Monday, September 02, 2024

*BHIMA RATHYA Saptakam श्री भीमरथ्य सप्तकं ಪರಿಕ್ರಮ ಸಹಿತ



श्री 
भीमरथ्य सप्तकं

वंदे भीम सुस्खलं तरंग संग राजितम

वहती दक्षिणस्तु पाप हारि वारि संयुतम

कृतान्त भीम उदक भुत भीति तारि शौर्यदे

वंदे चरण पंकजम नमामि भीम रथ्यदे   1

त्वदम्बु जीवमौषधं सुसम्प्रदाय सन्निधिं

मस्त्य कूर्म नक्रजं सचक्र पक्षि शक्रदे

हृद्य मन: सुप्रांतदं नमोस्तु भव्य शांतदं

वंदे चरण पंकजम नमामि भीम रथ्यदे    2

सदागभीर नीर पूर पापनाश भूतलं

घोर ध्वनित पातकारि दुरित आपदाहरं

तरौ सुघौघभारहारि सकल तीर्थ सारकं

वंदे चरण पंकजम नमामि भीम रथ्यदे    3

रमेशं तु भाजकं सुदेव दानवर्चितं

विरींचि रुद्र पूजितं शुद्ध वारि पुलकितं

त्वं हि प्राण प्रेरितं जीव दृमल शीतलं

वंदे चरण पंकजम नमामि भीम रथ्यदे    4

वहिं तदैव भीषणं त्वनीर वीक्षितम यदा

अगस्त्य सूनु विक्रमांक गणेश सेवी सर्पदा

पुनर्जलाब्धि जीवजं भवाब्धि दोष कर्षदे

वंदे चरण पंकजम नमामि भीम रथ्यदे    5

अलक्षलक्ष पिप्पलं श्री रामकृष्ण संयुतं

सहस्र नीर तीर वारि पक्षीकीट संकुलं

पिप्पलाद दार्ढ्य शिष्ट अच्युतार्य शर्मदे

वंदे चरण पंकजम नमामि भीम रथ्यदे    6

ताप पाप दुरित हरण जीव जंतु शमनदे

किरातसूत भूतराज जलस्सुसप्त कन्यकै

ततस्तु सर्वजंतु तंतु भुक्तिमुक्ति दायकं

वंदे चरण पंकजम नमामि भीम रथ्यदे    7

भीमरथ्य सप्तकं त्रिलोकमेव सर्वदं

जपंन्ति ते निरंतरम न ते यान्ति दुर्गतिं

अलभ्य लभ्य दैवतं  परमधाम गौरवं

पुनर्भवा नरा न वै त्रिलोकयांती रौरवं

|| भगवति श्री. भीमरथि नद्यार्पणमस्तु ||


ಪರಿಕ್ರಮ 

ಭೀಮಾ ನದಿಯು ಅತ್ಯಂತ ಪ್ರಾಚೀನ ನದಿಯಾಗಿರುವ ಕಾರಣ ಮತ್ತು ಪುಣ್ಯ ಪ್ರದ ಎಂದು ಹೆಸರು ಪಡೆದಿರುವ ಹಿನ್ನೆಲೆಯಲ್ಲಿ ನದಿಯ ಪರಿಕ್ರಮ ಮಾಡುವುದು ಉತ್ತಮ ಎಂದು ಹೇಳಲಾಗಿದೆ. ನದಿಯ ಪರಿಕ್ರಮದ ಆದ್ಯ ಪ್ರವರ್ತಕ ಎಂದು ಹೆಸರು ಪಡೆದಿರುವವರು ಶ್ರೀ ಅಗಸ್ತ್ಯ ಋಷಿಗಳು ಸಪ್ತ ಋಷಿಗಳಲ್ಲಿ ಒಬ್ಬರಾಗಿದ್ದವರು.  ಭೀಮಾ ನದಿಗೆ ಅತ್ಯಂತ ಭಯಂಕರ ಪ್ರವಾಹ ಪೂರ ಬಂದು ದೇವಾಲಯಗಳು, ಶ್ರೀ ಗೋವಿಂದರಾಜ ದೇವರ ಕಟ್ಟೆ, ಮತ್ತು ಊರಲ್ಲಿ ನುಗ್ಗಿ ಜನಜೀವನ ನಾಶ ವಾಗುತ್ತಿರುವುದನ್ನು ಕಂಡು ಶಾಂತಗೊಳಿಸುವುದಕ್ಕೆ ಭೀಮರಥ್ಯ ಸಪ್ತಕವನ್ನು ರಚಿಸಿದರು, 

ಮಂತ್ರ ದ ಪ್ರಭಾವದಿಂದ ಅರ್ಭಟ ಕಡಿಮೆ ಮಾಡಿದರು ಎಂದು ತಿಳಿದು ಬರುತ್ತದೆ. ಭೀಮಾ ನದಿಯ ಪರಿಕ್ರಮ ಮಾಡಿದರೆ ಶ್ರೀ ಲಕ್ಷ್ಮಿ ಗೋವಿಂದರಾಜ ದೇವರು ಮತ್ತು ಪರಿಸರ ದೇವರುಗಳ ಪರಿಕ್ರಮ ಸಹ ಮಾಡಿದಂತಾಗುತ್ತದೆ ಎಂದು ಆಖ್ಯಾಯಿಕೆ ಇದೆ. ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವ ಪರಿಕ್ರಮದಿಂದ ಸಾಧಕನಿಗೆ ತನಗೆ ಬೇಕಾದ ಇಪ್ಸಿತ ಲಭಿಸುತ್ತದೆ ಪರಿಕ್ರಮ ಮಾಡುವ ಸಾಧಕರನ್ನು ಭೀಮಾನದಿ ಮಾತೆಯು ಮಕ್ಕಳಂತೆ ನೋಡಿ ಕೊಳ್ಳುವಳು ಎಂಬ ಅನುಭವ ಅನೇಕ ಪರಿಕ್ರಮಾರ್ಥಿಗಳಿಗೆ ಆಗುತ್ತಿತ್ತು ಎಂದು ತಿಳಿಸುವ ಊರ ಹಿರಿಯರಿದ್ದಾರೆ. ಭೀಮಾ ನದಿಯ ಪರಿಕ್ರಮ ಎಂದರೆ ಭೌತಿಕ ಮತ್ತು ಪಾರಲೌಕಿಕ ಜೀವನ ವಿಧಾನ ಕಲಿಸುವ ರೀತಿ ಆಗಿರುವ ಕಾರಣ ಪರಿಕ್ರಮವನ್ನು ಪಾರಮಾರ್ಥಿಕ ಎಂದು ಕರೆಯಬಹುದು. ಹೇಗೆ ಗಂಗೆಯ ಸನ್ನಿಧಾನದಲ್ಲಿ ಯಾವ ರೀತಿ ಪಾಪ ಕರ್ಮಗಳು ನಾಶವಾಗುತ್ತವೆಯೋ ಅದೇ ರೀತಿ ಭೀಮರಥಿಯ ಸನ್ನಿಧಾನದಲ್ಲಿ ಆಸಕ್ತಿ ವಿರಹಿತವಾಗಿರುವುದು ಅಪೇಕ್ಷಿತವಾಗಿದೆ. ಇದರಿಂದ ಸಾಧಕನು ಸಹ ಮೋಹ ಮಾಯ ಲೋಭಗಳಾದ ಅರಿಷಡ್ವರ್ಗಗಳಿಂದ ಮುಕ್ತನಾಗುತ್ತಾನೆ ಎಂದು ಜನಪದಗಳಲ್ಲಿ ನಂಬಿಕೆ ಇದೆ.  

              ಪರಿಕ್ರಮಕ್ಕೆ ಸಂಬಂಧಿಸಿದಂತೆ ಸ್ಪಷ್ಟ ವಿಷಯ ಯಾರಿಗೂ ತಿಳಿಯದ ಕಾರಣ ಪರಿಕ್ರಮ ಕಷ್ಟ ದಾಯಕವಾದದ್ದು ಎಂಬ ಭಾವನೆ ಜನರಲ್ಲಿದೆ ಹೀಗಾಗಿ ಪರಿಕ್ರಮ ಮಾಡಬೇಕು ಎಂಬ ಇಚ್ಛೆ ಇದ್ದರೂ ಸಹ ಹೇಗೆ ಮಾಡಬೇಕು ?ಯಾಕೆ ಮಾಡಬೇಕು ? ಎಂಬ ಸಂದೇಹ ಜನರಲ್ಲಿ ಈಗಲೂ ಇದೆ. 

                    ನಸುಕಿನಲ್ಲಿ ಭೀಮಾ ನದಿಯುಲ್ಲಿ ಸ್ನಾನ ಸಂಧ್ಯಾದಿಗಳನ್ನು ಮಾಡಿ ಶ್ರೀ ಗೋವಿಂದರಾಜ ದೇವರು ಶೇಷ ದೇವರುಗಳ( ಅರಳೀ ಗಿಡ ) ರುದ್ರ ದೇವರು ಸಿದ್ಧಿವಿನಾಯಕ ದೇವರು  ( ಆಲದ ಗಿಡ )ಆಂಜನೇಯ ದೇವರು ( ಬಿಳಿ ಎಕ್ಕದ ) ಪರಿಕ್ರಮ ಮುಗಿಸಿ ಉತ್ತರಕ್ಕೆ ಇರುವ ಬನಶಂಕರಿ ಲಕ್ಷ್ಮಿ ಚಂದ್ರಲಾದೇವಿ ಸಪ್ತ ಮಾತೃಕೆಯರು  ( ಬೇವಿನ ಅಥವಾ ಬಸರೀ ಗಿಡ ) ಇವರೆಲ್ಲರ ಪರಿಕ್ರಮ ಮಾಡಿ ಹಾಗೆಯೇ ತಿರುಗಿ ಶನಿ ದೇವರು ( ಬನ್ನಿ ಗಿಡ ) ಜಲಕನ್ನಿಕೆಯರ (ಸಿನಿವಾಲಿ ದೇವಿಯ) (ಶಟೀಕವ್ವ) ( ಬೇವಿನ ಅಥವಾ ಬಸರಿ ಗಿಡ ) ಪರಿಕ್ರಮದೊಂದಿಗೆ ಹಾಗೆ ದಕ್ಷಿಣಕ್ಕಿರುವ ಭೂತರಾಜ ರಕ್ಷಾಟಮಲ್ಲನ ( ಬಿಳಿ ಎಕ್ಕದ )  ಮುಂದೆ ಬಂದು ( ಅತ್ತಿಯ ಗಿಡಕ್ಕೆ ). ಪ್ರತಿ ಗಿಡಕ್ಕೂ ಒಂದೊಂದು ಕಲಶ ನೀರುಣಿಸುವದನ್ನು ಮರೆಯ ಕೂಡದು. ಹಾಗೆ ಪರಿಕ್ರಮಿಸುತ್ತ ನೇರವಾಗಿ ಮತ್ತೆ ಭೀಮಾನದಿಗೆ ಬಂದು ಮತ್ತೊಮ್ಮೆ ಸ್ನಾನ ಮಾಡಿ ಗಂಗೆ ಪೂಜೆ ಕನ್ಯಾಪೂಜೆ ಮುಗಿಸಿ ಒಂದು ಸುಲಿಯದ ತೆಂಗಿನ ಕಾಯಿಯನ್ನು ನೀರಲ್ಲಿ ತೇಲಿಬಿಡುವದು ರೂಢಿಯಲ್ಲಿದ್ದು  ಶ್ರೀ ಲಕ್ಷ್ಮಿ ಗೋವಿಂದ ರಾಜ ದೇವರ ಕಟ್ಟೆ ಮೇಲೆ ಉರುಳು ಸೇವೆ ಮಾಡಲಾಗುತ್ತಿತೆಂದು ಊರ ಹಿರಿಯರ ಹೇಳಿಕೆಗಳಿವೆ.  

                  ಬೆಲ್ಲ ಕರಿಎಳ್ಳು ಕೂಡಿಸಿದ ನೈವೇದ್ಯ ಪ್ರತಿ ದೇವರಿಗೂ ಅರ್ಪಿಸಿ ಕೈಮುಗಿದು ಮುಂದುವರಿಯುವುದು ವಾಡಿಕೆಯಾಗಿತ್ತೆಂದು ಹೇಳುತ್ತಾರೆ. ಆದರೆ ಈಗ ಅದು ಯಾರು ಮಾಡುತ್ತಿಲ್ಲ. 

ಪರಿಕ್ರಮದ ಆಚರಣೆ.

ಪರಿಕ್ರಮಕ್ಕೆ ಮುಂಚೆ ಪಾಲಿಸಬೇಕಾದ ನಿಯಮಗಳು ಪರಿಕ್ರಮ ಯಾವ ಕಾರ್ಯಕ್ಕಾಗಿ ಮಾಡಲಾಗುತ್ತಿದೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ಭೀಮಾನದಿ ಪೂಜೆ ಮಾಡಿ ಬೆಲ್ಲ ಕರಿ ಎಳ್ಳು ನೈವೇದ್ಯ ತೋರಿಸಬೇಕು ಯಥಾ ಶಕ್ತಿ ಭೋಜನ ಪ್ರಸಾದ ವ್ಯವಸ್ಥೆ ಮಾಡಬೇಕು ಪ್ರತಿನಿತ್ಯ ನವಿಸ್ನಾನ ಮಾಡಿ ಚಂಡೆ ವಂದನೆ ಮಾಡಬೇಕು ಪರಿಕ್ರಮ ಮಾಡುವ ವೇಳೆಯಲ್ಲಿ ಕುಲದೇವರ ಇಷ್ಟದೇವರ ಪಠಣ ಮಾಡುವುದು ಅವಶ್ಯಕ. ಪರಿಕ್ರಮ ನಡೆದಾಗ ವ್ಯರ್ಥವಾದ ವಿವಾದ, ಪರನಿಂದೆ, ಜಾಡಿ ಹೇಳುವ ಕೆಲಸ ಮಾಡಬಾರದು ಮಾತಿನ ಮೇಲೆ ನಿಯಂತ್ರಣ ಇರಬೇಕು ಸದಾಕಾಲ ಸತ್ಯ ವಚನಿ ಆಗಿರಬೇಕು

ನದಿಯಲ್ಲಿ ಸ್ನಾನ ಮಾಡುವುದಕ್ಕೆ  ಮುಂಚೆ ಪೂರ್ವಾಭಿಮುಖವಾಗಿ ನೀರಲ್ಲಿ ನಿಂತುಕೊಂಡು ಬೊಗಸೆಯಲ್ಲಿ ನೀರು ಹಿಡಿದು ಈ ಕೆಳಗಿನ ಮಂತ್ರ ಪಠಿಸುತ್ತಿರಬೇಕು.

ಯತ್ ಸನ್ನಿಧಾನ ತತ್ತೀರ್ಥ ಕ್ಷೇತ್ರಾಣಿ ಭುವನತ್ರಯೇ | ಮಹತಾಮ್ ಗೋಖೇಟ ಗೋವಿಂದಪುರ ಪತೇ ನಮಃ || 

ವ್ಯಾಪ್ತಾಶ್ವತ್ಥಂ ಗೋವಿಂದ ಚಂದ್ರ ಶ್ರೀ ಪರಿವೃತಸ್ತು ಭೀಮರಥ್ಯಾದಿಭದ್ರೆ  | ಗೋಗ್ರಾಮೇ ಸದಾಸ್ತೇ ಸಕಲಜನ ಮನೋಭಿಷ್ಟದಾಯೈ ದಯಾಲು : ||

ಭೀಮೇಚ ಶಾಲ್ಮಲೀ ಚೈವ ಅಮರಜಾ ಕಾಗಿಣಿ ಸ್ತಥಾ | ಹಿರಣ್ಯತ್ತುಂಗ ಇಂದ್ರಾಣಿ ಜಲೇಸ್ಮಿನ್ ಸನ್ನಿಧಿಂ ಕುರು ||

ಗಂಗೇಚ ಯಮುನೇ ಚೈವ ಗೋದಾವರೀ ಸರಸ್ವತಿ | ನಮ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಭೀಮಾ ಭೀಮೇತಿ ಯೋ ಬ್ರೂಯಾತ್ ಯೋಜನಾನಾಂ ಸಹಸ್ರಪಿ | ಮುಚ್ಯತೆ ಸರ್ವ ದೋಷೇಭ್ಯೋ ಹರಿರ್ಲೋಕಂ ಸ ಗಚ್ಛತಿ ||

ನಮಾಮಿ ಭೀಮಾ ತವ ಪಾದ ಪಂಕಜಂ ಸಮಾಜ ಪುರುಷೈರ್ವಂದಿತ ಭವ್ಯರೂಪಮ್ | ಭುಕ್ತಿಂ ಅರೋಗಂ ಚ ದದಾಸಿ ನಿತ್ಯಂ ನಿಷ್ಠಾನುಸಾರೇಣ ಸದಾ ಜಗಾನಾಂ ||

ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವಾ | ತ್ರಾಹಿಮಾಂ ಕೃಪಯಾ ಭೀಮಾ ಸರ್ವ ಪಾಪ ಹರಾ ಭವ  ||

ಅಸ್ಯಾಯಾಂ ಮಹಾನದ್ಯಾ ವಹಂತಿಂ ಪಾಂಡುರಂಗಂ | ಮಾತುಲಿಂಗಂ, ಧೂಲಖೇಟಂ, ಗೋಖೇಟಂ ಚ ನಿರಂಜನಂ |  ಪ್ರಾವಾಹ್ಯ ಭೀಮರಥ್ಯಾದೇವಿ ಪವಿತ್ರಂ ಮಮ ಸರ್ವದಾ ||

ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವಾ | ತ್ರಾಹಿಮಾಂ ನರಕೋದ್ಘೋರಾ ಸರ್ವ ಪಾಪ ಹರೋಂ ಹರ: ||

ಸೂರ್ಯನ ಕಡೆಗೆ ಮುಖಮಾಡಿ ಬೊಗಸೆಯಲ್ಲಿಯ ನೀರನ್ನು ನಿಧಾನವಾಗಿ ಭೀಮರಥೀ ದೇವಿಗೆ ಅರ್ಘ್ಯ ಕೊಟ್ಟು ನಮಸ್ಕರಿಸಬೇಕು 

ಉಪಸಂಹಾರ: ನದಿಗಳನ್ನು ಲೋಕಮಾತೆಯೆಂದು ಜೀವಿಕೆ ಎಂದು ಕರೆಯುತ್ತಾರೆ. ನದಿಗಳಿಗೆ ಹೆಸರು ಏನಿದ್ದರೂ ಸಹ ಸರ್ವ ಜನಸಮೂಕ್ಕೆ  ಅದು ಭೂಮಾತೆಯ ಸ್ವರೂಪ.  ತಮ್ಮತಮ್ಮ ಊರಿನ ನದಿ ನೋಡುತ್ತಿದ್ದಂತೆ ಹರ ಹರ ಗಂಗೆ ಎಂದೋ ಹರೋಂ ಹರ: ಎಂದೋ ಹೇಳುವುದು ರೂಢಿ.  ಹರಿಯುವ ನೀರು ಯಾವುದೇ ಆಗಿದ್ದರು ಸಹ ಅದು ದೇವರಿಗೆ ಸಮ ಅಂತಹ ಹರಿಯುವ ನೀರನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು ನದಿಗಳ ಮಹತಿಯನ್ನು ಅರಿತುಕೊಂಡು ನದಿಯ ಮಾಲಿನ್ಯ ಆಗಬಾರದು ಎಂಬ ಎಚ್ಚರಿಕೆ ನಮ್ಮಲ್ಲಿದ್ದರೆ ಕನಿಷ್ಠ ಈ ಒಂದು ಉದ್ದೇಶಕ್ಕಾದರೂ ಪರಿಕ್ರಮ ಸಾರ್ಥಕವಾಗುತ್ತದೆ.  ಧನ್ಯವಾದಗಳು 


No comments:

Post a Comment