಸಿ ಲಿಂಗಕ್ಕೆ ಮನವಿಟ್ಟು ಬೆಳಗಿರಿ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ. ||೨||
ನಾನೀನೆಂಬುದು ಬಿಡಿರಿ ನರಕವೇ ಪ್ರಾಪ್ತಿ
ಅಷ್ಟವರ್ಣದ ಸ್ಥೂಲವು ಮಾನವ ಜನ್ಮಹುಟ್ಟಿ
ಬರುವುದು ದುರ್ಲಭವು ಕೊಟ್ಟಾನು ಗುರು
ಎಮಗೆ ಮಾಡಿದ ಫಲದಿಂದೆ
ಹುಟ್ಟಿದ ಮಗನೆಸರು ಶಿವನೆಂದು ಕರೆಯಿರಿ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ. ||೩||
ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿಲಿ
ಸ್ವಾನುಭಾವದ ಸುಖ ತಾನೇ ಕೈ ಸೇರುವುದು
ಅನಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರಿ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ. ||೪||
ನಾನಾಜನ್ಮದ ಕತ್ತಲೆ ಕಳೆದುಳಿದು ಬೇಗ
ಮಾನವ ಜನ್ಮದ ಬೆಳಕಿನಲಿ
ಹೀನ ವಿಷಯದಾಸೆ ಹಿಂದುಳಿದು ಗುರುವಿನ
ಜ್ಞಾನವೇ ಗತಿಯೆಂದು ಮನವಿಟ್ಟು ಬೆಳಗಿರಿ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ. ||೫||
.ಅಷ್ಟಾವರಣದ ಸ್ಥೂಲಭ
ಮಾನವ ಜನ್ಮ ಹುಟ್ಟಿ ಬರುವುದೇ ದುರ್ಲಭ
ಕೊಟ್ಟಾನೇ ಗುರು ಎಮಗೆ ಮಾಡಿದ ಫಲದಿಂದ
ಹುಟ್ಟಿದ ಮಗ ಮಾಚಿ ದೇವನೆಂ ಬೆಳಗಿರಿ
ಜ್ಞಾನಪೂರ್ಣ ಜಗಂ ಜ್ಯೋತಿ
ನಿರ್ಮಲವಾದ ಮನವೆ ಕರ್ಪೂರದಾರತಿ ||೬||
ಮಡಿವಾಳ ಮಾಚಿದೇವ
Wednesday, September 04, 2024
GNYAPURNAM. ಜ್ಞಾನಪೂರ್ಣಂ ಜಗನ್-ಜ್ಯೋತಿ
ಜ್ಞಾನಪೂರ್ಣಂ ಜಗನ್-ಜ್ಯೋತಿ
Subscribe to:
Post Comments (Atom)
No comments:
Post a Comment