Monday, January 20, 2025

Mula Nakshatra Dosha Discrimination. ಮೂಲಾ ನಕ್ಷತ್ರ ದೋಷ ವಿವೇಚನೆ

  ಮೂಲಾ ನಕ್ಷತ್ರ ದೋಷ ವಿವೇಚನೆ  ..

      ಮಕ್ಕಳ ಪೋಷಕರೇ ಈ ಲೇಖನವನ್ನು  ಕೊನೆಯ ವರೆಗೂ ಓದಿ ನೆನಪಿಟ್ಟುಕೊಳ್ಳಿ
       ಯಾವ ಕಾರಣಕ್ಕೂ ಮೂಲಾ ನಕ್ಷತ್ರದ ಮಕ್ಕಳನ್ನು ಕಡೆಗಣಿಸಬೇಡಿ, ದೂಷಣೆ ಮಾಡಬೇಡಿ. ಕೇವಲ ಜನನ ಕಾಲದ ನಕ್ಷತ್ರದ ಆಧಾರದಲ್ಲಿ ಇಡೀ ಜೀವನವನ್ನು ಹಾಗೂ ಅದೃಷ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆ ನಕ್ಷತ್ರದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ದೋಷ ಬರಬಹುದೇ ಹೊರತು ಇಡೀ ಜೀವನ ನಿರ್ಧರಿಸುವಂಥ ಪ್ರಭಾವ ಬೀರುವುದಿಲ್ಲ.
ವಿದ್ಯೆಗೆ ಅಭಿಮಾನಿ ದೇವತೆಯಾದ ಸರಸ್ವತಿಯ, ಬೃಹಸ್ಪತಿಯ ನಕ್ಷತ್ರವೇ ಮೂಲನಕ್ಷತ್ರ ವಾಗಿದೆ.
ಮೂಲನಕ್ಷತ್ರದಲ್ಲಿ ಹುಟ್ಟಿದ ಶಿಶುವಿನಿಂದ ಸೌಭಾಗ್ಯ ಸಂಪತ್ತು ಬೆಳೆಯುವುದು ಅಥವಾ ವಂಶಕ್ಷಯ ವಾಗುವುದು ಇಲ್ಲವೇ ಜಾತಕನು ದೀರ್ಘಾಯುಷ್ಯ ವಂತನಾಗುತ್ತಾನೆ. ಇನ್ನು ಕೃಷ್ಣ ತದಗಿ ಮಂಗಳವಾರ ಮೂಲಾ ನಕ್ಷತ್ರದಲ್ಲಿ ಶಿಶು ಜನನವಾದರೆ ಅಥವಾ  ಕೃಷ್ಣ ದಶಮಿ ಶನಿವಾರ ಮೂಲಾ ನಕ್ಷತ್ರವಿದ್ದ ದಿವಸದಲ್ಲಿ ಜನನವಾದರೆ ಇಲ್ಲವೇ ಶುಕ್ಲ ಚತುರ್ದಶಿ ದಿವಸ ಮೂಲ ನಕ್ಷತ್ರವಿದ್ದು ಜನನವಾದರೆ ಅಂತ ಶಿಶುವಿನಿಂದ ಕುಲಕ್ಷಯವಾಗುವುದು ಎಂದು ಜ್ಯೋತಿಷ್ಯ ಹೇಳುತ್ತದೆ.
     ಯಾವುದೇ ದಿವಸವಾಗಲಿ ಒಟ್ಟಿನಲ್ಲಿ ಹಗಲು ಮೂಲಾ ನಕ್ಷತ್ರವಿದ್ದ ದಿವಸದಲ್ಲಿ ಶಿಶುವು ಜನಿಸಿದರೆ ತಂದೆಗೆ ಅರಿಷ್ಟ, ಸಾಯಂಕಾಲವಿದ್ದಾಗ ಜನಿಸಿದರೆ ಸೋದರ ಮಾವನಿಗೆ ಅರಿಷ್ಟ,  ಪ್ರಾತಃಕಾಲದಲ್ಲಿ ಎನಿಸಿದರೆ ಮಿತ್ರ ವರ್ಗಕ್ಕೆ ಅರಿಷ್ಟ ಅಥವಾ ಮನಸ್ತಾಪ, ರಾತ್ರಿ ಮೂಲಾ ನಕ್ಷತ್ರವಿದ್ದಾಗ ಜನಿಸಿದರೆ ಮನೆಯ ಪಶುಗಳಿಗೆ ಪೀಡೆ.
       ಜೇಷ್ಟಾಂತದ ಎರಡು ಘಳಿಗೆ ಮೂಲಾsದಿಯ ಎರಡು ಘಳಿಗೆ ( ಒಂದು ಘಳಿಗೆ – 24 ನಿಮಿಷ ) ಈ ಸಮಯದಲ್ಲಿ ಶಿಶು ಜನನವಾದರೆ "ಅಭುಕ್ತ ಮೂಲ" ಎನ್ನಲಾಗುತ್ತದೆ ಇದು ತಂದೆ-ತಾಯಿಯರಿಗೆ ಗಂಡಾಂತರ
       ಮೂಲಾನು ಛತ್ರ ಲೋಕ ನಿವಾಸ ಫಲ 
ಮೇಷ ಕರ್ಕ ಧನು ಮಕರ ಲಗ್ನಗಳಾಗಲಿ ಅಥವಾ ಚೈತ್ರ ಶ್ರಾವಣ ಕಾರ್ತಿಕ ಪೌಷ್ಯ ಮಾಸಗಳಾಗಲಿ ಶಿಶು ಜನಿಸಿದರೆ ಜನ್ಮ ಭೂಮಿಯಲ್ಲಿರುವುದು. ಇದಕ್ಕೆ ದೋಷ ಉಂಟು 
      ವೃಷಭ ಸಿಂಹ ವೃಶ್ಚಿಕ ಕುಂಭ ಲಗ್ನಗಳಲ್ಲಾಗಲಿ ಅಥವಾ ಮಾಘ ಆಷಾಢ ಅಶ್ವಿನಿ ಭಾದ್ರಪದ ಮಾಸಗಳಲ್ಲಾಗಲಿ ಶಿಶುವು ಜನಿಸಿದರೆ ನಕ್ಷತ್ರ ಸ್ವರ್ಗಲೋಕದಲ್ಲಿ ವಾಸ ವಾಗಿರುವುದು ಇದಕ್ಕೆ ನಕ್ಷತ್ರ ದೋಷವಿಲ್ಲ ಅಧಿಕಾರ ರಾಜ್ಯ ವರ್ಚಸ್ಸು ಲಾಭವಿದೆ
      ಮಿಥುನ ಕನ್ಯಾ ತೂಳ ಮೀನ ಲಗ್ನಗಳಲ್ಲಾಗಲಿ ಅಥವಾ ವೈಶಾಖ ಜೇಷ್ಠ ಮಾರ್ಗಶಿರ ಫಾಲ್ಗುಣ ಮಾಸಗಳಲ್ಲಾಗಲಿ ಶಿಶು ಜನಿಸಿದರೆ ಪಾತಾಳ ಲೋಕದಲ್ಲಿ ನಕ್ಷತ್ರವು ವಾಸವಾಗಿರುತ್ತದೆ ಇದಕ್ಕೂ ಯಾವ ದೋಷವಿಲ್ಲ ಧನ ಲಾಭವು
       ಆದರೂ ಮಾನಸಿಕ ಶಾಂತಿಗಾಗಿ ಯಾವ ಲೋಕದಲ್ಲಿ ನಕ್ಷತ್ರವು ವಾಸವಾಗಿದ್ದರೂ ಶಾಂತಿ ಮಾಡಿಸುವುದು ಉತ್ತಮ ಈ ದೋಷವು ಶಿಶುವಿನ ಎಂಟು ವರ್ಷಗಳವರೆಗೆ ಮಾತ್ರ ಇರುವ ಕಾರಣ ಶಾಂತಿ ಮಾಡಿಸಬೇಕು ನಾರದ ಕಶ್ಯಪ ವಶಿಷ್ಠ ಋಷಿಗಳಿಂದ ಹೇಳಲ್ಪಟ್ಟಿದೆ ಹಾಗೂ ನಿರ್ಣಯ ಸಿಂಧು ಧರ್ಮ ಸಿಂಧು ಈ ಗ್ರಂಥಗಳಲ್ಲಿಯೂ ಹೇಳಲಾಗಿದೆ
         ಒಂದನೇ ಪಾದದಲ್ಲಿ ಪಿತೃವಿಗೆ ಗಂಡ, ಎರಡನೆಯ ಪಾದದಲ್ಲಿ ತಾಯಿಗೆ ಗಂಡಾಂತರ, ಮೂರನೆಯ ಪಾದದಲ್ಲಿ ಧನನಾಶವಾಗುವುದು ನಾಲ್ಕನೆಯ ಪಾದದಲ್ಲಿ ಹುಟ್ಟಿದ ಶಿಶುವಿಗೆ, ಮನೆಗೂ, ಸರ್ವರಿಗೂ ಶುಭಪ್ರದವಾಗುತ್ತದೆ
         ಯಾವುದೇ ದುಷ್ಟ ನಕ್ಷತ್ರದಲ್ಲಿ ಶಿಶು ಜನಿಸಿದಾಗ ಜಾತಕನ ಜನ್ಮ ಲಗ್ನ ಕುಂಡಲಿಯಲ್ಲಿ 1, 4, 7, 10 ಈ ಕೇಂದ್ರ ಸ್ಥಾನಗಳಲ್ಲಿ ಶುಭ ಗ್ರಹಗಳು ಉಚ್ಚ, ಸ್ವಕ್ಷೇತ್ರೀ, ಮಿತ್ರ ಕ್ಷೇತ್ರಿಯ ಬಲವಂತ ಗ್ರಹಗಳಿದ್ದರೆ ಖಂಡಿತವಾಗಿ ದುಷ್ಟ ನಕ್ಷತ್ರದೋಷ ಪರಿಹಾರವಾಗುವುದು
           ಮೂಲ ನಕ್ಷತ್ರ ದ್ವಾದಶ ವಿಭಾಗ ಫಲ
ಮೂಲ ನಕ್ಷತ್ರದ ಅದ್ಯಂತ ಕಾಲ ( ನಕ್ಷತ್ರ ಪ್ರವೇಶದಿಂದ ಆ ನಕ್ಷತ್ರದ ಮುಕ್ತಾಯದವರೆಗೆ ಇರುವ ಅವಧಿ ) ತೆಗೆದು ಅದರಲ್ಲಿ 12 ಭಾಗ ಮಾಡಿ ಆಯಾ ಭಾಗಗಳ ಫಲವನ್ನು ಕೆಳಗೆ ಬರೆದಂತೆ ತಿಳಿಯಬೇಕು
ಒಂದನೆಯ ಭಾಗದಲ್ಲಿ ಶಿಶು ಜನಿಸಿದರೆ ತಂದೆಗೆ ಪೀಡೆ 
ಎರಡನೇ ಭಾಗದಲ್ಲಿ ತಾಯಿಗೆ ಪೀಡೆ 
ಮೂರನೆಯ ಭಾಗದಲ್ಲಿ ಸಹೋದರರಿಗೆ ಪೀಡೆ 
ನಾಲ್ಕನೆಯ ಭಾಗದಲ್ಲಿ ಅತ್ತಿಗೆಗೆ ಪೀಡೆ 
ಐದನೆಯ ಭಾಗದಲ್ಲಿ ಸೋದರ ಮಾವನಿಗೆ ಪೀಡೆ 
ಆರನೇ ಭಾಗದಲ್ಲಿ ತಂದೆಯ ಅಣ್ಣತಮ್ಮಂದಿರಿಗೆ ಪೀಡೆ 
7ನೇ ಭಾಗದಲ್ಲಿ ತಾಯಿಯ ಅಣ್ಣತಮ್ಮಂದಿರಿಗೆ ಪೀಡೆ 
8ನೇ ಭಾಗದಲ್ಲಿ ಮಾನ ಹಾನಿ, ಧನ ಹಾನಿ 
9ನೇ ಭಾಗದಲ್ಲಿ ಜೀವಕ್ಕೆ ಗಂಡಾಂತರ 
10ನೆಯ ಭಾಗದಲ್ಲಿ ದಾರಿದ್ರ್ಯ ಪ್ರಾಪ್ತಿ 
11ನೇ ಭಾಗದಲ್ಲಿ ಮನೆಗೆ ಅರಿಷ್ಟ 
12ನೇ ಭಾಗದಲ್ಲಿ ಶಿಶುವಿಗೆ ಮಾತ್ರ ಪೀಡೆ  
       ಈ ರೀತಿಯಾಗಿ ಫಲವು ತಿಳಿಯಬೇಕು
          ಎಲ್ಲದಕ್ಕೂ  ನಕ್ಷತ್ರ ಶಾಂತಿ, ನವಗ್ರಹ ಶಾಂತಿ, ರುದ್ರ ಶಾಂತಿ,  ಭೂಪ್ರಸವ ಶಾಂತಿ, ಗಾಯತ್ರಿ ಪುರಶ್ಚರಣ, ಪವಮಾನ ಹೋಮ ಪಾರಾಯಣಗಳು ಕೈಲಾಗುವಷ್ಟು ಮಾಡಿದರೂ ದೋಷ ಪರಿಹಾರವಿದೆ. 
        ಈ ನಕ್ಷತ್ರದವರಿಗೆ ಅತ್ಯಂತ ಪ್ರಬಲವಾಗಿ ಗುರುವಿನ ಅನುಗ್ರಹ ಇರುತ್ತದೆ. ವಿಶೇಷವಾದ ಜ್ಞಾನ ಸಂಪತ್ತು ಇವರಲ್ಲಿ ಇರುತ್ತದೆ. ಗ್ರಹ ಮೈತ್ರಿ,ಮತ್ತು ಮೂಲಾ ನಕ್ಷತ್ರ ದೋಷಕ್ಕೆ  ಇರುವ ಅಪವಾದ; ಶಾಸ್ತ್ರೋಕ್ತವಾದ ಪರಿಹಾರಗಳು ಇವುಗಳಿಂದಲೇ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ನಿವಾರಣೆ ಸುಲಭಸಾಧ್ಯ
ಮೂಲಾ ನಕ್ಷತ್ರದ ಫಲ ಹೇಗಿರುತ್ತದೆ ಅಂದರೆ, ಆಷಾಢ, ಭಾದ್ರಪದ ಹಾಗೂ ಆಶ್ವೀನ ಮಾಸದಲ್ಲಿ, ವೃಷಭ, ಸಿಂಹ, ವೃಶ್ಚಿಕ ಅಥವಾ ಕುಂಭ ಲಗ್ನದಲ್ಲಿ  ಜನಿಸಿದ ಮೂಲಾ ನಕ್ಷತ್ರದವರಿಗೆ ಯಾವ ದೋಷವೂ ಇರುವುದಿಲ್ಲ. ಇಂಥ ವಧು ವರರು ಮದುವೆ ಆದರೆ ಯಾವುದೇ ತೊಂದರೆಗಳಿಲ್ಲ.
     ವೈಶಾಖ, ಜ್ಯೇಷ್ಠಾ, ಮಾರ್ಗಶಿರ, ಫಾಲ್ಗುಣ ಮಾಸಗಳಲ್ಲಿ, ಮಿಥುನ, ಕನ್ಯಾ, ತುಲಾ ಅಥವಾ ಮೀನ ಲಗ್ನದಲ್ಲಿ ಜನಿಸಿದ ಮೂಲಾ ನಕ್ಷತ್ರದವರಿಗೆ ವಿಶೇಷವಾದ ಅನುಕೂಲಗಳು ಆಗುತ್ತವೆ. ಸದಾ ಕಾಲ ಧನ ಪ್ರಾಪ್ತಿ ಆಗುತ್ತದೆ. ಸಂಪೂರ್ಣ ವಿದ್ಯಾವಂತ ರಾಗುತ್ತಾರೆ. ಇಂಥವರಿಗೆ ಯಾವುದೇ ದೋಷವಿಲ್ಲ.
ಮೂಲ ನಕ್ಷತ್ರ 
        ಮೂಲಾ ನಕ್ಷತ್ರದ ವ್ಯಾಪ್ತಿ ಧನಸ್ಸು ರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ. ಧನಸ್ಸು ಯುದ್ಧಗಳಿಂದ ಅಭಯವನ್ನು, ಆಯುಧವಾಗಿ ರಕ್ಷೆಯನ್ನೂ, ಯುದ್ಧ ಅಥವಾ ರಕ್ಷಣೆಯ ವಿಷಯದಲ್ಲಿ ಒಳಿತು ಉಂಟು ಮಾಡುವುದರಿಂದ ಇದು ಅಗ್ನಿ ರಾಶಿ.  ಈ ರಾಶಿಯ ಗ್ರಹ, ಜ್ಞಾನಕ್ಕೆ ಕಾರಣನಾಗಿರುವ ಸಂತಾನಕ್ಕೆ ಕೊಂಡಿ ಕೂಡಿಸುವ, ಧನಾಗಮನಕ್ಕೆ ಸಿದ್ಧಿ ಕೊಡುವ, ವಿಕೃತಿಗಳನ್ನು ಆಕೃತಿಗೆ ತಂದು ನಿಲ್ಲಿಸುವ ಗುರುಗ್ರಹ.
ಮೊತ್ತ ಮೊದಲಾಗಿ ಮೂಲಾ ನಕ್ಷತ್ರದ ಸೊಸೆಯಂದಿರು ತಾವು ಮದುವೆಯಾಗಿ ಬಂದ ಮನೆಯ ಆರ್ಥಿಕ ಬಲಾಡ್ಯತೆಯನ್ನು, ಸಂಸಾರದೊಳಗಿನ ಸಂತೋಷವನ್ನು ಜಾಸ್ತಿ ಮಾಡಿದ ಉದಾಹರಣಗಳೇ ಹೇರಳವಾಗಿವೆ. ಕಾರಣ ಇಷ್ಟೇ, ಮೂಲಾ ನಕ್ಷತ್ರವನ್ನು ಒಳಗೊಳ್ಳುವ ಮನೆಯಾದ ಧನಸ್ಸು ರಾಶಿಯ ಅಧಿಪತಿ ಗುರುವು ದುರುಂತಗಳನ್ನು ತಪ್ಪಿಸುವುದು ಮಾತ್ರವಲ್ಲ; ತನ್ನ ಶಕ್ತಿ ಪ್ರಭಾವಗಳಿಂದ ಮೂಲಾ ನಕ್ಷತ್ರದ ದೋಷಗಳನ್ನು ನಿಯಂತ್ರಿಸುತ್ತಾನೆ. ತನ್ನದೃಷ್ಟಿಯ ಫ‌ಲದ ಸಕಾರಾತ್ಮಕ ಪರಿಣಾಮಗಳನ್ನೂ ಒದಗಿಸುತ್ತಾನೆ. ನಿರಂತರವಾಗಿ ಸಂಸ್ಕಾರಯುತವಾಗಿ ಜೀವನ ಮಾಡಿದ ಮಕ್ಕಳಿಗೆ ಧರ್ಮದ ನೆಲೆಯಲ್ಲಿ ಯಾವುದೇ ರೀತಿಯ ಈ ನಕ್ಷತ್ರದ ದೋಷಗಳು ಕಾಣಿಸುವುದಿಲ್ಲ. ನಿರಂತರ ದೇವತಾ ಆರಾಧನೆಯಿಂದ ವಿಷ್ಣುಸಹಸ್ರನಾಮ ರಾಮರಕ್ಷಾ ಸ್ತೋತ್ರ ಮುಂತಾದ ಸ್ತೋತ್ರಗಳ ಪಠಣಗಳಿಂದ ಸರ್ವ ದೋಷಗಳಿಗೂ ಕೂಡ ಪರಿಹಾರವು ಸಿಗುತ್ತದೆ.
      ಮೂಲಾ ನಕ್ಷತ್ರ ಕ್ಕೆ ಸಂಬಂಧಿಸಿದ ಸ್ತೋತ್ರ ಪಠಣಗಳ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಗುರುವೂ, ಕೇತುವೂ  ಬಲಯುತರಾಗಿ ಇದ್ದಾಗ ಸರ್ವ ದೋಷಗಳೂ ಕರಗಿ, ಹೊಸ ಬದಲಾವಣೆಗೆ ತೆರೆದು ಕೊಳ್ಳಲು ಸಹಾಯವಾಗುತ್ತದೆ.ಯಾವುದೇ ದೋಷವಿದ್ದ ಪಕ್ಷದಲ್ಲಿ ನವಗ್ರಹ, ನಕ್ಷತ್ರ ಶಾಂತಿ ಮಾಡಿಸಿ ಕೊಳ್ಳುವುದರಿಂದ ಸರ್ವರೀತಿಯ ದೋಷಕ್ಕೆ ಶಾಸ್ತ್ರದಲ್ಲಿ ಶಾಸ್ತ್ರೋಕ್ತವಾದ ಪರಿಹಾರಗಳಿವೆ.
ಧನ್ಯವಾದಗಳು 

No comments:

Post a Comment