Monday, January 06, 2025

Brief DEVA PUJA. ಸಂಕ್ಷಿಪ್ತ ದೇವ ಪೂಜಾ

ಸಂಕ್ಷಿಪ್ತ ದೇವ ಪೂಜಾ ಪದ್ಧತಿ 
ಹತ್ತು ನಿಮಿಷಗಳಲ್ಲಿ ಪೂಜೆ ಮಾಡಬಹುದು
(ಗುರು ಮುಖೇನ,  ತಿಳಿದವರಿಂದ, ಇದನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿ  ಅಥವಾ ಪುಸ್ತಕವನ್ನು ನೋಡಿಯಾದರೂ ಪೂಜೆಯನ್ನು ಮಾಡಬೇಕು)


ಮೊದಲು ದೇವಗೃಹವನ್ನು ಮಡಿ ಪಂಚೆಯನ್ನು ಉಟ್ಟು ಮಡಿ ನೀರು ಸಹಿತ ಪ್ರವೇಶಿಸುವುದು. ದೀಪವನ್ನು ಹಚ್ಚಿ ಗಂಟಾನಾದ ಶಂಖನಾದದೊಡನೆ ಪ್ರಾರಂಭ 

ಓಂ ಅಪವಿತ್ರಃ ಪವಿತ್ರೋ ವಾ  ಸರ್ವಾವಸ್ಥಾಮ್ ಗತೋಪಿ ವಾ  ಯಃ ಸ್ಮರೇತ್ ಪುಂಡರೀಕಾಕ್ಷಮ್  ಸ ಬಾಹ್ಯಾಭ್ಯಂತರಃ ಶುಚಿಃ 

ಸಂಧ್ಯಾವಂದನೆ ಮಾಡುವುದು.
ಗೋಪೀಚಂದನ ದ್ವಾದಶ ನಾಮಗಳು ಮುದ್ರೆ ಹಚ್ಚಿ ಕೊಳ್ಳಬೇಕು

೧ ) ಭೂತೋಚ್ಚಾಟನ
ಅಪಸರ್ಪಂತು ಯೇ ಭೂತಾಃ ಯೇ ಭೂತಾಃ ಭುವಿ ಸಂಸ್ಥಿತಾಃ ಯೇ ಭೂತಾಃ ವಿಘ್ನಕರ್ತಾರಃ  ತೇ ನಶ್ಯಂತು ಶಿವಾಜ್ಞಯಾ || 
ಅಪಕ್ರಾಮಾಂತು ಭೂತಾನಿ ಕ್ರೂರಾಚೈವತು ರಾಕ್ಷಸಾಃ | ತೇಷಾಮಪ್ಯ ವಿರೋಧೇನಾ ಪೂಜಾಕರ್ಮ ಸಮಾರಭೇತ್ || ಇತೀ ಭೂತೋಚ್ಚಾಟನಂ.

೨) ಗಂಟಾನಾದ
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್ ಕುರು ಗಂಟಾರವಂ ತತ್ರ ದೇವತಾಹ್ವಾನ ಸೂಚಕಮ್ || 

೩) ಆಚಮನ- ಪ್ರಾಣಾಯಾಮ - 
ಸಂಕಲ್ಪ
ಶ್ರೀ ಮದ್ಭಗವತೋ ಮಹಾಪುರುಷಸ್ಯ.....
ಶ್ರೀವಿಷ್ಣು ಪ್ರೇರಣೇಯಾ ಶ್ರೀವಿಷ್ಣು ಪ್ರೀತ್ಯರ್ಥಂ ಯಥಾ ಶಕ್ಯ್ತಾ ಯಥಾ ಜ್ಞಾನೇನ ಶ್ರೀ ಲಕ್ಷ್ಮಿ ಗೋವಿಂದ ರಾಜಸ್ಯ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ . 

೪ ] ಕಲಶಪೂಜೆ
ಒಂದು ಸಣ್ಣ ಕಲಶದಲ್ಲಿ ನೀರನ್ನು ತುಂಬಿಸಿ , ಗಂಧ (ಗಂಧೋದಕ) ತುಳಸಿ , ಹೂ ಹಾಕಿ ಕಲಶವನ್ನು ಮುಟ್ಟಿ ಈ ಕೆಳಗಿನ ಮಂತ್ರವನ್ನು ಹೇಳಬೇಕು . 

ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು .....
ಕಲಶಃ ಕೀರ್ತಿಮಾಯುಶ್ಚ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಮ್ | ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ || 
[ ಈ ಕಲಶದ ನೀರನ್ನು ದೇವರ ಅಭಿಷೇಕದ ( ಪ್ರೋಕ್ಷಣೆ ) ಸಂದರ್ಭದಲ್ಲಿ ಉಪಯೋಗಿಸಬೇಕು ]

೫), ಶಂಖಪೂಜೆ
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ | ನಮಿತಃ ಸರ್ವ ದೇವೈಶ್ಚ ಪಾಂಚಜನ್ಯ ನಮೋಸ್ತುತೇ || ಈ ಕೆಳಗಿನ ಮಂತ್ರವನ್ನು ಹೇಳುತ್ತ ಶಂಖದಲ್ಲಿ ಕಲಶದ ನೀರನ್ನು ತುಂಬಿಸಿ ಹೂವನ್ನು ಇಡಬೇಕು . ಪಾಂಚಜನ್ಯಾಯ ವಿದ್ಮಹೇ ಪಾವಮಾನಾಯ ಧೀಮಹೀ ತನ್ನೋ ಶಂಖಃ ಪ್ರಚೋದಯಾತ್
ನಂತರ ಶಂಖದ ನೀರನ್ನು ಪೂಜಾದ್ರವ್ಯಗಳ ಮೇಲೆ ತುಳಸೀ ಅಥವಾ ಹೂವಿನಿಂದ ಈ ಕೆಳಗಿನ ಮಂತ್ರವನ್ನು ಹೇಳುತ್ತ ಪ್ರೋಕ್ಷಿಸಬೇಕು.

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ

೬) ಪೀಠಪೂಜೆ
ವಿಷ್ಣೋರಾಸನ ಭೂತಾಯ ದಿವ್ಯರತ್ನಮಯಾಯ ಚ ಪ್ರಧಾನ ಪುರುಷೇಶಾಯ ಮಹಾಪೀಠಾಯತೇ ನಮಃ |

ದೇವರ ಪೀಠಕ್ಕೆ ತುಳಸಿಯನ್ನು ಹಾಕಿ ನಮಸ್ಕಾರ ಮಾಡುವುದು.

ಷೋಡಶೋಪಚಾರ

ಧ್ಯಾನಮ್
ಯೋ ಅಶ್ವತ್ಥರೂಪೇಣ ನದೀ ತಟಾಕೆ..... .... 
ಅಭಯಂ ಗದೀನಂಚ ಶಂಖ ಚಕ್ರ.........(ನಿಮ್ಮ ನಿಮ್ಮ ಕುಲ ದೇವರ ಅಥವಾ ಪ್ರತಿಮೆಯ ಧ್ಯಾನವನ್ನು ಮಾಡುವುದು)
( ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . ) 

ಆವಾಹನಮ್
ಶ್ರೀ ಲಕ್ಷ್ಮೀ ಗೋವಿಂದ ರಾಜ ದೇವತಾಭ್ಯೋ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ || ಎಂದು ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . (ಪುರುಷಸೂಕ್ತ ಪಠಿಸಬೇಕು)

ಆಸನಮ್
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋ ನಮಃ ಆಸನಮ್ ಸಮರ್ಪಯಾಮಿ

ಪಾದ್ಯಮ್
ಶ್ರೀ ಲಕ್ಷ್ಮಿ ಗೋವಿಂದ ರಾಜ ದೇವತಾಭ್ಯೋ ನಮಃ - : ಪಾದ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ] 

ಅರ್ಘ್ಯಮ್ : 
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋ ನಮಃ ಅರ್ಘ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ]

ಆಚಮನೀಯಮ್
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋ ನಮ : ಆಚಮನೀಯಂ ಸಮರ್ಪಯಾಮಿ || ] ಕಲಶದ ನೀರು ಬಿಡುವುದು ] 

ಸ್ನಾನಮ್ - : 
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋನಮಃ ಸ್ನಾನಂ ಸಮರ್ಪಯಾಮಿ || [ ಹೂವಿನಿಂದ ಪ್ರತಿಮೆಗೆ ಕಲಶದ ನೀರನ್ನು ಪ್ರೋಕ್ಷಿಸುವುದು. (ಅಭಿಷೇಕದ ನೀರಿನಿಂದ ಮೂರ್ತಿ ಅಥವಾ ಸಾಲಿಗ್ರಾಮ ಇದ್ದರೆ ಶಂಖದಿಂದ ಅಭಿಷೇಕ ಮಾಡುವುದು)

ವಸ್ತ್ರಮ್
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋನಮಃ : ವಸ್ತ್ರಂ ಸಮರ್ಪಯಾಮಿ || (ವಸ್ತ್ರವನ್ನು ಅಥವ ತುಳಸಿ ಹಾಕುವುದು)

ಉಪವೀತಂ
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋ ನಮಃ ಯಜ್ಞೋಪವೀತಂ ಸಮರ್ಪಯಾಮಿ || [ ಯಜೋಪವೀತವನ್ನು ಅಥವ ತುಳಸಿ ಹಾಕುವುದು ] 

ಗಂಧಮ್
ಶ್ರೀ ಲಕ್ಷ್ಮೀಗೋವಿಂದ ರಾಜ ದೇವತಾಭ್ಯೋ ನಮಃ 
ಗಂಧಂ ಸಮರ್ಪಯಾಮಿ || [ ಗಂಧವನ್ನು ಹಚ್ಚುವುದು,  ಗಂಧ ಅಕ್ಷಂತಿ ಅಂಗಾರ ತಯಾರಸಿರಬೇಕು ]

ಪುಷ್ಪಾಣಿ
:ಶ್ರೀ ಲಕ್ಷ್ಮಿಲಕ್ಷ್ಮಿಗೋವಿಂದ ರಾಜ ದೇವತಾಭ್ಯೋನಮ: ಪುಷ್ಪಂ ಸಮರ್ಪಯಾಮಿ || [ ಸಾಲಿಗ್ರಾಮವನ್ನು ತುಳಸಿ ಯಿಂದಲೂ, ಪ್ರತಿಮೆಯನ್ನು ಹೂವುಗಳಿಂದ ಅಲಂಕರಿಸಬೇಕು ) |

ನಂತರ ಯಾವುದೇ ಸ್ತೋತ್ರ; ಅಷ್ಟೋತ್ತರ  ಪಠಿಸಬೇಕು ಉದಾಹರಣೆಗೆ ವಿಷ್ಣು ಸಹಸ್ರನಾಮ , ಶ್ರೀ ಗೋವಿಂದ ರಾಜ ಸ್ತೋತ್ರಂ  ಇತ್ಯಾದಿ..

ಧೂಪಂ
ಶ್ರೀ ಲಕ್ಷ್ಮಿಗೋವಿಂದ ರಾಜ ದೇವತಾಭ್ಯೋನಮಃ ಧೂಪಂ ಆಘ್ರಾಪಯಾಮಿ [ ಧೂಪವನ್ನು ಹಚ್ಚಿ ದೇವರಿಗೆ ತೋರಿಸಬೇಕು ]

ದೀಪಃ 
ಶ್ರೀ ಲಕ್ಷ್ಮೀ ಗೋವಿಂದ ರಾಜ ದೇವತಾಭ್ಯೋ ನಮ : ದೀಪಂ ದರ್ಶಯಾಮಿ || [ ಮೂರು ಬತ್ತಿಯ ದೀಪವನ್ನು  ಹಚ್ಚಿ ದೇವರಿಗೆ ತೋರಿಸಬೇಕು ] 

ನೈವೇದ್ಯಮ್
:ಶುದ್ಧವಾದ ನೆಲದ ಮೇಲೆ ತಟ್ಟೆಯಲ್ಲಿ ಹಣ್ಣುಕಾಯಿ ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ನೈವೇದ್ಯವನ್ನು ಇಟ್ಟು ತುಳಸಿ ನೀರಿನಿಂದ ಆ ನೈವೇದ್ಯವನ್ನು ಪ್ರೋಕ್ಷಿಸಿ , ತುಳಸಿಯನ್ನು ಅದರ ಮೇಲೆ ಹಾಕಿ , ಕೈಯಲ್ಲಿ ತುಳಸಿಯನ್ನು ಹಿಡಿದುಕೊಂಡು : ಶ್ರೀ ಲಕ್ಷ್ಮೀ ಗೋವಿಂದ ರಾಜ ದೇವತಾಭ್ಯೋ ನಮ :ನೈವೇದ್ಯಂ ನಿವೇದಯಾಮಿ || ಎಂದು ದೇವರಿಗೆ ಅರ್ಪಿಸಬೇಕು ಅಭಿಷೇಕದ ತೀರ್ಥವನ್ನು ಆ ನೈವೇದ್ಯದ ಮೇಲೆ ಹಾಕಬೇಕು

ತಾಂಬೂಲಂ
ಶ್ರೀಲಕ್ಷ್ಮಿ ಗೋವಿಂದ ರಾಜ ದೇವತಾಭ್ಯೋ ನಮ : ತಾಂಬೂಲಂ ಸಮರ್ಪಯಾಮಿ 

ಮಂಗಲಮಹಾ ನೀರಾಜನಮ್
ಶ್ರೀ ಲಕ್ಷ್ಮೀ ಗೋವಿಂದ ರಾಜ ದೇವತಾಭ್ಯೋ ನಮಃ ಮಂಗಲನೀರಾಜನಮ್ ಸಮರ್ಪಯಾಮಿ || ದೇವರಿಗೆ ಮಂಗಳಾರತಿ ಮಾಡುವುದು.

ಮಂತ್ರಪುಷ್ಪಾಂಜಲಿ
ಶ್ರೀ ಲಕ್ಷ್ಮಿ ಗೋವಿಂದ ರಾಜ ದೇವತಾಭ್ಯೋ ನಮ : ಓಂ ಯಜ್ಞೇನ.....

ನಮಸ್ಕಾರ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇಪದೇ ||
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ | ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ||ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ । ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃ ||

ನಮಸ್ಕಾರಂ ಸಮರ್ಪಯಾಮಿ.
ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ
ಯಾಂತು ದೇವಗಣಾಸರ್ವೇ .......,....

ಮಂಗಳಾರತಿ 
ಮಂಗಳಾರತಿ ಮಾಡುವುದು 
ಮಂಗಲಂ ಭಗವಾನ್ ....
ಅಶ್ವತ್ಥ ನಿಂಬಕಾವಿರ್ಭವ.......
ಶ್ರೀ ಲಕ್ಷ್ಮಿಗೋವಿಂದರಾಜ ದೇವತಾ ಪ್ರಿಯಂತಾಂ ಪ್ರೀತೋ ಭವತು  ನಮಮ ಶ್ರೀಕೃಷ್ಣಾರ್ಪಣಮಸ್ತು ||


No comments:

Post a Comment