ಸಂಘ ಪ್ರಾರ್ಥನೆ. ಕನ್ನಡ ತರ್ಜುಮೆ..
(ಒಂದು ಪ್ರಯತ್ನ)
ಭಾರತ ಮಾತೆಯ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಾವನೆ ಏನೆಂದು ಯೋಚಿಸಿ, ಮನವರಿಕೆ ಮಾಡಿಕೊಳ್ಳುವುದು ಅವಶ್ಯಕ ಎನಿಸಿತು ಮತ್ತು ಸಂಸ್ಕೃತದಲ್ಲಿ ಇರುವ ಆ ಪ್ರಾರ್ಥನೆಯ ಅರ್ಥವನ್ನು ಸಮಸ್ತರಿಗೆ ತಿಳಿಯಪಡಿಸುವ ಉದ್ದೇಶದಿಂದ ಮಾಡಿರುವ ಇದೊಂದು ಪ್ರಯತ್ನ ಅಭಿವಂದನೆಗಳು.
इयं राष्ट्रीय स्वयंसेवक संघस्य प्रार्थना:। अस्य प्रणेता नरहरि नारायण भिड़े आसीत। ( १९३९ ) नवदशशतानि नवत्रिंशत् तमेवर्षे फेब्रुअरी मासे रचिता इयं प्रार्थना पुणे संघ शिक्षा वर्गे प्रथम अवसरे प्रस्तुतवान।
ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆ: ಪ್ರಾರ್ಥನೆಯನ್ನು ರಚಿಸಿದವರು ಶ್ರೀ ನರಹರಿ ನಾರಾಯಣ ಭಿಡೆರವರು. ಫೆಬ್ರವರಿ 1939 ರಲ್ಲಿ ರಚಿಸಲಾದ ಈ ಪ್ರಾರ್ಥನೆಯನ್ನು ಪುಣೆ ಸಂಘವು ತನ್ನ ಶಿಕ್ಷಣ ಶಿಬಿರದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸ್ತುತಪಡಿಸಿತು.
1. नमस्ते सदा वत्सले मातृभूमे, त्वया हिन्दुभूमे सुखं वर्धितोsहम्।
ಓ ಪ್ರೀತಿಯ ಮಾತೃಭೂಮಿಯೇ! ನಾನು ನಿಮಗೆ ಯಾವಾಗಲೂ ವಂದಿಸುತ್ತೇನೆ. ನೀವು ನನ್ನನ್ನು ಸುಖ ಸಂತೋಷದಿಂದ ಬೆಳೆಸಿದ್ದೀರಿ.
2. महामङ्गले पुण्यभूमे त्वदर्थे, पतत्वेष कायो नमस्ते नमस्ते।। १।।
ಓ ಮಂಗಳಕರ ಪವಿತ್ರ ಭೂಮಿಯೇ! ನನ್ನ ಈ ದೇಹವು ನಿಮ್ಮ ಕೆಲಸಕ್ಕಾಗಿ ಮಾತ್ರ ಸಮರ್ಪಿತವಾಗಿದೆ. ನಾನು ನಿಮಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ.
3. प्रभो शक्ति मन्हिन्दुराष्ट्राङ्गभूता, इमे सादरं त्वाम नमामो वयम् यत्वदीयाय कार्याय बध्दा कटीयं, शुभामाशिषम देहि तत्पूर्तये तत्।
ಓ ಸರ್ವಶಕ್ತ ದೇವರೇ! ಹಿಂದೂ ರಾಷ್ಟ್ರದ ಮಕ್ಕಳಾದ ನಾವು ನಿಮಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇವೆ. ನಿಮ್ಮ ಕೆಲಸಕ್ಕೆ ಮಾತ್ರ ನಾವು ಸಜ್ಜಾಗಿದ್ದೇವೆ. ಆ ಕೆಲಸದ ನೆರವೇರಿಕೆಗಾಗಿ ನಿಮ್ಮ ಆಶೀರ್ವಾದವನ್ನು ನಮಗೆ ನಿರಂತರವಾಗಿ ನೀಡುತ್ತಲಿರಿ.
4. अजय्यां च विश्वस्य देहीश शक्तिम, सुशीलं जगद्येन नम्रं भवेतत्, श्रुतं चैव यत्कण्टकाकीर्ण मार्गं, स्वयं स्वीकृतं नः सुगं कारयेतत्।। २।।
ಓ ಸೃಷ್ಟಿ ಕರ್ತನೇ! ಜಗತ್ತಿನಲ್ಲಿ ಯಾರೂ ಎಂದಿಗೂ ಪ್ರಶ್ನೆ ಮಾಡದಂತಹ ಶಕ್ತಿಯನ್ನು ನಮಗೆ ನೀಡು , ಅಂತಹ ಪರಿಶುದ್ಧತೆಯ ಮುಂದೆ ಇಡೀ ಜಗತ್ತು ತಲೆಬಾಗಬೇಕು, ಅಂತಹ ಜ್ಞಾನವನ್ನು ತಮ್ಮಿಂದ ಬೇಡಿಕೊಳ್ಳುತ್ತೇನೆ. ಅದರ ದೆಸೆಯಿಂದಾಗಿ ನಾನೇ ಸ್ವತಃ ಸ್ವೀಕರಿಸಿದ ಈ ಮುಳ್ಳಿನ ಮಾರ್ಗವು ನನಗೇ ಸುಲಭವಾಗುತ್ತದೆ.
5. समुत्कर्ष निःश्रेय सस्यैकमुग्रं, परं साधनं नाम वीर व्रतत्म् तदन्तः स्फुरत्वक्षया ध्येयनिष्ठा, हृदन्तः प्रजागर्तु तीव्राsनिशम्।
ಅತ್ಯುನ್ನತ ಆಧ್ಯಾತ್ಮಿಕ ಸಂತೋಷ ಮತ್ತು ಶ್ರೇಷ್ಠ ಲೌಕಿಕ ಸಮೃದ್ಧಿಯನ್ನು ಪಡೆಯುವ ಏಕೈಕ ಅತ್ಯುತ್ತಮ ಸಾಧನವಾದ ಉಗ್ರ ಶೌರ್ಯದ ಮನೋಭಾವವು ನಮ್ಮಲ್ಲಿ ಜಾಗೃತಗೊಳ್ಳಬೇಕು. ತೀವ್ರವಾದ ಮತ್ತು ಅಚಲವಾದ ನಿರ್ಣಯವು ಯಾವಾಗಲೂ ನಮ್ಮ ಹೃದಯದಲ್ಲಿ ಎಚ್ಚರವಾಗಿರುವಂತೆ ಕೃಪೆ ಮಾಡು
6. विजेत्री च नः संहता कार्यशक्तिर्, विधायास्य धर्मस्य संरक्षणम्। परं वैभवं नेतुमेतत् स्वराष्ट्रं, समर्था भवत्वाशिषा ते भृशम्।। ३।। ।। भारत माता की जय।।
ಓ ತಾಯಿಯೇ, ನಿಮ್ಮ ಕೃಪೆಯಿಂದ, ನಮ್ಮ ಈ ವಿಜಯಶಾಲಿಯಾದ ಸಂಘಟಿತರಾಗಿ ದುಡಿಯುವ ಶಕ್ತಿಯು ನಮ್ಮ ಧರ್ಮವನ್ನು ರಕ್ಷಿಸಲು ಮತ್ತು ಈ ರಾಷ್ಟ್ರವನ್ನು ವೈಭವದ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಲು ಸಾಧ್ಯವಾಗುವಂತೆ ಕೃಪೆ ಮಾಡು ತಾಯಿ . ಭಾರತ ಮಾತೆಯೇ ನಿನಗೆ ಜಯವಾಗಲಿ
ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ಸಮಾಜದ ಒಂದು ಭಾಗವಾಗಿದ್ದು ರಾಷ್ಟ್ರೀಯ ಸಮಾಜಿಕ, ರಾಜನೈತಿಕ. ಸಮಸ್ಯೆಗಳಿಗೆ ಪ್ರತಿನಿಧಿಸುತ್ತಿಲಿರಬೇಕು ಎಂದು ಮಾತ್ರ ಅರ್ಥಮಾಡಿಕೊಂಡಿದೆ. ಅಲ್ಲದೆ ಸಂಘವು ರಾಷ್ಟ್ರದ ಪ್ರಮುಖ ಘಟಕವಿರುವ ವೈಯಕ್ತಿಕ ಅಭಿವೃದ್ಧಿಯತ್ತಲೂ ಸಹ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.
ಸಮಾಜವು ಶಕ್ತಿಯುತವಾಗಿರಬೇಕು, ಸಂಘಟಿತವಾಗಿರಬೇಕು ಮತ್ತು ವೈಯಕ್ತಿಕ ಅಭಿವೃದ್ಧಿಯ ಪಥದಲ್ಲಿ ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಲಿರಬೇಕು ಎಂಬುದೇ ಮೂಲ ಉದ್ದೇವಾಗಿಟ್ಟುಕೊಂಡು ತನ್ನ ನಿಸ್ವಾರ್ಥ ಸೇವೆಯನ್ನು ನಿರಂತರವಾಗಿ ಮಾಡುತ್ತ ಬಂದಿದೆ, ಪ್ರಸ್ತುತ ಮಾಡುತ್ತಲೂ ಇದೆ ಭವಿಷ್ಯದಲ್ಲಿಯೂ ಸಂಘವು ಕರ್ತವ್ಯ ನಿರ್ವಹಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಅಭಿವಂದನೆಗಳು.
RSS राष्ट्रीय स्वयम् सेवक संघ सदस्य
No comments:
Post a Comment