Monday, October 07, 2024

*KATYAYINI VI. ದೇವಿ ಕಾತ್ಯಾಯಿನಿ ೬

 
                        ದೇವಿ ಕಾತ್ಯಾಯಿನಿ

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||

ಶುಭಗದಾರತಿ ಕಾತ್ಯಾಯಿನಿಗೆ ಬೆಳಗಲು ಬನ್ನಿ ಪರ್ವದಲಿ 
ದುರುಳ ಮಹಿಷನ ಘಾತಿಸಿ ಅಂಬೆ ಘೂರ್ಮಿಸುತಿಹಳು ಗರ್ವದಲಿ 
ಕೆಂಗಲ್ಮಸಗುತ ಕೃಪಾಣಪಾಣಿ ಭಯವ ಮೂಡಿಸುತ ದರ್ವರಲಿ 
ಶುಭಗದಾರತಿ ಕಾತ್ಯಾಯಿನಿಗೆ ಬೆಳಗಲು ಬನ್ನಿ ಪರ್ವದಲಿ 

ಭೂಆಕಾಶದ ಎಲ್ಲೆಯ ಮೀರಿದ ಪ್ರಭೆಯ ನೋಡುವ ಕಂಗಳಲಿ 
ಭಕ್ತಿಯ ಹನಿಗಳು ಹರಿಯುತಲಿರಲಿ ನಂಬಿಕೆಯಿರಲಿ ಮನಗಳಲಿ 
ವ್ಯಕ್ತಾವ್ಯಕ್ತದ ಭಾವಕಳೆಯಿರಿ ಭರ್ಗನ ಭಾರ್ಯೆಯ ಚರಣದಲಿ 
ಶುಭಗದಾರತಿ ಕಾತ್ಯಾಯಿನಿಗೆ ಬೆಳಗಲು ಬನ್ನಿ ಪರ್ವದಲಿ 

ಸಿಂಹವಾಹಿನಿಯ ಭದ್ರಕಾಳಿಕೆಯ ಸ್ತೋತ್ರವಾಡುವ ಮುಖಗಳಲಿ 
ಮಂತ್ರವಾಹಿನಿಯು ನಡೆಯುತಲಿರಲಿ ನೋವುಗಳಲ್ಲಿ ಸುಖಗಳಲಿ 
ಭವನಾಟಕದಿಂ ಮುಕುತಿಯ ಬೇಡಿರಿ ನೃತ್ಯಪ್ರಿಯರಥ ಮಾತೆಯಲಿ 

ಶುಭಗದಾರತಿ ಕಾತ್ಯಾಯಿನಿಗೆ ಬೆಳಗಲು ಬನ್ನಿ ಪರ್ವದಲಿ 

                                      ...... ಜಾನಕಿ ರಾಮ 

                      ಸೀತಾರಾಮ ಕಟ್ಟಿ ಯಲಗೂರು 

No comments:

Post a Comment