Sunday, January 05, 2025

Legless calf ಮಹಿಪತಿ ದಾಸರ ಹಾಡು

        ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದ                    ದಾಸವರೇಣ್ಯರು ಶ್ರೀ ಮಹಿಪತಿರಾಯರು.



ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
ಬುದ್ಧಿವಂತರು ಬಲ್ಲರಧ್ಯಾತ್ಮಸುಖವು        ।। ಧ್ರುವ ।।

ಕಾಲಿಲ್ಲದಾಕಳವು ಬಾಲಮುಖದಲಿ ಬಂದು
ಕಾಳರೂಪದ ಹುಲಿಯನೆ ನುಂಗಿತು
ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ
ಮೂಲ ಸರ್ಪದ ಹೆಡೆಯ ನುಂಗಿದುದು ನೋಡಿ  ।। 1 ।।

ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು
ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು
ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ
ಭಲೆ ಶ್ವಾನನ ಗಂಟಲ್ಹಿಡದಿಹದು ನೋಡಿ         ।। 2 ।।

ದಿವ್ಯ ಯೋಗದ ಮಾತು ಕಿವಿ ಇಲ್ಲದವ ಕೇಳಿ
ಕಣ್ಣಿಲ್ಲದವ ಕಂಡು ಬೆರಗಾದನು
ಕೌತುಕವು ಕಂಡು ಮಹಿಪತಿಯು ತನ್ನೊಳು
ತಾನು ತ್ರಾಹಿ ತ್ರಾಹಿಯೆಂದ ಮನದೊಳು     ।। 3 ।।
                                       ಶ್ರೀ ಮಹಿಪತಿ ದಾಸರು

No comments:

Post a Comment