ಜಗದಧಿ ದೇವನೆ
ಜಗದಧಿ ದೇವನೆ ದೇವಾಧಿ ದೇವನೆ. 2
ಅಘನಾಶಕನೇS ತರುವರರೂಪನೇS || ಪಲ್ಲ ||
ಕರದಲಿ ಧನುವು ಬೆರಳಲಿ ಚಕ್ರವು. 2
ಶಿರದಲಿ ಜಡೆಯು ಫಾಲಲಿ ಪೌಂಡ್ರವು 2
ಸುರ ಅಸುರರು ನತ ನಿನಗನುಗಾಲವೂ. ||೧
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಕೋದಂಡವ ಶಾರಂಗವ ಧರಿಸಿದ 2
ವೇಧವು ಸಂರಕ್ಷಣ ವಿಧ ಧರ್ಮದ. 2
ವೇದದಿ ನೀ ಪ್ರಳ ಯಾಂತಕ ದೇವನೇ. ||೨
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಉತ್ತುಂಗ ಪೀಠದಿ ವಿರಾಜಮಾನನು. 2
ನಿತ್ಯದಿ ಸೇವಿಪ ವಾಯು ವಿಹಂಗಮ. 2
ಸತ್ಯದಿ ಪ್ರವಹಿಪ ಭೀಮರಥೀSತಟ ||೩
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಕಲಶೋದ್ಭವ ಅರ್ಚಿತ ಮೂರುತಿಯೇ. 2
ವಿಲಸಿತ ಅಶ್ವತ್ಥ ನಿಂಬಕ ರೂSಪನೇ. 2
ವಲಯದಿ ಪಠಿಪರ ಮೋಕ್ಷ ದಾಯಕನೇ. ||೪
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಚಂದ್ರಿಕೆ ಚಂಚಲೆ ಯುಗಲರ್ಧಾಂಗರು. 2
ಸಾಂಧ್ರದಿ ವಾಮಕೆ ಶ್ರೀ ವನದೇವಿಯು. 2
ಮಂದ್ರಧೀಮಂದ ಪ್ರಸೂSತಿ ಸಖಿಯಳೂ. ||೫
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಪರಿಸರ ರಕ್ಷಕ ಭೂSತ ರಕ್ಷಾಟನು. 2
ಎರೆವಿಜಯರು ಸಂ ವರ್ಧಕ ಸೇವ್ಯರು. 2
ವರಯಜಮಾನನೇ ಪ್ರಸರಿಪ ಪುರಗಳ. ||೬
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ವಂದೇ ಗೋವೃಂದಪುರ ಸುಪ್ರಾಂತದೀ. 2
ವಂದೇ ಹೃದ್ಮನದಿಂ ಗೋಯುಥಗಳ. 2
ವಂದಿಸಿ ನೃಪ ವಿಕ್ರಮನು ದಾSರ್ಢ್ಯರ ||೭
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಶಿಷ್ಟರ ಭಕುತರ ಸುಖದಾSಯಕನೇ. 2
ಕಷ್ಟ ಕಾರ್ಪಣ್ಯಗಳ್ ನೀಗಿಪ ನೃಪನೇ. 2
ಭ್ರಷ್ಟ ಖಲರುಗಳ ಮದವನು ವಿಧಿಸುವ. ||೮
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ನಿಂಬಕ ಅಶ್ವಥ ಜ್ಞಾನ ಪೂSರಿಪತರು. 2
ಅಂಬರ ಭಿಷಜರ ವರಪ್ರಾಸಾSದದೀ. 2
ಸಂಭ್ರಮದಿ ಆಯುರಾರೋಗ್ಯ ನೀಡುತ. ||೯
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
ಗೋಪತಿ ಸೌಮಿತ್ರಾಗ್ರಜ ಸಂಯುತ 2
ಆಪ್ಯಾಯತೆಯಲಿ ಭಜಿಪರ ಇಪ್ಸಿತ 2
ಗೌಪ್ಯದಿ ಇಂದಿರೇಶಸುತನನೇ ಹರಸುತ. ||೧೦
ಜಗದಧಿ ದೇವನೆ ದೇವಾಧಿ ದೇವನೆ
ಅಘನಾಶಕನೇS ತರುವರರೂಪನೇS
No comments:
Post a Comment